ಶ್ರೀ .ಡಾ. ಆರೂಢಭಾರತೀ ಸ್ವಾಮೀಜಿ
ಸಿದ್ಧಸೂಕ್ತಿ :
ಅಳಿಯ ಅಲ್ಲ, ಮಗಳ ಗಂಡ
ಶಬ್ದ ಬೇರೆ, ವಸ್ತು ಒಂದು! ವಸ್ತು ಬೇರೆ, ಕ್ರಿಯೆ ಬೇರೆ, ಫಲ ಒಂದು! ಒಂದಾದರೂ, ಹಾಗಲ್ಲ ಹೀಗಲ್ಲ ಅದಲ್ಲ ಇದಲ್ಲ ಎಂದಾಗ ಮಾತಿದು. ನಾವವರಿಗೆ ಮೇಲು, ನಾವು ಕೋಳಿ ಮಾತ್ರ.., ಅವರು ಆಡು.. ತಿನ್ನುವುದು ಒಪ್ಪಿತ! ನಾವ್ ಬಾರ್ಗೆ ಹೋಗೆವು, ಮನೆಯಲ್ಲೇ ಪಾರ್ಟಿ, ಮಾಡುವುದೊಂದೇ! ಹೊಲಸು ತಿಂದರೆ ಹೋಗಲ್ಲ, ತಿಂದರೆ ಸ್ನಾನ ಮಾಡೇ ಹೋಗೋದು, ತಿಂದಿದ್ದೆಲ್ಲಿಗೋಡುವುದು? ಮೂಲ ಬೆಲೆಗೆ ಒಂದು ವಸ್ತು, ದುಪ್ಪಟ್ಟು ಬೆಲೆಗೆ ಒಂದು ಉಚಿತ! ಆ ಪಂಕ್ತಿ ಈ ಪಂಕ್ತಿ ಎತ್ತರದಾಸನ ಭೇದ, ತಿನ್ನೋದ್ ಕೂಡ್ರೋದೊಂದು! ದೀನ ಬಡವ ಸರ್ವಂಟ್ ಸೇವಕ ಶಬ್ದ ಬೇರೆ ಅರ್ಥ ಒಂದು. ಸುಟ್ಟ್ರೂಹುಗಿದ್ರೂ ಹೋಗೋದಲ್ಲಿಗೇ,ಲಿಂಗೈಕ್ಯ ಬ್ರಹ್ಮೈಕ್ಯ ಎಲ್ಲಾ ಒಂದೇ. ಗುಡಿ ಮಸೀದಿ ಚರ್ಚ್ ಮನೆ, ಭಾವ ಬಣ್ಣ ಗಾತ್ರ ಬೇರೆ, ಬಳಸುವ ವಸ್ತು ಎಲ್ಲಾ ಒಂದೇ. ಅಲ್ಲಾ ವಿಷ್ಣು ಶಿವ ಬ್ರಹ್ಮ ಲಕ್ಷ್ಮೀ ಏಸು ನಾಮ ಬೇರೆ, ಎಲ್ಲಾ ದೇವರೂ ಒಂದೇ ಒಂದು! ಒಂದೇ ಆದ್ರೂ ಭಾವ ಸಂಸ್ಕಾರ ಘನತೆ ಇರಲಿ. ಮನೆಯಲ್ಲಿ ಮಗಳು, ಕಛೇರಿಯಲ್ಲಿ ಅಧಿಕಾರಿ! ಗುಪ್ತ ಮರ್ಮ ಹೇಳಬಹುದು, ರೂಢಿ ಶಬ್ದ ಹೆಳಂಗಿಲ್ಲ!!