ಬತ್ತಬಾರದು ಭಾವಗಳ ಒರತೆ

Share

ವಿ.ಮಂಜುಳ ಪಟೇಲ್ ಅವರು ಕವನ ಲೇಖನಗಳನ್ನು ಬರೆದಿದ್ದಾರೆ,ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿದ್ದು ಶೀಘ್ರ ಕವನ ಸಂಕಲನ ಹಾಗೂ ಕಾದಂಬರಿ ಪ್ರಕಟಗೊಳ್ಳಲಿದೆ.ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿರುವ ಅವರು ಟಿಕ್ ಟಾಕ್ ನಲ್ಲಿ ಹೆಚ್ಚು ಕಾಣಸಿಕೊಳ್ಲಕುತ್ತಿದ್ದಾರೆ…ಇವರು ಸದ್ಯ ಬೆಂಗಳೂರಿನ ಕೆಂಗೇರಿಯಲ್ಲಿ ವಾಸವಿದ್ದಾರೆ.

ವಿ. ಮಂಜುಳಾ ಪಟೇಲ್

 

ಬತ್ತಬಾರದು ಭಾವಗಳ ಒರತೆ

ವಾಸ್ತವದ ಹಂಗನ್ನು ಮೀರಿ
ಆ ನಿನ್ನ ನೆನಪುಗಳಲ್ಲಿ ಮೆದ್ದಾಗಲೆಲ್ಲ
ಇಳಿದು ಬಿಡುವುದು ಮನಸ್ಸು ನಿನ್ನ ಪ್ರೀತಿಯ ಭಿಕ್ಷಾಟನೆಗೆ
ಮಮಕಾರದಿ ಕರೆದು ಬಿಡು
ನಿನ್ನ ಒಲವಿಗೆ ಒಮ್ಮೆಯಾದರೂ

ಒಲವ ರಾಗ ಹೊಸತೇನಲ್ಲ
ನಿನ್ನ ಮುನಿಸು ಹೊಸದೇನೂ ಅಲ್ಲ ಪ್ರೀತಿಯಲ್ಲಿ ಅದು ಹೇಗೆ ಮೂಗು ತೂರಿಸಿತೋ ಸ್ವಾಭಿಮಾನ ತಿಳಿಯದು
ಮಸಣದ ಹಾದಿ ಹಿಡಿದಿವೆ
ನಿನ್ನ ನೆನಪುಗಳು
ಒಮ್ಮೆಯಾದರೂ ನನ್ನ ನೆನಪಿಸಿಕೊಂಡ
ಸುಳಿವು ಕೊಟ್ಟುಬಿಡು

ನೀನು ಹೆಚ್ಚು
ನಾ ಹೆಚ್ಚು ಎಂದು ಕುಳಿತರೆ
ಒಲವ ಕೂಸು ಅಸು ನೀಗುವುದು
ವಾದ ವಿವಾದ ಯಾವುದು ಬೇಡ
ಈ ಪರಿಯ ಪರಿತಾಪವು ಬೇಡ
ಒಲವಿಗೆ ಮರುಹುಟ್ಟು ಕೊಟ್ಟುಬಿಡು
ನಿನ್ನ ಮನದಲ್ಲಿ ಅಡಗಿರುವ
ನವಿರಾದ ಭಾವವ ಒಮ್ಮೆ
ಹೇಳಿ ಬಿಡು ಕಣ್ಸನ್ನೆಯಲ್ಲಾದರೂ
ಕೂಡಿದವರಲ್ಲಿ ಬತ್ತಬಾರದು
ಯಾವತ್ತೂ ಭಾವಗಳ ಒರತೆ

 

 

Girl in a jacket
error: Content is protected !!