ಶ್ರೀ. ಡಾ.ಆರೂಢಭಾರತೀ ಸ್ವಾಮೀಜಿ
ಸಿದ್ಧಸೂಕ್ತಿ :
ಜೀವೋ ಜೀವಸ್ಯ ಜೀವನಮ್.
ಜೀವ ಜೀವಕ್ಕೆ ಜೀವನ. ಜೀವ ಜೀವವ ಹುಟ್ಟಿಸುವುದು! ಜೀವ ಜೀವವ ನುಂಗುವುದು! ಎಲೆ ಧಾನ್ಯದಲಿ ಹುಳುಗಳು ಹುಟ್ಟುವವು.ಹುಳು ಎಲೆ ಧಾನ್ಯವ ತಿಂದು ನುಂಗುವುದು! ಬೀಜಜೀವ ಅಂಕುರಜೀವ ಉತ್ಪಾದಿಸುವುದು, ಅಂಕುರ ಬೀಜವನುದುರಿಸಿ ತಾನ್ ಬೆಳೆಯುವುದು! ಅಪ್ಪ ಅಮ್ಮ ಮಗು ಹಡೆಯುವರು, ಮಗು ಬೆಳೆದು ಮಗು ಹುಟ್ಟಿಸಿ ಅದು ಅಪ್ಪ ಅಮ್ಮ ಎನಿಸುವುದು! ಹೊಸ ಹೊಸ ಜೀವ ಮುನ್ನೆಲೆಗೆ, ಹಳೆ ಹಳೆ ಜೀವ ಹಿನ್ನೆಲೆಗೆ! ಹೊಸತಿಗಾಗಿ ಹಳೆಯದರ ತೆರವು! ಬಾಳೆ ಫಲ ನೀಡುತಲೆ ಮರಿ ನೀಡಿ ಮರೆಯಾಗುವುದು! ನಿವೃತ್ತಿ ನಿಂತರೆ ನೇಮಕ ಕಷ್ಟ, ನಿರ್ಗಮನ ಇಲ್ಲದಿರೆ ಹೊಸ ಬದುಕು ಕಷ್ಟ! ಜೀವದಿಂದ ಜೀವ, ಜೀವದಿಂದ ಮರಣ! ಒಂದು ಒಂದನು ತಿಂದು ಬದುಕುವ ವಿಶ್ವವಿದುವೇ ಚಕ್ರವ್ಯೂಹ! ಜೀವದಾಟವ ತಿಳಿಯೋಣ , ಆಟವ ಗೆದ್ದು, ಆಟವ ಸೋತು,ಖೋ ಖೋ ಆಟವ ಮುಗಿಸೋಣ!!