ಆಚಾರ್ಯಾತ್ ಪಾದಮಾದತ್ತೇ

Share

 

          ಶ್ರೀ ಆರೂಢ ಭಾರತೀ ಸ್ವಾಮೀಜಿ,ಹಾರೊಹಳ್ಳಿ

ಸಿದ್ಧಸೂಕ್ತಿ:
            ಆಚಾರ್ಯಾತ್ ಪಾದಮಾದತ್ತೇ
ಗುರುವಿನಿಂದ ಕಾಲುಭಾಗವನ್ನು ಗ್ರಹಿಸುತ್ತಾನೆ |ಳೆ. ಗುರುಗಳ ಪಾಠಪ್ರವಚನ ವೇಳೆಯಲ್ಲಿ ಶಿಷ್ಯ ಕಾಲುಭಾಗ ತಿಳುವಳಿಕೆ ಹೊಂದುತ್ತಾನೆ. ಬಳಿಕ ಸಹಪಾಠಿಗಳ ಜೊತೆ ಚರ್ಚಿಸುತ್ತಾ ಅಭ್ಯಾಸ ಮಾಡುವುದರಿಂದ ಮತ್ತೆ ಕಾಲುಭಾಗ ಹೆಚ್ಚಿನ ಜ್ಞಾನ ಹೊಳೆಯುತ್ತದೆ. ಬಳಿಕ ಈ ವಿಷಯವನ್ನು ಪ್ರಯೋಗಕ್ಕಿಳಿಸಿದಾಗ, ನಾವೇ ಭೋದಿಸಿದಾಗ ಮತ್ತೆ ಕಾಲುಭಾಗದಷ್ಟು ಜ್ಞಾನ ಹೊಸತು ಹೊಳೆಯುತ್ತದೆ! ಕಾಲ ಕಳೆದಂತೆ ಆ ವಿಷಯದ ಹೊಸ ತಿಳುವಳಿಕೆ ಚಿಗುರುತ್ತಲೇ ಸಾಗುತ್ತದೆ! “ಪೂರ್ಣ ತಿಳಿದೆ” ಎನ್ನುವಂತಿಲ್ಲ! ಜ್ಞಾನಕ್ಕೆ ಮಿತಿಕೊನೆಯಿಲ್ಲ! ಬಗೆದಂತೆ ಭುಗಿಲೇಳುವ ಉತ್ಸಾಹದ ಚಿಲುಮೆಯದು! ಅನಂತ ಸಾಗರ! ಆಕಾಶದೆತ್ತರ! ಅದಕ್ಕಿದೋ ಕರಮಸ್ತಕದ ನಮನ!!
*ಆಚಾರ್ಯಾತ್ ಪಾದಮಾದತ್ತೇ ಪಾದಂ ಸಬ್ರಹ್ಮಚಾರಿಭಿಃ|*
*ವ್ಯವಹಾರಾತ್ ಪಾದಮಾದತ್ತೇ ಪಾದಂ ಕಾಲೇನ ವಿಂದತಿ||*

Girl in a jacket
error: Content is protected !!