
ಶ್ರೀ ಆರೂಢ ಭಾರತೀ ಸ್ವಾಮೀಜಿ
ಸಿದ್ಧಸೂಕ್ತಿ :
ವಿದ್ಯಾ ದದಾತಿ ವಿನಯಮ್
ವಿದ್ಯೆಯು ವಿನಯವನ್ನು ನೀಡುತ್ತದೆ. ವಿದ್ಯೆ ಹೆಚ್ಚಿದಂತೆ ವಿನಯ ಹೆಚ್ಚಬೇಕು. ಅಹಂಕಾರ ಹೆಚ್ಚಿದರೆ ಅದು ವಿದ್ಯಾಗರ್ವ! ವಿದ್ಯೆ ಸಂಗ್ರಹವಾಗಿದೆ, ಆಹಾರಪದಾರ್ಥಗಳಂತೆ! ಇನ್ನೂ ಪರಿಮಳ ರಸಪಾಕವಾಗಬೇಕಿದೆ! ಕಾಯಿ ಹುಳಿಯಾಗಿರುವಂತೆ ಅಪಕ್ವವಿದ್ಯೆ. ನಾಯಿಯ ಹಾಲು ಪೂಜೆಗೆ ಯೋಗ್ಯವಲ್ಲ, ಮರಿಗಂತೂ ಉಪಯೋಗ! ಅಪಕ್ವವಿದ್ಯೆ ನಿರರ್ಥಕವಲ್ಲ, ಕಣ್ಣಿಗೆ ಮಣ್ಣೆರಚಿ ಬದುಕಲನುಕೂಲ! ಸ್ವಪರಹಿತನೀಡುವಂತೆ ಸಫಲ ಸಾರ್ಥಕವಾಗುವಂತೆ ಅದರ ದಿಕ್ಕನ್ನು ಬದಲಿಸಬೇಕಷ್ಟೇ! ವಿದ್ಯಾವಿನಯಶೀಲನು ಗೌರವಗಳಿಸುತ್ತಾನೆ. ಜನಮನ್ನಣೆಯಿಂದ ಶ್ರೀಮಂತಿಕೆ ಹರಿದು ಬರುತ್ತೆ. ಶ್ರೀಮಂತಿಕೆಯಿಂದ ಧರ್ಮಕಾರ್ಯಗಳನ್ನು ಮಾಡಿ ಆನಂದಿಸೋಣ!!
*ವಿದ್ಯಾದದಾತಿ ವಿನಯಂ ವಿನಯಾದ್ಯಾತಿ ಪಾತ್ರತಾಂ|*
*ಪಾತ್ರತ್ವಾದ್ಧನಮಾಪ್ನೋತಿ ಧನಾದ್ಧರ್ಮಂ ತತ: ಸುಖಮ್||*