ವ್ಯಾಮೋಹವಿಲ್ಲದ ಪ್ರೇಮ ನಿರ್ಭರವಿರಲಿ

Share

ಶ್ರೀ ಆರೂಢ ಭಾರತೀ ಸ್ವಾಮೀಜಿ,ರಾಮೋಹಳ್ಳಿ

ಸಿದ್ಧಸೂಕ್ತಿ :
ವ್ಯಾಮೋಹವಿಲ್ಲದ ಪ್ರೇಮ ನಿರ್ಭರವಿರಲಿ

ಹೆತ್ತವಳಿಗೆ ಹೆಗ್ಗಣ ಮುದ್ದು! ಕಪ್ಪಿದ್ದರೂ ಚಿನ್ನ! ಎನ್ನುವಳು! ಪರರ ಮಗು ಚಿನ್ನ ಮೀರಿದರೂ ಅಷ್ಟಕ್ಕಷ್ಟೇ! ತಾನು ತನ್ನವರು ತನ್ನದೆಂಬ ವ್ಯಾಮೋಹ ಪ್ರೀತಿ ಇರಬೇಕು ಇರಲಿ.ವ್ಯಾಮೋಹ ಮೀರಿ, ವಿಶಾಲತೆಯ ತಾಳಿ, ಎಲ್ಲೆಡೆ ಎಲ್ಲರನ್ನು ಪ್ರೇಮದಿ ಕಾಣುವುದು ಹೆಗ್ಗಳಿಕೆ! ತನ್ನ ಮಕ್ಕಳನ್ನು ಸಾಕುವುದು ಸರಿ. ಬೇರೆ – ಅನಾಥ ಮಕ್ಕಳನ್ನು ಸಲಹುವುದು ದೊಡ್ಡದು! ಅಲ್ಲಿ ಸ್ವಾರ್ಥ ಮಲಗುವುದು. ಪರಾರ್ಥ ಎದ್ದು ನಿಲ್ಲುವುದು! ಶಬರಿ ರಾಮನಿಗಾಗಿ ಹಣ್ಣು ಕಚ್ಚಿ ರುಚಿ ನೋಡಿದಳು! ಮಹಾರಾಷ್ಟ್ರದ ಡಾ. ಸಿಂಧೂತಾಯಿ ಸಪ್ಕಾಲ್ ತನ್ನ ನಾಲ್ಕು ಮಕ್ಕಳೊಂದಿಗೆ ಸಾವಿರದ ನಲವತ್ತೆರಡು ಅನಾಥ ಮಕ್ಕಳನ್ನು ಸಲಹಿದಳು! ಭೀಮನಂಥ ಸಾಹಸತನವಿರಲಿ. ನನ್ನ ಯಾರಂತ ತಿಳಕೊಂಡಿ? ಇನ್ನೊಂದು ಮುಖ ನೋಡಿಲ್ಲ, ಎನ್ನುವೆವು! ಇಂಥ ಹಗೆತನದ ಸಾಹಸ ಬೇಡ! ಪರ ರಕ್ಷಣೆಯ ಸಾಹಸ ಇರಲಿ. ನೇಮ ನಿಷ್ಠೆಗಳು ಸರಳ ನೇರ ಇರಲಿ. ಕುಟಿಲ ವಂಚನೆ ಪ್ರತಿಷ್ಠೆ ಡಂಭ ಪೊಳ್ಳು ಮಿಶ್ರ ಬೇಡ! ಮೃದುತನ ಇರಲಿ. ಅದು ಬಾಳಿ ಬೆಳಗುವುದು, ಒರಟು ಉರಿದು ಆರುವುದು! ಹತ್ತಿ ಬತ್ತಿಯಾಗಿ ದೀಪ ಬೆಳಗುವುದು ದೇವರಡಿ! ಮುಳ್ಳು ಬೆಂಕಿಗಾಹುತಿ!

Girl in a jacket
error: Content is protected !!