ಶ್ರೀ ಆರೂಢಭಾರತೀ ಸ್ವಾಮೀಜಿ
ಸಿದ್ಧಸೂಕ್ತಿ :
ಬೊಗಳುವ ನಾಯಿ ಕಚ್ಚುವುದಿಲ್ಲ, ಕಚ್ಚುವ ನಾಯಿ ಬೊಗಳುವುದಿಲ್ಲ.
ಬೊಗಳುವ ನಾಯಿಗೆ ತುತ್ತೆಸೆದರೆ, ಶತ್ರುವನ್ನೂ ಒಳಬಿಡುವುದು! ಬೊಗಳದಿರುವ ನಾಯಿ ಎಲ್ಲಿಂದಲೋ ಎಗರಿ ಕಚ್ಚುವುದು!ಎಲ್ಲ ಹೀಗಲ್ಲ, ಬಹುತೇಕ. ಬೊಗಳಿ ಕಚ್ಚುವುದುಂಟು, ಬೊಗಳದೆ ಕಚ್ಚದಿರುವುದೂ ಉಂಟು!
ನೆನಪಿರಲಿ :ಬೊಗಳುವುದು ನಾಯಿ! ಹುಲಿ ಸಿಂಹ ಬೊಗಳವು. ಗರ್ಜಿಸುವವು! ಅವಿತು ಕುಳಿತು ಹಾರಿ ಕುತ್ತಿಗೆ ಸೀಳಿ ರಕ್ತ ಕುಡಿಯುವವು! ಇಲಿ ಹಿಡಿಯುವ ಬೆಕ್ಕು ಒದರದು! ಕಾರ್ಯಸಾಧಿಸುವ ಸಮರ್ಥ ಸಾಧಕ ಹರಟೆ ಹೊಡೆಯಲಾರ! ಜಂಭ ಬಡಾಯಿ ಕೊಚ್ಚಲಾರ! ಉತ್ತರಕುಮಾರನ ಪೌರುಷ ತೋರಲಾರ! ಮೌನದಿ ಗುರಿ ಸಾಧಿಸುವ. ದಕ್ಷ ಅಧಿಕಾರಿ ನ್ಯಾಯಾಧೀಶ ವಿಜ್ಞಾನಿ ವೈದ್ಯ ಹೆಚ್ಚು ಮಾತನಾಡರು! ತನ್ನ ನಿಜರೂಪ ಅರಿತವನ ಮಾತು ಕಡಿಮೆ. ತನ್ನಲ್ಲಿ ಮುಳುಗುವ, ಗುರುನಾಥಾರೂಢರಂತೆ! ಕಡ್ಡಿ ಗುಡ್ಡ ಮಾಡುವ ವಕೀಲನ ಮಾತಿಗೆ ಇಲ್ಲ ಕೊನೆ. ಮಾತು ಘಟನೆಗೆ ಬಣ್ಣ ಬಳಿಯುವ ವರದಿಗಾರನ ಮಾತು ತೂತು, ಮುತ್ತಲ್ಲ! ವಿದ್ಯೆ ಸಿರಿತನ ರೂಪಿನ ನಿಜ ಜನರ ಬದುಕಿಹುದು ಸರಳ, ಅರೆಬರೆಯ ಜನರ ವಯ್ಯಾರ ಅತಿ ಚಪಲ! ಹಿಂದು ಮಂದಿರದ ಬೀದಿಯ ನಿಶ್ಶಕ್ತ ಕುಡುಕ/ಕಿ ಪ್ರಧಾನಿ ಮುಖ್ಯಮಂತ್ರಿಯ ಬಯ್ಯುವ, ಸವಾಲೊಡ್ಡುವ ಪರಿ ಅರ್ಥಹೀನ!
ಸಿಂಹಗಳಾಗೋಣ, ಮೌನದಿ ಸಾಧನೆಗೈಯ್ಯೋಣ!!