ವಿದ್ಯಾಧನಂ ಸರ್ವಧನಪ್ರಧಾನಂ

Share

 

             ‌‌‌ ಶ್ರೀ ಆರೂಢ ಭಾರತೀ ಸ್ವಾಮೀಜಿ

 ಸಿದ್ಧಸೂಕ್ತಿ :
                ವಿದ್ಯಾಧನಂ ಸರ್ವಧನಪ್ರಧಾನಂ
ವಿದ್ಯಾಸಂಪತ್ತು ಎಲ್ಲ ಸಂಪತ್ತುಗಳಿಗಿಂತ ಮುಖ್ಯ. ಹಣ,ಚಿನ್ನ, ಬೆಳ್ಳಿ,ಭೂಮಿ,ಕಟ್ಟಡ, ಸ್ತ್ರೀ ಪುರುಷ ,ವಸ್ತು ವಾಹನ ಸಂಪತ್ತನ್ನು ಪರರು ಕದಿಯಬಹುದು.ಸರ್ಕಾರ ವಶಪಡಿಸಿಕೊಳ್ಳಬಹುದು. ಸಹೋದರಾದಿ ವಾರಸುದಾರರಿಗೆ ಹಂಚಿಕೆಯಾಗಬಹುದು. ಅಪಹರಣ ಅತಿಕ್ರಮಗಳಿಗೆ ತುತ್ತಾಗಬಹುದು. ಬಳಸಿದಂತೆ ಸವಕಲು – ಖಾಲಿಯಾಗಬಹುದು.ಹೊರಲು ದೇಹಕ್ಕೆ,ಉಳಿಸಿಕೊಳ್ಳುವ ಕಸರತ್ತು ತಲೆಗೆ ಭಾರವಾಗಬಹುದು. ಆದರೆ ವಿದ್ಯಾಸಂಪತ್ತು ಈ ಯಾವುದಕ್ಕೂ ತುತ್ತಾಗುವುದಿಲ್ಲ ! ಬಳಸಿದಂತೆ ಬೆಳೆದು ಬೆಳಗುತ್ತದೆ ! ಮೆದುಳು ಬಲವಾಗಿರುವವರೆಗೂ ಅಚ್ಚಳಿಯದೇ ನಮ್ಮೊಂದಿಗಿದ್ದು ನಮ್ಮ ಮತ್ತು ಪರರ ಸುಂದರ ಬಾಳನ್ನು ರೂಪಿಸುತ್ತದೆ ! ವಿದ್ಯಾವಂತರಾಗೋಣ ! ಶಾಶ್ವತ ಶ್ರೀಮಂತರೆನಿಸೋಣ!!
*ನ ಚೋರಹಾರ್ಯಂ ನಚರಾಜಹಾರ್ಯಂ |*
*ನ ಭ್ರಾತೃಭಾಜ್ಯಂ ನಚ ಭಾರಕಾರಿ ||*
*ವ್ಯಯೇ ಕೃತೇ ವರ್ಧತ ಏವ ನಿತ್ಯಂ |*
*ವಿದ್ಯಾಧನಂ ಸರ್ವಧನಪ್ರಧಾನಂ||*

Girl in a jacket
error: Content is protected !!