ಅಡಿಕೆಗೆ ಹೋದ ಮಾನ ಆನೆ ಕೊಟ್ಟರೂ ಬಾರದು

Share

 

 ಶ್ರೀ. ಡಾ.ಆರೂಢಭಾರತೀ ಸ್ವಾಮೀಜಿ                                             ಸಿದ್ಧಸೂಕ್ತಿ :
ಅಡಿಕೆಗೆ ಹೋದ ಮಾನ ಆನೆ ಕೊಟ್ಟರೂ ಬಾರದು.

ತಿನ್ನುವ ಅಡಿಕೆ ಸಣ್ಣದು, ಬೆಲೆ ಕಡಿಮೆ. ಅದಕ್ಕಾಗಿ ಕೈ ಒಡ್ಡುವುದು, ಕದಿಯುವುದೂ ಉಂಟು. ಇದು ವ್ಯಕ್ತಿಯ ಮನಸ್ಸ್ಥಿತಿ ಯೋಗ್ಯತೆಗಳನ್ನಳೆಯುವುದು. ಯೋಗ್ಯಾಯೋಗ್ಯತೆ, ಪಾಪ ಪುಣ್ಯ, ಒಳಿತು ಕೆಡಕು, ಅಪರಾಧ – ನಿರಪರಾಧಗಳು ಬರಿ ಪ್ರಮಾಣದ ಮೇಲೆ ನಿಂತಿಲ್ಲ. ಗುಣಧರ್ಮವನ್ನೂ ಅವಲಂಬಿಸಿವೆ. ಒಂದು ಕದ್ದರೂ ಕಳ್ಳ, ಕೋಟಿ ಕದ್ದರೂ ಕಳ್ಳ! ಶಿಕ್ಷೆ ಅಪರಾಧ ಪ್ರಮಾಣ ಬೇರಿರಬಹುದು. ಸಣ್ಣದೆಂದು ನಿರ್ಲಕ್ಷಿಸುವಂತಿಲ್ಲ.ಬಿಳಿ ಬಟ್ಟೆಯ ಮೇಲಿನ ಸಣ್ಣ ಕಪ್ಪು ಚುಕ್ಕೆ ಎದ್ದು ಕಾಣುವುದು! ಸಣ್ಣ ಬೆಂಕಿಯ ಕಿಡಿ ಬಹುದೊಡ್ಡ ಬಣವೆಯನ್ನೇ ಭಸ್ಮಗೊಳಿಸುವುದು!ಅತಿ ಸಣ್ಣ ವಿಷಬಿಂದು ಜೀವ ಹೀರುವುದು! ಕದ್ದ ಅಡಿಕೆಯ ಬದಲಾಗಿ ಆನೆ ಆನೆಯಷ್ಟು ಹಿಂದಿರುಗಿಸಿದರೂ ಕಳ್ಳನೆಂಬ ಅಪವಾದ ತಪ್ಪದು. ಅಪರಾಧ ಮಾಡಿ ದಂಡತೆತ್ತು ಮಾನಮರುಸ್ಥಾಪನೆಯ ಹರಸಾಹಸದ ಬದಲು ಅಪರಾಧವೆಸಗದಿರುವುದು ಮೇಲು. ಕೆಸರಲಿ ಕೈ ಇಟ್ಟು ತೊಳೆಯುವ ಬದಲು ಕೆಸರಲಿ ಕೈ ಇಡದಿರುವುದು, ಕಾಯಿಲೆಯ ನಂತರದ ಕ್ರಮಕ್ಕಿಂತ ಕಾಯಿಲೆ ಬರದಂತೆ ಮುನ್ನೆಚ್ಚರಿಕೆ ವಹಿಸುವುದು ಉತ್ತಮ. ಯೋಚಿಸಿ ಹೆಜ್ಜೆಯ ಹಾಕೋಣ, ಹೆಮ್ಮೆಯ ಗೌರವ ಉಳಿಸೋಣ!!

Girl in a jacket
error: Content is protected !!