ಚಳ್ಳಕೆರೆ, ಫೆ,04:ಒಟ್ಟು ಭೂಮಿಯ ಶೇಕಡ 71ರಷ್ಟು ಪಾದ ನೀರಿನಿಂದ ತುಂಬಿತ್ತು ಈ 71ರಷ್ಟು ನೀರಿನ ಪ್ರದೇಶದಲ್ಲಿ ಶೇಕಡಾ ಮೂರರಷ್ಟು ಮಾತ್ರ ಕುಡಿಯಲು ಯೋಗ್ಯವಾದ ನೀರಿದೆ ಈ ನೀರಿನ ಬಳಕೆಯನ್ನು ವೈಜ್ಞಾನಿಕವಾಗಿ ಬಳಸಿಕೊಳ್ಳುವ ಅನಿವಾರ್ಯತೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಅವಶ್ಯಕತೆ ಇದೆ ಎಂದು ಚಳ್ಕೆರೆ ತಾಸಿಲ್ದಾರ್ ಏನ್ ರಘುಮೂರ್ತಿ ಹೇಳಿದರು.
ಅಟಲ್ ಭೂಜಲ ಯೋಜನೆ ಅನುಷ್ಠಾನ ಕುರಿತಾದ ಗ್ರಾಮ ಸಭೆ ಹಾಗೂ ಕಾರ್ಯಾಗಾರದಲ್ಲಿ ಮಾತನಾಡಿ ಪರಿಸರದಿಂದ ನನಗಿಲ್ಲದೆ ವಾದಂತ ಕಾಡು ಮತ್ತು ಮರಗಿಡಗಳ ದುರ್ಬಳಕೆಯನ್ನು ಮಾಡಿಕೊಂಡ ಪರಿಣಾಮವಾಗಿ ಇಂದು ಬಿದ್ದ ಮಳೆ ನೀರು ಭೂಮಿಯಲ್ಲಿ ಇಂಗದೆ ಹರಿದು ಹೋಗುವುದರಿಂದ ಅಂತರ್ಜಲದ ಅಭಾವಕ್ಕೆ ಕಾರಣವಾಗಿದೆ ಇನ್ನಾದರೂ ದುರಾಸೆಗೆ ಒಳಗಾಗದೆ ಸರ್ಕಾರಿ ಗೋಮಾಳ ಹಳ್ಳಕೊಳ್ಳ ಅರಣ್ಯ ಮುಂತಾದ ಸಂಪತ್ತನ್ನು ಸಂರಕ್ಷಿಸುವ ವಣೆಗಾರಿಕೆ ಸಾರ್ವಜನಿಕ ದಾಗಿದೆ ಎಂದರು.
ಕೇಂದ್ರ ಮತ್ತು ವಿಶ್ವಬ್ಯಾಂಕ್ ನೆರವಿನಲ್ಲಿ ರಾಜ್ಯ ಸರ್ಕಾರದ ಸಣ್ಣ ನೀರಾವರಿ ಇಲಾಖೆಯಿಂದ ಅನುಷ್ಠಾನಗೊಳಿಸಿರುವ ಯೋಜನೆಯನ್ನು ಎಲ್ಲ ಚುನಾಯಿತ ಪ್ರತಿನಿಧಿಗಳು ಸದ್ಬಳಕೆ ಮಾಡಿಕೊಳ್ಳುವುದರ ಜೊತೆಗೆ ಯೋಜನೆಗೆ ಸಹಕಾರಿ ಯಾಗಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಅಟಲ್ ಭೂಜಲ ಯೋಜನೆ ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟೇಶ್ ಅಬ್ಬೇನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರು ಶಂಕರ್ ಸ್ವಾಮಿ ಅಣ್ಣಬೆಲ್ ಜಾಕಿರ ಯೋಜನೆಯ ಸ್ವಯಂ ಸೇವಾ ಸಂಘದ ಜಾಕೀರ್ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ತಿಪ್ಪೇಸ್ವಾಮಿ ಅಬ್ಬೇನಹಳ್ಳಿ ಗ್ರಾಮಪಂಚಾಯತಿಯ ಸರ್ವ ಸದಸ್ಯರು ಕಾರ್ಯಾಗಾರದಲ್ಲಿ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ತಾಶೀಲ್ದಾರ್ ಅವರ ನೇತೃತ್ವದಲ್ಲಿ ಮುಸ್ಲಿ ಗುಮ್ಮಿ ಮಲೆ ಬೋರ್ ಮೆಟ್ಟಿ ಅಬ್ಬೇನಹಳ್ಳಿ ಮತ್ತು ಚೌಳ ಕೆರೆ ಗ್ರಾಮಗಳಲ್ಲಿ 7:00 ಯಿಂದ 11ಗಂಟೆಯವರೆಗೆ ವ್ಯಾಕ್ಸಿನ್ ಆಂದೋಲನ ಹಮ್ಮಿಕೊಂಡು ನೂರರಷ್ಟು ವ್ಯಾಕ್ಸಿನ್ ಅನ್ನು ಹಾಕಿಸಲಾಯಿತು