ತಿಂದು ನಿನ್ನನ್ನ ಋಣ ತೀರುತಲೆ ಪಯಣ!

Share

 

ಶ್ರೀ ಆರೂಢ ಭಾರತೀ ಸ್ವಾಮೀಜಿ,ಹಾರೊಹಳ್ಳಿ

ಸಿದ್ಧಸೂಕ್ತಿ :
ತಿಂದು ನಿನ್ನನ್ನ ಋಣ ತೀರುತಲೆ ಪಯಣ!
ಹುಟ್ಟಿದ ಸ್ಥಳ ದಿನ ಗೊತ್ತು. ಸಾವಿನ ಸ್ಥಳ ದಿನ ಹೇಗೆ ತಿಳಿದಿಲ್ಲ! ಎಲ್ಲೋ ಹುಟ್ಟು, ಎಲ್ಲೋ ಅಭಿವೃದ್ಧಿ, ಎಲ್ಲೋ ಹೇಗೋ ಸಾವು! ಯತ್ನ ದುಡಿಮೆ ಪರಿಶ್ರಮಗಳು ಬದಲಿಸಬಲ್ಲವಾದರೂ, ವಿಧಿ ಲಿಖಿತ ಬಲ್ಲವರಾರು? ಬದಲಿಸುವವರಾರು? ಯತ್ನಿಸದೇ ಮುಖ್ಯಮಂತ್ರಿ ಆದವರುಂಟು, ಜಗದ್ಗುರುವಾದವರುಂಟು, ಯತ್ನಿಸಿಯೂ ವಿಫಲರಾದವರುಂಟು! ಅಲ್ಪಮತದವರು – ಗೆಲ್ಲದವರು, ಪ್ರಧಾನಿಯಾದವರುಂಟು, ಏಕ ಮತದಿಂದ ಪತನರಾದವರುಂಟು! ಬಹುಮತವಿದ್ದರೂ ಅಧಿಕಾರದಿಂದ ಇಳಿದವರುಂಟು! ತಿನ್ನಲಿಲ್ಲದವ ನೂರು ದಾಟಿದ್ದುಂಟು, ಸಾವಿರ ಕೋಟಿಯವ ಬೇಗ ನರಳಿ ಸತ್ತದ್ದುಂಟು! ಉಂಡು ಉಣುತ ಸತ್ತವರುಂಟು, ಉಣುವ ಮೊದಲು ಸತ್ತವರುಂಟು! ಒಂದಗುಳ ಹೆಚ್ಚು ತಿನ್ನಲಾಗದು, ಒಂದಗುಳ ಬಿಡಲೂ ಆಗದು! ಮಲಗಿದಾಗ ಕುಳಿತಾಗ ನಡೆವಾಗ ಮಾತನಾಡುವಾಗ ನಿವೃತ್ತಿಯ ಬೀಳ್ಕೊಡುವಾಗ ಮನೆಯೊಳಗೆ ಹೆಜ್ಜೆ ಇಡುವಾಗ ವಾಹನದಲಿ ಇರುವಾಗ ಸಾವು! ಕಲಾಂ ರಾಜಶೇಖರ ರೆಡ್ಡಿ ನಿದರ್ಶನ! ಕ್ಷಣ ಮೊದಲಾಗದು, ಕ್ಷಣ ಮೀರದು! ಅನ್ನ ಭೋಗ ಸಂಬಂಧ ಋಣ ತೀರುತ್ತಲೇ ಖಾಲಿ ಹೊರಡಲೇಬೇಕು!
ಒಳಿತು ಮಾಡು ಮನುಜ, ನೀನಿರುವುದು ಮೂರು ದಿವಸ!!

Girl in a jacket
error: Content is protected !!