ಎಲ್ಲ ಬರಿ ಗೊಣಗಾಟ

Share

 

ಶ್ರೀ ಆರೂಢ ಭಾರತೀ ಸ್ವಾಮೀಜಿ,ಹಾರೊಹಳ್ಳಿ

‌‌‌‌                     ಸಿದ್ಧಸೂಕ್ತಿ :
ಎಲ್ಲ ಬರಿ ಗೊಣಗಾಟ.
ಬಾಳು ದುಸ್ತರ ಕಠಿಣ. ಹೊರಗೆ ಝಗ ಝಗ, ಒಳಗೆ ಚಿಂತೆಯ ತಳಮಳ! ಆನೆಯ ಭಾರ ಆನೆಗೆ. ಇರುವೆಯ ಭಾರ ಇರುವೆಗೆ! ಎಂತಾದರೂ ಚಿಂತೆ ಬಿಡದು. ನಿಶ್ಚಿಂತರಾದವರ ನಾನೊಬ್ಬರನು ಕಾಣೆ. ಜೀವನದುದ್ದಕ್ಕೂ ಅದಿಲ್ಲ, ಇದಿಲ್ಲವೆಂಬ ಗೊಣಗಾಟ! ಅದನ್ನು ಮಾಡಬೇಕು ಆಗುತ್ತಿಲ್ಲ, ಇದನ್ನು ಮಾಡಬೇಕು ಆಗುತ್ತಿಲ್ಲ, ಮಗ ಐಎಎಸ್ ಅಧಿಕಾರಿ ಆಗಬೇಕೆಂಬಾಶೆ, ಮಗನಿಗೆ ಒಲವಿಲ್ಲ! ಮಗಳನ್ನು ಡಾಕ್ಟರ್ ಮಾಡಬೇಕೆಂದಿರುವೆ, ಅವಳಿಗೆ ಇಷ್ಟವಿಲ್ಲ! ಎಂಬ ತಿಣಕಾಟ! ಏನೇನೋ ಮಾಡಲು ಏನೇನೋ ಹುಡುಕಾಟ, ಸಿಗದೇ ತಡಕಾಟ! ನಮಗೆ ನಮ್ಮ ಆತ್ಮವಿಶ್ವಾಸ ದೃಢನಿರ್ಧಾರದ ಊರುಗೋಲಿಲ್ಲ! ಯಾರು ಏನು ಹೇಳುವರೋ ಅದರಂತೆ ತಾಳ ನಮ್ಮದು! ಗಾಳಿ ಬಂದಂತೆ ತೂರಿ ಹೋಗುವ ನೆಲೆ ಇಲ್ಲದ ಕಸ ಕಡ್ಡಿಯ ದುರವಸ್ಥೆ ನಮ್ಮದು! ಸರಿ ತಿಳುವಳಿಕೆ ಇಲ್ಲ, ತಿಳಿದವರ ಬಳಿ ಸುಳಿಯಲ್ಲ. ಸುಳಿದರೆ ಬಣ್ಣ ಬಯಲಾದರೆ? ಅವರೆದುರು ನಾನೇಕೆ ಸಣ್ಣವನೆನಿಸಬೇಕು? ಎಂದು ಭರ್ಜರಿ ವೇಷಭೂಷಗಳಿಂದ ಜ್ಞಾನವಂತರನ್ನೇ ಅಣಕಿಸುವ ಚಾಳಿ ನಮ್ಮದು! ಅರೆಬರೆ ತಿಳುವಳಿಕೆಯ ಮಬ್ಬಿನ ಬದುಕು, ನಿದ್ರೆಯೂ ಅಲ್ಲದ, ಎಚ್ಚರವೂ ಅಲ್ಲದ ಹುಚ್ಚಾವಸ್ಥೆ! ಆದರೂ ನಾನಿಂಥವ ಅಂಥವ ಎಂಬ ಸಲ್ಲದ ಬಡಾಯಿ ಬಲು ಜೋರು!!

Girl in a jacket
error: Content is protected !!