ಊಟಬಲ್ಲವನಿಗೆ ರೋಗವಿಲ್ಲ

Share

ಶ್ರೀ. ಡಾ.ಆರೂಢಭಾರತೀ ಸ್ವಾಮೀಜಿ

ಸಿದ್ಧಸೂಕ್ತಿ :
ಊಟಬಲ್ಲವನಿಗೆ ರೋಗವಿಲ್ಲ.
ಊಟ ಆಹಾರ ಪಾನೀಯ ವ್ಯಸನ ವಿಚಾರ. ಆಹಾರ ಪರಿಣಾಮ ಅನ್ನಮಯ ಶರೀರ, ವ್ಯಸನ ವಿಚಾರ ಪರಿಣಾಮ ಮನೋಬುದ್ಧಿ. ಆಯುರ್ವೇದ ಸಾರುವುದು ಆಹಾರ ಗುಣಧರ್ಮ. ನೀತಿ ವೇದಾಂತ ಸಾರುವವು ವ್ಯಸನ ವಿಚಾರ ಮರ್ಮ! ಹಾಲು ಬದುಕಿಸುವುದು, ವಿಷ ಸಾಯಿಸುವುದು! ಹದವರಿತ ಊಟವಿರೆ ರೋಗವಿಲ್ಲ, ಬಂದರೆ ಆಹಾರ ಪಥ್ಯ!ಮಧುಮೇಹಕ್ಕೆ ಸಕ್ಕರೆ ವರ್ಜ್ಯ, ಹಾಗಲ ಗ್ರಾಹ್ಯ! ಲಂಘನಂ ಪರಮಮೌಷಧಂ=ಉಪವಾಸ ಶ್ರೇಷ್ಠ ಔಷಧ! ಚಿಂತಿ ವ್ಯಸನಕೆ ಮನ ದಿವಾಳಿ, ಸುಜ್ಞಾನ ಸುವಿಚಾರದಿ ಮನಬುದ್ಧಿ ಬಲಿಷ್ಠ! ಸಮತೂಕದ ಸಾವಯವ ಕೃಷಿಯ ಆಹಾರವಿರಲಿ. ಮಾಂಸಕ್ಕಿಂತ ಸಸ್ಯ ಮೇಲು. ತಣ್ಣಗಿರದಿರಲಿ, ಸುಡದಿರಲಿ. ಶುಚಿ ಹಿತ ಮಿತವಿರಲಿ. ಹೊಟ್ಟೆ ಹಸಿದಿರಲಿ, ಅತಿ ಹಸಿಯದಿರಲಿ, ಅತಿ ತುಂಬದಿರಲಿ. ಸಿಗುವುದು, ರುಚಿ ಎಂದು ಮನ ಓಡದಿರಲಿ. ಆಗಾಗ ನೀರಿರಲಿ, ಹಣ್ಣು ತರಕಾರಿ ಹೆಚ್ಚಿರಲಿ. ಊಟದೊಡನೆಯೇ ನಿದ್ರೆ ಇರದಿರಲಿ.ಆಹಾರ ಎಲ್ಲಿ ಎಷ್ಟು ಯಾವುದು ಯಾವಾಗ ಹೇಗೆ ತಿಳಿದಿರಲಿ.ಒಂದ್ಹೊತ್ತುಂಡವ ಯೋಗಿ, ಎರಡ್ಹೊತ್ತುಂಡವ ಭೋಗಿ, ಮೂರ್ಹೊತ್ತುಂಡವ ರೋಗಿ, ನಾಲ್ಕ್ಹೊತ್ತುಂಡವನ್ ಹೊತ್ಕೊಂಡ್ಹೋಗಿ!!
ಊಟ ಅರಿತು ಉಣ್ಣೋಣ, ಹೆಚ್ಚು ಕಾಲ ಬಾಳೋಣ!!

Girl in a jacket
error: Content is protected !!