
ಶ್ರೀ ಆರೂಢ ಭಾರತೀ ಸ್ವಾಮೀಜಿ
ಸಿದ್ಧ ಸೂಕ್ತಿ:
ಪಠತ ಸಂಸ್ಕೃತಂ ವದತ ಸಂಸ್ಕೃತಂ
ಸಂಸ್ಕೃತವನ್ನು ಓದಿರಿ, ಓದಿಸಿರಿ ಮಾತಾಡಿರಿ. ವೇದ ಶಾಸ್ತ್ರ ಕಾವ್ಯ ಪುರಾಣಗಳ, ಸಂಪದ್ಭರಿತ ಸುಸಂಸ್ಕೃತಿಯ ನಿಧಿ ಸಂಸ್ಕೃತ. ಮಾತೃದೇವೋ ಭವ, ಪಿತೃದೇವೋ ಭವ ಇದು ವೇದವಾಣಿ. ಸಂತೋಷ ಸಂಭ್ರಮ ನೀತಿ ಸದಾಚಾರ ಆಧ್ಯಾತ್ಮವಿಲ್ಲದ ಬದುಕು, ರಾಮನಿಲ್ಲದ ಅಯೋಧ್ಯೆ, ಕತ್ತಲೆಯ ಗೂಡು, ಆತ್ಮನಿಲ್ಲದ ದೇಹ! ಸುಜ್ಞಾನ ಖಣಿ, ಬೆಳಕಿನ ಸಾಗರ ಭವ್ಯ ನಮ್ಮ ಸಂಸ್ಕೃತ! ಉಚ್ಚ ನೀಚದ ಶ್ರೇಣೀಕೃತ ವರ್ಣ ವ್ಯವಸ್ಥೆಯು ಇರುವುದು ಇಲ್ಲಿ! ಅದನ್ನು ಅಳಿಯಲು ಅಳಿಸಲು ತಿಳಿದಿರಬೇಕು ಅದರ ಮರ್ಮ ಹುನ್ನಾರ! ಅದಕ್ಕಾಗಿಯೂ ಓದಬೇಕು ಸಂಸ್ಕೃತ! ಸಂಸ್ಕೃತ ಬೆಳೆಯಬೇಕು, ಅದಕ್ಕೆ ಅಧಿಕ ಸಂಖ್ಯೆಯಲ್ಲಿರುವ ಬ್ರಾಹ್ಮಣೇತರರು ಕೈ ಜೋಡಿಸಬೇಕು. ಆದರೆ ಅವರು ಅಲ್ಲಿ ಮುನ್ನಡೆ ಪಡೆಯಬಾರದು. ಮೀಸಲಾತಿಗಾಗಿ ಅನರ್ಹ ಬ್ರಾಹ್ಮಣೇತರರ ಭರ್ತಿ! ಅರ್ಹ ಬ್ರಾಹ್ಮಣೇತರರ ವ್ಯವಸ್ಥಿತ ತುಳಿತ! ಹೇಳಿದ ಹಾಗೆ ಕೇಳುವ, ಬಾಲ ಬಡಿದುಕೊಂಡಿರುವ ಗೊಬೆಗಳಿಗೆ ಅವಕಾಶ ಕೊಟ್ಟಂಗೂ ಆಯಿತು! ಎಲ್ಲದಕ್ಕೂ ಬ್ರಾಹ್ಮಣರೇ ಸೈ, ಅವರೇ ಅರ್ಹರು ಎಂಬ ಹೆಗ್ಗಳಿಕೆಗೆ ಉಳಿಸಿಕೊಂಡಂತೆಯೂ ಆಯಿತು! ಇನ್ನೂ ಎಷ್ಟು ಕಾಲ ಈ ತಂತ್ರಗಾರಿಕೆ?ಸಂಸ್ಕೃತವನ್ನು ಅರಿಯೋಣ! ಕುತಂತ್ರಗಾರಿಕೆ ಮುರಿಯೋಣ! ಸುಸಂಸ್ಕೃತ ಜೀವನ ನಡೆಸೋಣ !! ಜಯತು ಸಂಸ್ಕೃತಮ್. ಜಯತು ಭಾರತಮ್ .
*ಪಠತ ಸಂಸ್ಕೃತಂ ವದತ ಸಂಸ್ಕೃತಂ!*
*ಲಸತು ಸಂಸ್ಕೃತಂ ಚಿರಂ*
*ಗೃಹೇ ಗೃಹೇಪಿ ಪುನರಪಿ!!*