ರಶ್ಮಿಕ ಮಂದಣ್ಣರ ಬಣ್ಣದ ಬದುಕಿನ ಮಾತು…!

Share

ಭಾರತೀಯ ಚಿತ್ರರಂಗದ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಹಲವು ವರ್ಷಗಳ ನಂತರ ಖಾಸಗಿ ಸಂದರ್ಶನದಲ್ಲಿ ಮಾತನಾಡಿದ್ದಾರೆ. ತಮ್ಮ ಮುಂದಿನ ಸಿನಿಮಾ ಪ್ರಾಜೆಕ್ಟ್‌ಗಳ ಬಗ್ಗೆ ಹಂಚಿಕೊಂಡ ರಶ್ಮಿಕಾ ಟ್ರೋಲ್ ಪೇಜ್‌ಗಳನ್ನು ಎದುರಿಸಿದ್ದು ಹೇಗೆ ಎಂದು ರಿವೀಲ್ ಮಾಡಿದ್ದಾರೆ.


ರಶ್ಮಿಕಾ ವೃತ್ತಿ ಜೀವನದ ಗ್ರಾಫ್ ಎತ್ತರಕ್ಕೆ ಏರುತ್ತಿದೆ ಆದರೆ ಒಮ್ಮ ವೈಯಕ್ತಿಕ ಜೀವನದಲ್ಲಿ ತೆಗೆದುಕೊಂಡ ನಿರ್ಧಾರದಿಂದ ಟ್ರೋಲ್‌ಗೆ ಗುರಿಯಾದರು. ಈ ಪರಿಸ್ಥಿತಿಯನ್ನು ಪೋಷಕರ ಜೊತೆ ಎದುರಿಸಿದ್ದ ರಶ್ಮಿಕಾ ಮಂದಣ್ಣ ಹೇಗೆ ನಿಭಾಯಿಸಿದ್ದರು ಎಂದು ಹೇಳಿಕೊಂಡಿದ್ದಾರೆ. ’ಪ್ರಾರಂಭದಲ್ಲಿ ಇದು ತುಂಬಾನೇ ಕಷ್ಟವಾಗಿತ್ತು. ನಮ್ಮ ಕುಟುಂಬ ಸಿನಿಮಾ ಬ್ಯಾಗ್ರೌಂಡ್‌ನಿಂದ ಬಂದಿದ್ದಲ್ಲ. ನನಗೆ ಎಲ್ಲವೂ ಹೊಸದಾಗಿತ್ತು. ಜನರು ನನ್ನನ್ನು ಟ್ರೋಲ್ ಮಾಡುತ್ತಿದ್ದರು, ಕೆಟ್ಟದಾಗಿ ಕಾಮೆಂಟ್ ಮಾಡುತ್ತಿದ್ದರು. ಇದರಿಂದ ನನಗೆ ಉಸಿರುಗಟ್ಟಿಸುವ ವಾತಾವರಣ ನಿರ್ಮಾಣ ಆಗಿತ್ತು’ ಎಂದು ರಶ್ಮಿಕಾ ಮಾತನಾಡಿದ್ದಾರೆ.


ಜನರು ನಿಮ್ಮ ಬಾಡಿ, ಬಣ್ಣ, ಸಂಬಂಧ ಸೇರಿದಂತೆ ಎಲ್ಲದರ ಬಗ್ಗೆಯೂ ಟ್ರೋಲ್ ಮಾಡುತ್ತಾರೆ. ಕೆಲವೊಂದು ಸಲ ತುಂಬಾನೇ ನೋವಾಗಿತ್ತು. ಕೆಲಸದ ಬಗ್ಗೆ ಮಾತನಾಡಿ, ಆದರೆ ಯಾಕೆ ನನ್ನ ಬಾಲ್ಯದ ಪೋಟೋ, ನನ್ನ ಕುಟುಂಬದ ಬಗ್ಗೆ ಕಾಮೆಂಟ್ ಮಾಡುವುದು ಸರಿಯಲ್ಲ. ನನ್ನ ೧೯ನೇ ವಯಸ್ಸಿನಲ್ಲಿ ನನಗೆ ಟ್ರೋಲ್ ಕಾಟ ಶುರುವಾಗಿತ್ತು. ಈಗ ನನಗೆ ಅದೆಲ್ಲಾ ಮ್ಯಾಟರ್ ಆಗಲ್ಲ. ಹಾ ಹಾ ಎಂದು ನಗುತ್ತೇನೆ ಅಷ್ಟೆ. ಜನ ನಾನ್ ಸ್ಟಾಪ್ ಪಂಚ್ ಮಾಡುತ್ತಲೇ ಇದ್ದಾಗ ಮಾಡಿ ಎಂದು ಸುಮ್ಮನಾಗುತ್ತೇನೆ. ಜನರು ನನ್ನ ಬಗ್ಗೆ ಒಳ್ಳೆಯ ಮಾತುಗಳನ್ನು ಆಡಿದ್ದಾರೆ . ಎಲ್ಲಾ ಕಡೆ ಕೆಟ್ಟದ್ದು ಮತ್ತು ಒಳ್ಳೆಯದು ಎರಡು ಇರುತ್ತದೆ. ಜನರು ನನ್ನ ಸಾನ್ವಿ ಎನ್ನುತ್ತಾರೆ, ಲಿಲ್ಲಿ ಎನ್ನುತ್ತಾರೆ, ಗೀತಾ ಎಂದು ಕರೆಯುತ್ತಾರೆ ಎಂದು ಸಂತೋಷವಾಗುತ್ತದೆ’ ಎಂದಿದ್ದಾರೆ.

 

Girl in a jacket
error: Content is protected !!