ರಾಮನಿರ್ದಂದು ರಾವಣನೊಬ್ಬನಿರ್ದನಲ!
ಸಿದ್ಧಸೂಕ್ತಿ : ರಾಮನಿರ್ದಂದು ರಾವಣನೊಬ್ಬನಿರ್ದನಲ! ಶತ್ರು ಇಲ್ಲದವ ಅಜಾತಶತ್ರು. ಹಾಗೆನ್ನುವೆವು. ಭೂಮಂಡಲದಲ್ಲಿ ಶತ್ರು ಅನ್ಯಾಯ ದೌರ್ಜನ್ಯವಿರದ ಕಾಲವಿಲ್ಲ, ಶತ್ರು ಇಲ್ಲದವರಿಲ್ಲ! ಬಲಿಷ್ಠನಾಗಿದ್ದರೆ ಶತ್ರುವಿನ ಸದ್ದು ಕೇಳದು. ಶತ್ರು ಹುಟ್ಟಲು ಅನ್ಯಾಯವೆಸಗಬೇಕು, ದುರ್ಬಲರಾಗಿರಬೇಕು ಎಂದಿಲ್ಲ. ಅವರವರ ಆಶೆ ಆಕಾಂಕ್ಷೆಗಳನ್ನು ಈಡೇರಿಸದಿದ್ದರಾಯಿತು! ಶಿವನಿಗೆ ಭಸ್ಮಾಸುರ, ರಾಮನಿಗೆ ರಾವಣ, ಭೀಮನಿಗೆ ದುಶ್ಯಾಸನ ಶತ್ರು! ರಾಮ ರಾವಣನ ಸಂಬಂಧಿಯಲ್ಲ, ಆಸ್ತಿ ವಗೈರೆ ದೋಚಿದವನಲ್ಲ, ದ್ರೋಹ ಅನ್ಯಾಯ ಎಸಗಿದವನಲ್ಲ! ತನ್ನ ಪಾಡಿಗೆ ತಾನು ಸೀತೆ ಲಕ್ಮ್ಮಣರೊಂದಿಗೆ ಕಾಡಿನಲ್ಲಿದ್ದ! ತಂತಾನೇ ಅಲ್ಲಿಗೆ ಬಂದ ಶೂರ್ಪಣಖೆ,…