ವರದಿ :- ಅಂಜನೇಯ ನಾಯಕನಹಟ್ಟಿ
ನಾಯಕನಹಟ್ಟಿ ,ಆ,05-ಹೊರರಾಜ್ಯದ ವ್ಯಾಪಾರಸ್ಥರ ಬದಲಾಗಿ ಸ್ಥಳೀಯ ವ್ಯಾಪಾರಸ್ಥರಿಗೆ ಮೊದಲ ಆದ್ಯತೆ ನೀಡುವಂತೆ ಪಂಚಾಯಿತಿ ಮುಖ್ಯಾಧಿಕಾರಿ ಶ್ರೀನಿವಾಸ್ಅವರಿಗೆ ವಿವಿಧ ಸಂಘಟನೆಗಳು ಮನವಿ ಸಲ್ಲಿಸಿದವು.
ಪಟ್ಟಣದ ಕರ್ನಾಟಕ ರಾಜ್ಯ ರೈತ ಹಸಿರು ಸೇನೆ, ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್‌ಕುಮಾರ್ (ಶೆಟ್ಟಿಬಣ), ಕರ್ನಾಟಕ ರಕ್ಷಣ ವೇದಿಕೆ ಕನ್ನಡ ಸೇನೆ ಹಾಗೂ ಕರುನಾಡ ನವ ನಿರ್ಮಾಣ ವೇದಿಕೆ ನಾಯಕನಹಟ್ಟಿ ವರ್ತಕರ ಸಂಘದಿಂದ ಮಂಗಳವಾರ ನಾಯಕನಹಟ್ಟಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಶ್ರೀನಿವಾಸ್‌ರವರಿಗೆ ಮನವಿ ಸಲ್ಲಿಸಿದರು.
ನಾಯಕನಹಟ್ಟಿ ಪಟ್ಟಣದಲ್ಲಿ ವಿವಿಧ ವ್ಯಾಪಾರ ವಹಿವಾಟುಗಳು ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಜರುಗುವುದು ನಮಗೆಲ್ಲ ತಿಳಿದಿದೆ. ಆದರೆ ಸ್ಥಳೀಯ ವರ್ತಕರು ತಮ್ಮ ವ್ಯಾಪಾರ ವಹಿವಾಟು ನಿಲ್ಲಿಸುವ ನಿಟ್ಟಿನಲ್ಲಿ ಯೋಚನೆ ಮಾಡುತ್ತಿದ್ದಾರೆ. ಅನ್ಯ ರಾಜ್ಯದವರ ಆವಳಿ ಗುಜರಾತ್, ಮಹರಾಷ್ಟ ಮುಂತಾದ ರಾಜ್ಯಗಳಿಂದ ಬಂದ ವ್ಯಾಪಾರಸ್ಥರು ಕಡಿಮೆ ದರದಲ್ಲಿ ವ್ಯಾಪಾರ ವಹಿವಾಟು ಮಾಡುವುದರಿಂದ ನಮಗೆ ತುಂಬಾ ತೊಂದರೆಯಾಗುತ್ತಿದೆ. ನಾಯಕನಹಟ್ಟಿ ಪಟ್ಟಣ ಪಂಚಾಯಿತಿ ಅನ್ಯ ರಾಜ್ಯದವರಿಗೆ ಅವಕಾಶ ಕೊಟ್ಟರೆ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.
ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಶ್ರೀನಿವಾಸ್ ಮಾತನಾಡಿ ಈ ವರದಿಯನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತರುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಉಪಸ್ಥಿತರಾದ ಕರುನಾಡ ನವ ನಿರ್ಮಾನ ವೇದಿಕೆ ಸಂಸ್ಥಾಪಕ ರಾಜ್ಯಾಧ್ಯಕ್ಷ ಮಹಲಿಂಗಪ್ಪ, ತಾಲೂಕು ಅಧ್ಯಕ್ಷರಾದ ಮುತ್ತಯ್ಯ, ಕರ್ನಾಟಕ ರಾಜ್ಯ ರೈತ ಸಂಘದ ಹೋಬಳಿ ಅಧ್ಯಕ್ಷ ನಾಗರಾಜ್ ಮೀಸೆ, ಕರ್ನಾಟಕ ರಕ್ಷಣ ವೇದಿಕೆ ಕನ್ನಡ ಸೇನೆ ಹೋಬಳಿ ಅಧ್ಯಕ್ಷ ಜೋಗಿಹಟ್ಟಿ ಮಂಜುನಾಥ, ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್‌ಕುಮಾರ್ (ಶೆಟ್ಟಿಬಣ) ಹೋಬಳಿ ಅಧ್ಯಕ್ಷ ಪ್ರಕಾಶ್, ಸಂಘಟನೆ ಕಾರ್ಯದರ್ಶಿ ಸುರೇಶ್, ಸಂಘಟನೆ ಕಾರ್ಯದರ್ಶಿ ಓಬಯ್ಯ, ಘಟಕದ ಅಧ್ಯಕ್ಷರಾದ ಶಿವು, ರಂಗನಾಥ, ಮದರ್ ತೆರಿಸ್ಸ ಸಂಸ್ಥೆ ಸಂಸ್ಥಾಪಕ ಶಿವಮೂರ್ತಿ, ತಿಪ್ಪೇಸ್ವಾಮಿ, ತಿಪ್ಪಮ್ಮ ಚಿನ್ನಮಲ್ಲಯ್ಯ, ಉಪಾಧ್ಯಕ್ಷರಾದ ನಾಗರಾಜ್, ನಗರ ಘಟಕದ ಅಧ್ಯಕ್ಷ ಓ.ತಿಪ್ಪೇಸ್ವಾಮಿ, ಪ್ರೇಮ್‌ಕುಮಾರ್, ಪ್ರಸನ್ನಕುಮಾರ್, ಅರುಣ್‌ಕುಮಾರ್, ಜಿಲ್ಲಾ ಕಾರ್ಯದರ್ಶಿ ನವೀನ್ ಮದಕರಿ, ಉಪಾಧ್ಯಕ್ಷ ರಾಘವೇಂದ್ರ, ಕಾರ್ಯದರ್ಶಿ ಮಂಜುನಾಥ, ತೊರೆಕೊಲಮ್ಮನಹಳ್ಳಿ ಮಧು, ತಿಮ್ಮಪ್ಪಯ್ಯನಹಳ್ಳಿ ಬಸವರಾಜ್, ಲೋಕೇಶ್ ಅಚಾರಿ, ಗೋಪಾಲಚಾರಿ, ಹನುಮಂತ ಆಚಾರಿ, ಶ್ರೀನಿವಾಸ್ ಆಚಾರಿ, ಸಂತೋಷ್ ಶೆಟ್ಟಿ, ಹಾಗೂ ವರ್ತಕರ ಸಂಘ