Reported By: H.D.Savita
ಟೋಕಿಯೋ: ಭಾರತದ ಜಾವಲಿನ್ ಪಟು ನೀರಜ್ ಚೋಪ್ರಾ ಅರ್ಹತಾ ಸುತ್ತಿನ ಸ್ಪರ್ಧೆಯಲ್ಲೇ 86.55 ಮೀಟರ್ ಎಸೆಯುವ ಮೂಲಕ ಫೈನಲ್‌ಗೆ ಅರ್ಹತೆ ಪಡೆದುಕೊಂಡಿದ್ದಾರೆ. ಈ ಮೂಲಕ ಟೋಕಿಯೋ ಒಲಿಂಪಿಕ್ಸ್‌ನ ಜಾವಲಿನ್‌ನಲ್ಲಿ ಪದಕ ಗೆಲ್ಲಬಲ್ಲ ನೆಚ್ಚಿನ ಭಾರತೀಯ ಅಥ್ಲೀಟ್‌ಗಳಲ್ಲಿ ನೀರಜ್ ಚೋಪ್ರಾ ಕೂಡಾ ಒಬ್ಬರು ಎನಿಸಿದ್ದಾರೆ. ಫೈನಲ್ ಪಂದ್ಯ ಅಗಸ್ಟ್ 7ರಂದು ನಡೆಯಲಿದೆ.
ಫೈನಲ್‌ಗೆ ಪ್ರವೇಶ ಪಡೆಯಲು 83.5 ಮೀಟರ್ ನಿಗದಿ ಮಾಡಲಾಗಿತ್ತು. ಎ ಹಾಗೂ ಬಿ ಗುಂಪಿನಲ್ಲಿ ಅಗ್ರ 12 ಜಾವಲಿನ್ ಪಟುಗಳು ಫೈನಲ್‌ಗೆ ಅರ್ಹತೆ ಗಿಟ್ಟಿಸಿಕೊಳ್ಳಲಿದ್ದಾರೆ. ‘ಎ’ ಗುಂಪಿನ ಅರ್ಹತಾ ಸುತ್ತಿನ ಮೊದಲ ಪ್ರಯತ್ನದಲ್ಲೇ 86.55 ಮೀಟರ್ ಜಾವಲಿನ್ ಎಸೆಯುವ ಮೂಲಕ ನೇರವಾಗಿ ಫೈನಲ್‌ಗೇರುವಲ್ಲಿ ನೀರಜ್ ಯಶಸ್ವಿಯಾದರು.