ಶ್ರೀ. ಡಾ.ಆರೂಢಭಾರತೀ ಸ್ವಾಮೀಜಿ
ಸಿದ್ಧಸೂಕ್ತಿ :
ಗುರುಸ್ಸಾಕ್ಷಾತ್ ಪರಂ ಬ್ರಹ್ಮ.
ಗುರುವು ಸಾಕ್ಷಾತ್ ಪರಬ್ರಹ್ಮ. ಗುರು ದೊಡ್ಡವ. ಅವನು ಬ್ರಹ್ಮ ವಿಷ್ಣು ಮಹೇಶ್ವರಸಮಾನ. ಅಜ್ಞಾನವನ್ನು ಕಳೆದು ಸುಜ್ಞಾನ ಬೆಳಗುವವನು ಸದ್ಗುರು. ವ್ಯಾಸ ಶಂಕರ ಮಹಾವೀರ ಬುದ್ಧ ಬಸವ ನಿಜಗುಣ ಸಿದ್ಧಾರೂಢ ಪರಮಹಂಸರಂಥವರು ಸದ್ಗುರುಗಳು. ವ್ಯಾಸರುದಿಸಿದ ದಿನ ಗುರುಪೂರ್ಣಿಮೆ. ಜೀವಕ್ಕೆ ಬೆಲೆ ಬರುವುದು ಸುಜ್ಞಾನದಿಂದ!ಕೆಲಸ ಮಾಡುವ ಮುನ್ನ ಬೇಕು ಅದರ ಜ್ಞಾನ – ಇಚ್ಛೆ – ಕೃತಿ. ಇದು ಜೀವಕ್ರಮ! ಬದುಕ ಬುನಾದಿ, ಬಾಳ ನೀಡುವ ಜ್ಞಾನದಾತ, ಒಂದಕ್ಷರ ಕಲಿಸಿದಾತ ಗುರು! ತಾಯಿ ತಂದೆ ಶಿಕ್ಷಕರಾದಿ ಪ್ರಕೃತಿಯೆಲ್ಲವೂ ಗುರು. ಗುರು ಮಹಿಮೆ ಅದು ಅಪಾರ! ಗುರುಸನ್ನಿಧಿಗೆ ಇದೋ ಭಕ್ತಿಪೂರ್ವಕ ಪ್ರಣಾಮಗಳು!!
ಗುರುರ್ಬ್ರಹ್ಮಾ ಗುರುರ್ವಿಷ್ಣುಃ
ಗುರುರ್ದೇವೋ ಮಹೇಶ್ವರಃ|
ಗುರುಸ್ಸಾಕ್ಷಾತ್ ಪರಂ ಬ್ರಹ್ಮ
ತಸ್ಮೈ ಶ್ರೀ ಗುರವೇ ನಮಃ||