ಧರ್ಮಸ್ಥಳ ಪ್ರಕರಣ-ಎಸ್‌ಐಟಿ ತಂಡದ ಇಬ್ಬರ ಅಧಿಕಾರಿಗಳು ಹೊರಕ್ಕೆ?

Share

ಬೆಂಗಳೂರು,ಜೂ,೨೧-ಧರ್ಮಸ್ಥಳದ ಅರಣ್ಯಪ್ರದೇಶದಲ್ಲಿ ನೂರಾರು ಶವಗಳನ್ನು ಊಳಲಾಗಿದೆಎಂಬ ಪ್ರಕರಣಕ್ಕೆಸಂಭಂಧಿಸಿದಂತೆ ರಾಜ್ಯ ಸರ್ಕಾರ ಅದರ ತನಿಖೆಗೆ ಎಸ್‌ಐಟಿಯನ್ನು ನೇಮಿಸಿತ್ತು ಆದರೆ ಆ ತನಿಖಾ ತಂಡದ ಐವರು ಅಧಿಕಾರಿಗಳಲ್ಲಿ ಇಬ್ಬರು ಅಧಿಕಾರಿಗಳು ತನಿಖಾ ತಂಡದಿಂದ ಹೊರಬರಲು ಸಿದ್ದತೆ ನಡೆಸಿದ್ದಾರೆ ಎನ್ನುವ ಮಾಹಿತಿ ಇದೆ.
ಧರ್ಮಸ್ಥಳದ ಪ್ರಕರಣ ಈಗ ರಾಜ್ಯದಲ್ಲಿ ದೊಡ್ಡ ಸುದ್ದಿಮಾಡುತ್ತಿದೆ ಹಲವಾರು ಮಂದಿ ಇದನ್ನು ವಿಶೇಷ ತನಿಖಾ ತಂಡಕ್ಕೆ ವಹಿಸಬೇಕು ಎನ್ನುವ ಆಗ್ರಹಗಳು ಒತ್ತಡಗಳು ಈ ಒತ್ತಡಕ್ಕೆ ಮಣಿದು ಸರ್ಕಾರ ಈ ಪ್ರಕರಣವನ್ನು ಎಸ್‌ಐಟಿಗೆ ವಹಿಸಿ ಐದು ಐಪಿಎಸ್ ಅಧಿಕಾರಿಗಳನ್ನು ನೇಮಿಸಿದ್ದರು.. ಇದನ್ನ ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲು ಸರ್ಕಾರ ನಿರ್ಧರಿಸಿದೆ. ಹಿರಿಯ ಐಪಿಎಸ್ ಅಧಿಕಾರಿ ಪ್ರಣವ್ ಮೊಹಾಂತಿ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ರಚಿಸಿದೆ. ಎಸ್‌ಐಟಿ ತಂಡ ರಚಿಸಿ ಅರ್ಧ ದಿನ ಕಳೆಯುವಷ್ಟರಲ್ಲೇ ಆರಂಭಿಕ ವಿಘ್ನ ಎದುರಾಗಿದೆ.
ವಿಶೇಷ ತನಿಖಾ ತಂಡದ ನಾಲ್ವರಲ್ಲಿ ಇಬ್ಬರು ಐಪಿಎಸ್ ಅಧಿಕಾರಿಗಳು ಹಿಂದಕ್ಕೆ ಸರಿದಿದ್ದಾರೆ ಅನ್ನೋ ಮಾಹಿತಿ ಉನ್ನತ ಮೂಲಗಳಿಂದ ತಿಳಿದುಬಂದಿದೆ. ತನಿಖೆಯಿಂದ ಹಿಂದೆ ಸರಿಯೋಕೆ ಇಬ್ಬರು ಅಧಿಕಾರಿಗಳು ತಯಾರಿ ನಡೆಸಿದ್ದಾರೆ. ಈ ಸಂಬಂಧ ಐಪಿಎಸ್ ಅಧಿಕಾರಿಗಳಾದ ಎಂ.ಎನ್ ಅನುಚೇತ್ ಮತ್ತು ಸೌಮ್ಯಲತಾ ಸರ್ಕಾರಕ್ಕೆ ಪತ್ರ ಬರೆದಿದ್ದಾರೆಎನ್ನುವ ಮಾಹಿತಿ ಲಭ್ಯವಾಗಿದೆ, ವೈಯಕ್ತಿಕ ಕಾರಣಗಳನ್ನ ನೀಡಿ ಎಸ್‌ಐಟಿ ತಂಡದಿಂದ ತಮ್ಮನ್ನು ಕೈಬಿಡುವಂತೆ ಸಿದ್ಧತೆ ನಡೆಸಿದ್ದಾರೆ ಎಂದು ಉನ್ನತ ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ.
ಈಗಾದರೆ ಈಗ ಸತ್ಯ ಹೊರಬರುತ್ತದೆಯೇ ಎನ್ನುವ ಅನುಮಾನಗಳು ಈಗ ಎದ್ದಿವೆ, ಆರಂಭದಲ್ಲೇ ಹೀಗೆ ಅಧಿಕಾರಿಗಳು ತಮ್ಮನ್ನು ಕೈಬಿಡುವಂತೆ ಪತ್ರಬರೆದರೆ ಇನ್ನು ಸತ್ಯಹೇಗೆ ಹೊರಬರಲು ಸಾಧ್ಯ. ಪೊಲೀಸ್ ಅಧಿಕಾರಿಗಳಿಗೂ ಒಂದು ಸತ್ಯವನ್ನು ಹೊರತರಲು ಆ ಧರ್ಮದ ಸ್ಥಳ ಅಡ್ಡಲಾಗುತ್ತದೆಯೇ ಅಥವಾ ಅಲ್ಲಿ ಒತ್ತಡಗಳು ಸೃಷ್ಟಿಯಾಗುತ್ತವೆ ಎನ್ನುವ ಕಾಣಕ್ಕೆ ಹೊರಬರಲು ಮುಂದಾಗಿದ್ದಾರೆಯೇ? ಈ ಪ್ರಶ್ನೆಗಳು ಕಾಡದೆ ಇರಲಾರವು. ಯಾಕೆಂದರೆ ಪೊಲೀಸ್ ಆದವನಿಗೆ ಈ ಯಾವ ಅಡೆತಡೆಗಳು ಇರಬಾರದು ವೃತ್ತಿಧರ್ಮಕ್ಕೆ ಅಪಚಾರವೆಸಗಬಾರದು, ಆದರೆ ಈಗ ಪೊಲೀಸರು ನಡೆದುಕೊಳ್ಳುತ್ತಿರುವ ನಡೆ ನೋಡಿದರೆ ಈ ಸತ್ಯಕ್ಕೆ ಜಯ ಸಿಗುತ್ತದೆಯೇ? ಎನ್ನುವ ಪ್ರಶ್ನೆ ಬಾರದೆ ಇರಲಾರದು. ಮುಂದೆ ಏನಾಗುತ್ತದೆ ಕಾದು ನೋಡಬೇಕಿದೆ

Girl in a jacket
error: Content is protected !!