ಕಳ್ಳನ ನಂಬಿದರೂ ಕುಳ್ಳನ ನಂಬಬಾರದು

Share

 

ಶ್ರೀ ಆರೂಢ ಭಾರತೀ ಸ್ವಾಮೀಜಿ,ಹಾರೊಹಳ್ಳಿ

ಸಿದ್ಧಸೂಕ್ತಿ :
ಕಳ್ಳನ ನಂಬಿದರೂ ಕುಳ್ಳನ ನಂಬಬಾರದು.

ಕಳ್ಳನ ಮಾತು ಬಹುತೇಕ ಸುಳ್ಳು. ನಿಜದಂತೆ ನಟಿಸಿ ಕದಿಯುವನು, ವಂಚಿಸುವನು. ಆದರೂ ಕಳ್ಳ ಎಂದು ತಿಳಿದಿದ್ದರೆ ನಂಬಬಹುದು. ಕಳ್ಳನ ಕೈಗೇ ಬೀಗ ಇತ್ತರೆ? ಕಳವು ಕಷ್ಟ! ಕುಳ್ಳ ಗಾತ್ರದಲಿ ಕಡಿಮೆ. ಮಹತ್ತ್ವ ಅಳೆಯಲಾಗದು! ಬುದ್ಧಿ ಮಿಕ್ಕವರಿಗಿಂತ ಹಿರಿದು! ನಡೆ ಸಾಧನೆ ಊಹಿಸಲಾಗದು! ಬಹುತೇಕ ಕುಳ್ಳರು ವಿವಾದ ತಪ್ಪಿಗೆ ಸಿಲುಕರು. ಮೂಲೆಗುಂಪಾಗರು. ಸದಾ ಚಟುವಟಿಕೆ! ಬಲು ಜೋರು! ಲಾಲ್ ಬಹದ್ದೂರ್ ಶಾಸ್ತ್ರೀ ಉತ್ತಮ ನಿದರ್ಶನ! ಹುಲ್ಲಿನಂತೆ ಚುಟುಕಾಣಿಯಾಗಿರು, ಹಸಿರಾಗಿರುವುದು ಮರ ಒಣಗಿದರೂ ಎಂಬುದು ದಿಟ. ಕುಳ್ಳನನ್ನು ಇವನೇನು ಮಹಾ? ಎಂದು ಕಡೆಗಣಿಸಿದರೆ, ಎದುರುಹಾಕಿಕೊಂಡರೆ ಎಡವಟ್ಟು! ಇರುವೆ ಆನೆಯ ಸೊಂಡಿಲ ಹೊಕ್ಕರೆ ಏನು ಗತಿ? ಊಹಿಸಿ! ಸೊಳ್ಳೆ ರಾಜನನ್ನೂ ನಿದ್ದೆಗೆಡಿಸುತ್ತೆ! ಕಳ್ಳ ಕುಳ್ಳನಾದರೆ ಇನ್ನೂ ನಂಬಲಾಗದು, ಊಹಿಸಲಾಗದು!
ಎಚ್ಚರಿರೋಣ, ಕುಳ್ಳರ ಸಾಧನೆ ಮೆಚ್ಚೋಣ!!

Girl in a jacket
error: Content is protected !!