ಬೆಂಗಳೂರು,ಮೇ, ೧೫; ಇತ್ತೀಚಗೆ ರಾಜ್ಯದಲ್ಲಿ ನಡೆದ ಲೋಕಸಭೆ ಹಾಗೂ ವಿಧಾನ ಸಭೆಗಳ ಉಪ ಚುನಾವಣೆಗಳ ಕಾರ್ಯನಿರ್ವಹಿಸಿದ ೩೫ ಶಿಕ್ಷಕರು ಸೋಂಕಿಗೆ ಬಲಿಯಾಗಿದ್ದಾರೆ ಎನ್ನುವ ಅಘಾತಕಾರ ಮಾಹಿತಿ ಹೊರಬಿದ್ದಿದೆ.
ಬೆಳಗಾವಿ ಲೋಕಸಭೆ ಹಾಗೂ ಮಸ್ಕಿ ಮತ್ತು ಬಸವಕಲ್ಯಾಣ ವಿಧಾನಸಭಾ ಕ್ಷೆಗಳಿಗೆ ನಡೆದಿದ್ದ ಉಪಚುನಾವಣೆಯಲ್ಲಿ ಕಾರ್ಯನಿರ್ವಹಿಸಿದ್ದ ೩೫ ಮಂದಿ ಕೊರೊನಾದಿಂದ ಸಾವನ್ನಪ್ಪಿರುವ ಬಗ್ಗೆ ಶಿಕ್ಷಣ ಇಲಾಖೆ ವರದಿ ನೀಡಿದೆ.
ಎಸ್.ಎಸ್.ಭರಾಟೆ (೪೨), ರವೀಂದ್ರನಾಥ್ ಬಶಟ್ಟಿ (೫೮), ಸಂಗಪ್ಪ ವಾನೆ (೪೩), ರಾಜೇಶ್ವರಿ (೪೧), ಶ್ರೀದೇವಿ (೫೨), ಪ್ರಶಾಂತ್ ಮಂತ್ರೆ (೩೬), ಶಿವಕುಮಾರ್ ಭಾವು (೫೩), ನರೇಂದ್ರ ಪಾಟೀಲ್ (೪೭), ಪ್ರಕಾಶ್ ಲಕ್ಕಶೆಟ್ಟಿ (೫೪), ಚಂದ್ರಶೇಖರ ಗಚ್ಚಿಮಠ (೫೧) ಸೇರಿದಂತೆ ೩೫ ಶಿಕ್ಷಕರ ಹೆಸರಿನ ಪಟ್ಟಿ ಶಿಕ್ಷಣ ಇಲಾಖೆಗೆ ಹಸ್ತಾಂತರಿಸಿದೆ.
ಇತ್ತೀಚೆಗೆ ಉತ್ತರಪ್ರದೇಶದಲ್ಲಿ ಗ್ರಾಮ ಪಂಚಾಯತ್ ಚುನಾವಣೆ ನಡೆದಿತ್ತು. ಆದರೆ, ಈ ಚುನಾವಣೆಯಲ್ಲೂ ಪಂಚಾಯತ್ ಚುನಾವಣಾ ಕೆಲಸಕ್ಕೆ ನಿಯೋಜನಗೊಂಡ ೧೩೫ ವಿದ್ಯಾರ್ಥಿಗಳು, ’ಶಿಕ್ಷಾ ಮಿತ್ರರು’ ಮತ್ತು ಚುನಾವಣಾ ಕರ್ತವ್ಯಕ್ಕೆ ನೇಮಕಗೊಂಡ ತನಿಖಾಧಿಕಾರಿಗಳು ಕೋವಿಡ್ ಕಾರಣದಿಂದಾಗಿ ಸಾವನ್ನಪ್ಪಿದ್ದರು. ಹಿಂದಿ ದಿನಪತ್ರಿಕೆ ’ಅಮರ್ ಉಜಲಾ’ ಇತ್ತೀಚೆಗೆ ಆಘಾತಕಾರಿ ಸುದ್ದಿಯೊಂದನ್ನು ಭಿತ್ತರಿಸಿತ್ತು. ಈ ಸುದ್ದಿ ಸದ್ದು ಮಾಡುತ್ತಿದ್ದಂತೆ ಎಚ್ಚೆತ್ತುಕೊಂಡಿರುವ ಅಲಹಾಬಾದ್ ಹೈಕೋರ್ಟ್, ಉತ್ತರಪ್ರದೇಶ ಚುನಾವಣಾ ಆಯೋಗಕ್ಕೆ ಈ ಸಂಬಂಧ ವಿವರಣೆ ನೀಡುವಂತೆ ಶೋ-ಕಾಸ್ ನೋಟಿಸ್ ನೀಡಿತ್ತು ಎಂಬುದು ಉಲ್ಲೇಖಾರ್ಹ.
ಅಲಹಾಬಾದ್ ಹೈಕೋರ್ಟ್ ಉತ್ತರ ಪ್ರದೇಶ ರಾಜ್ಯ ಚುನಾವಣಾ ಆಯೋಗಕ್ಕೆ ಶೋ-ಕಾಸ್ ನೋಟಿಸ್ ನೀಡಿ, ಪಂಚಾಯತ್ ಚುನಾವಣೆಯ ಸಂದರ್ಭದಲ್ಲಿ ಕೋವಿಡ್ ಮಾರ್ಗಸೂಚಿಗಳನ್ನು ಜಾರಿಗೊಳಿಸಲು ವಿಫಲವಾಗಿದ್ದು ಏಕೆ ಎಂದು ಪ್ರಶ್ನಿಸಿದೆ. ಅಂತಹ ಉಲ್ಲಂಘನೆಗಳಿಗೆ ಕಾರಣರಾದವರ ವಿರುದ್ಧ ಕಾನೂನು ಕ್ರಮ ಜರುಗಿಸಲು ಆದೇಶಿಸಿದೆ.
“ಚುನಾವಣಾ ಕರ್ತವ್ಯದಲ್ಲಿರುವ ಜನರನ್ನು ಮಾರಕ ವೈರಸ್ ಸೋಂಕಿಗೆ ಒಳಗಾಗದಂತೆ ರಕ್ಷಿಸಲು ಪೊಲೀಸರು ಅಥವಾ ಚುನಾವಣಾ ಆಯೋಗವು ಏನನ್ನೂ ಮಾಡಿಲ್ಲ” ಎಂದು ಆದೇಶದಲ್ಲಿ ಟೀಕಿಸಲಾಗಿತ್ತು.