.
ಶ್ರೀ ಡಾ.ಆರೂಢಭಾರತೀ ಸ್ವಾಮೀಜಿ
ಬಸಿದ್ಧಸೂಕ್ತಿ :
ಸತ್ಯಕ್ಕೆ ಸಾವಿಲ್ಲ, ಸುಳ್ಳಿಗೆ ಸುಖವಿಲ್ಲ.
ಸತ್ಯ =ಇರುವುದು, ಭೂತ ವರ್ತಮಾನ ಭವಿಷ್ಯ, ಸೃಷ್ಟಿ ಸ್ಥಿತಿ ಲಯಕಾಲಗಳಲ್ಲಿ ಇರುವುದು. ಸುಳ್ಳು =ಇಲ್ಲದಿರುವುದು, ಇಲ್ಲದ್ದು ಇದ್ದು ಇಲ್ಲದಂತಾಗುವುದು. ಪರಮಾತ್ಮನು ಎಲ್ಲ ಚೇತನ – ಅಚೇತನಗಳಲ್ಲಿ ವಿಶೇಷ-ಸಾಮಾನ್ಯ ಚೈತನ್ಯರೂಪದಲ್ಲಿರುವುದರಿಂದ ಆತ ನಿಜ ಸತ್ಯ! ನಮ್ಮ ಸತ್ಯಗಳು ಪ್ರಾಪಂಚಿಕ. ಸತ್ಯ ಬಹುಕಾಲ ಮುಚ್ಚಿಡಲಾಗದು. ಹತ್ತು ಹತ್ಯಗೈದು ಸಿಲುಕದವ ಹನ್ನೊಂದರಲ್ಲಿ ಸಿಲುಕಿ ಸತ್ಯ ಬಾಯ್ಬಿಟ್ಟ! ಪರಮಾತ್ಮನಲ್ಲಿ ತೋರುವ ಜಗತ್ತು ಸುಳ್ಳು. ಶಾಶ್ವತವಲ್ಲ. ಹುಟ್ಟಿದ್ದು ತೋರಿದ್ದು ನಶಿಸುತ್ತಿದೆಯಲ್ಲ! ಸುಳ್ಳನ್ನು ಒರೆಗೆ ಹಚ್ಚಲಾಗದು! ವರ್ಷಗಟ್ಟಲೇ ಆಹಾರವಿಲ್ಲ, ಕೈ-ಕಾಲಿನಿಂದ ಚಿನ್ನ ಭಸ್ಮ ಕೊಡುವರು, ಎಂಬುದುಂಟು. ಒಪ್ಪಲಾಗದು! ಪುಟಪುರ್ತಿ ಬಾಬಾರ ಬಳಿ ಎಚ್ ನರಸಿಂಹಯ್ಯನವರು ಕುಂಬಳಕಾಯಿ ಕೇಳಿದಾಗ ಕೊಡದಾದರಂತೆ! ಸತ್ಯ ಕಟು, ರಕ್ಷಿಪುದು! ಸುಳ್ಳು ಸಿಹಿ ಕಾಪಾಡದು! ಸತ್ಯಕ್ಕೆ ಬೆಲೆ, ಸುಳ್ಳಿಗಿಲ್ಲ!ಸುಳ್ಳು ಹೇಳಬಾರದೆಂದು ಸುಳ್ಳನ್ನು ಪ್ರಮಾಣೀಕರಿಸುತ್ತೇವೆ, ಸತ್ಯ ಹೇಳಬೇಕೆಂದು ಸುಳ್ಳನ್ನು ಕಲಿಸುತ್ತೇವೆ, ಸತ್ಯವಂತನನ್ನು ಕಾಡುತ್ತೇವೆ! ಹರಿಶ್ಚಂದ್ರ ನಿದರ್ಶನ! ಧಾವಿಸಿ ಬಂದ ಜಿಂಕೆ ಆಶ್ರಮ ನುಗ್ಗಿತು. ಬೆನ್ಹತ್ತಿ ಬಂದ ಬೇಡ ಋಷಿಗೆ ಕೇಳಿದ, ಜಿಂಕೆ ಬಂತಾ? ಋಷಿ ಹೇಳಿದ “ನೋಡುವ ಕಣ್ಣು ಹೇಳದು, ಹೇಳುವ ಬಾಯಿ ನೋಡದು”. ಜಿಂಕೆ ಬದುಕಿತು! ತೋಳ ಬಂತೆಂದು ನಿತ್ಯ ಸುಳ್ಳು ಕೂಗಿದ ಕುರಿಗಾಯಿ ಹುಡುಗನ ತೋಳಬಂದಾಗಿನ ಕೂಗನು ಜನ ನಂಬದೆ ನೆರವಾಗಲಿಲ್ಲ, ಕುರಿ ಉಳಿಯಲಿಲ್ಲ!
ಸತ್ಯವ ನುಡಿಯೋಣ, ಶಾಶ್ವತ ಸುಖವನು ಹೊಂದೋಣ!!