ದುಡಿಮೆಯೇ ದುಡ್ಡಿನ ತಾಯಿ

Share

ಶ್ರೀ ಆರೂಢ ಭಾರತೀ ಸ್ವಾಮೀಜಿ,ಹಾರೊಹಳ್ಳಿ

 

ಸಿದ್ಧಸೂಕ್ತಿ :
          ‌‌‌‌‌    ದುಡಿಮೆಯೇ ದುಡ್ಡಿನ ತಾಯಿ.
ದುಡ್ಡು, ವಸ್ತು ಸೇವೆ ಪಡೆಯಲು ಬಳಸುವ ವಿನಿಮಯ ಸಾಧನ. ವಸ್ತು ಸೇವೆ ಎಲ್ಲರಿಗೂ ಬೇಕಾದ್ದರಿಂದ ದುಡ್ಡು ಎಲ್ಲರಿಗೂ ಬೇಕು. ರೂಪಾಯಿ ಡಾಲರ್ ಇತ್ಯಾದಿ ನಾಣ್ಯ ನೋಟನು ಬಳಸುತಿವೆ ವಿಭಿನ್ನ ದೇಶಗಳು.ಸರ್ಕಾರ ದುಡ್ಡನು ಯಥೇಷ್ಟ ಮುದ್ರಿಸಿ ಬೇಕೆಂದವರಿಗೆ ಸಾಕಷ್ಟು ಹಂಚಿದರೆ ಹೇಗೆ? ನಿಜ. ದುಡಿಮೆಯೇ ಬೇಕಿಲ್ಲ! ಓದು ಬೇಡ, ತಗ್ಗಿ ಬಗ್ಗಿ ನಡೆವ ಸಂಸ್ಕಾರ ಬೇಡ! ಯಾರಿಗೆ ಯಾರೂ ಕಮ್ಮಿ ಇಲ್ಲ! ಎಲ್ಲರಿಗೂ ಎಲ್ಲಾ ಖರೀದಿಸುವ ಶಕ್ತಿ! ಅಡ್ಡಿಯಾದರೆ ಅಸ್ತ್ರ ಸುರಿಮಳೆ! ಕಂಡ ಕಂಡಲ್ಲಿ ಹೆಣ ಕಂಡೀತು! ಕೊರೋನಾ ಮಾರಿ ಮೇಲೆನಿಸೀತು! ಶಿವನಿಂದ ವರ ಪಡೆದ ಭಸ್ಮಾಸುರ ಶಿವನ ತಲೆಯ ಮೇಲೆ ಕೈ ಇಟ್ಟು ಸುಡಲು ಹೋದ ಕಥೆ ನೆನೆಯಿರಿ! ಉಚಿತ ಪ್ರಾಪ್ತಿ ಸದಾ ಉಚಿತವಲ್ಲ! ಅದು ಸೋಮಾರಿತನ ರೋಗದ ಮೂಲ! ಪ್ರಕೃತಿಯ ಪ್ರತಿ ಸ್ಪಂದನೆಯಲ್ಲಿ ಶ್ರಮವಿದೆ! ಶ್ರಮವಿಲ್ಲದೇ ಪರಾಗಸ್ಪರ್ಶವಾಗದು, ಜೇನಾಗದು, ಚಿಗುರೊಡೆಯದು, ಹೂವಾಗದು, ಬೆಳೆಯಾಗದು, ರಸ್ತೆ ಸೇತುವೆ ಕಟ್ಟಡವಾಗದು, ಯಂತ್ರ ವಸ್ತುಗಳಾಗವು – ಬರವು-ಹೋಗವು! ವೃದ್ಧ ಹೊಲದಲ್ಲಿ ನಿಧಿ ಎಂದು ಸತ್ತ! ಮಕ್ಕಳು ಭೂಮಿ ಎಲ್ಲ ಅಗೆದರು. ಸಿಗಲಿಲ್ಲ. ಗೊಬ್ಬರ ಹಾಕಿ ಬೀಜ ಬಿತ್ತಿದರು. ಮಳೆ ಬಂದು ಭರಪೂರ ಬೆಳೆ ಆದಾಯ!
ದುಡಿಮೆಯಗೈಯ್ಯೋಣ, ದುಡ್ಡು ಗಳಿಸಿ ಬಾಳೋಣ!!

Girl in a jacket
error: Content is protected !!