ಕ್ಷಣಶ: ಕಣಶಶ್ಚೈವ ವಿದ್ಯಾಮರ್ಥಂಚ ಸಾಧಯೇತ್

Share

                     ಶ್ರೀ ಆರೂಢ ಭಾರತೀ ಸ್ವಾಮೀಜಿ

ಸಿದ್ಧಸೂಕ್ತಿ :
ಕ್ಷಣಶ: ಕಣಶಶ್ಚೈವ ವಿದ್ಯಾಮರ್ಥಂಚ ಸಾಧಯೇತ್.
ಕ್ಷಣ ಕ್ಷಣವೂ ವಿದ್ಯೆಗಳಿಸಬೇಕು. ಕಣಕಣವಾಗಿ ಸಂಪತ್ತುಗಳಿಸಬೇಕು. ಕ್ಷಣದಿಂದ ನಿಮಿಷ ಘಂಟೆ ದಿನ ಮಾಸ ವರ್ಷದಾಯು:! ಕಣ ಪೈಸೆಯಿಂದ ರೂಪಾಯಿ ನೂರು ಸಾವಿರ ಲಕ್ಷ ಕೋಟಿ! ಕ್ಷಣ ಕ್ಷಣ ಕಳೆದರೆ ಮುಗಿಯಿತು ಕಾಲ! ಕಣ ಕಣ ಕಳೆದರೆ ಖಾಲಿ ಖಜಾನೆ!! ಹನಿ ಹನಿ ಹಳ್ಳ! ತೆನೆ ತೆನೆ ಭಳ್ಳ! ಸಣ್ಣದೇ ದೊಡ್ಡದಾಗುವುದು! ಅದ್ಭುತಸಾಧನೆ ಕ್ಷಣಾರ್ಧದಲ್ಲಿ ಘಟಿಸದು! ಸಣ್ಣ ಸಣ್ಣ ನಿರಂತರ ಸಾಧನೆಗಳಿಂದ ಮಾತ್ರ!!
ಕ್ಷಣ ಕ್ಷಣ ಜ್ಞಾನವ ಗಳಿಸೋಣ, ಕಣ ಕಣ ಕೂಡುತ ಸಾಗೋಣ!!
ಕ್ಷಣಶಃ ಕಣಶಶ್ಚೈವ ವಿದ್ಯಾಮರ್ಥಂಚ ಸಾಧಯೇತ್!
ಕ್ಷಣತ್ಯಾಗೇ ಕುತೋ ವಿದ್ಯಾ ಕಣತ್ಯಾಗೇ ಕುತೋ ಧನಮ್!!

Girl in a jacket
error: Content is protected !!