ಸಿಎಂ ಕುರ್ಚಿ ಉಳಿಸಿಕೊಳ್ಳಲು ಜಾತಿ ಗಣತಿ ನಾಟಕ- ಎಚ್.ಡಿ.ಕೆ.ಟೀಕೆ

Share

ಸಿಎಂ ಕುರ್ಚಿ ಉಳಿಸಿಕೊಳ್ಳಲು ಜಾತಿ ಗಣತಿ ನಾಟಕ- ಎಚ್.ಡಿ.ಕೆ.ಟೀಕೆ

ಬೆಂಗಳೂರು ,ಏ,12- ಸಿಎಂ ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿರುವ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಸಿಎಂ ಕುರ್ಚಿ ಉಳಿಸಿಕೊಳ್ಳಲು ಜಾತಿ ಗಣತಿ ವರದಿ ನಾಟಕವಾಡಿದ್ದಾರೆ ಎಂದಿದ್ದಾರೆ.

ಸಿದ್ದರಾಮಯ್ಯ ಅವರಿಗೆ ಈಗ ಕುರ್ಚಿ ಉಳಿಸಿಕೊಳ್ಳುವುದು ಅನಿವಾರ್ಯವಾಗಿದ್ದು ಜಾತಿ ಗಣತಿ ಎಂಬ ನಾಟಕ ಶುರುವಚ್ಚಿಕೊಟ್ಟಿದ್ದಾರೆ ಎಂದು ಕುಮಾರಸ್ವಾಮಿ ಟೀಕಿಸಿದ್ದಾರೆ. ಜಾತಿ ಜಾತಿಯ ಮಧ್ಯ ಸಂಘರ್ಷ ಸೃಷ್ಟಿಸುತ್ತಿದ್ದಾರೆ. ಕಾಂತರಾಜು ವರದಿ ಸಿದ್ದವಾಗಿ 10 ವರ್ಷ ಆಗಿದೆ. ಇದೇ ಸಿಎಂ ಸಿದ್ದರಾಮಯ್ಯ ಇದ್ದರೂ ಸಹ ಯಾಕೆ ವರದಿ ಜಾರಿ ಮಾಡಲಿಲ್ಲ ಎಂದು ಪ್ರಶ್ನಿಸಿದರು.

ಕಳೆದ ಎರಡು ವರ್ಷ ಗ್ಯಾರಂಟಿ ಯೋಜನೆಗಳಿಂದ ಬಡವರ ಆರ್ಥಿಕ ಶಕ್ತಿಯನ್ನು ವೃದ್ಧಿ ಮಾಡಿದ್ದೇವೆ ಅಂತ ಹೇಳಳುತ್ತಾರೆ. ಇದೆಲ್ಲ ಕೇವಲ ಜಾತಿ ಜಾತಿ ಮಧ್ಯ ಸಂಘರ್ಷ ಉಂಟು ಮಾಡುವ ಹುನ್ನಾರ. ಜಾತಿ ಸಂಘರ್ಷಕ್ಕೆ ಏನು ವೇದಿಕೆ ಸಿದ್ಧ ಮಾಡಬೇಕು ಅದನ್ನು ಮಾಡಲು ಹೊರಟಿದ್ದಾರೆ ಎಂದು ಕಿಡಿಕಾರಿದರು.

Girl in a jacket
error: Content is protected !!