ಬಣ್ಣಿಸುವರಾರದನು? ಮಂಕುತಿಮ್ಮ

Share

 

ಶ್ರೀ ಆರೂಢ ಭಾರತೀ ಸ್ವಾಮೀಜಿ,ಹಾರೊಹಳ್ಳಿ

ಸಿದ್ಧಸೂಕ್ತಿ :
      ಬಣ್ಣಿಸುವರಾರದನು? ಮಂಕುತಿಮ್ಮ.
ಜಗದ ಉಗಮ ನೆಲೆ ಗತಿ ನಿಗೂಢ. ಬಗೆ ಬಗೆಯ  ರಚನೆಯನಾರು ಬಲ್ಲರು? ಕುಂಬಾರ ಗಡಿಗೆ ಮಾಡಿದ ತೆರದಿ ತಾಯಿ ಮಗುವ ರಚಿಪಳೇ? ಸಾವೇನು ಏಕೆ ರಹಸ್ಯ ಬಲ್ಲವರಾರು? ಉಂಡು ಮಿಕ್ಕಿದ ಎಂಜಲದ ಅಗುಳು ಯಾವ ಕಾಲುವೆಯಲಿ ಹರಿದು ಎಲ್ಲಿ ಸೇರುವುದೋ? ಯಾವುದಕ್ಕೆ ಆಹಾರವಾಗುವುದೋ? ಎಲ್ಲಿ ಮಣ್ಣಾಗುವುದೋ? ಅದರ ಸತ್ತ್ವ ಹೀರಿ ಯಾವುದು ಬೆಳೆಯುವುದೋ? ಆ ಬೆಳೆ ಯಾರಿಗೆ ಆಹಾರವಾಗುವುದೋ? ಅದರಿಂದ ಅವರಿಂದ ಯಾರ್ಯಾರಿಗೆ ಏನೇನಾಗುವುದೋ? ತಿಳಿದವರಾರು? ಹೇಳುವವರಾರು? ಹಸಿರು ಹುಲ್ಲು ಎಂಜಲು ತಿಂದುಂಡ ಹಸು ಎಮ್ಮೆ ಮೇಕೆ ಕುರಿಗಳ ಹಾಲು ಪವಿತ್ರ ಬಿಳಿಯಾಗುವ ಪರಿ ಬಲ್ಲವರಾರು? ಹಾಲಿನಲಿ ತುಪ್ಪದ ಇರವನಿಟ್ಟ ಬಗೆ ಏನು? ಎಲ್ಲಿಂದ ಯಾವುದೋ? ಯಾವುದು ಎಲ್ಲಿಗೋ? ಹುಟ್ಟುವವು ಸಾಯುವವು, ಬೆಳೆವವು ಬದಲಾಗುವವು ಕ್ಷೀಣಿಸುವವು, ನಗುವವು ಅಳುವವು! ಯಾರಿಗೂ ಅರ್ಥವಾಗದು ಈ ಜಗದ ಲೀಲೆ ರಹಸ್ಯ! ನಾನಿಂಥವನೆಂಬ ಅಭಿಮಾನ ಅಹಂಕಾರಗಳನಳೆದು ಜಗದ ಅಗೋಚರ ಶಕ್ತಿಗೆ ತಲೆ ಬಾಗಿ ನಮಿಸು!

Girl in a jacket
error: Content is protected !!