ಶಿವಾಸ್ತೇ ಪಂಥಾನಃ ಸಂತು

Share

                  ಶ್ರೀ ಆರೂಢ ಭಾರತೀ ಸ್ವಾಮೀಜಿ

ಸಿದ್ಧಸೂಕ್ತಿ :
                  ಶಿವಾಸ್ತೇ ಪಂಥಾನಃ ಸಂತು
ಶಕುಂತಲೆಗೆ ಸಾಕು ತಂದೆ ಕಣ್ವ ಮ ರ್ಷಿಗಳು ಹೇಳಿದ ಮಾತಿದು.
ನಿನ್ನ ದಾರಿಗಳು ಶುಭವಾಗಿರಲಿ. ಕೆಟ್ಟ ದಾರಿ ತುಳಿಯಬೇಡ. ನೀ ತುಳಿದ ಸರಿ ದಾರಿಗೆ ಅಡ್ಡಿ ಬಾರದಿರಲಿ. ಒಬ್ಬರು ಇನ್ನೊಬ್ಬರಿಗೆ ಬಯಸುವ ಆದರ್ಶ ಪರಿ ಇದು. ಮನೆಗೆ ಬಂದ ಹೆಣ್ಣು ಮಕ್ಕಳಿಗೆ ಮನೆಯ ಹೆಣ್ಣು ಮಕ್ಕಳು ತಾಳಿಗೆ ಅರಿಷಿಣ, ಕುಂಕುಮವಿಟ್ಟು ತಾಂಬೂಲ ನೀಡಿ ಮುತ್ತೈದೆ ಭಾಗ್ಯ ಚಿರಕಾಲ ಇರಲೆಂದು ಹಾರೈಸುವರು. ಇದು ಶುಭಾಶೀರ್ವಾದ. ಆಶೀರ್ವಾದವನ್ನು ಹಿರಿಯರೇ ಮಾಡಬೇಕೆಂದಿಲ್ಲ. ಎಲ್ಲರೂ ಮಾಡುವಂಥದ್ದು. ಒಳ್ಳೆಯದಾಗಲೆನ್ನಿ! ಮುಖದಲ್ಲಿ ಮಂದಹಾಸ! ಉತ್ಸಾಹ ದುಪ್ಪಟ್ಟು! ಕಾರ್ಯ ಸುಲಭ! ಅಂದವರಿಗೆ ಗೌರವ ಸತ್ಕಾರ! ಬಾಯಾಗ ಮಣ್ಣು ಎನ್ನಿ! ಸಿಟ್ಟು ಉಕ್ಕುವುದು! ಅಂದವರ ಹಲ್ಲು ಉದುರಬಹುದು! ಶಾಪ ಆಶೀರ್ವಾದಗಳ ಫಲ ತಟ್ಟದೆಂದು ಕಡೆಗಣಿಸುವುದು ಬೇಡ. ಒಳಿತಾಗಲೆನ್ನೋಣ! ಒಳಿತಾಗಲೆನ್ನುವರು! ಎಲ್ಲರ ಜೀವನ ಸುಂದರ!!

Girl in a jacket
error: Content is protected !!