ಡಾ.ಶಿವಕುಮಾರ್ ಕಂಪ್ಲಿ
ಡಾ.ಶಿವಕುಮಾರ್ ಕಂಪ್ಲಿ ಸಾಹಿತ್ಯ ವಲಯದಲ್ಲಿ ಚಿರಪರಿಚಿತ ಹೆಸರು,ಮೂಲತಃ ಕಂಪ್ಲಿಯವರಾದರೂ ಅವರು ಬೆಳದದ್ದು ಓದಿದ್ದು ಚಿತ್ರದುರ್ಗ,ಬಳ್ಳಾರಿಯಲ್ಲಿ ಕುವೆಂಪು ವಿ.ವಿ.ಯಲ್ಲಿ ಕನ್ನಡ ಸ್ನಾತಕೋತ್ತರ ಪದವಿ ಪಡೆದ ನಂತರ,ಹಂಪಿ. ಕನ್ನಡ ವಿ.ವಿಯಲ್ಲಿ ಶ್ರೀ ಶ್ರೀ ಮತ್ತು ಸಿದ್ದಲಿಂಗಯ್ಯ ಕುರಿತು ಸಂಶೋಧನೆಗೆ ಪಿ.ಎಚ್.ಡಿ.ಪದವಿ ಪಡೆದಿರುವ ಅವರು ಪ್ರದ್ಯಾಪಕರಾಗಿ ಈಗ ದಾವಣಗೆರೆ ವಿ.ವಿ.ಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.ಅನುವಾದದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಅವರು ಹಲವಾರು ತೆಲುಗು ಕತೆಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ, ಸೂರ್ಯನಿಗೆ ಗೆಜ್ಜೆಯ ಕಟ್ಟಿ ( ಆಶಾರಾಜು ಕವಿತೆಗಳು)ಸ್ತ್ರೀ ಪರ್ವ(ಸಿಂಹ ಪ್ರಸಾದ್ ಕಾದಂಬರಿ) ಅನುವಾದಿಸಿದ್ದಾರೆ.ಅಗ್ನಿಕಿರೀಟ(ಕವನಸಂಕಲನ),ನವಿಲಗನ್ನಡಿ, ಕಾಲುಜಾಡು. ಬೊಗಸೆಗೆ ಬಿದ್ದ ಕಾಳು ಕೇತಿಗಳನ್ನು ರಚಿಸಿದ್ದಾರೆ..ಅವರ ಇನ್ನೊಂದು ತೆಲಗು ಮೂಲ ಡಾ.ವೇಂಪಲ್ಲಿ ಗಂಗಾಧರ್ ಅವರ ‘ಸಿಡಿಬಂಡಿ’ಯನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ..ಆ ಕತೆಯನ್ನು ಇಲ್ಲಿ ಪ್ರಕಟಿಸಲಾಗಿದೆ.

ಮೂಲ ಕತೆಗಾರರು- ಡಾ.ವೇಂಪಲ್ಲಿ ಗಂಗಾಧರ್.
ಸಿಡಿ ಬಂಡಿ
ಕಣಗಿಲೆಯ ಗಿಡದಮೇಲೆ ಬೆಳದಿಂಗಳು ಸುರಿಯುತ್ತಲೇ ಇದೆ. ಈಟಿಯ ಮೊನೆಯಂತೆ ಬೆಳೆದ ಎಲೆಗಳ ಅಂಚಿಗೆ ಇಬ್ಬನಿ ಹನಿಗಳು ಬಿದ್ದೂ ಬಿದ್ದೂ ಜಾರುತ್ತಿವೆ. ಆ ಎಲೆಗಳು ಬೆಳ್ಳಿಯಲ್ಲೇ ಅದ್ದಿ ತೆಗೆದಂತಿವೆ. ರಾತ್ರಿಯು ಓಡುತ್ತಲೇ ಇದೆ.ಕಣಗಿಲೆ ಗಿಡವು ಮತ್ತೇರಿ ಮೊಗ್ಗು,ಹೂಗಳನ್ನು ಪ್ರಸವಿಸುತ್ತಿದೆ. ಆ ರಾತ್ರಿಯಲ್ಲೇ ನಾನು ಹುಲ್ಲು ಹಾಸಿನ ಮೇಲೆ ಒಂಟಿಯಾಗಿ ಮಲಗಿ ನನ್ನ ಚಿನ್ನವ್ವನಿಗಾಗಿ ಎದುರು ನೋಡುತ್ತಲೇ ಇದ್ದೇನೆ.
ಆಕೆ ಎಷ್ಟೊತ್ತಾದರೂ ಬರದೇ ಇರೋದನ್ನ ನೋಡಿ, ನಾನು ಕಣಗಿಲೆಯ ಗಿಡವನ್ನು ನೋಡುತ್ತಾ ಚಿನ್ನವ್ವನನ್ನು ನೆನಪಿಸಿಕೊಂಡೆ. ಚಿನ್ನವ್ವನು ಕಡಿಮೆಯವಳೇನಲ್ಲ. ಕಣಗಿಲೆಯ ಗಿಡದೊಂದಿಗೇ ಪೈಪೋಟಿಗೆ ಬೀಳುವಂತಹ ಚಲುವೆ ಆಕೆ.ಮುಟ್ಟಿದರೆ ಎಲ್ಲಿ ಮಾಸುತ್ತಾಳೋ ಎನ್ನುವ ಹಾಲಿನಂತಹ ಶರೀರ ಅವಳದು.
ಅವಳೆಂದರೆ ಊರೆಲ್ಲಾ ಜೊಲ್ಲುಸುರಿಸುತ್ತದೆ. “ಕೆಳ ಜಾತಿಯವಳಲ್ಲವೇ ಬರ್ತಾಳೆ ಬಿಡಾ” ಅಂತಾರೆ, ನಿನ್ನೆ ನಿನ್ನೆಯೇ ದೊಡ್ಡ ಗೌಡರ ಹೊಲದ ಹತ್ತಿರ ಹೋಗುತ್ತಿರುವಾಗ ನಾಲ್ಕು ಹೆಂಡರ ಕರೀಗೌಡ ಕೂಡಾ ಕಣ್ಣು ಮಿಟುಕಿಸದಂತೆ ಅವಳನ್ನೇ ನೋಡುತ್ತಿದ್ದನೆಂದರೇನೇ ನಿಮಗೆ ಅರ್ಥವಾಗಿಬಿಡುತ್ತದೆ . ಆಕೆಯ ಒನಪು ವಯ್ಯಾರದ ಕಥೆ ಏನೋ ಅಂತಾ.
ಆಕೆಗೆ ನಾನೆಂದರೆ ಅದೆಷ್ಟಿಷ್ಟವೋ….! ಊರೊಳಗೆ ಎಷ್ಟು ಕಡೆ ಕೆಲಸವಿದ್ದರೂ ಅದನೆಲ್ಲಾ ಬಿಟ್ಟು ಆಕೆಯು ನಮ್ಮ ಹತ್ತಿರವೇ ಕೆಲಸಕ್ಕೆ ಬರುತ್ತಾಳೆ. ಆ ಕಡೆಯವರು ಹೆಚ್ಚುಕೂಲಿ ನೀಡುತ್ತೇವೆಂದರು ಕೂಡಾ ನನ್ನ ಹತ್ರ “ ರೊಕ್ಕದ್ದೇನು ಬಿಡು ಗೌಡಾ” ಎನ್ನುತ್ತಾಳೆ ಪ್ರೇಮದಿಂದ. ನಾನು ಆಕೆಯ ಜೊತೆಗೆ ತಿರುಗುತ್ತಿದ್ದೇನೆಂದು ನಮ್ಮ ಅಪ್ಪನಿಗೇನಾದರೂ ಗೊತ್ತಾಯಿತೆಂದರೆ ಆತ ನನ್ನನ್ನ ತುಂಡು ತುಂಡಾಗಿ ಕಡಿದು ಬಿಸಾಕಿಬಿಡ್ತಾನೆ.ಅದಕ್ಕೇ ನಮ್ಮ ಕಣದೊಳಗಿನ ಬಣವಿ ಹತ್ತಿರವೇ ಕಳವಿನಿಂದ ನಾವಿಬ್ಬರೂ ಕಲೆತುಕೊಳ್ಳುತ್ತೇವೆ. ಆಕೆಯು ಮಸ್ತ್ ಕತ್ತಲು ಕವಿದಮೇಲೆಯೇ ಬರ್ತಾಳೆ. ಮತ್ತೆ ಬೆಳ್ಳಿ ಚುಕ್ಕಿ ಮೂಡುವುದರೊಳಗೇ ಎದ್ದು ಮನಿ ದಾರಿ ಹಿಡಿಯುತ್ತಾಳೆ.
ಈ ದಿನವೂ ಕೂಡಾ ಇಷ್ಟೊತ್ತಿಗೇ ಬರಬೇಕಿತ್ತು. ಯಾಕ ಬರಲಿವೋ ? ಅರ್ಥವಾಗುತ್ತಿಲ್ಲ. ಒಮ್ಮೊಮ್ಮೆ ಆಕೆ ತುಂಬಾನೇ ನಗೆಚಾಟಿಕಿ ಮಾಡುತ್ತಾಳೆ.ಆ ಮ್ಯಾರಿ ಪಕ್ಕದ ಮರಳಿನೊಳಗೆ ಕೂತುಕೊಂಡು ಹುಲಿಮನಿ ಆಟ ಆಡೋಣ ಬಾ ಅಂತಾಳೆ. ನನ್ನ ಹುಲಿಯ ಕಲ್ಲುಗಳೆದುರು ಚಾಣಾಕ್ಷತನದಿಂದ ಪಾರಾಗುವ ಅವಳ ಕುರಿಗಳ ಕಲ್ಲಿಗೆ ನಾನು ಸೋತು ಹೋಗುತ್ತೇನೆ.ನೀನೀಗ ಸೋತಿದ್ದೀಯ ಆದ್ದರಿಂದ ನನ್ನನ್ನು ಉಪ್ಪು ಮೂಟೆ ಮಾಡಿ ಬೆನ್ನ ಮೇಲೆ ಹೊತ್ತು ತಿರುಗಿಸಬೇಕು ಎನ್ನುತ್ತಾಳೆ. ಕಣ್ಣಾ ಮುಚ್ಚಾಲೆ ಆಡಯತ್ತಾ…ನಾ ಎಲ್ಲಿದ್ದೀನೋ ಕಂಡು ಹಿಡಿ ನೋಡಾನಾ ಎನ್ನುತ್ತಾಳೆ. ಕಣ್ಣುಮುಚ್ಚಾಲೆಯ ಆಟದೊಳಗೆ ಮಾತ್ರ ನಾನೇ ಗೆಲ್ಲುತ್ತೇನೆ. ಏಕೆಂದರೆ ಆಕೆಯ ಮುಡಿಯೊಳಗಿನ ಕೇದಿಗೇ ಹೂವಿನ ವಾಸನೆಯೇ ಆಕೆ ಯಾವ ಮೂಲೆಯಲ್ಲಿದ್ದರೂ ತಟ್ಟನೇ ಕಂಡು ಹಿಡಿಯುವಂತೆ ಮಾಡುತ್ತದೆ.
ಆನಂತರ ನಾವು ತುಟಿಗೆ ತುಟಿ ಸೇರುವ ಎಂಜಲು ತುಟಿಯಾಟ ಆಡಿಕೊಳ್ಳುತ್ತೇವೆ. ಈ ಆಟವೆಂದರೆ ಆಕೆಗೆ ಬಲು ಕೋಪ.ಒಮ್ಮೆಲೇ ನಾನು ಆಕೆಯನ್ನ ಹಿಡಿದೆಳಕೊಂಡು ಅವಳ ಕೆಳದುಟಿಯನ್ನು ಮೆತ್ತಗೆ ಕಸಕ್ಕನೆ ಕಚ್ಚಿಬಿಡುತ್ತೇನೆ.
ಆಕೆ ಮತ್ತಷ್ಟೂ…ಮುಖ ಊದಿಸಿಕೊಂಡು ಕೂರುತ್ತಾಳೆ. ನಾನೇ ಮತ್ತೆ ಅವಳತ್ತಿರಕ್ಕೆ ಹೋಗಿ ಆಕೆಗೆ ಶರಣಾಗಿ ರಾಜಿಯಾಗಬೇಕು.ಇದೆಲ್ಲವೂ ಭಲೇ ತಮಾಷೆಯಾಗಿರುತ್ತದೆ. ಇದಕ್ಕೂ ಮೀರಿ ನಾನು ಅವಳೊಂದಿಗೆ ಹೆಚ್ಚು ಮುಂದುವರಿಯಲಾರೆ. ನನ್ನ ಈ ನಡೆಯಿಂದಾಗಿಯೇ ಚಿನ್ನವ್ವನಿಗೆ ನಾನೆಂದರೆ ತುಂಬಾ ಇಷ್ಟ.
ಬೆಳದಿಂಗಳು ಕತ್ತಲನ್ನು ಗುಟುಕರಿಸುತ್ತಲಿದೆ. ಕಣಗಿಲೆಯ ಹೂಗಳ ವಾಸನೆ ನನ್ನ ಮೈಮರೆಸುತ್ತಿದೆ. ಚಿನ್ನವ್ವ ಯಾಕೆ ಇನ್ನೂ ಬರಲಿಲ್ಲ. ಕಾಡುವ ನಿದ್ದೆಯ ಸೆಳೆತಕ್ಕೆ ನನ್ನ ಕಣ್ಣು ಬಿಡದಂತೆ ಮುಚ್ಚುತ್ತಿವೆ.
***
ಬೆಳಗಾಗಿ ಹೋಯಿತು.
ವೆಂಕಟೇಶ ಮಾವ ಓಡೋಡಿ ಬಂದು “ ಲೇ ತಮ್ಮ ಎದ್ದೇಳಾ! ಹುಲಿಗುಡ್ಡದ ಕಣಿವಿ ಹತ್ರದ ಜಾಲಿ ದಿನ್ನಿ ಮೇಲಿಂದ ನಮ್ಮ ಎತ್ತಿನ ಬಂಡಿ ಪಲ್ಟಿ ಹೊಡದಾತಂತೋ!.. ನಿಮ್ಮಣ್ಣ ಪ್ರತಾಪನಿಗೆ ಕಾಲೂ ಕೈಯ್ಯಿ ಮುರಿದಾವಂತ. ದೌಡ್ ಹೋಗಾನ ಏಳಾ…” ಅಂತ ತತ್ತರು ಬಿತ್ತರು ಮಾಡುತ್ತಾ ಎಬ್ಬಿಸಿದ.
ಚಿನ್ನವ್ವನಿಗಾಗಿ ರಾತ್ರೆಲ್ಲಾ ಕಣ್ಣಾಗ ಎಣ್ಣಿ ಬಿಟಗೊಂಡು ನಸುಕಿನ ಸಿಹಿ ನಿದ್ದೆಯೊಳಗ ಮುಳುಗಿದ್ದ ನನಗೆ ಮೊದಲು ಏನಂದ್ರೆ ಏನೂ ಅರ್ಥವಾಗಲಿಲ್ಲ. ಕಂಗಾಲಾಗಿ “ಏನ ಮಾವಾ” ಎಂದು ಮರು ಪ್ರಶ್ನಿಸಿದೆ.
“ ನಮ್ಮ ಬಂಡಿ ಬಿದ್ದಾತಂತಲೇ.. ಕೊರಕಲು ಕೆಳಗೆ ಬ ಪ್ರತಾಪನ ಮೇಲೆ ದಿನ್ನಿಯ ದೊಡ್ಡ ದೊಡ್ಡ ಕಲ್ಲುಗಳೂ ಉಲ್ಡಿ ಬಿದ್ದಾವಂತಲೇ ಯಪ್ಪಾ… ನಿಮ್ಮಣ್ಣ ಎಂಗದನೋ ಏನೋ! “ ಎಂದು ಮಾತಿನ ಈಟಿಗಳ ಎಸೆಯುತ್ತಾ ನಡುಗುತ್ತಾ ನಿಂತನು ವೆಂಕಟೇಶ್ ಮಾವ.
ಎದ್ದವನೇ ಲುಂಗಿ ಹಂಗೇ ಅಡ್ರಾಬಡ್ರಾ ಸುತ್ತಿಕೊಳ್ಳುತ್ತಲೇ ಮಾದಿಗರ ಕೇರಿಯೊಳಗಿಂದ ತೇರು ಬೀದಿಗೆ ಅಡ್ಡ ಬಿದ್ದು, ಕಾಲು ಜಾಡಿನೊಳಗೆ ಓಡಿದೆನು. ಏಳುತ್ತಾ ಬೀಳುತ್ತಾ ಕರೇ ಕಲ್ಲು ಹಾದಿಗೆ ಬಿದ್ದು ಮಂಡಿ ದುರಗವ್ವನ ಗುಡಿ ದಾಟುತ್ತಲೇ ಅನತಿ ದೂರದೊಳಗೆ ದೆವ್ವದ ಹಾಗೆ ಜಾಲಿ ದಿನ್ನೆ ಕಂಡಿತು. ಉಸಿರುಗಟ್ಟಿ ಓಡಿದೆ. ಅಂಗಿ ಬನೀನೂ ಬೆವರಿನಿಂದ ತೊಯ್ದು ತಪ್ಪಡಿಯಾಗಿತ್ತು. ಗುಂಡಿಗೆ ಹಲಗಿ ಬಾರಿಸುತಿತ್ತು. ಜಾಲಿ ಪೆಳೆಯ ದಿಬ್ಬದ ಕೊರಕಲಿಗೆ ಬಂಡಿಯ ಅಚ್ಚು ಮುರಕೊಂಡೋ,ಚಕ್ರದ ಕೀಲು ಕಳಚಿಕೊಂಡೋ ಬಂಡಿಗಳು ಕವಿಚಿ ಬೀಳೋದು ಇಂದು ನಿನ್ನೆಯದಲ್ಲ. ಅಲ್ಲಿ ಯಾವುದೇ ಗಾಡಿಯಾದರೂ ಹುಷಾರಾಗಿ ಹೋಗಬೇಕು. ತಟಗು ಯಾಮಾರಿದರೆ ಸಾಕು ಆ ಜಾಲಿಯ ಇರುಕಲು ಕಲ್ಲುಗಳ ತಿರುವಿನ ಆಳವಾದ ಕೊರಕಲಿಗೆ ಬಂಡಿಗಳು ಕವಚಿ ಬಿದ್ದು ಬಿಡುತ್ತವೆ. ಹಾ.. ಅನ್ನೋದರೊಳಗೇ… ಅವುಗಳೊಳಗೆ ಕುಂತವರ್ಯಾರೂ ಜೀವಂತ ಉಳಿಯಲಾರರು!
ಜಾಲಿಯ ಗುಡ್ಡ ಅಡವಿಯ ತಿರುವಿಗೆ ಸೇರಿಕೊಂಡಿದೆ. ಅಲ್ಲಿಯೇ ನಮ್ಮ ಬಂಡಿಯ ಅಚ್ಚು ಕಳಚಿ ಚಕ್ರ ಮುರಿದು ತಿರುವಿನಲ್ಲಿ ಬಿದ್ದಿದೆ! ಮರಗೆಣಸಿನ ಮೂಟೆಗಳೆಲ್ಲಾ ಹರಿದು ಚೆಲ್ಲಾಡಿವೆ. ನೊಗ ಹರಿದುಕೊಂಡ ಎತ್ತೊಂದು ಬೆದರಿ ನೋಡುತ್ತಿದೆ. ಮತ್ತೊಂದು ಎತ್ತು ತನಗೇನೂ ತಿಳಿಯದು ಎಂಬಂತೆ ಛತ್ರದ ಹಿಂದಲ ಹಸಿರ ಮೇಯುತ್ತಿದೆ.
ಕಲ್ಲ ಕೊರಕಲ ಆಳಕ್ಕೆ ಕುಸಿದು ಬಿದ್ದ ಪ್ರತಾಪ ಮುಲುಗುತಿದ್ದಾನೆ. ಸರ ಸರ ಇಳಿದವನೇ ಆತನ ಮೈ ಮೇಲೆ ಬಿದ್ದ ಗೆಣಸಿನ ಮೂಟೆಗಳನ್ನು ಪಕ್ಕಕ್ಕೆ ತೆಗೆದು ಹಾಕಿದೆ. ಅಣ್ಣನ ಮೈತುಂಬಾ ರಕ್ತ. ಕೊರಕಲಿಗೆ ಬಂಡಿ ಬಡಿದಂತಿದೆ. ಛತ್ರದೊಳಗೆ ಹೋಗಿ ಚಂಬು ತುಂಬಾ ನೀರು ತಂದು ಕುಡಿಸಿದೆ. ಸ್ವಲ್ಪ ಉಸಿರಾಡಿತು! ಇಬ್ಬರಿಗೂ…
“ ಏನಣ್ಣಾ ಯಂಗೈತೋ… ನಿನಗೆ!”
ಅಣ್ಣನಿಗೆ ನೋಟವಿಲ್ಲ ನೆಟೆ ಬಿದ್ದಿದ್ದಾನೆ!. ಮಾತೂ ಇಲ್ಲ. ಎತ್ತಿ ಭುಜದ ಮೇಲೆ ಹಾಕಿಕೊಂಡು ಊರೊಳಗೆ ಹೆಜ್ಜೆ ಇಟ್ಟೆ. ದೊಡ್ಡ ಗೌಡರ ಮಾವಿನ ತೋಪಿನ ಬಳಿಗೆ ಹೋಗೋ ಹೊತ್ತಿಗೆ ಒಂಟೆತ್ತಿನ ಸವಾರಿ ಬಂಡಿ ಕಟ್ಟಿಕೊಂಡು ವೆಂಕಟೇಶ ಮಾವ ಎದುರಿಗೆ ಬಂದನು. ಅದರೊಳಗೆ ಅಣ್ಣನನ್ನು ಮಲಗಿಸಿದೆ. ಮಾಯವ್ವ ಲಭೋ..ಲಭೋ ಎಂದು ಹೊಯ್ಕೊಳ್ಳುತ್ತಿದ್ದಾಳೆ. ಅತ್ತಿಗೆ, ಅಣ್ಣನ ಪುಟ್ಟ ಮಗಳು ಕಣ್ಣೀರುಗರೆಯುತ್ತಾ ಅಣ್ಣನನ್ನು ತಟ್ಟಿ ಏಳಿಸುತಿದ್ದಾರೆ. ಅಷ್ಟರೊಳಗೆ ಅಪ್ಪ ಆನಂದ ಸ್ವಾಮಿಯನ್ನು ಕರಕೊಂಡು ಬಂದ.
ಆನಂದ ಸ್ವಾಮಿ ನಮ್ಮೂರ ಭೈರವೇಶ್ವರ ಸ್ವಾಮಿ ಗುಡಿ ಪೂಜಾರಿ. ಒಳ್ಳೆಯ ನಾಟಿ ವೈದ್ಯ.ಆತ ಅಣ್ಣನ ಕಣ್ಣು ರೆಪ್ಪೆಗಳನ್ನು ಬಿಡಿಸಿನೋಡಿದ “ ಏನೂ ಆಗದು, ಭಯಪಡಬೇಡಿ” ಅಂತ ಹೇಳಿ ಕಮಂಡಲದೊಳಗಿನ ತೀರ್ಥವನ್ನು ಹಾಕಿದ. ಎಂತದೋ ಸೊಪ್ಪು ತಂದು ಹಿಂಡಿದ. ಸ್ವಲ್ಪ ಹೊತ್ತಿಗೆ ಅಣ್ಣ ಕಣ್ಣು ತೆರೆದ! ಎಲ್ಲರೂ ಸಂತೋಷ ಪಟ್ಟೆವು. ಆನಂದ ಸ್ವಾಮಿ ಅಣ್ಣನ ಮೈಗೆ ಅಂಟಿದ ರಕ್ತವನ್ನೆಲ್ಲಾ ಒರೆಸಿ ಎಲೆಗಳಿಂದ ಕಟ್ಟು ಕಟ್ಟಿದ.
“ ಬಲಗಾಲು ಮತ್ತು ಎಡಗೈಯ್ಯಿಗೆ ದೊಡ್ಡ ಪೆಟ್ಟಾಗಿದೆ. ಅವು ಮೂಗೇಟುಗಳು ಕಣ್ಣಿಗೆ ಕಾಣಿಸವು.ನಾಳೆ ಊತ ಬರುತ್ತದೆ. ಎಲೆಯ ಕಟ್ಟು ಹಾಕುತ್ತಲೇ ಇರೋಣ. ಪ್ರಾಣಕ್ಕೇನೂ ಭಯವಿಲ್ಲ.ಹುಡುಗ ಔಷಧಿ ಕುಡಿಯುವಾಗ ಮಂಡು ಹಿಡಿಯುತ್ತಾನೆ…ಕೆಲವುದಿನ ಏಳಲಾರ…ಕೂರಲಾರ” ಎಂದು ಅಪ್ಪನನ್ನು ಹೊರಗೆ ಕರೆದುಕೊಂಡು ಹೋಗಿ ಆನಂದ ಸ್ವಾಮಿ ಸವಿವರವಾಗಿ ಹೇಳಿದ.
ಅಪ್ಪನಿಗೆ ನಾವು ಇಬ್ಬರೇ ಮಕ್ಕಳು. ದೊಡ್ಡೋನ ಹೆಸರು ಪ್ರತಾಪ. ಚಿಕ್ಕವನೇ ನಾನು. ನಮ್ಮ ಅಪ್ಪ ಸುತ್ತ ಮುತ್ತ ಐದಾರು ಹಳ್ಳಿಗಳಲ್ಲಿ ಪ್ರಸಿದ್ದರು. ಆತನಿಗೆ ಭೂಮಿಯ ಹುಚ್ಚು, ಸಿಕ್ಕಷ್ಟನ್ನು ಬಾಚಿಕೊಳ್ಳುವ ಹುಚ್ಚು.ಯಾರವೋ ಹೊಲಗಳಿಗೆ ಮುಳ್ಳುತಂತಿಗಳನ್ನು ಕಟ್ಟಿಸುವುದು, ಆ ಭೂಮಿಯನ್ನು ತನ್ನ ಸ್ವಂತ ಮಾಡಿಕೊಳ್ಳುವುದು ಆತನ ಹವ್ಯಾಸ. ಅಪ್ಪ ಹೀಗೆ ಎಂಟು ಮಂಡಲಗಳೊಳಗೆ ಎಷ್ಟೋ ಭೂಮಿಗಳನ್ನು ಅಕ್ರಮಿಸಿಕೊಂಡಿದ್ದಾನೆ. ಮಾವಿನ ತೋಪಿನೊಳಗೆ ಬಟ್ಟಿ ಸರಾಯಿ ಕಾಸಿ ಹಗಲು ದುಡಿಯಲು ಬಂದ ಕೂಲಿಗಳಿಗೆ ತಾನು ನೀಡಿದ ಹಣವನ್ನು ರಾತ್ರಿ ಭಟ್ಟಿ ಸರಾಯಿಯನ್ನು ಕೊಟ್ಟು ಕಿತ್ತು ಕೊಳ್ಳುತ್ತಾನೆ. ತನ್ನ ಕಾರ್ಯಕ್ಕೆ ಅಡ್ಡ ಬಂದನೆಂದು, ಚಿಕ್ಕಪ್ಪನನ್ನು ಕೂಡಾ ತನ್ನ ಮನುಷ್ಯರಿಂದ ತೋಟದ ಬಳಿಯೇ ಕಾವಲು ಕಾದು ಕೊಲ್ಲಿಸಿಬಿಟ್ಟನೆಂದು ಊರ ಹಿರಿಯರೇ ಹೇಳುತ್ತಾ ಇರುತ್ತಾರೆ. ಅಪ್ಪನೆಂದರೆ ನಾನೂ ಕೂಡಾ ಭಯಪಟ್ಟು ಏನನ್ನೂ ಮಾತನಾಡಲಾರೆ. ಆತ ಹೇಳಿದ ಕೆಲಸವನ್ನು ಸುಮ್ಮನೇ ಮಾಡಿಕೊಳ್ಳುತ್ತಾ ಹೋಗುತ್ತೇನೆ ಅಷ್ಟೇ!
ಅಣ್ಣನಿಗೆ ಏಟು ಬಿದ್ದಮೇಲೆ ನನಗೆ ಕೆಲಸ ಹೆಚ್ಚಾಗಿದೆ.ಅಣ್ಣ ನೋಡಿಕೊಳ್ಳುತಿದ್ದ ಮನೆಗೆಲಸ, ತೋಟದ ಕೆಲಸ,ಮಾರ್ಕೆಟ್ಟಿಗೆ ಮೂಟೆಗಳನ್ನೆಲ್ಲಾ ಸಾಗಿಸುತಿದ್ದ ಕೆಲಸಗಳೆಲ್ಲಾ ನನಗೇ ಬಿದ್ದಿವೆ. ಅಪ್ಪನ ಹೊಡೆತದ ಭಯಕ್ಕೆ ಸಿಕ್ಕು ಯಾವ ಕೆಲಸಕ್ಕೂ ನಾನು ಆಗಲ್ಲ ಅನ್ನಲಾರದಾಗಿರುವೆ. ಗೊಲ್ಲರ ಹಳ್ಳಿ ಬಳಿ ಶೇಂಗಾ ಸುಲಿಸೋ ಕೆಲಸಕ್ಕೆ ಚಿನ್ನವ್ಬ ಕೂಡಾ ಬಂದಿದ್ದಾಳೆ. ನನ್ನ ಸುತ್ತಲೂ ಕೆಲಸಗಾರರೆಲ್ಲಾ ಇರುವರೆಂದು ಆಕೆ ದೂರದಿಂದಲೇ ಪ್ರೇಮ ಬೀರುತ್ತಾಳೆ. ಮಳೆ ಬೀಳುವಂತಿದ್ದರಿಂದ ಮುರ ಸಂಜೆಗೆಲ್ಲಾ ಎಲ್ಲರಿಗೂ ಕೂಲಿ ಕೊಟ್ಟು ಕಳಿಸಿಬಿಟ್ಟೆ.
ಸಣ್ಣಗೆ ಹನಿಗಳು ಬೀಳಹತ್ತಿದವು.ನಾನು ನೆರಿಕೆ ಶೆಡ್ಡಿನೊಳಗೆ ಕುಳಿತುಕೊಂಡು ಜೀತಗಾರರಿಗೆ ಕೊಡಬೇಕಾದ ಲೆಕ್ಕವನ್ನು ನೋಡುತಿದ್ದೆ.ಚಿನ್ನವ್ವ ಬಂದಳು. ಆಕೆ ನನ್ನೆದುರಿಗೆ ಬರದಂತೆಯೇ ಅಂಗಳದಲ್ಲಿಯೇ ಗೆಜ್ಜೆಯ ಸಪ್ಪಳ ಮಾಡುತಿದ್ದಾಳೆ. ನಾನೂ ತೆಲಿಕೆಡಿಸಿಕೊಳ್ಳದೇ ನನ್ನ ಕೆಲಸದೊಳಗೇ ಮುಳುಗಿದೆ. ಹನಿಗಳು ಇನ್ನೂ ಹೆಚ್ಚು ದೊಡ್ಡದಾಗಿ ಸುರಿಯತೊಡಗಿದವು.
ಹುಲ್ಲುಬಣವೆಯ ಪಕ್ಕದಿಂದ ಗೂಳಿಯೊಂದು ನುಗ್ಗಿ ಬಂತು. ಅದರ ಸದ್ದಿಗೆ ಭಯಬಿದ್ದು ಲಂಗ ಎತ್ತಿಕೊಂಡೇ ಓಡಿಬಂದು ಹೊಸಿಲ ಅಟದು ತೂರಿ ಬಿದ್ದಳು ಚಿನ್ನವ್ವ. ನನಗೋ ನಗು ತಡೆಯಲಾಗಲಿಲ್ಲ.ಬಿದ್ದೂ ಬಿದ್ದು ನಗತೊಡಗಿದೆ. ಆಕೆ ಮೂತಿ ಊದಿಸಿಕೊಂಡು ಸಿಟ್ಟಾಗಿ ಕುಕ್ಕುರು ಕುಳಿತಳು.ಹುಲ್ಲುಬಣವೆಯ ಪಕ್ಕದಲ್ಲಿ ನಿಂತಿದ್ದ ನಮ್ಮ ಕೆಲಸದವಳು ದ್ವೇಷದಿಂದ ಅವಳನ್ನೇ ನೋಡುತಿದ್ದಾಳೆ. ಆ ಕಡೆಯಿಂದ ಸಿದ್ದಮ್ಮಜ್ಜಿಯವರ ಆಕಳು ಹುಲ್ಲು ಮೇಯುತ್ತಾ ನಿಂತಿತು. ಗೂಳಿ ಎರಡು ಸಾರಿ ತಲೆ ಅಲ್ಲಾಡಿಸಿತು. ಅದರ ಕೊರಳ ಗಂಟೆಗಳು ಗುಡಿ ಗಂಟೆಗಳಂತೆಯೇ ಮೊಳಗಿದವು. ತಣ್ಣನೆಯ ಗಾಳಿ ಸಣ್ಣಗೆ ತಾಕುತ್ತಿತ್ತು.ಗೂಳಿಯು ತನ್ನ ಮುಂದಿರುವ ಹುಲ್ಲುಎತ್ತಿ ಆಕಳ ಮುಂದಕ್ಕೆ ನೂಕಿತು. ಅದು ಆಸೆಯಿಂದ ಹುಲ್ಲ ನೋಡುತ್ತಾ ಮತ್ತಷ್ಟು ಮುಂದಕ್ಕೆ ಬಂತು. ಹನಿಗಳು ಮತ್ತಷ್ಟೂ ಜೋರಾದವು.ಗೂಳಿ ತಲೆ ಆಡಿಸಿತು.ಕೊರಳ ಗಂಟೆಗಳು ಮತ್ತೊಂದು ಸಾರಿ ಮೊಳಗಿದವು. ಆಕಳು ಕೂಡಾ ಯಾವುದೋ ಸಣ್ಣನೆ ರಾಗ ಪಲುಕಿತು.ಇದನ್ನೆಲ್ಲಾ ನಾನು ಕಣ್ಣು ಬಡಿಯದಂತೆ ಗಮನಿಸುತ್ತಲೇ ಇದ್ದೆ.ಆಕಳು ಹುಲ್ಲು ಮೇಯುತ್ತಿದ್ದರೆ ಗೂಳಿ ಅದರ ಮುಖವನ್ನು ನೆಕ್ಕುತ್ತಿತ್ತು.ಆಕಳು ಇನ್ನಷ್ಟು ಹತ್ತಿರಕ್ಕೆ ಸರಿದು ಗೂಳಿಗೆ ತಗಲಿಕೊಂಡು ನಿಂತಿತು.ಹನಿಗಳು ಇನ್ನಷ್ಟೂ ಜೋರಾದವು. ಆಕಳು ತಿರುಗಿತು. ಗೂಳಿ ಏರಿತು.
ಇಲ್ಲಿತನಕವೂ ನಾನು ಮಾತನಾಡದಂತೆ ನಿಶ್ಯಬ್ದವಾಗಿ ಆಕಡೆಯೇ ನೋಡುತ್ತಿದ್ದರಿಂದ “ ಏನು ನೋಡುತ್ತಿದ್ದೀಯ ನೀನು?” ಅಂತಾ ಮುಂದಕ್ಕೆ ಬಾಗಿ ನನಗೆ ಅಡ್ಡಲಾಗಿ ಹೊರಗೆ ನೋಡಿದಳು ಚಿನ್ನವ್ವ.
ನನಗೆ ನಗು ಬಂತು.
ಆಕೆನ ನೋಡುತ್ತಾ “ ನೀನೇನನ್ನು ನೋಡುತ್ತಿದ್ದೀಯೋ…ಅವು ಅವಾಗಲೇ ಓಡಿಹೋಗಿವೆ” ಅಂದೆ.
“ನೀನು ಆ ಬೇವಿನ ಮರದ ಕಡೆಗೆ ಹೋಗಿ ಮತ್ತೆ ನೋಡು” ಎಂದು ನಗುತ್ತಾ ಹೇಳಿದಳಾಕೆ.
ಹೊರಗೆ ಮಳೆಹನಿ ಸುರಿಯುತ್ತಲೇ ಇತ್ತು. ಆಗಾಗ ಲಯಬದ್ದವಾಗಿ ಎತ್ತಿನ ಕೊರಳ ಶಬ್ಧ ನಿಲ್ಲದಂತೆ ಕೇಳಿಸುತ್ತಲೇ ಇತ್ತು. ಆ ಗಂಟೆಗಳ ಶಬ್ದ ಏನೇ ಅಂತ ಆಕೆಯನ್ನು ಕೇಳಿದರೆ ಸಾಕು…” ಛೀ.ಬಿಡಪ್ಪಾ… ಅದರೊಂದಿಗೆ ನನಗೇನು ಕೆಲಸ” ಅಂತ ಕೊಸರಿಕೊಂಡಳು.
ಇಬ್ಬರೂ ಮತ್ತೆ ಸ್ವಲ್ಪ ಹೊತ್ತು ಎಂಜಲು ಮುತ್ತಿನಾಟವಾಡಿದೆವು.
***
“ ಈ ಸಾರಿ ನೀವು ಮಾಸ್ತಮ್ಮನ ಜಾತ್ರೆಗೆ ಸಿಡಿಬಂಡಿ ನಡೆಸಿದರೆ ಚನ್ನಾಗಿರುತ್ತದೆ. ಆ ಮಾಸ್ತಮ್ಮ ತಾಯಿ ಕೂಡಾ ಶಾಂತಿಯಾಗುತ್ತಾಳೆ. ನಿಮಗೂ ನಿಮ್ಮ ಕುಟುಂಬಕ್ಕೂ ಒಳ್ಳೆಯದಾಗುತ್ತದೆ. ಕೇಡು ಅರಿಷ್ಟಗಳು ಹೋಗುತ್ತವೆ.ಈ ಸಾರಿ ಸಿಡಿ ಬಂಡಿ ಕಟ್ಟಿರಿ. ಪುಣ್ಯವು ಬರುತ್ತದೆ” ಎಂದು ಅಪ್ಪನಿಗೆ ಹೇಳಿದ ಆನಂದ ಸ್ವಾಮಿ.
ಅಪ್ಪನೇನೂ ಮಾತಾಡಲಿಲ್ಲ.
“ ಹೌದು ಮಸ್ತಮ್ಮನಿಗೆ ಸಿಡಿಬಂಡಿ ಕಟ್ಟುತ್ತೇವೆಂದು ಮುಗಿದುಕೊಂಡ ಹಳೆ ಹರಕೆ ಇನ್ನೂ ಬಾಕಿ ಇದೆ. ಎಂದಿಗಾದರೂ ಸರಿ ತೀರಿಸಬೇಕಾದದ್ದೇ. ಅದೇನೋ ಈಗಲೇ ಮಾಡಿದರೆ ಹರಕೆಯೂ ತೀರುತ್ತದೆ.”ಎಂದು ಅವ್ವ ತಲೆ ಬಗ್ಗಿಸಿಕೊಂಡೇ ಕದದ ಹಿಂದೆ ನಿಂತು ಹೇಳಿದಳು.
ವೆಂಕಟೇಶ ಮಾವ ಕೂಡಾ ಸಿಡಿಬಂಡಿ ಜರುಗಿಸಲು ಒಪ್ಪಿಕೊಂಡಿದ್ದರಿಂದ ಅಪ್ಪನೂ ಕೂಡಾ “ ಹಾಗೇ ಆಗಲಿ ಸ್ವಾಮಿ” ಎಂದ.
ಆನಂದ ಸ್ವಾಮಿಯು ಸಂತೋಷಪಟ್ಟರು.
ಅಪ್ಪ ಜಾತ್ರೆಯೊಳಗೆ ಮಾಸ್ತಮ್ಮನ ಹರಕೆಗೆ ಬೇಕಾದಂತಹವನ್ನೆಲ್ಲಾ ಕಾಗದದಲ್ಲಿ ಬರೆದು ಮಾವನವರ ಕೈಗೆ ನೀಡಿದ. ಸಿಡಿ ಬಂಡಿ ಅಂದರೆ ಅಪ್ಪನಿಗೂ ಕೂಡಾ ತುಂಬಾ ಇಷ್ಟ. ಚಿಕ್ಕಂದಿನಿಂದ ಜಾತ್ರೆಯೊಳಗೆ ಎಷ್ಟು ಆಟದ ವಸ್ತುಗಳಿದ್ದರೂ ಸಿಡಿ ಬಂಡಿಯ ಹಿಂದೆಯೇ ನಾನೂ ನನ್ನ ಸ್ನೇಹಿತರು ತಿರುಗುತಿದ್ದೆವು.
***
ಮಾಸ್ತಮ್ಮ ತಾಯಿಗೆ ದೊಡ್ಡ ಕಥೆಯೇ ಇದೆ. ರಾಜರ ಕಾಲದೊಳಗಿನಿಂದ ಸಾಮಂತರ ಕಾಲದವರೆಗಿನ ಭೂಮಿ ಕಥೆ ಅದು. ಮಳೆಗಾಲ ವಾಗದೇ ಆ ರಾಜ್ಯವೆಲ್ಲಾ ಬರಗಾಲ ಬಿದ್ದಿರುವಾಗ ಅಲ್ಲಿಯ ಜನರ ಕಷ್ಟಗಳನ್ನು ನೋಡಲಾಗದೇ ಸುಂಕಾಧಿಕಾರಿಯೇ ನಿಂತು ಕಾಡಂಚಿನಿಂದ ತುಂಗಭದ್ರೆಯ ತನಕ ಕಾಲುವೆ ತೆಗೆಸಿ ನೀರಾವರಿ ತಂದನೆಂದು ಹೇಳುತ್ತಿರುತ್ತಾರೆ. ರಾಜರು ಜನರಿಗೆ ವಿಧಿಸಿದ ತೆರಿಗೆಯು ಹೊರಲಾರದಾಗಿತ್ತು. ಬರಗಾಲಕ್ಕೆ ಸಿಕ್ಕ ಜನ ಈಗ ತೆರಿಗೆ ಕಟ್ಟೋ ಪರಿಸ್ಥಿತಿಯಲ್ಲಿಲ್ಲವೆಂದು ಸುಂಕಾಧಿಕಾರಿ ವೀರಭದ್ರ ರಾಜರ ಜೊತೆಗೆ ಕದನಕ್ಕೆ ಬಿದ್ದ.ವೀರಭದ್ರ ತೆರಿಗೆ ಹಣದಲ್ಲಿಯೇ ಕಾಲುವೆ ನಿರ್ಮಿಸಿ ಜನರಿಗೆ ಒಳ್ಳೆಯದು ಮಾಡಿದ್ದಕ್ಕೆ ಸಿಡಿದ ರಾಜ ವೀರಭದ್ರನದೇ ತಪ್ಪು ಎಂದು ಆತನನ್ನು ಬಂಧಿಸಿ ಸೆರೆಮನೆಗೆ ಹಾಕಲು ಯೋಜನೆ ಹೂಡಿದ.
ಆದರೆ ಊರಜನ ವೀರಭದ್ರನನ್ನು ಸೆರೆಗೆ ಕೊಂಡೊಯ್ಯುತಿದ್ದನ್ನು ನೋಡಿ ಸಹಿಸಲಾರದೇ ಹೋದರು. ದಾರಿಗೆ ಅಡ್ಡ ಬಂದ ವೀರಭದ್ರನ ಪತ್ನಿ ಮಾಸ್ತವ್ವನ ರಿವಾಜು ಸಹಿಸಲಾರದೇ ರಾಜರು ಮತ್ತಷ್ಟೂ ಕನಲಿ ವೀರಭದ್ರನ ತಲೆ ಕಡಿದು ಕಣಿವೆ ದಾರಿಯ ಬೇವಿನ ಮರಕ್ಕೆ ನೇತುಹಾಕಿ ಬಿಟ್ಟರು!
ಇದನ್ನೆಲ್ಲಾ ನೋಡಿದ ಮಾಸ್ತವ್ವ ಪತಿಯ ತೆಲೆಯನ್ನು ನೋಡಲಾಗದೇ ಭೊರೆಂದು ಗೋಳಾಡುತ್ತಾ ಆಗಿಂದಾಗಲೇ ತನ್ನ ತೆಲೆಯನ್ನೂ ಕೂಡಾ ಕತ್ತಿಯೊಂದರಿಂದ ಕತ್ತರಿಸಿಕೊಂಡು ಪ್ರಾಣವನ್ನು ಕಳಕೊಂಡುಬಿಟ್ಟಳು. ಊರ ಜನರು ಆಗ ಆ ಅಡವಿಯ ನಡುವೆಯೇ ಮಾಸ್ತಮ್ಮನಿಗೆ ದೇವಾಲಯವನ್ನು ಕಟ್ಟಿದರು. ಅಲ್ಲಿ ಪ್ರತಿ ಹತ್ತು ವರ್ಷಗಳಿಗೊಂದು ಸಲ ಈಕೆಯ ಜಾತ್ರೆ ನಡೆಯುತ್ತದೆ. ಜಾತ್ರೆ ಬಂದಾಗಲೆಲ್ಲಾ ಗುಡಿ ಸುತ್ತಲೂ ಚೊಕ್ಕ ಮಾಡುತ್ತಾರೆ.ಗುಡಿ ಮತ್ತು ಗುಡಿ ಅಂಗಳವನ್ನು ಬಿಟ್ಟರೆ ಅದೊಂದು ದಟ್ಟವಾದ ಅಡವಿ. ಎತ್ತಿನ ಬಂಡಿಯ ಜಾಡಿಗೂ ಕೂಡಾ ಪ್ರತಿ ಸಾರಿಯೂ ತಯಾರಿ ಮಾಡಿಕೋ ಬೇಕು. ಉಳಿದ ದಿನಗಳಲ್ಲಿ ಜನರಾರೂ ಅಲ್ಲಿಗೆ ಹೋಗುವ ಸಾಹಸ ಮಾಡಲಾರರು. ಜಾತ್ರೆಯ ಸಮಯದಲ್ಲಿ ಯಾರಿಗೂ ಯಾವ ಬಗೆಯ ನೋವೂ ಹಾನಿ ಸಂಭವಿಸದಿರುವುದು ಆಕೆಯ ಮಹಿಮೆಯೇ ಎನ್ನುತ್ತಾರೆ ಜನರು.ಮೂರು ದಿನಗಳು ನಡೆಯೋ ಜಾತ್ರೆಯಲ್ಲಿ ಸಿಡಿ ಬಂಡಿಗಳ ಹರಕೆಯೂ ವಿಶಿಷ್ಟವಾದುದು. ಮಾಸ್ತಮ್ಮನ ಜಾತ್ರೆ ನಡೆಯೋ ಪ್ರತಿ ಬಾರಿಯೂ ಸಿಡಿ ಬಂಡಿ ಕಟ್ಟುವುದು ಅಲ್ಲಿಯ ಪ್ರತೀತಿ.
ಸಿಡಿ ಬಂಡಿ ಒಂದು ಹರಕೆ. ಕಲ್ಲುಗಾಲಿಗಳ ಎತ್ತಿನ ಬಂಡಿಯ ಮೇಲೆ ಬಲವಾದ ತಾಳೆಯ ಕಂಬ ಕಟ್ಟಿ ಕಂಬದ ತುದಿಯ ಕೊಕ್ಕೆಗೆ ಮೇಕೆ ಮರಿಯನ್ನು ಚುಚ್ಚಿ ತೂಗು ಹಾಕುತ್ತಾರೆ. ಅದು ರಕ್ತ ಕಾರಿಕೊಳ್ಳುತ್ತಾ ಕೂಗುತ್ತಿರುತ್ತದೆ. ಅದನ್ನು ಹಾಗೆಯೇ ತೂಗು ಹಾಕಿಕೊಂಡು ಮೆರವಣಿಗೆಯಲ್ಲಿ ಬಂದು ಮಾಸ್ತಮ್ಮನ ಗರ್ಭ ಗುಡಿಯೊಳಗೆ ಬಲಿ ಅರ್ಪಿಸಿ, ಆಕೆಯ ಮೂರ್ತಿಯನ್ನು ಅದರ ರಕ್ತದೊಳಗೆ ತೊಯ್ಯಿಸಿ ಮಾಸ್ತಮ್ಮನನ್ನು ಶಾಂತಿಪಡಿಸುತ್ತಾರೆ. ಸಿಡಿ ಬಂಡಿ ಕಟ್ಟಿದವರಲ್ಲಿ ಕೆಲವು ಊರ ಮುಖ್ಯಸ್ಥರು ಮಾಸ್ತಮ್ಮನಿಗೆ ಕೋಣವನ್ನು ಕೂಡಾ ಬಲಿ ನೀಡಬೇಕು. ಜಾತ್ರೆಗೆ ಬಂದವರಿಗೆಲ್ಲಾ ಔತಣವನ್ನು ನೀಡಬೇಕು. ಅದೆಲ್ಲಾ ತುಂಬಾ ಖರ್ಚಿನಿಂದ ಕೂಡಿದ ವ್ಯವಹಾರ. ನಮ್ಮಣ್ಣ ಮಂಚ ಹಿಡಿದು, ನೋವಿನೊಳಗೆ ಇರೋದನ್ನು ನೋಡಿ ಅಪ್ಪ ಇನ್ನೇನನ್ನೂ ಆಲೋಚಿಸದಂತೆ ಸಿಡಿ ಬಂಡಿಯ ಹರಕೆಗೆ ಒಪ್ಪಿಕೊಂಡಿದ್ದ.
***
ನಾವು ಈ ಬಾರಿಯ ಜಾತ್ರೆಯ ಹರಕೆ ನಮ್ಮದೇ ಎಂದು ಮಾದಿಗರ ಕೈಲೆ ಡಂಗೂರದ ಸಾರೊಡೆಸಿದೆವು.ಮಾವಿನ ತೋಪಿನಿಂದ ಭಟ್ಟಿ ಸರಾಯಿ ತರಿಸಿ ಜನರಿಗೆ ಹುಯ್ದೆವು.ಸಂಭ್ರಮಗಳು ಭರ್ಜರಿಯಾಗಿಯೇ ಸಾಗಿದವು. ಎರಡು ನೂರು ಜನ ಭಜನೆ,ನಂದೀಕೋಲಿನವರು ಬಂದಿದ್ದಾರೆ. ಮತ್ತೊಂದು ಎರಡುನೂರು ಜನ ಕೋಲಾಟ,ಡೊಳ್ಳು,ಚೌಡಿಕೆ,ಉರಮಿ, ಮರಗಾಲಿನವರನ್ನು ಕರೆಸಿದೆವು. ಇನ್ನು ಬೊಂಬೆಯವರು,ಯಾಸಗಾರರು,ವೀರಗಾಸೆಯವರು,ಗೊಂದಲಿಗರು,ಯಾರ್ಯಾರನ್ನೋ ಕರೆಸಿದ್ದೇವೆ. ಬೆಳಗಾದರೆ ಜಾತ್ರೆಯ ಸಿಡಿಬಂಡಿ ಶುರುವಾಗುತ್ತದೆ. ರಾತ್ರಿಗೆ ರಾತ್ರೆಯೇ ಗುಡಿಗೆ ಬೇಕಾದ ಸಾಮಾನುಗಳೆಲ್ಲವನ್ನೂ ಬಂಡಿಗಳಲ್ಲಿ ತರಿಸಿದೆವು. ಧೂಪದ ಹಳ್ಳಿ ಮಾವನವರ ಕೋಣವನ್ನು ಹಿಡಿಸಿಕೊಂಡು ಬಂದೆವು.ಹರಕೆಯ ಎಲ್ಲಾ ಏರ್ಪಾಡುಗಳನ್ನು ವೆಂಕಟೇಶ ಮಾವ ಮತ್ತು ಕೊಟ್ರೇಗೌಡ ನೋಡಿಕೊಳ್ಳುತ್ತಿದ್ದಾರೆ.
ಕೊಟ್ರೇಗೌಡ ಅಪ್ಪನಿಗೆ ಒಳ್ಳೆಯ ಜತೆಗಾರ. ಅದೇ ಕೆಲಸಕ್ಕೆ ಬಂದು ಜೊತೆಯಾಗಿದ್ದಾನೆ. ಇಬ್ಬರೂ ಸೇರಿ ಮಾಡಬಾರದ ಎಲ್ಲಾ ಕೆಲಸಗಳನ್ನೂ ಮಾಡುತ್ತಿರುತ್ತಾರೆ. ಕೊಟ್ರೇಗೌಡ ತನ್ನ ಹೊಲಕ್ಕೆ ಬಂದ ಹೆಣ್ಣಾಳುಗಳನೆಲ್ಲಾ ಅನುಭವಿಸದೇ ಬಿಡೆನು ಎನ್ನುತ್ತಾನೆ. ಕಳ್ಳನಿಗೆ ಮಳ್ಳ ಜೊತೆಯಾದಂತೆ ಆತ ನಮ್ಮಪ್ಪನಿಗೆ ಜೊತೆಗಾರನಾಗಿದ್ದಾನೆ.
ಕೋಳಿಯ ಕೂಗಿಗೂ ಮೊದಲು ಜಾತ್ರೆ ಹರಕೆಯು ಶುರುವಾಯಿತು. ಮಾಸ್ತಮ್ಮ ತಾಯಿಗೆ ಮೊದಲು ದೃಷ್ಟಿ ತೆಗೆಸುವುದು ಆಚಾರ. ಕೋಟೆಯ ಗಂಗಮ್ಮನೊಂದಿಗೆ ಚಿನ್ನವ್ವ ಕೂಡಾ ದೃಷ್ಟಿ ತೆಗೆಯಲಿಕ್ಕೆ ಗುಡಿಯೊಳಗೆ ಬಂದಿದ್ದಾಳೆ. ಜನ ನೂಕು ನುಗ್ಗಲಲ್ಲಿ ಒಬ್ಬರ ಮೇಲೊಬ್ಬರು ಸರಿಯದಂತೆ ಬೀಳುತಿದ್ದಾರೆ. ಲೋಭಾನದ ಹೊಗೆ ಎತ್ತಿ ದೊಡ್ಡ ಕರ್ಪೂರದ ದೀಪಾರತಿ ಎತ್ತಿ ತುಂಬಿದ ಕೇಲಿನಲ್ಲಿ ತಾಯಿಗೆ ದೃಷ್ಟಿ ತೆಗೆದಳು ಗಂಗಮ್ಮ.
“ ಈಕೆಯಾರು ಗಂಗಮ್ಮಾ” ಅಂತ ಗುಡಿಯಲ್ಲಿ ಚಿನ್ನವ್ವನ ಕಡೆಗೆ ನೋಡುತ್ತಾ ಕೇಳಿದ ನಮ್ಮಪ್ಪ.
“ ನನ್ನ ಮಗಳು ಕಣ್ರಯ್ಯಾ” ಅಂತಾ ಹೇಳಿದಳು ಗಂಗಮ್ಮ.
ಜನರನ್ನು ತಳ್ಳುತ್ತಾ ಚಿನ್ನವ್ವ ಗಂಗಮ್ಮನನ್ನು ಕರಕೊಂಡು ಹೊರಕ್ಕೆ ಬಂದಳು. ನಮ್ಮಪ್ಪ ಚಿನ್ನಮ್ಮ ಹೋದ ಕಡೆಗೇ ನೋಡಿದ. ಪಕ್ಕದ ಕೊಟ್ರೇಗೌಡ ಸಣ್ಣಗೆ ನಕ್ಕ. ನನಗೇತಕೋ ಆ ನಗು ಕಂಡಾಗ ಭಯವಾಯಿತು.
***
ಜಾತ್ರೆ ವಿಜೃಂಭಣೆಯಿಂದ ಆರಂಭವಾಯಿತು. ಪ್ರಸಾದ ನೀಡುವ ಛತ್ರದ ಕೆಲಸಗಳನ್ನೆಲ್ಲಾ ನಾ ನೋಡಿಕೊಳ್ಳುತ್ತಿದ್ದೇನೆ. ಅಲ್ಲಿ ಹಲಗೆಗಳ ಸವಂಡು ಏರತೊಡಗಿತು.ಜನರು ಬಣ್ಣ ಎರಚಿಕೊಳ್ಳತೊಡಗಿದರು. ಕೋಣವನ್ನು ಹತ್ತಾರು ಜನರು ಹಿಡಿದು ಮಾಸ್ತಮ್ಮನ ಗುಡಿ ಹತ್ತಿರ ತಂದರು. ಕ್ವಾರೆ ಮೀಸೆಯವ ಗಂಡು ಗೊಡಲಿಯನ್ನೆತ್ತಿ ಕಟ್ಟಿಗೆಯಂತೆ ಏಟಿಗೆ ಏಟು ಹಾಕಿ ತಲೆ ಕಳಚುವಂತೆ ಕಡಿದ.ನೆತ್ತರು ಹರಿದು ಹಳ್ಳ ಬಿತ್ತು. ಚಿಮ್ಮಿದ ರಕ್ತ ಅಂಗಳ ದಾಟಿ ಅವ್ವನ ಗುಡಿಯೊಳಗೂ ಹಾರಿತು. ಕೋಣ ಕತ್ತರಿಸಿದ ಜಾಗದಲ್ಲಿಯೇ ದಪ್ಪನೆಯ ತಾಳೆಯ ಮರದ ದಿಮ್ಮಿಯನ್ನು ತಂದು ಅದರ ತುದಿಗೆ ಕಬ್ಬಿಣದ ಚೂಪಾದ ಕೊಕ್ಕೆ ಕಟ್ಟಿದರು. ಅದನ್ನು ಆಡಿನ ಬೆನ್ನಿನ ಚರ್ಮಕ್ಕೆ ಎಳೆದು ಚುಚ್ಚಿದರು. ಅದು ನೋವಿಗೆ ಬೆದರಿ ಕಿರುಚತೊಡಗಿತು. ಕೊಕ್ಕೆ ಚುಚ್ಚಿದ ಚರ್ಮದಿಂದ ರಕ್ತ ಕಾರುತಿತ್ತು. ಎತ್ತುಗಳ ಹೂಡಿ ಆ ಬಂಡಿಗೆ ಪೂಜೆ ಮಾಡಿದರು.
“ ಸಿಡಿಗಂಬವನ್ನು ಮೇಲಕ್ಕೆತ್ತಿರಿ “ ಎಂದರು ಆನಂದ ಸ್ವಾಮಿ.
ಜನರೆಲ್ಲಾ “ ಉದೋ..ಉಧೋ…” ಎನ್ನುತ್ತಾ ಆಡಿನ ಮರಿಯನ್ನು ಚುಚ್ಚಿದ ಸಿಡಿಗಂಬವನ್ನು ಮೇಲಕ್ಕೆತ್ತಿ ಕಲ್ಲುಗಾಲಿಗಳ ಎತ್ತಿನ ಬಂಡಿಯ ಮಧ್ಯಕ್ಕೆ ನಿಲ್ಲಿಸಿದರು. ಕಂಬವನ್ನು ನಾಲ್ಕೂ ಕಡೆಗೆ ಸೇದೋ ಹಗ್ಗದಿಂದ ಬಿಗಿದು ಎಳೆದೆಳೆದು ಕಟ್ಟಿದರು.
ಉರುಮಿ,ಹಲಗೆ,ಸಮಾಳ,ಡೊಳ್ಳುಗಳೆಲ್ಲಾ ಜೋರಾಗಿ ಮೊಳಗತೊಡಗಿದವು. ಹುಲಿಗುಡ್ಡದ ತುಂಬೆಲ್ಲಾ ಕುಂಕುಮ ಭಂಡಾರದ ಧೂಳು ಹರಡಿತು. ಭಕ್ತರು ಎಲ್ಲೆಂದರಲ್ಲಿ ಆಡು,ಕುರಿ,ಕೋಣ,ಕೋಳಿಗಳನ್ನೆಲ್ಲಾ ಬಲಿ ನೀಡಿ ಮುಯ್ಯಿ ತೀರಿಸಿಕೊಳ್ಳುತಿದ್ದಾರೆ. ಇಂಬಿಡಲು ಜಾಗವಿಲ್ಲದ ಜನರ ನಡುವೆ ಸಿಡಿಬಂಡಿಯು ಚಲಿಸಿತು. ಪೋತರಾಜನ ಕೈಯೊಳಗಿನ ಕುಂಕುಮ ಭಂಡಾರವು ಬೇವಿನ ಎಲೆಗಳೊಂದಿಗೆ ಗಾಳಿಯಲ್ಲಿ ಸೇರುತ್ತಿವೆ. ಸಿಡಿಗಂಬದ ಭಾರಕ್ಕೆ ಎತ್ತುಗಳು ಚಲಿಸಲಾರದೇ ತತ್ತರಬೀಳುತ್ತಿವೆ.ಒಂದು ಕಡೆಗೆ ಪರಿಸಿ ನೋಡಿ ಅವು ಬೆದರಿಹೋಗುತ್ತಿದ್ದರೆ ಇನ್ನೊಂದು ಕಡೆಗೆ ಹಲಗೆಯವರು ಕುಣಿದು ಮುಂದಕ್ಕೆ ನುಗ್ಗಿ ಅವನ್ನು ಇನ್ನೂ ಭಯಗೊಳಿಸುತಿದ್ದಾರೆ. ಎತ್ತುಗಳಿಗೆ ಭಟ್ಟಿ ಸರಾಯಿ ಹುಯ್ದು ಕೆಂಪು ಕುಂಕುಮವನ್ನು ಎರಚಿ ರೊಚ್ಚುಗೊಳಿಸಿ ಹಲಗೆ ಶಬ್ದದೊಂದಿಗೆ ಹುರಿದೇಳಿಸಿದರೂ ಅವು ಹುರಿದೇಳದೇ ಸಿಡಿ ಗಂಬದ ಭಾರಕ್ಕೆ ಕಾಲು ಕಿತ್ತಿಡಲು ಪೇಚಾಡುತಿದ್ದವು.
ಆದರೂ ಕಲ್ಲುಗಾಲಿಗಳ ಆ ಸಿಡಿ ಬಂಡಿ ಚಲಿಸಿತು. ಯಾವುದೋ ಶಕ್ತಿ ಹಿಂದಿನಿಂದ ಮುಂದಕ್ಕೆ ನಡೆಸುವಂತೆ ಚೌತಿಯ ಕಟ್ಟೆಯ ಸುತ್ತಾ ಕುಂಕುಮ ಭಂಡಾರದ ಧೂಳಿನಲ್ಲಿ ಸಿಡಿಬಂಡಿಯು ಪ್ರದಕ್ಷಿಣೆಯನ್ನು ಹಾಕಿತು.
ಜಾತ್ರೆ ಭರ್ಜರಿ ನಡೆಯುತಿತ್ತು.
ಆಗಲೇ ಅಂಜಿ ನನ್ನ ಬಳಿಗೆ ಬಂದ.
“ ಏನಣ್ಣಾ?ನಿಮ್ಮಪ್ಪ ಭಲೇ ಖರ್ಚು ಮಾಡುತಿದ್ದಾನಲ್ಲಪ್ಪೋ ” ಎಂದ.
“ ಮಾಡಲಿ ಬಿಡಾ, ಹತ್ತು ವರ್ಷಕ್ಕೆ ಒಂದು ಸರ್ತಿ. ಇಂಗಾದರೂ ಪಾಪಿಸ್ಟ ದುಡ್ಡು ಪರದೇಶಿ ಪಾಲಾಗಲಿ. ಅದು ಬಿಡು, ಏರಿಸಿಬಿಟ್ಟಿಯೇನಪ್ಪಾ ಈಚಲಮ್ಮನ್ನ?” ಎಂದೆ ನಗುತ್ತಾ.
“ಇಲ್ಲ ಬಿಡಣ್ಣೋ! ತಪ್ಪು ತಪ್ಪು, ಮಾಸ್ತವ್ವ ಅಸವಲ್ಲದಾಕಿ” ಅಂತ ಕೆನ್ನೆ ಬಡಕೊಂಡ.
“ ಏರಿಸಿರೋದು ಸಾಕು ಬಿಡಲೇ, ಹೋಗಿ ಚಿನ್ನವ್ವ ಎಲ್ಲಿದ್ದಾಳೋ ನೋಡಿ, ಕರಕಂಬಾ ಹೋಗು” ಎಂದೆ.
“ಆತಣ್ಣಾ..” ಅಂತ ಕಣ್ಣು ಹೊಡೆದು ಹೊರಟ.
ಅವನೋದ ಸ್ವಲ್ಪೊತ್ತಿಗೇ ನನಗಾಗಿ ಚಿನ್ನವ್ವಳೇ ಬಂದಳು.
“ಏನ್ರೀ ಸಮಾಚಾರ?” ಅಂತ ಕೇಳಿದೆ ಕಣ್ಣೆಗರಿಸುತ್ತಾ.
ನಕ್ಕು ನಾಚಿಕೊಂಡಳು.
“ ಏನು ಬೇಕೋ?” ಅಂತ ನೆತ್ತಿ ಮೊಟಕುತ್ತಾ ಕೇಳಿದೆ.
“ ಏನಾದ್ರೂ ಕೆಲಸವಿದ್ದರೆ ಹೇಳು ಮಾಡ್ತೀನಿ” ಎಂದಳು.
“ ಇರ್ಲಿ ಬಿಡು, ಹೊಸ ಬಟ್ಟೆ ಹಾಕಿದ್ದೀಯ, ನನಗೆ ನಿರ್ವಾ ಇಲ್ಲ. ನೀನರಾ ಹೋಗಿ ಜಾತ್ರಿಯೆಲ್ಲಾ ಸುತ್ತಾಕ್ಯಾಂಬಾ ಹೋಗು” ಎಂದೆ.
ಚಿನ್ನವ್ವ ಕೈ ಮುಷ್ಟಿ ಮುಂದಕ್ಕೆ ಚಾಚಿ “ ನೀ ಇದನ್ನ ತಗಂಡ್ರ ನಾ ಹೊಕ್ಕೀನಿ” ಎಂದಳು.
“ ಏನೈತೇ” ಎಂದು ಬೆರಳು ಬಿಡಿಸಿ ನೋಡಿದೆ.
“ ಹುಲಿಯುಗುರಿನ ಸರ”
“ ಜಾತ್ರೆಯೆಲ್ಲಾ ತಿರುಗಿ ಬೇಟೆಗಾರರ ಹತ್ರ ಚೌಕಾಸಿ ಮಾಡಿ ತಂದೆ. ಇದು ಅಸಲಿ ಹುಲಿ ಉಗುರೇ” ಎಂದು ನನ್ನ ಕೊರಳೊಳಗೆ ಹಾಕಿದಳು. ಇವಳಿಗೆ ನಾನೆಂದರೆ ಎಷ್ಟಿಷ್ಟ! ಎಂತಾ ಪ್ರೇಮ? ನಾನು ನನ್ನ ಕೊರಳೊಗಿನ ಚಿನ್ನದ ಚೈನನ್ನ ಆಕೆಯ ಕೊರಳಿಗೆ ಹಾಕಲು ಹೋದೆ.
“ ಬ್ಯಾಡ್ರೀ ಗೌಡಪ್ಪನೋರೇ,ಬ್ಯಾಡ” ಬಗ್ಗಿ ಕುಕ್ಕುರು ಕುಂತವಳೇ ತಲೆಯನ್ನು ಮೊಳಕಾಲೊಳಗೆ ಬಚ್ಚಿಟ್ಟಿಕೊಂಡಳು.
ನಾನು ಸುಮ್ಮನಿರತೀನಾ. ಬಲವಂತವಾಗಿ ಅವಳ ಕೊರಳೊಳಗೆ ಹಾಕಿದೆ. ಯಾರೋ ಬರುತ್ತಿರುವ ಹೆಜ್ಜೆ ಸದ್ದು ಕೇಳುತ್ತಲೇ…
“ರಾತ್ರಿಗೆ ಬರ್ತೀನಿ ಗೋಡ್ರೇ” ಅಂತ ಹೇಳಿ ಆಕೆಯು ಓಡುತ್ತಾ ಮರೆಯಾದಳು.
ಕೊಟ್ರೇಗೌಡ,ನಮ್ಮಪ್ಪ, ಉಳಿದ ಜೊತೆಗಾರರು ಎಲ್ಲಾ ಕೂಡಿ ಸರಾಯಿ ಪೋಣಿಸಿ ಕಣ್ಣು ಕೈಕಾಲು ಆಡದಂತಾಗಿ ಊಟಕ್ಕೆ ಬಂದರು. ಎಲ್ಲರಿಗೂ ನೀಡಿದೆವು. ಉಂಡ ನಂತರ ಏಳುತ್ತಾ ಜೋಲಿಹೊಡೆಯುತ್ತಾ ಮತ್ತೆ ಕುಡಿಯಲಿಕ್ಕೆ ತೋಟದ ದಾರಿ ಹಿಡಿದರು.
ಮತ್ತೊಂದು ಗಂಟೆ ಕಳೆದ ನಂತರ…
ಅಂಜಿ ಓಡುತ್ತಾ ಬಂದ. ಮೈಯ್ಯೆಲ್ಲಾ ಬೆವೆತು ನಡುಗುತ್ತಿದ್ದಾನೆ ಅವನು. ಕೈ ಕಾಲುಗಳು ಭಯದಿಂದ ಅದುರುತ್ತಿವೆ.
“ ಯಣ್ಣಾ ಘಾತ ಆಗಿಬುಟ್ಟತೋ ನಡೀಬಾರದು ನಡೆದು ಹೋಗಿಬುಟ್ಟತೋ..” ಅಂತ ಎದೆಗೆ ಗುದ್ದಿಕೊಳ್ಳತೊಡಗಿದ.
ನನಗೇನೂ ಅರ್ಥವಾಗಲಿಲ್ಲ.
ಏನ್ ನಡೀತಲೇ…ಹೇಳಾ..ಹೇಳು” ಎಂದೆ.
ಆತ ಸ್ವಾಧೀನದೊಳಗಿರಲಿಲ್ಲ.
ಭುಜಗಳನ್ನು ಹಿಡಿದೆತ್ತಿ ಜಾತ್ರೆಯಿಂದ ದೂರದಲ್ಲಿ ಹುಣಸೇಮರದ ನೆರಳಲ್ಲಿ ಕೂಡಿಸಿದೆ.
“ಹೇಳೋ ಅಂಜಿ. ಏನ್ ನಡೀತೋ” ಮತ್ತೊಂದು ಸಾರಿ ಅಲ್ಲಡಿಸಿ ಕೇಳಿದೆ.
“ ಅಣ್ಣಾ ನಿಮ್ಮಪ್ಪ, ಆ ಕೊಟ್ರೇಗೌಡ ಇಬ್ಬರೂ ಸೇರಿ ಅಡವಿಯೊಳಗಿನ ಮಾನತೋಪಿನೊಳಗೆ ಚಿನ್ನಮ್ಮನನ್ನು ಕೆಡಿಸಿ ಸಾಯಿಸಿದ್ದಾರೋ. ಅಲ್ಲಿಂದಲೇ ಬರುತ್ತಿದ್ದೇನೋ” ಅಂತಾ ನೆಲಕ್ಕೆ ಬೀಳುತ್ತಾ ಅಳುತ್ತಾ ಹೇಳಿದನು.
ಆ ಮಾತು ನನ್ನ ತಲೆಯನ್ನೇ ಸೀಳಿತು! ತಲೆ ಗಿರ ಗಿರವಾಡತೊಡಗಿತು.
“ ಏನ್ ಹೇಳೋದಣ್ಣಾ, ಅವಳನ್ನ ಎತ್ತಾಕ್ಕೊಂಡು ಬರ್ರಿ ಅಂತ ಕೊಟ್ರೇಗೌಡ್ರ ಆಳುಗಳನ್ನು ಕಳಿಸಿದ್ದ. ಜಾತ್ರೆಯಲ್ಲಿ ಪಾತ್ರೆ ಪಗಡೆ ಕೊಳ್ಳುತಿದ್ದ ಚಿನ್ನವ್ವನನ್ನ ಆ ಕುಡುಕರು ಕರಕೊಂಡು ಹೋಗಿ, ಗುಡ್ಡದ ಹತ್ತಿರವಿರುವ ತೋಟದ ಬಳಿಗೆ ಎತ್ತಿಕೊಂಡೊಯ್ಯುವ ಮೊದಲು ನಿಮ್ಮಪ್ಪ ಆಕೆಯ ಬಟ್ಟೆಗಳನ್ನು ಕಿತ್ತು ಹಾಕಿದನು. “ ಬೇಡ ದೊಡ್ಡ ಗೌಡ್ರೇ…ನನ್ನನ್ನು ಬಿಟ್ಟು ಬಿಡ್ರಿ. ನಿಮ್ಮ ಮಗಳಂತವಳು” ಅಂತ ಚಿನ್ನವ್ವ ಅಳುತಿದ್ದರೆ ಕೇಳದಂತೆ ಹೊತ್ತು ತೋಟದ ಗ್ವಾದಲಿಯಲ್ಲಿ ಹಾಕಿದ ಆಕೆಯ ಮಾತು ಕೇಳದೇ ಗ್ವಾದಲಿಯಲ್ಲೇ ಕೆಡಿಸಿದ. ಆ ನಂತರ ಆ ಕೊಟ್ರೇಗೌಡ ಆಕೆಯನ್ನು ಅನುಭವಿಸಬೇಕೆಂದು ಮುನ್ನುಗ್ಗಿ ಮೇಲೆ ಬೀಳಲು ಆಕೆ ಹೇಗೋ ಎದ್ದು ಅವನನ್ನು ನೂಕಿ ಓಡತೊಡಗಿದಳು. ಆಕೆ ಬೆಟ್ಟದ ಮೇಲಕ್ಕೆ ಏರತೊಡಗಿದಳು. ಅಲ್ಲಿಂದಲೇ ಅಲುಗಾಡುತಿದ್ದ ದೊಡ್ಡ ಬಂಡೆಯನ್ನು ತೇಕುತ್ತಾ ಬರುತಿದ್ದ ಕೊಟ್ರೇಗೌಡನ ಮೇಲಕ್ಕೆ ನೂಕಿಬಿಟ್ಟಳು. ಕುಡಿದ ಕೊಟ್ರೇಗೌಡ ಆ ಬಂಡೆಯ ಅಡಿಗೆ ಬೊಕ್ಕಬಾರಲೇ ಬಿದ್ದು ಪ್ರಾಣ ಬಿಟ್ಟ. ಆಕೆ ಮತ್ತಷ್ಟೂ ಭಯಬಿದ್ದಳು. ಊರೊಳಗೆ ಬಂದರೆ ಏನು ಶಿಕ್ಷೆ ಕೊಡುವರೋ ಎಂದು ಅಲ್ಲಿಂದಲೇ ಹಾರಿ ಸತ್ತಳೋ ಯಣ್ಣಾ….” ಎಂದು ಬೋರ್ಯಾಡಿ ಅಳುತ್ತಾ ಅಂಜಿ ಹೇಳುತಿದ್ದಂತೆಯೇ ದೂರದಿಂದಲೇ ವೆಂಕಟೇಶ ಮಾಮ ಉದ್ವೇಗದಿಂದ ನನ್ನನ್ನ ಕರೆದ.
“ ಲೇ ನಿನ್ನ ನಿಮ್ಮಪ್ಪ ಗಡಾನ ಬಾ ಅಂತದಾನ ಬಾರಾ..” ಎಂದ.
ಕಣ್ಣೀರನ್ನು ಗುಂಡಿಗೆಯೊಳಗೇ ನುಂಗಿಕೊಂಡು ಮೆಲ್ಲಗೆ ಎದ್ದೆ. ಅಪ್ಪ ಎದುರಿಗೆ ಬಂದ.
“ ಲೇ ಹೋಗೋಗಾ… ಬಂಡಿ ಕಟ್ಟಾ.. ಮೈಯ್ಯಲ್ಲಾ ವಜ್ಜಾಗೈತಿ, ಕಾಲು ಕೈಯಿ ನೋಯಿಸಾಕತ್ಯಾವು ನಡಿ ಓಟು ಮನಿಗೋಗಿ ಮಕ್ಕಂಬುತೀನಿ” ಭಟ್ಟಿ ಸರಾಯಿಯ ವಾಸನೆ ಚಲ್ಲುತ್ತಾ ಆದೇಶ ನೀಡಿದನು ಅಪ್ಪ.
ತಲೆ ಬಗ್ಗಿಸಿಕೊಳ್ಳುತ್ತಾ ಹೋಗಿ ಬಂಡಿ ಕಟ್ಟಲಿಕ್ಕೆ ಎತ್ತುಗಳನ್ನು ಸಿದ್ಧ ಪಡಿಸಿಕೊಳ್ಳತೊಡಗಿದೆ. ಮನಸೆಲ್ಲಾ ಕುದಿಯುತ್ತಿದೆ. ʼಚಿನ್ನಮ್ಮನನ್ನು ಸಾಯಿಸಿದ್ದು ಅಪ್ಪನಾಗದೇ ಇನ್ನೊಬ್ಬನಾಗಿದ್ದರೆ ನನ್ನ ಇದ್ದಲಿ ಉರಿವ ಕಡಾಯಿಯಿಂದಲೇ ತುಂಡು ತುಂಡಾಗಿಸಿ ಬಿಸಾಕಿಬಿಡುತಿದ್ದೆʼ ಎಂದು ಆಲೋಚಿಸುತ್ತಲೇ ಬಂಡಿಗೆ ಎತ್ತುಗಳನ್ನು ಕಟ್ಟಿ ಮೇಲೆಗರಿ ಕುಳಿತು ನನ್ನಪ್ಪನ ಬಳಿಗೆ ತಂದು ನಿಲ್ಲಿಸಿದೆ. ಆತ ತೂರ್ಯಾಡುತ್ತಲೇ… ಬಂದು ಬಂಡಿ ಮೇಲೆಗರಿ ಬಿದ್ದ.
ಬಂಡಿಯ ಮುಂದಕ್ಕೆ ಕದಲಿಸಿದೆ.
ಬಂಡಿ ಅಡವಿ ದಾರಿಯಿಂದ ಹೊರಟು ತೋಪಿನಾಚೆಯ ದಿನ್ನೆಯನ್ನು ಏರತೊಡಗಿತು. ಚಿನ್ನವ್ವನ ಕೊನೆಯ ನೋಟವನ್ನಾದರೂ ನೋಡದ ನನ್ನ ಮನಸ್ಸು ಕಷ್ಟ ಪಡುತ್ತಿರುವಾಗಲೇ ಎತ್ತುಗಳು ದಿನ್ನೆ ಏರಲಾಗದೇ ಕಾಲು ಕಿತ್ತಿಡಲು ಕಷ್ಟ ಪಡುತಿದ್ದವು.
“ ಲೇ … ನಮಗೆ ಇನ್ನ ಆ… ಅರಿಷ್ಟ ಹೋಯಿತೋ..” ಕುಡಿದ ಮತ್ತಿನೊಳಗೆ ಅಪ್ಪ ಆನಂದದಿಂದ ಹೇಳುತಿದ್ದಾನೆ.
ಬಂಡಿಯ ಗದುಕಿಗೆ ಅಪ್ಪನ ಬನೀನಿಗೆ ಚಿನವ್ವನಿಗೆ ನಾನು ಹಾಕಿದ ಬಂಗಾರದ ಚೈನು ಸಿಕ್ಕಿಕೊಂಡಿದ್ದು ಕಾಣುತಿತ್ತು. ತಗ್ಗು ದಿನ್ನೆಗೆ ಗದುಕಿದಂತೆಲ್ಲಾ ಅದು ಹೊಳೆಯುತಿತ್ತು. ಮತ್ತಿನೊಳಗಿದ್ದ ಅಪ್ಪ ಸ್ವಾಧೀನದೊಳಗಿರಲಿಲ್ಲ. ಎತ್ತಿನ ಬಂಡಿ ದಿನ್ನೆ ಏರಿತು.
ಸರಿಯಾಗಿ ಕಣಿವೆಯ ಛತ್ರದ ಹತ್ತಿರಕ್ಕೆ ಬರುತ್ತಲೇ ನನಗೂ ಬಾಯಾರಿ ಹೋಗಿ ನೀರು ಕುಡಿಯಬೇಕೆನಿಸಿತು. ಇಳಿದು ಛತ್ರದ ಎದುರಿಗಿನ ಏರಿನಲ್ಲಿ ಬಂಡಿ ನಿಲ್ಲಿಸಿ ಅಪ್ಪನಿಗೆ ನೀರು ಕುಡಿದು ಬರುತ್ತೇನೆಂದು ಹೇಳಿ, ಬಂಡಿ ಇಳಿದು ಛತ್ರದ ಒಳಕ್ಕೆ ಹೋದೆ.
ಏರಿನಲ್ಲಿ ನಿಲ್ಲಿಸಿದ ಬಂಡಿ ಸಣ್ಣಗೆ ಮುಂದಕ್ಕೆ ಚಲಿಸಿತು.
“ ಓಬ್ಬಾ..ಓಬ್ಬ…” ಅಂತ ಅಪ್ಪ ಭಯದೊಳಗೆಯೇ ಕೂಡಿಗದ. ಆದರೆ ಚಕ್ರಗಳು ನಿಲ್ಲಲಿಲ್ಲ. ಇಳಿವಿನ ಕಡೆಗೆ ಚಕಚಕನೇ ಉರುಳತೊಡಗಿದವು. ಅಪ್ಪ ಕೇಕೆ ಹಾಕತೊಡಗಿದ.
ಚಕ್ರಗಳು ನಿಲ್ಲಲೇ ಇಲ್ಲ.
ಉರುಳೀ ಉರುಳೀ ದೊಡ್ಡ ಬಂಡೆಗಲ್ಲಿಗೆ ಡಿಕ್ಕೆ ಹೊಡೆದವು. ಅಚ್ಚು ಮುರಕೊಂಡ ಬಂಡಿ ಒಮ್ಮೆಲೇ ಕುಸಿಯಿತು. ಎತ್ತುಗಳು ಬೆದರಿ ತಲಾ ಒಂದು ದಿಕ್ಕಿನ ಕಡೆಗೆ ಮುರಿದ ನೊಗದೊಡನೆಯೇ ಓಡಿದವು.ನೋಡ ನೋಡುತಿದ್ದಂತೆಯೇ ಅಚ್ಚಿನ ಸಮೇತ ಬಂಡಿ ಮೇಲಿನಿಂದ ಕೆಳಕ್ಕೆ ಜಾರಿತು. ಜಾರಿ… ಜಾರಿ ಒಮ್ಮೆಲೇ ಎಗರಿ ದಪ್ಪೆಂದು ಹಳ್ಳಕ್ಕೆ ಬಿತ್ತು! ಅಲ್ಲಿನ ಬಂಡೆಗಳೇ ಒಡೆದು ಹೋಳಾದವು.
ಭಾರದ ಅಪ್ಪ ಬಂಡಿಯ ಸಮೇತ ಹಿಂದಕ್ಕೆ ಪಲ್ಟಿ ಹೊಡೆದು ಬಿದ್ದಿದ್ದ. ಆತನ ದೇಹ ಮಾಂಸದ ಮುದ್ದೆಯಾಗಿ ಸೀಳಿಹೋದ ಬಂಡೆಯ ಮೇಲೆ ಕುಳಿತಿತು! ಕಣ್ಣು ರೆಪ್ಪೆ ಬಡಿವಷ್ಟರಲ್ಲೇ… ಎಲ್ಲಾ ನಡೆದುಹೋಯಿತು. ಬಂಡಿಯನ್ನ ನಿಲ್ಲಿಸಲು ಎಷ್ಟು ಜೋರಾಗಿ ಓಡಿ ಬಂದರೂ ನನಗೆ ನಿಲುಕದಂತೆ ಕ್ಷಣದಲ್ಲೇ ಎಲ್ಲಾ ಮುಗಿದು ಹೋಯಿತು!
ಅಯ್ಯೊಯ್ಯೋ.. ಎಂದು ಅಳುತ್ತಾ ಕುಕ್ಕುರು ಕುಂತೆ.ದೂರದಲ್ಲಿ ಸಿಡಿಗಂಬಕ್ಕೆ ಕಟ್ಟಿದ ಮೇಕೆ ಮರಿಯ ಕೂಗು ಕೇಳಿಸುತ್ತಿದೆ.
ಕಣ್ಣು ಹೊಳೆಯಾಗಿ, ಕಾಲು ಕುಸಿದವು.
ಛತ್ರದ ಬಳಿ ಕುಳಿತಿದ್ದವರನ್ನು ಸೀಳಿಕೊಂಡು ಭದ್ರ ಮಾವ ಬಂದ “ ಅಪ್ಪಾ ನೀನೂ ಕೊರಕಲಿಗೆ ಬಿದ್ದು ಬಿಟ್ಟೀಯೋ” ಎಂದು ಓಡಿ ಬಂದು ನನ್ನನ್ನು ಹಿಡಿದುಕೊಂಡ.
ನಾನು ಎಚ್ಚರದಪ್ಪಿ ಅಲ್ಲೇ ಹೊರಳಿದೆ. ಆನಂತರ ಬಂಧು ಬಳಗದವರೆಲ್ಲಾ ಬಂದು ಬಂಡೆಯ ಇಳುಕಲಿಗೆ ಇಳಿದು ಅಪ್ಪನ ಶವವನ್ನು ಮನೆಗೆ ತಂದರು. ಎಲ್ಲರೂ ಬೋರ್ಯಾಡಿ ಎಂದು ಅಳುತಿದ್ದಾರೆ. ಆಗ ನನಗೇತಕೋ ಅಳು ಬರಲೇ ಇಲ್ಲ!
ಯಾರ್ಯಾರೋ ಬರುತಿದ್ದಾರೆ, ನೋಡುತಿದ್ದಾರೆ,ಹೋಗುತಿದ್ದಾರೆ. ನನಗೂ ಸಾಂತ್ವಾನ ಹೇಳುತಿದ್ದಾರೆ.
ಚೆಂಜಿಗೆಲ್ಲಾ ಸಿದಿಗಿ ತಯಾರು ಮಾಡಿ, ಜಾತ್ರಿಗೆ ಕಟ್ಟಿದ ಬಂಡಿ ಮೇಲೆಯೇ ಶವದ ಮೆರವಣಿಗೆ ಸಾಗಿತು.
ಆ ಮಾವಿನ ತೋಪಿನಲ್ಲೇ ಸಮಾಧಿ ಮಾಡಿದೆವು.
ವೆಂಕಟೇಶ್ ಮಾವ ಬಂದನು.
“ ಏನ್ ಅಳೀದೇವ್ರೂ…ದುಃಖ ನುಂಗಿ ದಿಗಿಲು ಬೀಳಬೇಡ, ಸಮಾಧಾನ ತಂದ್ಕಾಳಪ್ಪಾ” ಎನ್ನುತ್ತಾ ಭೂಜದ ಮೇಲೆ ಕೈ ಹಾಕಿ ಸಾಂತ್ವಾನ ಹೇಳಿದ. “ ಹೋಯ್ತು ಕಣಯ್ಯಾ ಒಂದು ಒಳ್ಳೆಯ ತಲೆ ಹೋಯಿತು. ಆನಿಯಂತಹ ಮನುಷ್ಯ ಹೋಗಿಬಿಟ್ಟ.” ಬಿಡು,ಆತ ಮಾಡಿದ ಪಾಪಗಳೇನು ಕಮ್ಮಿಯೇನು? ನನಗೂ ಗೊತ್ತು. ಆ ದೇವರು ಇಂಥಾ ಶಿಕ್ಷೆ ನೀಡ್ತಾನಂತ ಅಂದ್ಕೊಂಡಿರಲಿಲ್ಲ. ಹೋತು ಬಿಡಯ್ಯಾ ನಡು ಮನಿಯ ತೊಲಿಗಂಬವೇ ಹೋಯ್ತಯ್ಯಾ…ಇನ್ನೇನು ಮಾಡಿದರೂ ನೀನೇ ಮಾಡಬೇಕು. ಏನು ಮಾಡ್ತಿಯೋ ಮಾಡು” ಎಂದನು.
“ ಮಾವಾ! ನಂದೊಂದು ಮಾತು ಕೇಳು. ಆಗೋದೇನೋ ಆಗಿ ಹೋಗೇತಿ. ನಮ್ಮಪ್ಪ ಮಾಡಿದ ತಪ್ಪುಗಳನ್ನು ನಾವೇ ಸರಿಮಾಡಬೇಕು. ನೋಡು ಎಲ್ಲಾ ಹೋಬಳಿಗಳೊಳಗೆ, ಎಲ್ಲೆಲ್ಲಿ ನಮ್ಮಪ್ಪ ಮುಳ್ಳು ಬೇಲಿ ಹಾಕಿ, ಭೂಮಿಗಳನ್ನು ಆತಿಕ್ರಮಿಸಿರುವನೋ ಆ ಮುಳ್ಳು ತಂತಿಗಳನ್ನೆಲ್ಲಾ ಕಿತ್ತು ಹೊಗೆದು ಬಿಡು. ಯಾರ ಭೂಮಿಗಳೋ ಅವರೇ ಬಿತ್ತಿಕೊಳ್ಳಲಿ . ಬದುಕಲಿಕ್ಕೆ ಬೇಕಾದಷ್ಟು ಭೂಮಿ ನಮಗಿದ್ದರೆ ಸಾಕು.” ಎಂದು ಸಮಾಧಾನಗೊಂಡು ಹೇಳಿದೆ.
ವೆಂಕಟೇಶ್ ಮಾವ ನನ್ನ ಕಡಿಗೆ ಆಶ್ಚರ್ಯದಿಂದ ನೋಡಿದ. “ ಹೌದು ಅಳಿಯಾ! ನೀನು ಹೇಳೋದು ನಿಜ. ಜನರ ಶಾಪಗಳೇ ಕಣೋ ನಮಗೆ ಅರಿಷ್ಟ. ಎಷ್ಟು ಸಿಡಿ ಬಂಡಿ ಕಟ್ಟಿದರೂ ಆ ಅರಿಷ್ಟ ಹೋಗದು. ಈ ಕೆಲಸ ನಿಮ್ಮಪ್ಪ ಯಾವಗಲೋ ಮಾಡಬೇಕಿತ್ತು. ಮುಳ್ಳು ತಂತಿಗಳ ತಗೆಸಿಯೇ ನಿನ್ನ ಕಾಣುತ್ತೇನೆ” ಎಂದು ಹೊರಟು ಹೋದ.
ರಾತ್ರಿ… ಹುಲ್ಲು ಹಾಸಿನ ಮೇಲೆ ಮಲಗಿಕೊಂಡು ಆಕಾಶವನ್ನು ದಿಟ್ಟಿಸುತಿದ್ದೇನೆ. ಹುಣ್ಣಿಮೆಯ ಚಂದ್ರ ಬೆಳಗುತಿದ್ದಾನೆ. ಕಣಗಿಲಿ ಗಿಡದ ಮೇಲೆ ಬೆಳದಿಂಗಳು ಸುರಿಯುತ್ತಲಿದೆ.ದೂರದಲ್ಲಿ ಗೆಜ್ಜೆಗಳ ಸದ್ದು!ಅದು ನನ್ನ ಹತ್ತಿರವೇ ಬರುತ್ತಿದೆ! ಹೌದು. ಹತ್ತಿರ…ಹತ್ತಿರ.. ತೀರಾ ಪಕ್ಕದಲ್ಲೇ.. ನನ್ನ ಮೇಲೆಯೇ ವಾಲಿದಂತೆ.
ಆ ದಿನ ಎತ್ತು ತಾಳೆಯ ಮರದ ಬಳಿ ಹಸು ಹಿಂದೆಯೇ ಹೋದ ನಂತರ ಲಯ ಬದ್ಧವಾದ ಗಂಟೆಗಳ ಸದ್ದು ಕೇಳಿತಲ್ಲವೇ….
“ ಯಾಕೋ?” ಹುಡುಗಾಟಿಕೆಯಿಂದ ಪ್ರಶ್ನಿಸಿದೆನು.
“ ಛೀ.. ಅದರೊಂದಿಗೆ ನಿನಗೇನು ಕೆಲಸ ಈಗ” ಅತಾ ಆಕೆ ಕೊಸರಿಕೊಂಡಳು.
“ ಈಗ ಅದೊರೊಂದಿಗೇ ಕೆಲಸ ಎನ್ನುತ್ತಾ ಆಕೆಯನ್ನು ಸೆಳೆದುಕೊಂಡೆ”
ಆಕೆ ದಾರದಂತೆ ನನ್ನನ್ನು ಸುತ್ತಿಕೊಂಡಳು. ಆಕೆಯ ಕಾಲ ಗೆಜ್ಜೆಗಳು ಲಯಬದ್ದವಾಗಿ ಸಂಗೀತದಂತೆಯೇ ಕೇಳಿಸುತ್ತಿವೆ.
ಹೌದು. ನನಗೆ ಗೊತ್ತು.ಇದೆಲ್ಲಾ ಕನಸೇ! ಕಣ್ಣು ಮಾತ್ರ ತೆರೆಯಲಾರೆ. ಈ ಕನಸು ಕರಗಿ ಹೋದರೆ ನಾನು ಬದುಕಲಾರೆ.
ಹೊರಗೆ ಎಡಬಿಡದೆಯೇ ಕಣಗಿಲೆಯ ಗಿಡದಮೇಲೆ ಬೆಳದಿಂಗಳು ಸುರಿಯುತ್ತಲೇ ಇದೆ.
ಆ ರಾತ್ರಿಯಲ್ಲೇ ನಾನು ಹುಲ್ಲು ಹಾಸಿನ ಮೇಲೆ ಒಂಟಿಯಾಗಿ ಮಲಗಿ ನನ್ನ ಚಿನ್ನವ್ವನಿಗಾಗಿ ಎದುರು ನೋಡುತ್ತಲೇ ಇದ್ದೇನೆ.
ಆಕೆ ಎಷ್ಟೊತ್ತಾದರೂ ಬರದೇ ಇರೋದನ್ನ ನೋಡಿ, ನಾನು ಕಣಗಿಲೆಯ ಗಿಡವನ್ನು ನೋಡುತ್ತಾ ಚಿನ್ನವ್ವನನ್ನು ನೆನಪಿಸಿಕೊಂಡೆ. ಚಿನ್ನವ್ವನು ಕಡಿಮೆಯವಳೇನಲ್ಲ. ಕಣಗಿಲೆಯ ಗಿಡದೊಂದಿಗೇ ಪೈಪೋಟಿಗೆ ಬೀಳುವಂತಹ ಚಲುವೆ ಆಕೆ.ಮುಟ್ಟಿದರೆ ಎಲ್ಲಿ ಮಾಸುತ್ತಾಳೋ ಎನ್ನುವ ಹಾಲಿನಂತಹ ಶರೀರ ಅವಳದು.
ಅವಳೆಂದರೆ ಊರೆಲ್ಲಾ ಜೊಲ್ಲುಸುರಿಸುತ್ತದೆ. “ಕೆಳ ಜಾತಿಯವಳಲ್ಲವೇ ಬರ್ತಾಳೆ ಬಿಡಾ” ಅಂತಾರೆ, ನಿನ್ನೆ ನಿನ್ನೆಯೇ ದೊಡ್ಡ ಗೌಡರ ಹೊಲದ ಹತ್ತಿರ ಹೋಗುತ್ತಿರುವಾಗ ನಾಲ್ಕು ಹೆಂಡರ ಕರೀಗೌಡ ಕೂಡಾ ಕಣ್ಣು ಮಿಟುಕಿಸದಂತೆ ಅವಳನ್ನೇ ನೋಡುತ್ತಿದ್ದನೆಂದರೇನೇ ನಿಮಗೆ ಅರ್ಥವಾಗಿಬಿಡುತ್ತದೆ . ಆಕೆಯ ಒನಪು ವಯ್ಯಾರದ ಕಥೆ ಏನೋ ಅಂತಾ.
ಆಕೆಗೆ ನಾನೆಂದರೆ ಅದೆಷ್ಟಿಷ್ಟವೋ….! ಊರೊಳಗೆ ಎಷ್ಟು ಕಡೆ ಕೆಲಸವಿದ್ದರೂ ಅದನೆಲ್ಲಾ ಬಿಟ್ಟು ಆಕೆಯು ನಮ್ಮ ಹತ್ತಿರವೇ ಕೆಲಸಕ್ಕೆ ಬರುತ್ತಾಳೆ. ಆ ಕಡೆಯವರು ಹೆಚ್ಚುಕೂಲಿ ನೀಡುತ್ತೇವೆಂದರು ಕೂಡಾ ನನ್ನ ಹತ್ರ “ ರೊಕ್ಕದ್ದೇನು ಬಿಡು ಗೌಡಾ” ಎನ್ನುತ್ತಾಳೆ ಪ್ರೇಮದಿಂದ. ನಾನು ಆಕೆಯ ಜೊತೆಗೆ ತಿರುಗುತ್ತಿದ್ದೇನೆಂದು ನಮ್ಮ ಅಪ್ಪನಿಗೇನಾದರೂ ಗೊತ್ತಾಯಿತೆಂದರೆ ಆತ ನನ್ನನ್ನ ತುಂಡು ತುಂಡಾಗಿ ಕಡಿದು ಬಿಸಾಕಿಬಿಡ್ತಾನೆ.ಅದಕ್ಕೇ ನಮ್ಮ ಕಣದೊಳಗಿನ ಬಣವಿ ಹತ್ತಿರವೇ ಕಳವಿನಿಂದ ನಾವಿಬ್ಬರೂ ಕಲೆತುಕೊಳ್ಳುತ್ತೇವೆ. ಆಕೆಯು ಮಸ್ತ್ ಕತ್ತಲು ಕವಿದಮೇಲೆಯೇ ಬರ್ತಾಳೆ. ಮತ್ತೆ ಬೆಳ್ಳಿ ಚುಕ್ಕಿ ಮೂಡುವುದರೊಳಗೇ ಎದ್ದು ಮನಿ ದಾರಿ ಹಿಡಿಯುತ್ತಾಳೆ.
ಈ ದಿನವೂ ಕೂಡಾ ಇಷ್ಟೊತ್ತಿಗೇ ಬರಬೇಕಿತ್ತು. ಯಾಕ ಬರಲಿವೋ ? ಅರ್ಥವಾಗುತ್ತಿಲ್ಲ. ಒಮ್ಮೊಮ್ಮೆ ಆಕೆ ತುಂಬಾನೇ ನಗೆಚಾಟಿಕಿ ಮಾಡುತ್ತಾಳೆ.ಆ ಮ್ಯಾರಿ ಪಕ್ಕದ ಮರಳಿನೊಳಗೆ ಕೂತುಕೊಂಡು ಹುಲಿಮನಿ ಆಟ ಆಡೋಣ ಬಾ ಅಂತಾಳೆ. ನನ್ನ ಹುಲಿಯ ಕಲ್ಲುಗಳೆದುರು ಚಾಣಾಕ್ಷತನದಿಂದ ಪಾರಾಗುವ ಅವಳ ಕುರಿಗಳ ಕಲ್ಲಿಗೆ ನಾನು ಸೋತು ಹೋಗುತ್ತೇನೆ.ನೀನೀಗ ಸೋತಿದ್ದೀಯ ಆದ್ದರಿಂದ ನನ್ನನ್ನು ಉಪ್ಪು ಮೂಟೆ ಮಾಡಿ ಬೆನ್ನ ಮೇಲೆ ಹೊತ್ತು ತಿರುಗಿಸಬೇಕು ಎನ್ನುತ್ತಾಳೆ. ಕಣ್ಣಾ ಮುಚ್ಚಾಲೆ ಆಡಯತ್ತಾ…ನಾ ಎಲ್ಲಿದ್ದೀನೋ ಕಂಡು ಹಿಡಿ ನೋಡಾನಾ ಎನ್ನುತ್ತಾಳೆ. ಕಣ್ಣುಮುಚ್ಚಾಲೆಯ ಆಟದೊಳಗೆ ಮಾತ್ರ ನಾನೇ ಗೆಲ್ಲುತ್ತೇನೆ. ಏಕೆಂದರೆ ಆಕೆಯ ಮುಡಿಯೊಳಗಿನ ಕೇದಿಗೇ ಹೂವಿನ ವಾಸನೆಯೇ ಆಕೆ ಯಾವ ಮೂಲೆಯಲ್ಲಿದ್ದರೂ ತಟ್ಟನೇ ಕಂಡು ಹಿಡಿಯುವಂತೆ ಮಾಡುತ್ತದೆ.
ಆನಂತರ ನಾವು ತುಟಿಗೆ ತುಟಿ ಸೇರುವ ಎಂಜಲು ತುಟಿಯಾಟ ಆಡಿಕೊಳ್ಳುತ್ತೇವೆ. ಈ ಆಟವೆಂದರೆ ಆಕೆಗೆ ಬಲು ಕೋಪ.ಒಮ್ಮೆಲೇ ನಾನು ಆಕೆಯನ್ನ ಹಿಡಿದೆಳಕೊಂಡು ಅವಳ ಕೆಳದುಟಿಯನ್ನು ಮೆತ್ತಗೆ ಕಸಕ್ಕನೆ ಕಚ್ಚಿಬಿಡುತ್ತೇನೆ.
ಆಕೆ ಮತ್ತಷ್ಟೂ…ಮುಖ ಊದಿಸಿಕೊಂಡು ಕೂರುತ್ತಾಳೆ. ನಾನೇ ಮತ್ತೆ ಅವಳತ್ತಿರಕ್ಕೆ ಹೋಗಿ ಆಕೆಗೆ ಶರಣಾಗಿ ರಾಜಿಯಾಗಬೇಕು.ಇದೆಲ್ಲವೂ ಭಲೇ ತಮಾಷೆಯಾಗಿರುತ್ತದೆ. ಇದಕ್ಕೂ ಮೀರಿ ನಾನು ಅವಳೊಂದಿಗೆ ಹೆಚ್ಚು ಮುಂದುವರಿಯಲಾರೆ. ನನ್ನ ಈ ನಡೆಯಿಂದಾಗಿಯೇ ಚಿನ್ನವ್ವನಿಗೆ ನಾನೆಂದರೆ ತುಂಬಾ ಇಷ್ಟ.
ಬೆಳದಿಂಗಳು ಕತ್ತಲನ್ನು ಗುಟುಕರಿಸುತ್ತಲಿದೆ. ಕಣಗಿಲೆಯ ಹೂಗಳ ವಾಸನೆ ನನ್ನ ಮೈಮರೆಸುತ್ತಿದೆ. ಚಿನ್ನವ್ವ ಯಾಕೆ ಇನ್ನೂ ಬರಲಿಲ್ಲ. ಕಾಡುವ ನಿದ್ದೆಯ ಸೆಳೆತಕ್ಕೆ ನನ್ನ ಕಣ್ಣು ಬಿಡದಂತೆ ಮುಚ್ಚುತ್ತಿವೆ.
***
ಬೆಳಗಾಗಿ ಹೋಯಿತು.
ವೆಂಕಟೇಶ ಮಾವ ಓಡೋಡಿ ಬಂದು “ ಲೇ ತಮ್ಮ ಎದ್ದೇಳಾ! ಹುಲಿಗುಡ್ಡದ ಕಣಿವಿ ಹತ್ರದ ಜಾಲಿ ದಿನ್ನಿ ಮೇಲಿಂದ ನಮ್ಮ ಎತ್ತಿನ ಬಂಡಿ ಪಲ್ಟಿ ಹೊಡದಾತಂತೋ!.. ನಿಮ್ಮಣ್ಣ ಪ್ರತಾಪನಿಗೆ ಕಾಲೂ ಕೈಯ್ಯಿ ಮುರಿದಾವಂತ. ದೌಡ್ ಹೋಗಾನ ಏಳಾ…” ಅಂತ ತತ್ತರು ಬಿತ್ತರು ಮಾಡುತ್ತಾ ಎಬ್ಬಿಸಿದ.
ಚಿನ್ನವ್ವನಿಗಾಗಿ ರಾತ್ರೆಲ್ಲಾ ಕಣ್ಣಾಗ ಎಣ್ಣಿ ಬಿಟಗೊಂಡು ನಸುಕಿನ ಸಿಹಿ ನಿದ್ದೆಯೊಳಗ ಮುಳುಗಿದ್ದ ನನಗೆ ಮೊದಲು ಏನಂದ್ರೆ ಏನೂ ಅರ್ಥವಾಗಲಿಲ್ಲ. ಕಂಗಾಲಾಗಿ “ಏನ ಮಾವಾ” ಎಂದು ಮರು ಪ್ರಶ್ನಿಸಿದೆ.
“ ನಮ್ಮ ಬಂಡಿ ಬಿದ್ದಾತಂತಲೇ.. ಕೊರಕಲು ಕೆಳಗೆ ಬಿದ್ದ ಪ್ರತಾಪನ ಮೇಲೆ ದಿನ್ನಿಯ ದೊಡ್ಡ ದೊಡ್ಡ ಕಲ್ಲುಗಳೂ ಉಲ್ಡಿ ಬಿದ್ದಾವಂತಲೇ ಯಪ್ಪಾ… ನಿಮ್ಮಣ್ಣ ಎಂಗದನೋ ಏನೋ! “ ಎಂದು ಮಾತಿನ ಈಟಿಗಳ ಎಸೆಯುತ್ತಾ ನಡುಗುತ್ತಾ ನಿಂತನು ವೆಂಕಟೇಶ್ ಮಾವ.