ಗುರು

Share

 

        ಶ್ರೀ ಆರೂಢ ಭಾರತೀ ಸ್ವಾಮೀಜಿ

      ಸಿದ್ಧಸೂಕ್ತಿ :
                                                                                   ಗುರು.
ಜ್ಞಾನದಾತಾ.ವೀರಶೈವ ಲಿಂಗಾಯತರ ಅಷ್ಟಾವರಣಗಳಲ್ಲಿ ಒಂದು. ಅರಿವೇ ಗುರು. ಒಂದಕ್ಷರ ಕಲಿಸಿದಾತ, ಒಂದಿನಿತು ಜ್ಞಾನ ನೀಡಿದಾತ. ಗುರುತರ ಹೊಣೆಗಾರ. ಎಲ್ಲರಿಗೂ ಶ್ರೇಷ್ಠ, ಎಲ್ಲರಿಗೂ ಬೇಕು! ಗುರುವಿದ್ದರೆ ಗುರಿ, ಇಲ್ಲದಿದ್ದರೆ ಕುರಿ! ಗುರುಗಳನೇಕರು. ನಿಜಗುಣ ಶಿವಯೋಗಿಗಳ ಪ್ರಕಾರ ಆರು ವಿಧ. ಹಣ ಕೀಳುವ ಗುರುಗಳು ಬಹಳ. ಹೃದಯ-ಭವತಾಪ ಕಳೆಯುವ ಗುರು ವಿರಳ. ಕಳ್ಳತನ ಕಲಿಸಿದರೆ ಕಳ್ಳ ಗುರು. ಒಳಿತನ್ನು ಕಲಿಸಿದರೆ ಉತ್ತಮ ಗುರು. ಆತ್ಮ ವಿದ್ಯೆಯನ್ನು ಧಾರೆಯೆರೆದು ಮುಕ್ತಿಸುಖವನ್ನು ಉಣಿಸಿ ಜನ್ಮ ಉದ್ಧರಿಸುವ ಗುರು ಸದ್ಗುರು! ಗುರುಸೇವೆ ಗುರುಪೂಜೆ ಸಾಷ್ಟಾಂಗ ಗುರುನಮಸ್ಕಾರ ಗುರುಪ್ರಸಾದ-ಗುರುಪಾದೋದಕ ಸೇವನೆಯಿಂದ ಅಹಂಕಾರ ನಾಶ, ವಿನಯ ಸಂಪ್ರಾಪ್ತಿ! ಆಪ್ತ ಅಂಗ ಸ್ಥಾನ ಸದ್ಭಾವದಿಂದ ಗುರುಸೇವೆ ಮಾಡಿದರೆ ಗುರುಕೃಪೆ! ಸದ್ಗುರುವಿನಿಂದ ಜ್ಞಾನ ಹೀರಬೇಕು. ಕೆಚ್ಚಲಿನಲ್ಲಿದ್ದೂ, ಹಾಲುಣ್ಣದೇ ರಕ್ತ ಹೀರುವ ಉಣ್ಣೆಯಂತಾಗಬಾರದು. ಗುರುತ್ವ ಮುಖ್ಯ. ಜಾತಿ ಲಿಂಗ ವಯಸ್ಸಲ್ಲ. ಇವುಗಳಿಂದ ಮೇಲು ಕೀಳೆನ್ನಲಾಗದು! “ಗುರು ದೀಕ್ಷೆ ನೀಡುವನು. ಶಿಕ್ಷಕ ನೀಡಲಾರ. ಶಿಕ್ಷಕ ಗುರುವೆನಿಸಲಾರ” ಎಂಬುದು ವ್ಯರ್ಥ ಪ್ರಲಾಪ! ಅಲ್ಲಿಯೂ ಇದೆ ವಿದ್ಯಾರಂಭದ ದೀಕ್ಷೆ! ಓಂಕಾರಾದಿಯೇ ವರ ಮಂತ್ರ! ಮೆಕಾಲೆ ಅದನಿಲ್ಲಿ ತುಂಡರಿಸಿದ! ಇಂದು ಮತ್ತೆ ಜೋಡಿಸಿ!!

Girl in a jacket
error: Content is protected !!