
ಶ್ರೀ ಆರೂಢ ಭಾರತೀ ಸ್ವಾಮೀಜಿ,ಹಾರೊಹಳ್ಳಿ
ಸಿದ್ಧಸೂಕ್ತಿ :
ತನ್ನಬಿಟ್ಟು ದೇವರಿಲ್ಲ, ಮಣ್ಣ ಬಿಟ್ಟು ಮಡಿಕೆ ಇಲ್ಲ.
ದೇವರ ರೂಪ ತಿಳಿಪ ಸುಂದರ ಗಾದೆ. ತನ್ನ ಬಿಟ್ಟು, ತನ್ನ ಹೊರತು ದೇವರಿಲ್ಲ. ತಾನು ದೇವರು! ಮಡಿಕೆ ಮಣ್ಣಿನ ಪಾತ್ರೆ. ಮಣ್ಣೇ ಮಡಿಕೆರೂಪಾಯಿತು. ಮಣ್ಣ ಬಿಟ್ಟು, ಮಣ್ಣಿನ ಹೊರತು, ಮಣ್ಣು ಬೇರ್ಪಡಿಸಿದರೆ ಮಡಿಕೆ ಇಲ್ಲ. ಮಡಿಕೆ ಮಣ್ಣು! ತನಗೆ ಮೂಲ ದೇವರು. ದೇವರೇ ತಾನಾಗಿ ರೂಪಾಯಿತು. ತನ್ನಿಂದ ದೇವರನ್ನು ಬೇರ್ಪಡಿಸಿದರೆ ತಾನಿಲ್ಲ! ದೇವರು ದಿವ್ಯ ಅಗೋಚರ ಶಕ್ತಿ! ಎಲ್ಲೆಲ್ಲೂ ಹುದುಗಿದೆ! ಅಕ್ಕಿಯಲಿ ಹುಳು ಹುಟ್ಟುವುದು! ಶಕ್ತವೆಲ್ಲ ದೇವರೇ.” ತಾನು “ಯಾರು? ತಾನು ನಾನು! “ನಾನು ” ಯಾರು? ನಾ ಬಸವ ಗೌರೀ ಫಕೀರ ಮಮ್ತಾಜ್ ಜೋಸೆಫ್ ಮೇರಿ ಗಿಳಿ ಹಾವು ತೋಳ ಹಲಸು ಕಲ್ಲು ಜೋಳ, ಕ್ರಿಮಿ ಭ್ರಮರ ಎಲ್ಲ ಎನ್ನುವುದು “ನಾನು”! ತಾನು ನಾನು ಎಲ್ಲಾ! ಎಲ್ಲಾ ದೇವರು! ಎಲ್ಲಾ ಬೇರ್ಪಡಿಸಿದರೆ ಏನೂ ಇಲ್ಲ! ಎಲ್ಲವೂ ತಾನು, ತಾನೇ ಎಲ್ಲಾ, ತಾನೇ ದೇವರು! ಅಲ್ಲಾ ಜೇಸಸ್ ಮುಕ್ಕೋಟಿ ದೇವರು, ಸ್ವರ್ಗ ನರಕ, ಮಾನವ ಪರಿಕಲ್ಪನೆ! ಹುದುಗಿದೆ ಅಲ್ಲಿ ಸಮಾಜ ಹಿತ ಚಿಂತನೆ!
ನಮ್ಮನು ನಾವು ತಿಳಿಯೋಣ, ದೇವರ ವರ್ತನೆ ತೋರೋಣ!!