ಪ್ರಸಾದ

Share

 

                 ಶ್ರೀ ಆರೂಢ ಭಾರತೀ ಸ್ವಾಮೀಜಿ

ಸಿದ್ಧಸೂಕ್ತಿ :
ಪ್ರಸಾದ.
ದೇವರಿಗೆ ನೈವೇದ್ಯ ಮಾಡಿ ಸ್ವೀಕರಿಸುವ, ಗುರು ಹಿರಿಯ ಅರ್ಚಕ ನೀಡುವ, ಹೂ ಹಣ್ಣು ಕಾಯಿ ಅನ್ನ ಪ್ರಸಾದ. ದೇವಸ್ಥಾನ ಮಠ ಮಂದಿರಾದಿಗಳಲ್ಲಿನ ಶುದ್ಧ ತ್ಯಾಗ ಭಾವದಿಂದ ಮಾಡುವ, ಭಿಕ್ಷಾಟಣೆಯಿಂದ ಸಂಗ್ರಹಿಸಿದ ದಾಸೋಹ ಭೋಜನ.ಭಗವಂತನ, ಗುರು ಹಿರಿಯರ ಅನುಗ್ರಹದಿಂದ ಪ್ರಾಪ್ತವಾದುದನ್ನು ಅವರಿಗರ್ಪಿಸಿ ಅವರ ಸ್ಮರಣೆಯೊಂದಿಗೆ ಸೇವಿಸುವ ಪ್ರಸಾದದಿಂದ ಶರೀರ ಪವಿತ್ರ! ಮನಸ್ಸು ಪ್ರಸನ್ನ! ಇದು ಸರ್ವದುಃಖಗಳನ್ನೂ ನಾಶಗೊಳಿಸುವುದು. “ನೈವೇದ್ಯ ಮಾಡದೇ, ಪರರಿಗೆ ಅರ್ಪಿಸದೇ ತನಗಾಗಿ ಬೇಯಿಸಿಕೊಂಡು ಉಣ್ಣುವವ ಪಾಪ ಉಂಡಂತೆ, ಅವನು ಕಳ್ಳ!” ಎನ್ನುವುದು ಭಗವದ್ಗೀತೆ! ಎಲ್ಲ ಆಹಾರವೂ ಭಗವಂತನ ಪ್ರಸಾದ! ಈ ಅದ್ಭುತ ಶರೀರ ಆತನ ವರ ಪ್ರಸಾದ! ಪ್ರಸಾದ ಕೆಡಿಸಬಾರದು! ಆತ್ಮ ತತ್ತ್ವಜ್ಞಾನಿ ಸದ್ಗುರು ಉಂಡು ಮಿಗಿಸಿದ ಆಹಾರ ಪ್ರಸಾದ. ಎಂಜಲೆನಿಸದು. ಶಿಷ್ಯ ಭಕ್ತಿಯಿಂದ ಸೇವಿಸುವನು! ಆಹಾರವಷ್ಟೇ ಏಕೆ? ಗುರು ಗೋವಿಂದ ಭಟ್ಟರು ವೃದ್ಧಾಪ್ಯದಲ್ಲಿದ್ದಾಗ ಉಗುಳಿದ ಕಫವನ್ನು ಶಿಷ್ಯ ಷರೀಫ ಕುಡಿದ! ಗುರು ಸಿದ್ಧಾರೂಢರು ಅಸ್ವಸ್ಥರಾದಾಗ ಶಿಷ್ಯ ಚನ್ನಮಲ್ಲನು ಅವರ ಕಫ ಮೂತ್ರ ಸೇವಿಸಿದ! ಅಂಧ ಭಕ್ತಿ ಎನಿಸಬಹುದು! ಭೇದವೃತ್ತಿಯ ವಿಚಾರವಂತರಿಗಿದು ಅಸಹ್ಯ! ಭಾವದೋಳೊಂದಾದವರಿಗಲ್ಲ! ತಾಯಿ ಮಗುವಿನ ಉಚ್ಚೆ ಹೇಸಿಗೆಗೆ ಹೇಸುವಳೇ? ಹಸು ತನ್ನ ನವಜಾತ ಕರುವಿನ ದ್ರವ ಮೃದು ಘನರೂಪದ ಶೆಗಣಿ ಮೂತ್ರವ ನೆಕ್ಕಿ ನುಂಗುವುದ ಕಂಡೆ! ಗಂಡ ಹೆಂಡತಿ ಮಕ್ಕಳು ಉಂಡುಳಿಸಿದ ಊಟವನ್ನು ಪರಸ್ಪರರು ಸೇವಿಸುವರು. ಸತಿ ಪತಿ, ಪ್ರಿಯಕರ ಪ್ರಿಯತಮೆಯರಿಗೆ ಎಂಜಲಾವುದು?

Girl in a jacket
error: Content is protected !!