ಬ್ರಾಹ್ಮಣ

Share

                 ಶ್ರೀ ಆರೂಢ ಭಾರತೀ ಸ್ವಾಮೀಜಿ

ಸಿದ್ಧಸೂಕ್ತಿ :
                        ಬ್ರಾಹ್ಮಣ.
ಹಿಂದು ಧರ್ಮದ ಬ್ರಾಹ್ಮಣ ಕ್ಷತ್ರಿಯ ವೈಶ್ಯ ಶೂದ್ರ ಎಂಬ ನಾಲ್ಕು ವರ್ಣಗಳಲ್ಲಿ ಒಂದು. ಭೂಸುರ=ಭೂಲೋಕದ ದೇವರು. ಬ್ರಹ್ಮ ಪರಮಾತ್ಮನನ್ನು ತಿಳಿದವ. ಎಲ್ಲರಲ್ಲಿ ತನ್ನನ್ನು, ತನ್ನಲ್ಲಿ ಎಲ್ಲರನ್ನು ಕಂಡು ನಡೆವ ಸಮದರ್ಶೀ. ವೇದ ಧರ್ಮಶಾಸ್ತ್ರ ಪುರಾಣಾದಿ ಸದ್ಗ್ರಂಥಗಳ ಅಧ್ಯಯನ ಮಾಡುವವ, ಪ್ರವಚನ ನೀಡುವವ. ಯಜ್ಞ ಜಪ ತಪ ಪೂಜಾದಿ ಸತ್ಕರ್ಮನಿರತನು, ಧರ್ಮ ಅಧ್ಯಾತ್ಮ ಮಾರ್ಗದಲ್ಲಿ ನಡೆದು ನಡೆಸುವವನು ಪೂಜ್ಯ. ವೇದ ಶಾಸ್ತ್ರಗಳನ್ನು ಸಂರಕ್ಷಿಸಿದ ಕೀರ್ತಿಪಾತ್ರ! ಬ್ರಾಹ್ಮಣ ಹಿಂಸೆ ಹನನ ಮಹಾಪರಾಧ. ಹುಟ್ಟಿನಿಂದ ಬ್ರಹ್ಮಜ್ಞಾನಿ ಎಂಬುದು ಒಣ ಮಾತು. ಗುಣ ವಿದ್ಯೆ ಸಂಸ್ಕಾರ ಆಚಾರ ವಿಚಾರ ಪಡೆದು ನಡೆದಂತೆ ವ್ಯಕ್ತಿಯ ಯೋಗ್ಯಾಯೋಗ್ಯತೆ. ಗುಣ ಕರ್ಮಗಳಿಂದ ಜಾತಿ. ಹೊರತು ಹುಟ್ಟಿನಿಂದಲ್ಲ. ಹುಟ್ಟಿನ ರೂಢಿಗತ ಜಾತಿ ಬಿಡಬೇಕು. ಹುಟ್ಟಿನ ಜಾತಿ ನೋಡಿ ಸಂಸ್ಕಾರ ನೀಡುವುದಲ್ಲ. ಸಂಸ್ಕಾರ ತರಬೇತಿ ಶಿಕ್ಷಣ ನೀಡಿ ಪಡೆದಾದ ಮೇಲೆ ವ್ಯಕ್ತಿಯ ಜಾತಿ! ಹುಟ್ಟಿನಿಂದ ಬ್ರಾಹ್ಮಣನೆನಿಸಿ ಪರಮಾತ್ಮ ವೇದ ಶಾಸ್ತ್ರಾದಿಗಳನ್ನು ತಿಳಿಯದವ ಆಚಾರಶುದ್ಧನಾಗಿರದವ ಅಪರಾಧಕೃತ್ಯದವ ಬ್ರಾಹ್ಮಣನಲ್ಲ. ಶೂದ್ರ ಮತ್ತೊಬ್ಬ ಮುಸ್ಲಿಂ ಕ್ರೈಸ್ತ ಯಾರೇ ಆಗಿರಲಿ, ಪರಮಾತ್ಮನನ್ನು ಅರಿತವ ಸದಾಚಾರ ಸಂಪನ್ನ ಸದ್ಗ್ರಂಥ ಅಧ್ಯಯನ ಅಧ್ಯಾಪನ ಸತ್ಕರ್ಮನಿಷ್ಠನು ಬ್ರಾಹ್ಮಣ,ಪೂಜ್ಯ.

Girl in a jacket
error: Content is protected !!