ಶ್ರೇಯಾಂಸಿ ಬಹುವಿಘ್ನಾನಿ

Share

 

                      ಶ್ರೀ ಆರೂಢ ಭಾರತೀ ಸ್ವಾಮೀಜಿ

ಸಿದ್ಧಸೂಕ್ತಿ:
ಶ್ರೇಯಾಂಸಿ ಬಹುವಿಘ್ನಾನಿ.
ಒಳ್ಳೆಯದಕ್ಕೆ ಲೆಕ್ಕವಿಲ್ಲದ ತೊಡಕು. ಬಾರ್ ರೆಸ್ಟೋರೆಂಟ್ ತೆರೆಯಲು ಬಲು ಕಷ್ಟವಿಲ್ಲ, ಅವು ಸೊರಗುವುದೂ ಇಲ್ಲ. ಒಂದರ ನಂತರ ಮತ್ತೊಂದು! ಆಶ್ರಮ ಮಠ ಮಂದಿರ ಕಟ್ಟಿ ನೋಡಿ! ಪ್ರಾಯದಲ್ಲಿ ಪ್ರಾರಂಭಿಸಿದವ ಸತ್ತರೂ ಮುಗಿಯದು! ಕುಂಟುತ್ತ ಸೊರಗುತ್ತ ತೆವಳುವುದು! ಉಚಿತ ಶಾಲೆ ವಿದ್ಯಾರ್ಥಿನಿಲಯಕ್ಕೆ ನೆಲವೇ ಗತಿ! ಭರ್ಜರಿ ಶುಲ್ಕ ಪಡೆವ ಕಟ್ಟಡ ಗಗನಚುಂಬಿ! ಋಷಿ ಯಜ್ಞ ಮಾಡಿದ! ರಾಕ್ಷಸ ರಕ್ತಮಾಂಸ ಸುರಿದ! ವಿಶ್ವಾಮಿತ್ರನ ತಪಸ್ಸಿಗೆ ಮೇನಕೆ ಅಡ್ಡಿ! ಹೇಗಾದರೂ ಮಾಡಿ ಒಳ್ಳೆಯದನ್ನು ಕೆಡಿಸಬೇಕೆಂಬ ಛಲ ಹಲವರಿಗೆ! ಸುಮ್ಮನಿದ್ದರೂ ಸರಿ. ಓದು ಧ್ಯಾನ ಪೂಜೆಗೆ ಕುಳಿತರೆ, ಮಠ ಮಂದಿರಕ್ಕೆ ಹೊರಟರೆ ಆಗದು! ಹಾಳು ಕಟ್ಟಡ ದುರಸ್ತಿಗೆ ಮುಂದಾದರೆ,ಚಟದಂಧೆಕೋರರ ತಡೆ! ತೆಂಗು ಬೆಳೆಯಲು ಹರಸಾಹಸ! ಕಾಂಗ್ರೆಸ್ ಬೀಜ ಬಿತ್ತಬೇಕಿಲ್ಲ! ನೆನಪಿರಲಿ, ತೆಂಗು ಬಾಳುವುದು ನೂರಾರು ವರ್ಷ, ಕಾಂಗ್ರೆಸ್‌ಗೆ ತಿಂಗಳಿಲ್ಲ! ಅರ್ಹರ ಕೊರತೆ, ಮೌನ, ಈ ಪ್ರಬಲ ವಿರೋಧಕ್ಕೆ ದಾರಿ. ಮುನ್ನುಗ್ಗಿದರೆ ಒಳ್ಳೆಯದರ ಸಾಧನೆ!!
*ತದಾ ತತ್ರವಿನಾಶಾಯ ಚಿತ್ತ ಭಂಗಂ ಕರೋತಿ ಸಾ|*
*ಶ್ರೇಯಾಂಸಿ ಬಹುವಿಘ್ನಾನಿ ಸಂಭವಂತಿ ಪದೇ ಪದೇ||*

Girl in a jacket
error: Content is protected !!