
ಶ್ರೀ ಆರೂಢ ಭಾರತೀ ಸ್ವಾಮೀಜಿ
ಸಿದ್ಧಸೂಕ್ತಿ :
ಬಾಯಿ ಬಿಟ್ಟರೆ ಬಣ್ಣಗೇಡಿ.
ಮಾತನಾಡಿದರೆ ಮರ್ಯಾದೆ ಹೋಯಿತು. ಮಾತು ಮಾಣಿಕ್ಯ-ಜ್ಯೋತಿರ್ಲಿಂಗ-ಬೆಳಕು.ಮಾನವನಿಗೆ ದೇವ ನೀಡಿದ ವರದಾನ. ಮಾತಿಲ್ಲದಿರೆ ಜಗ ಕತ್ತಲೆ. ಮಾತು ಸಂಬಂಧ ಬೆಳೆಸುವುದು, ಹಣ ಗಳಿಸುವುದು. “ನಾನಿರುವೆ” ಎಂಬೊಂದಭಯ ಮಾತು ಜೀವ ಉಳಿಸುವುದು! ಮಾತು ಅರಿತಾಡಬೇಕು. ಮಾತಿನ ಮರ್ಮವರಿಯದೇ ಎಲುಬಿಲ್ಲದ ನಾಲಿಗೆ ವಿರಾಮ-ಸಂಬಂಧವಿರದ ಬಿಟ್ಟಿ ಮಾತನು ಸುರಿಸುವುದು. ಕೆಲವರದು ಬಾಯಿ ತೆರೆದರೆ ಏಕವಚನ, ಅಶ್ಲೀಲ ಮಾತು, ಚುಚ್ಚಿ ಸಾಯಿಸುವ ಬಿರುನುಡಿ! ಅಂಥವರೆದುರು ಮರ್ಯಾದಸ್ಥರು ಮಾತನಾಡಿದರೆ ಮರ್ಯಾದೆಗೆ ಭಂಗ! ದಾರಿಯಲ್ಲಿ ಸಿಕ್ಕ ವ್ಯಕ್ತಿಗೆ ಈತ “ಆರಾಮೇನ್ರೀ?” ಎಂದ. ಆತ “ಕಣ್ಣಿಗೆ ಕಾಣಂಗಿಲ್ವಾ? ಆರಾಮ ಇಲ್ಲದಿದ್ದರೆ ಓಡಾಡಾಕಾಗ್ತಿತ್ತಾ? ಆರಾಮ ಇಲ್ಲದಿದ್ದರೆ ನೀ ಖರ್ಚು ನೋಡ್ಕೋತಿದ್ಯಾ?” ಎಂದು ಮುಂದುವರೆದ. ಈತ ಬಾಯಿ ತೆರೆಯದೇ ದಾಟಿ ಪಾರಾದ! ಮಾತು ಬಾರದ ಹಣವಂತ ನಾಯಕನಾದ. ಮಿತ್ರನ ತಾಯಿ ತೀರಿದಳು. “ಅವಳು ನಿನಗೆ ಮಾತ್ರ ತಾಯಿ ಆಗಿರಲಿಲ್ಲ, ಇಡೀ ಊರಿಗೆ ತಾಯಿ ಆಗಿದ್ದಳು”ಎಂದು ಸಂತೈಸಿದ. ಇನ್ನೊಮ್ಮೆ ಮಿತ್ರನ ಹೆಂಡತಿ ತೀರಿದಳು.” ಅವಳು ನಿನಗೆ ಮಾತ್ರ ಹೆಂಡತಿ ಆಗಿರಲಿಲ್ಲ, ಇಡೀ ಊರಿಗೆ… “ಎಂದ! ಹಲ್ಲುದುರಿಸಿಕೊಂಡ! ಆ ಹಾ ಉಚ್ಚಾರವರಿಯದವ ಸಭೆಯಲ್ಲಿ, ಆದರದ ಸ್ವಾಗತ ಎಂಬಲ್ಲಿ ಹಾ ಬಳಸಿದ್ದ!ವ್ಯರ್ಥ ಪ್ರಲಾಪ ಗೌರವ ಹಾಳು,ಮೌನ ಮೇಲು!
ಮಾತನು ಕಲಿಯೋಣ, ಮರ್ಮ ಅರಿತು ನುಡಿಯೋಣ!!