ಬಲವಾಯಿತು ಬಿಎಸ್‌ವೈ ಬದಲಾವಣೆಯ ಕೂಗು

Share

ಬೆಂಗಳೂರು,ಜೂ,೧೭:ಬಿಜೆಪಿಯಲ್ಲಿ ಆಂತರಿಕ ಭಿನ್ನಮತಗಳು ಇವೆ ಎನ್ನುವುದರಲ್ಲಿ ಎರಡು ಮಾತಿಲ್ಲ ಬಿಎಸ್‌ವೈ ಬದಲಾವಣೆ ಮಾಡಬೇಕು ಎಂದು ಒಂದು ತಂಡ ನಿರಂತರ ಪ್ರಯತ್ನದಲ್ಲಿ ಇದೇ ಹೊತ್ತಿನಲ್ಲಿ ಕರ್ನಾಟಕ ಉಸ್ತುವಾರಿ ಅರುಣ್ ಸಿಂಗ್ ಬೆಂಗಳೂರಿನಲ್ಲಿ ಪ್ರತ್ಯೇಕವಾಗಿ ಶಾಸಕರು ಸಚಿವರ ಜೊತೆ ಸಭೆ ನಡೆಸಿದ್ದಾರೆ ಅಂದರೆ ಅಲ್ಲಿಗೆ ಬಿಎಸ್‌ವೈ ಬದಲಾವಣೆಯ ಕೂಗೂ ಮತ್ತಷ್ಟು ಪ್ರಭಲವಾಗಿದೆ ಎಂದು ಅರ್ಥ
ಇದಕ್ಕೆ ಪೂರಕ ಎನ್ನುವಂತೆ ಅರುಣ್ ಸಿಂಗ್ ಅವರನ್ನು ಭೇಟಿಯಾದ ಬಳಿಕ ಸುದ್ದಾಗರರ ಜೊತೆ ಮಾತನಾಡಿರುವ ವಿಶ್ವನಾಥ್ ಬಿಎಸ್‌ವೈ ಅವರಿಗೆ ವಯಸ್ಸಾಗಿದೆ ಮೊದಲಿನಷ್ಟು ಸ್ಪಿರಿಟ್ ಅವರಿಗೆ ಇಲ್ಲ ಹಾಗಾಗಿ ಅವರನ್ನು ಬದಲಾವಣೆ ಮಾಡುವುದು ಒಳಿತು ಎಂದಿದ್ದಾರೆ.
ರಾಜ್ಯದಲ್ಲಿ ಆಗುತ್ತಿರುವ ಬೆಳವಣಿಗೆಗಳ ವಸ್ತುಸ್ಥಿತಿ ಹೇಳಿದ್ದೇನೆ. ನಮಗೆ ಮಂತ್ರಿಗಿರಿ ಸಿಕ್ಕಿಲ್ಲ ಅನ್ನೋ ಬೇಸರವಿಲ್ಲ. ಈ ಬಗ್ಗೆ ನಾನು ದೂರುತ್ತಿಲ್ಲ. ಅರುಣ್ ಸಿಂಗ್ ಅವರಿಗೆ ಪಕ್ಷದ ವಸ್ತುಸ್ಥಿತಿಯನ್ನು ಆಳವಾಗಿ ತಿಳಿಸಿದ್ದೇನೆ. ನಾನು ಯಾರ ಬಣವೂ ಅಲ್ಲ, ಯಾರ ವಿರುದ್ಧವೂ ಅಲ್ಲ. ಯಡಿಯೂರಪ್ಪಗೆ ವಯಸ್ಸಾಗಿದೆ, ಸ್ಪಿರಿಟ್ ಇಲ್ಲ ಎಂದರು.
ನಾನು ಪ್ರಧಾನಿಗಳ ಜತೆ ನೇರ ಸಂಪರ್ಕ ಇಟ್ಕೊಂಡಿದ್ದೇನೆ. ಜೆಡಿಎಸ್ ನಲ್ಲಿ ರಾಜೀನಾಮೆ ಕೊಟ್ಟು, ಹಲವು ವಿಚಾರ ವಿರೋಧ ಮಾಡಿ ಬಂದೆವು. ಬಿಜೆಪಿಯಲ್ಲೂ ಅವೇ ವಿಚಾರಗಳಿವೆ. ಬಿಜೆಪಿಯಲ್ಲೂ ಕುಟುಂಬ ರಾಜಕಾರಣ ಇದೆ. ರಾಕ್ಷಸ ರಾಜಕಾರಣ ಇಲ್ಲೂ ಕಾಣ್ತಿದ್ದೇವೆ. ಯಡಿಯೂರಪ್ಪ ಮಾಡಿದ ಕೆಲಸಗಳ ಬಗ್ಗೆ ಗೌರವ ಇದೆ. ಆದರೂ ಇವತ್ತಿನ ಪ್ರಶ್ನೆ ಯಡಿಯೂರಪ್ಪ ಬಗ್ಗೆ ಅಲ್ಲ ಎಂದು ತಿಳಿಸಿದರು.
ಹೈಕಮಾಂಡ್ ಎಸ್ ಅಂದ್ರೆ ರಾಜೀನಾಮೆಗೆ ಸಿದ್ಧ ಅಂತ ಖುದ್ದು ಬಿಎಸ್‌ವೈ ಅವರೇ ಹೇಳಿದ್ದಾರೆ. ಆ ಪ್ರಕಾರ ಆಗಿ ಅವರು ಪಕ್ಷದಲ್ಲಿ ಮಾರ್ಗದರ್ಶಕರಾಗಿ ಮುಂದುವರಿಯಲಿ. ವೀರಶೈವ ಲಿಂಗಾಯತ ಸಮುದಾಯದ ಮತ್ತೊಬ್ಬ ನಾಯಕನಿಗೆ ಅವಕಾಶ ಮಾಡಿಕೊಡಲಿ. ಮಠಾಧಿಪತಿಗಳು ಬಸವತತ್ವ ಮೀರಿ ಹೋಗಬಾರದು. ಇನ್ನೊಬ್ಬ ಲಿಂಗಾಯತರನ್ನೇ ಮುಖ್ಯಮಂತ್ರಿ ಮಾಡಿ. ಪಂಚಮಸಾಲಿಸಮುದಾಯದವರನ್ನೇ ಸಿಎಂ ಮಾಡಲಿ. ಅವರಿಗೊಂದು ಅವಕಾಶ ಕೊಡಲಿ. ಲಿಂಗಾಯತ ಮಠಾಧೀಶರಿಗೆ ವಿಶ್ವನಾಥ್ ಮನವಿ ಮಾಡಿದರು.
ಪಂಚಮಸಾಲಿಯಲ್ಲಿ ನಿರಾಣಿ, ಯತ್ನಾಳ್, ಬೆಲ್ಲದ್ ಇದ್ದಾರೆ. ಯಂಗ್ ಸ್ಟರ್ ಬೇಕಾದರೆ ಬೆಲ್ಲದ್ ಮಾಡಿ. ಮಧ್ಯ ವಯಸ್ಕ ಬೇಕಾದರೆ ನಿರಾಣಿಯವರನ್ನ ಮಾಡಿ. ಎಲ್ಲದಕ್ಕೂ ಬೇಕು ಅಂದ್ರೆ ಯತ್ನಾಳ್ ಅವರನ್ನ ಮಾಡಿ ಎಂದು ತಿಳಿಸಿದರು.

Girl in a jacket
error: Content is protected !!