ಸಿದ್ಧಸೂಕ್ತಿ ;ಅಮೃತ.

Share

              ಶ್ರೀ ಆರೂಢ ಭಾರತೀ ಸ್ವಾಮೀಜಿ

 

                                                                               ಸಿದ್ಧಸೂಕ್ತಿ-ಅಮೃತ.

ಸಾಯದಿರುವುದು ಸಾವಿಲ್ಲದ್ದು ಸಾವನ್ನು ದೂರ ದೂಡುವುದು ಅಮೃತ. ಸಮುದ್ರ ಮಥನದಿಂದ ದೊರೆತುದು ಅಮೃತ, ಅದನ್ನು ಕುಡಿದ ದೇವತೆಗಳು ಅಮರರು. ಇದು ಪೌರಾಣಿಕ ಕಾಲ್ಪನಿಕ. ಕಠಿಣ ಪರಿಶ್ರಮದ ಆರಂಭದಲ್ಲಿ ಕಹಿ ಫಲ, ಮುಂದುವರೆದಲ್ಲಿ ಸಿಹಿ ಫಲ, ಅದರಿಂದ ತೃಪ್ತಿ! ಇದು ಸತ್ಯ ತತ್ತ್ವ! ಕುಡಿಯಲು ಬಾಯುಂಟು, ಕಡೆಯಲು ಕೈ ಕಾಲುಂಟು! ಹುಟ್ಟಿದ್ದು ತೋರಿದ್ದು ನಾಮ ರೂಪದ್ದು ಅಳಿಯಲೇಬೇಕು! ಅದ್ಹೇಗೆ ಅಮರರು? ದೀರ್ಘ ಬಾಳಿಕೆಯೇ ಅಮರತ್ವ! ಚಿರಕಾಲ ಹೆಸರುಳಿಸುವ ಸಾಧನೆಗೈದವರು ರಾಜ ಮಹಾರಾಜರು ಸಂತ ಮಹಾತ್ಮರು ಅಳಿದಾಗ ಅಮರರಾಗಿಹರೆಂದು ಘೋಷಿಸುವುದಿಲ್ಲವೇ? ಕುಖ್ಯಾತರೂ ಅಮರರೇ! ಅಮೃತ ಬಳ್ಳಿಯೊಂದಿದೆ. ಅದು ಹಲವು ರೋಗ ನಿವಾರಣೆಯ ಮದ್ದು, ಆರೋಗ್ಯ ವರ್ಧಕ ದಿವ್ಯ ಶಕ್ತಿ! ಅದಕ್ಕೇ ಅಮೃತದ ಹೆಸರು! ರಸಿಕರಿಗುಂಟು ಅತಿ ಇಷ್ಟ ಅಧರಾಮೃತ! ಇವರು ಭಾವಿಸುವರು ಅವರ ಅಧರ=ತುಟಿಯಲ್ಲಿದೆ ಅಮೃತವೆಂದು. ಅವರು ಭಾವಿಸುವರು ಇವರ ಅಧರದಲ್ಲಿದೆ ಅಮೃತವೆಂದು! ಕಚ್ಚುವರು ಚೀಪುವರು ಆಧುನಿಕರಾಳಕ್ಕೆ ಇಳಿದು. ಏನಿದೆ ಅಲ್ಲಿ? ಎಂಜಲು! ಅದಕ್ಕೇಕೆ ಹರಸಾಹಸ! ಹೀಗಿರೆ ಪ್ರಾಚೀನ ಅಮೃತ ರಾಮರಸದ ಟೀಕೆ ಏಕೆ? ಸಾವಿರಕ್ಕೆ ಹತ್ತಿಪ್ಪತ್ತು ರೂಗಳಿಗೆ ಸಿಗುವ ದುಬಾರಿ ಅಗ್ಗದ ಮದ್ಯ ದೊಡ್ಡ ಸಣ್ಣವರ ಪರಮಾಮೃತ! ಇವರು ಸಾಯರೇ? ತಾನಾರು? ಜಗವಿದೇನು? ಪರಮಾತ್ಮನಾರೆಂದು ತಿಳಿದು ನಡೆವುದು ನಿಜಾಮೃತ!!
Girl in a jacket
error: Content is protected !!