ತತ್ತ್ವವೊಂದರ ಹಿಡಿತಕ್ಕೊಗ್ಗದಿಹ ಬಾಳೇನು?

Share

 

                 ಶ್ರೀ ಆರೂಢ ಭಾರತೀ ಸ್ವಾಮೀಜಿ

   ಸಿದ್ಧಸೂಕ್ತಿ :
       ತತ್ತ್ವವೊಂದರ ಹಿಡಿತಕ್ಕೊಗ್ಗದಿಹ ಬಾಳೇನು?

ಪ್ರತಿ ಜೀವಿ ವಸ್ತುವಿಗೆ ನಿರ್ದಿಷ್ಟ ತತ್ತ್ವಾದರ್ಶವಿದೆ, ಇರಬೇಕು! ಸೂರ್ಯ ಬೆಂಕಿ ಸುಡುತಿರಬೇಕು. ಚಂದ್ರ ನೀರು ತಂಪಿರಬೇಕು. ಹುಳಿ ಉಪ್ಪು ಕಹಿ ಖಾರ ಸಿಹಿ ವಗರು ತಮ್ಮ ತಮ್ಮಯ ರುಚಿಯನ್ನು ಕೊಡುತಿರಲುಬೇಕು! ಅದರವರ ಗುಣಧರ್ಮ ಕರ್ತವ್ಯ ಅದು ಅವರು ಪಾಲಿಸಲೇಬೇಕು. ಇಲ್ಲದಿರೆ ಬೆಲೆ ಬಾಳು ಅದಕವರಿಗಿಲ್ಲ! ಮದುವೆಯಾದರೆ ಗಂಡು ಗಂಡನಂತಿರಬೇಕು,ಹೆಣ್ಣು ಹೆಂಡತಿಯಂತಿರಬೇಕು. ಸತಿ ಪತಿ ಒಂದಾಗಿ ಬಾಳದಿರೆ ಆ ದಾಂಪತ್ಯವೇಕೆ? ತಂದೆ ತಾಯಿ ಅತ್ತೆ ಮಾವ ಮಗು ಸೊಸೆ ಅಕ್ಕ ತಂಗಿ ಅಣ್ಣ ತಮ್ಮ ವಿದ್ಯಾರ್ಥಿ ಶಿಕ್ಷಕ ವೈದ್ಯ ರೋಗಿ ವಕೀಲ ಕಕ್ಷಿದಾರ ಅಧಿಕಾರಿ ಸೇವಕ ಸಾರ್ವಜನಿಕ ಜನಸೇವಕ ಗುರು ಶಿಷ್ಯ ಎಲ್ಲರೂ ಅವರವರ ಹೊಣೆಯರಿತು ತತ್ತ್ವಾದರ್ಶಕೆ ಬಾಗಿ ನಡೆಯಬೇಕು. ಎಲ್ಲೆಡೆ ಸುತ್ತುವ ಹಕ್ಕಿ ತಾ ಸಂಜೆಯಾಗುತ್ತಲೇ ತನ್ನ ನೆಲೆ ನೆನೆಯುವುದು, ಗೂಡ ಸೇರುವುದು.ಬಯಲಲ್ಲಿ ಹಗ್ಗದಿಂದ ಕಟ್ಟಿಹಾಕಿದ ಹಸುವು ತನ್ನ ಹಗ್ಗದ ವ್ಯಾಪ್ತಿಯನ್ನು ನೆನೆ ನೆನೆದು ಆ ವ್ಯಾಪ್ತಿಯಲ್ಲಿಯೇ ಸುತ್ತಿ ಮೇಯುವುದು. ಮೇಯಲು ದೂರ ಹೋದ ಹಸು ತನ್ನ ಕರುವನ್ನು ಮರೆಯದು. ಹೊರಗೆ ನಮ್ಮ ಹೊಣೆ ಏನೇ ಇದ್ದರೂ, ನಮ್ಥೊಳಗಿನ ಹೊಣೆ ಮರೆಯಾಗದಿರಲಿ. ನಮ್ಮಂತರಂಗದ ಆತ್ಮರೂಪವನರಿವುದು ಸದಾ ನೆನಪಿರಲಿ. ತತ್ತ್ವ ಆದರ್ಶ ಹೊಣೆಗಳಿಗಂಟದ ಬಾಳು ದಾರ ಹರಿದ ಗಾಳಿಯ ಪಟ, ಮುಗಿಯಿತು ಅದರ ಆಯುಷ್ಯ!!

Girl in a jacket
error: Content is protected !!