ಮಾತು ಬೆಳ್ಳಿ, ಮೌನ ಬಂಗಾರ

Share

 

ಶ್ರೀ ಡಾ.ಆರೂಢಭಾರತೀ ಸ್ವಾಮೀಜಿ

‌‌   ಸಿದ್ಧಸೂಕ್ತಿ :
‌ಮಾತು ಬೆಳ್ಳಿ, ಮೌನ ಬಂಗಾರ.
ಮಾತು ಅಭಿಪ್ರಾಯಸಾಧನ. ನಾಮಪದ ಕ್ರಿಯಾಪದ ಒಳಗೊಂಡ ಪೂರ್ಣಾರ್ಥ ವಾಕ್ಯ. ಅಕ್ಷರ ಶಬ್ದ ಪದ ವಾಕ್ಯದ ಉಚ್ಚಾರ ತಪ್ಪಿರದ ಸ್ಫುಟವಿರಲಿ, ಭಾಷೆ ಕೊಲೆಯಾಗದಿರಲಿ. ಭಾಷೆಯ ಆಳ ವಿಸ್ತಾರ ಅರಿತರೆ ಚೆನ್ನ! ಕೇಳುಗರಿಗೆ ಅರ್ಥವಾಗದ ಮಾತು ಬೇಡ. ಮಗು ಮೊದಲು ಮಾತನಾಡಿದರೆ ಚಪ್ಪಾಳೆ, ಹಿತ ಮಿತ ಮೀರಿ ಆಡಿದರೆ ಸಾಕು ನಿಲ್ಲಿಸುವ ಪೆಟ್ಟು! ಅಗತ್ಯ ಹಿತ ಮಿತದ ಮಾತು ಅಮೃತ, ಅನಗತ್ಯ ಅಹಿತ ಮನಬಂದಂತೆ ಆಡುವ ಮಾತು ವಿಷ! ಆಪ್ತವಾಕ್ಯಂ ಪ್ರಮಾಣಂ=ಇದ್ದಕ್ಕಿದ್ದಂತೆ ಹೇಳುವ ನಂಬಿಗಸ್ಥನ ಮಾತು ಪ್ರಮಾಣ. ವಿಜ್ಞಾನಿ ವಿದ್ವಾಂಸ ಸಂತ ಮಹಾತ್ಮರ ಮಾತನ್ನು ತದ್ವಿರುದ್ಧ ಜನರ ಮಾತಿಗೆ ಹೋಲಿಸಿ! ಹಿಂದೆ ಕೊಟ್ಟ ಮಾತಿಗೆ ಸೂರ್ಯ ಚಂದ್ರ ಗಿಡಗಳು ಸಾಕ್ಷಿ, ಇಂದು ನೋಂದಣಿ ಪತ್ರಕ್ಕೂ ಇಲ್ಲ ಬದ್ಧತೆ! ಆಡುವ ಮಾತು ನಾಲ್ಕನೆಯದು=ವೈಖರೀ,ಹೊರಮಾತು ಬೆಳ್ಳಿ. ಉಳಿದವು ಪರಾ ಪಶ್ಯಂತೀ ಮಧ್ಯಮಾ. ಪರಾ, ಒಳಮಾತು ಮೌನ ಬಂಗಾರ! ಹೊರ ಮಾತಿಗೆ ಒಳ ಮಾತು ಮೂಲ! ಮೌನದಿಂದ ಅಂತರಂಗ ಬಲಿಷ್ಠ. ಮಾತು ಸಾಧಿಸದ್ದನ್ನು ಮೌನ ಸಾಧಿಪುದು! ಮಾತು ಕಡಿಮೆ, ದುಡಿಮೆ ಹೆಚ್ಚು! ರಷ್ಯಾದ ಯುವತಿ, ಭಾರತದ ಯುವಕ ಮೂಕರಿಬ್ಬರೂ ಪ್ರೀತಿಸಿ ಕೈ ಹಿಡಿದರು! ಮಾತಿಲ್ಲದೆಯೂ ಪ್ರಾಣಿ ಪಕ್ಷಿ ಅರಿತು ನಡೆದಿವೆ! ಮಾತಾಡಬೇಕಾದಾಗಿನ ಮೌನ ದುರಂತ!
ಹಿತ ಮಿತ ನುಡಿಯೋಣ, ಮೌನದಿ ದುಡಿದು ಬಾಳೋಣ!!

Girl in a jacket
error: Content is protected !!