ಬಾಹ್ಯಾಕಾಶದಲ್ಲಿ ಮತ್ತೊಂದು ಮೈಲುಗಲ್ಲು ಸಾಧಿಸಿದ ಇಸ್ರೂ..

Share

ಬಾಹ್ಯಾಕಾಶದಲ್ಲಿ ಮತ್ತೊಂದು ಮೈಲುಗಲ್ಲು ಸಾಧಿಸಿದ ಇಸ್ರೂ..

by-ಕೆಂಧೂಳಿ

ನವದೆಹಲಿ, ಮಾ,14-ಇಸ್ರೋ ಈಗ ಮತ್ತೊಂದು ಮೈಲಿಗಲ್ಲಿನತ್ತ ಹೆಜ್ಜೆ ಇಟ್ಟಿದೆ,ಬಾಹ್ಯಾಕಾಶದಲ್ಲಿ ಆನ್‌ ಡಾಕಿಂಗ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಇಸ್ರೋ ಮಹತ್ವಾಕಾಂಕ್ಷಿಯ SpaDeX ಉಡಾವಣೆ ಸಂಪೂರ್ಣ ಯಶಸ್ವಿಯಾಗಿದೆ.

ಇಸ್ರೋದ ಸ್ಪೇಡೆಕ್ ಆನ್ ಡಾಕಿಂಗ್ ಪ್ರಕ್ರಿಯೆಯಲ್ಲಿ 2024 ಡಿಸೆಂಬರ್ 30ರಂದು 2 ಉಪಗ್ರಹಗಳನ್ನು ಕಕ್ಷೆಗೆ ಸೇರಿಸಲಾಗಿತ್ತು. ಈಗ ಬಾಹ್ಯಾಕಾಶದಲ್ಲಿ ಎರಡು ಉಪಗ್ರಹಗಳನ್ನು ಪರಸ್ಪರ ಬೇರ್ಪಡಿಸೋ ಮೂಲಕ ಇಸ್ರೋ ತನ್ನ ಮಿಷನ್ ಕಂಪ್ಲೀಟ್ ಮಾಡಿದೆ.
ಬಾಹ್ಯಾಕಾಶದಲ್ಲಿ ಇಸ್ರೋದ ಡಾಕಿಂಗ್, ಆನ್ ಡಾಕಿಂಗ್ ಎರಡು ಪ್ರಯೋಗ ಸಂಪೂರ್ಣ ಯಶಸ್ವಿಯಾಗಿದೆ. ಕಳೆದ ಜನವರಿ 16ರಂದು ಇಸ್ರೋ 2 ಉಪಗ್ರಹಗಳನ್ನು ಯಶಸ್ವಿಯಾಗಿ ಜೋಡಣೆ ಮಾಡಿತ್ತು.

ಡಾಕಿಂಗ್, ಆನ್ ಡಾಕಿಂಗ್ ಪ್ರಯೋಗ ಯಶಸ್ವಿಯಾಗಿರೋದ್ರಿಂದ ಇಸ್ರೋ ಮುಂದಿನ ಪ್ರಯತ್ನಗಳಿಗೆ ಪೋತ್ಸಾಹ, ಪ್ರೇರಣೆ ಸಿಗುತ್ತಿದೆ. ಪ್ರಮುಖವಾಗಿ ಚಂದ್ರನ ಕುರಿತಾದ ಸಂಶೋಧನೆ ನಡೆಸಲು ಇಸ್ರೋಗೆ ಈ ಯಶಸ್ಸು ದಾರಿ ಮಾಡಿಕೊಟ್ಟಿದೆ.

ಭಾರತ ಮುಂದಿನ ದಿನಗಳಲ್ಲಿ ಬಾಹ್ಯಾಕಾಶದಲ್ಲಿ ಮಾನವ ಸಹಿತ ಗಗನಯಾನ. ತನ್ನದೇ ಆದ ಸ್ವಂತ ಬಾಹ್ಯಾಕಾಶ ನಿಲ್ದಾಣ ಸ್ಥಾಪಿಸಲು ಮುಂದಾಗಿದೆ. ವಿಡಿಯೋ ಸಹಿತ ಇಸ್ರೋ ಈ ಖುಷಿ ಸುದ್ದಿಯನ್ನ ಹಂಚಿಕೊಂಡಿದೆ. ಈ ಸಾಧನೆ ಪ್ರತಿಯೊಬ್ಬ ಭಾರತೀಯರಿಗೂ ಹೆಮ್ಮೆಯ ವಿಚಾರವಾಗಿದ್ದು, ಇಸ್ರೋ ವಿಜ್ಞಾನಿಗಳ ಈ ಮಹಾನ್ ಐತಿಹಾಸಿಕ ಸಾಧನೆ ಇಡೀ ದೇಶವೆ ಮೆಚ್ಚುವಂತಾಗಿದೆ.

Girl in a jacket
error: Content is protected !!