Browsing: ಸುದ್ದಿ

ಸುದ್ದಿ

ಲಂಚ ಪಡೆಯುವ ವೇಳೆ ವಾಣಿಜ್ಯ ತೆರಿಗೆ ಪರಿವೀಕ್ಷಕ ನಿಜಾನಂದಮೂರ್ತಿ ಲೋಕಾಯುಕ್ತ ದಾಳಿ

ಬೆಂಗಳೂರು ಏ.24 -ಪಾನ್ ಮಸಾಲ ಅಕ್ರಮ ಸಾಗಣಿಗೆ ಅನುಕೂಲ ಮಾಡಿಕೊಡಲು 20 ಲಕ್ಷ ಲಂಚ ಪಡೆಯುತ್ತಿದ್ದ ಸಂದರ್ಭದಲ್ಲಿ ವಾಣಿಜ್ಯ ತೆರಿಗೆ ಪರಿವೀಕ್ಷಕ ನಿಜಾನಂದಮೂರ್ತಿ ಎಂ.ಆರ್.ಅವರನ್ನು ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ. ಇಂದು ಸಂಜೆ ನಾಗರಭಾವಿ ನಮ್ಮೀರ ತಿಂಡಿ ಹೊಟೇಲ್ ಹತ್ತಿರ ಆರೋಪಿ ವಾಣಿಜ್ಯ ತೆರಿಗೆ ಪರಿವೀಕ್ಷಕ ನಿಜಾನಂದಮೂರ್ತಿ ಎಂ.ಆರ್. ಅವರು ಖಾಸಗಿ ವ್ಯಕ್ತಿಯಾದ ಮನೋಜ್ ಎಂ ಎಂಬುವವರ ಕಡೆಯಿಂದ 20 ಲಕ್ಷ ರೂ. ಲಂಚದ ಹಣವನ್ನು ಪಡೆದುಕೊಳ್ಳುತ್ತಿರುವಾಗ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಲೋಕಾಯುಕ್ತ ಪೊಲೀಸರು ದಾಳಿ…

ಕರ್ನಾಟಕ ನಿವೃತ್ತ ಡಿಜಿಪಿ ಓಂ  ಪ್ರಕಾಶ್ ಹತ್ಯೆ

ಬೆಂಗಳೂರು,ಏ.೨೦-ಆಸ್ತಿಯ ವಿಚಾರಕ್ಕೆ ಸಂಬಂಧಿಸಿದಂತೆ ಕರ್ನಾಟಕ ನಿವೃತ್ತ ಡಿಜಿಪಿ ಓಂ ಪ್ರಕಾಶ್ ಅವರನ್ನು ಅವರ ಪತ್ನಿಯೇ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ. ಬೆಂಗಳೂರಿನಲ್ಲಿರುವ ಎಚ್ ಎಸ್ ಆರ್ ಲೇಔಟ್‌ನಲ್ಲಿರುವ ಮನೆಯಲ್ಲಿ ಈ ಘಟನೆ ನಡೆದಿದೆ. ಕರ್ನಾಟಕದ ಕೇಡರ್ ೧೯೮೧ರ ಬ್ಯಾಚ್ ಐಪಿಎಸ್ ಅಧಿಕಾರಿ ಆಗಿದ್ದ ಓಂ ಪ್ರಕಾಶ್ ಅವರು ೨೦೧೫ರಲ್ಲಿ ರಾಜ್ಯದ ಡಿಜಿ, ಐಜಿಪಿ ಆಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದರು. ಇವರು ಬೆಂಗಳೂರಿನ ಹೆಚ್‌ಎಸ್‌ಆರ್ ಲೇಔಟ್‌ನಲ್ಲಿ ವಾಸವಾಗಿದ್ದರು. ಇನ್ನು ಭಾನುವಾರ ಮಧ್ಯಾಹ್ನದ ವೇಳೆ ಓಂ ಪ್ರಕಾಶ್ ಅವರು…

ಮಾಜಿ ಡಾನ್ ಮುತ್ತಪ್ಪ ರೈ ಪುತ್ರ ರಿಕ್ಕರೈ ಮೇಲೆ ಗುಂಡಿನ ದಾಳಿ

ಬೆಂಗಳೂರು,ಏ,೧೯-ಬೆಂಗಳೂರಿನಲ್ಲಿ ಇನ್ನೂ ನಟೋರಿಯಸ್‌ಗಳ ನಡುವಿನ ಜಿದ್ದು ನಿಂತಂತೆ ಕಾಣುತ್ತಿಲ್ಲ, ಮಾಜಿ ಅಂಡರ್‌ವರ್ಲ್ಡ್ ಡಾನ್ ಮುತ್ತಪ್ಪ ರೈ ಕಿರಿಯ ಪುತ್ರ ರಿಕ್ಕ ರೈ ಮೇಲೆ ದುಷ್ಕರ್ಮಿಗಳು ಶೂಟೌಟ್ ನಡೆಯುವ ಮೂಲಕ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ ಇಂದು ಬೆಳಗಿನಜಾವ ೧-೩೦ರ ಸುಮಾರಿನಲ್ಲಿ ರಾಮನಗರ ಜಿಲ್ಲೆ ಬಿಡದಿಯ ಸಮೀಪ ಮುತ್ತಪ್ಪ ರೈ ನಿವಾಸದ ಮುಂಭಾಗದ ಕಾಂಪೌಂಡ್ ಬಳಿ ಈ ದಾಳಿ ನಡದಿದೆ. ಮುತ್ತಪ್ಪೆರೈ ಪುತ್ರ ರಿಕ್ಕಿ ರೈ ಕಾರಿನಲ್ಲಿ ಬರುವ ಸಂದರ್ಭದಲ್ಲಿ ದುಷ್ಕರ್ಮಿಗಳ ಗುಂಪೊಂದು ಆತನ ಮೇಲೆ ಮೂರು ಸುತ್ತಿನ ಗುಂಡು…

ಕಾಂಗ್ರೆಸ್ ನಾಯಕರ ಕಿರುಕುಳಕ್ಕೆ ಬೇಸತ್ತು ಬಿಜೆಪಿ ಕಾರ್ಯಕರ್ತ ಆತ್ಮಹತ್ಯೆ

ಕಾಂಗ್ರೆಸ್ ನಾಯಕರ ಕಿರುಕುಳಕ್ಕೆ ಬೇಸತ್ತು ಬಿಜೆಪಿ ಕಾರ್ಯಕರ್ತ ಆತ್ಮಹತ್ಯೆ by-ಕೆಂಧೂಳಿ ಬೆಂಗಳೂರು, ಏ,04-ಕಾಂಗ್ರೆಸ್ ನಾಯಕರ ಕಿರುಕುಳಕ್ಕೆ ಬೇಸತ್ತು ಮಡಿಕೇರಿ ಬಿಜೆಪಿ ಕಾರ್ಯಕರ್ತ ತಮ್ಮ ಕಚೇರಿಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡು ಘಟನೆ ಬೆಂಗಳೂರಿನ ನಾಗಾವಾರದಲ್ಲಿ ನಡೆದಿದೆ. ವಿನಯ್ ಸೋಮಯ್ಯ (35) ಆತ್ಮಹತ್ಯೆ ಮಾಡಿಕೊಂಡ ಕಾರ್ಯಕರ್ತ. ತನ್ನ ವಿರುದ್ಧ ಎಫ್‌ಐಆರ್ ದಾಖಲಾಗಿದ್ದಕ್ಕೆ ಮನನೊಂದು ನಾಗವಾರದ ಕಚೇರಿಯಲ್ಲಿಯೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾವಿಗೂ ಮುನ್ನ ಸಾಮಾಜಿಕ ಜಾಲತಾಣಗಳಲ್ಲಿ ಡೆತ್ ನೋಟ್ ಪೋಸ್ಟ್ ಮಾಡಿದ್ದಾರೆ. ರಾಜಕೀಯ ಪ್ರೇರಿತ ಎಫ್‌ಐಆರ್‌ನಿಂದ ಮನನೊಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ…

ಗುಂಡು ಹಾರಿಸಿ ಕುಂಟುಂಬದ ಮೂವರ ಕೊಲೆ-ತಾನೂ ಆತ್ಮಹತ್ಯೆ

ಗುಂಡು ಹಾರಿಸಿ ಕುಂಟುಂಬದ ಮೂವರ ಕೊಲೆ-ತಾನೂ ಆತ್ಮಹತ್ಯೆ by-ಕೆಂಧೂಳಿ ಬಾಳೆಹೊನ್ನೂರು,ಏ,೦೨- ವ್ಯಕ್ತಿಯೊಬ್ಬ ತಮ್ಮ ಕುಟುಂಬದ ನಾಲ್ವರ ಮೇಲೆ ಗುಂಡು ಹಾರಿಸಿದ ಪರಿಣಾಮ ಮೂವರು ಸಾವನ್ನಪ್ಪಿದ್ದು ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡ ಘಟನೆ ಇಲ್ಲಿನ ಖಾಂಡ್ಯ ಹೋಬಳಿ ಮಾಗಲು ಗ್ರಾಮದಲ್ಲಿ ನಡೆದಿದೆ. ಕಡಬಗೆರೆಯ ಶಾಲೆಯೊಂದರಲ್ಲಿ ವಾಹನ ಚಾಲಕನಾಗಿದ್ದ ರತ್ನಾಕರ ಗುಂಡು ಹಾರಿಸಿದ್ದಾನೆ ಎನ್ನಲಾಗಿದೆ. ಅತ್ತೆ ಜ್ಯೋತಿ(೫೦), ಮಗಳು ಮೌಲ್ಯ(೬) ಮತ್ತೆ ನಾದಿನಿ ಸಿಂಧು(೨೪) ಗುಂಡು ತಗುಲಿ ಮೃತಪಟ್ಟಿದ್ದಾರೆ. ನಾದಿನಿಯ ಗಂಡನ ಕಾಲಿಗೆ ಗುಂಡು ತಗಲಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.…

ಇತಿಹಾಸದಲ್ಲೇ ದೊಡ್ಡ ಡ್ರಗ್ಸ್ ಜಾಲ ಬೇದಿಸಿದ ಸಿಸಿಬಿ ಪೊಲೀಸರು

ಇತಿಹಾಸದಲ್ಲೇ ದೊಡ್ಡ ಡ್ರಗ್ಸ್ ಜಾಲ ಬೇದಿಸಿದ ಸಿಸಿಬಿ ಪೊಲೀಸರು   by-ಕೆಂಧೂಳಿ ಮಂಗಳೂರು,ಮಾ.೧೬-ರಾಜ್ಯದಲ್ಲಿ ದೊಡ್ಡ ಪಿಡುಗಾಗಿದ್ದ ಡ್ರಗ್ಸ್ ಜಾಲ ಮಟ್ಟಹಾಕುವಲ್ಲಿ ಪೊಲೀಸರು ಶತಪ್ರಯತ್ನ ಮಾಡಿದ್ದಾರೆ ಈ ನಿಟ್ಟಿನಲ್ಲಿ ಇತಿಹಾಸದಲ್ಲೆ ಅತಿ ದೊಡ್ಡ ಡ್ರಗ್ಸ್ ಜಾಲವನ್ನು ಬೇದಿಸಿದರುವ ಸಿಸಿಬಿ ಪೊಲೀಸರು ದಕ್ಷಿಣ ಆಫ್ರಿಕಾ ಮೂಲದ ಇಬ್ಬರು ಮಹಿಳೆಯರನ್ನು ಬಂಧಿಸಿ ಅವರಿಂದ ೭೪ ಕೋಟಿ ರೂ ಮೌಲ್ಯದ ೩೭.೫ ಕೆಜಿ ತೂಕದ ಎಂಡಿಎಂಎ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮಂಗಳೂರು ನರ ಪೊಲೀಸ್ ಆಯುಕ್ತ ಅನುಪಮ್…

ಕುಡಿದು ಹೊಡೆದಾಡಿಕೊಂಡು ಮೂವರು ಬಿಹಾರಿ ಕಾರ್ಮಿಕರ ಕೊಲೆ

ಕುಡಿದು ಹೊಡೆದಾಡಿಕೊಂಡು ಮೂವರು ಬಿಹಾರಿ ಕಾರ್ಮಿಕರ ಕೊಲೆ by-ಕೆಂಧೂಳಿ ಆನೇಕಲ್,ಮಾ,೧೬-ಕುಡಿದ ಬಿಹಾರಿ ಕಾರ್ಮಿಕರು ಒಬ್ಬರಿಗೊಬ್ಬರು ಹೊಡೆದಾಡಿಕೊಂಡ ಪರಿಣಾಮ ಮೂವರು ಸಾವನ್ನಪ್ಪಿದ ಘಟನೆ ಸರ್ಜಾಪುರ ಬಾಗಲೂರು ಮುಖ್ಯರಸ್ತೆಯ ತಿಂಡ್ಲು ಅಪಾರ್ಟ್‌ಮೆಂಟ್‌ವೊಂದರಲ್ಲಿ ನಡೆದಿದೆ. ಬಿಹಾರ ಮೂಲದ ರಾಧೆಶ್ಯಾಮ್, ಕನ್ಸರ್ ಸೇರಿ ಮೂವರು ಕೊಲೆಯಾಗಿದ್ದಾರೆ. ಇನ್ನು ಮೃತ ರಾಧೆಶ್ಯಾಮ್ ತಮ್ಮ ಬಿರಾದಾರ್ ತಪ್ಪಿಸಿಕೊಂಡು ಪ್ರಾಣ ಉಳಿಸಿಕೊಂಡಿದ್ದಾನೆ. ಸೋನು ಮತ್ತು ಅವನ ಸ್ನೇಹಿತ ಕೊಲೆ ಆರೋಪಿಗಳಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇವರೆಲ್ಲರೂ ಹೊಳಿಯ ಸಂಭ್ರಮದಲ್ಲಿ ಬಣ್ಣ ಎರಚಾಡುತ್ತಿದ್ದರು ಜೊತೆಗೆ ಕುಡಿದಿದ್ದರಿಂದ ಒಬ್ಬರಿಗೊಬ್ಬರು ಗಲಾಟೆ…

ಕಾರು ಟಿಪ್ಪರ್ ನಡುವೆ ಡಿಕ್ಕಿ -ಐವರು ಸಾವು

ಕಾರು ಟಿಪ್ಪರ್ ನಡುವೆ ಡಿಕ್ಕಿ -ಐವರು ಸಾವು by-ಕೆಂಧೂಳಿ ಚಾಮರಾಜನಗರ, ಮಾ,01-ಮಲೇಮಾಹಾದೇಶ್ಚರ ಬೆಟ್ಟಕ್ಕೆ ತೆರಳುತ್ತಿದ್ದ ಕಾರಿಗೆ ಟಿಪ್ಪರ್ ಡಿಕ್ಕಿಯಾಗಿ ಐವರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಕೊಳ್ಳೇಗಾಲ ತಾಲೂಕಿನಲ್ಲಿ ಇಂದು ಬೆಳಗ್ಗೆ ಸಂಭವಿಸಿದೆ. ಅಪಘಾತದ ತೀವ್ರತೆಗೆ ಕಾರಿನಲ್ಲಿದ್ದ ಐವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಪ್ರಾಥಮಿಕ ಮಾಹಿತಿಯ ಪ್ರಕಾರ ಕಾರಿನಲ್ಲಿದ್ದ ಮೂವರು ಪುರುಷರು ಇಬ್ಬರು ಮಹಿಳೆಯರು ಮೃತಪಟ್ಟಿದ್ದು, ಅವರು ಮಂಡ್ಯ ಮೂಲದವರು ಎಂದು ಹೇಳಲಾಗುತ್ತಿದೆ. ಮಲೆಮಹದೇಶ್ವರ ಬೆಟ್ಟದಲ್ಲಿ ನಡೆಯುತ್ತಿರುವ ಶಿವರಾತ್ರಿ ಜಾತ್ರಾ ಮಹೋತ್ಸವದ ಮಹಾ ರಥೋತ್ಸವದಲ್ಲಿ ಪಾಲ್ಗೊಳ್ಳಲು ಇವರು ಕಾರಿನಲ್ಲಿ ತೆರಳುತ್ತಿದ್ದರು…

ಬಿ ವೈ ವಿಜಯೇಂದ್ರ ಕಾರಿಗೆ ಲಾರಿ ಡಿಕ್ಕಿ

ಬಿವೈ ವಿಜಯೇಂದ್ರ ಕಾರಿಗೆ ಲಾರಿ ಢಿಕ್ಕಿ by-ಕೆಂಧೂಳಿ ಚಿಕ್ಕಮಗಳೂರು,ಮಾ,೦1-ರಭಸದಿಂದ ಬಂದ ಲಾರಿಯೊಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಕಾರು ನಜ್ಜು ಗುಜ್ಜಾದ ಘಟನೆ ತಾಲ್ಲೂಕಿನ ಲಕ್ಯಾ ಕ್ರಾಸ್ ಬಳಿ ಜರುಗಿದೆ. ಶುಕ್ರವಾರ ಬಸವ ತತ್ವ ಕಾರ್ಯಕ್ರಮ ಮುಗಿಸಿ ವಾಪಸ್ ಚಿಕ್ಕಮಗಳೂರು ನಗರದಿಂದ ಶಿವಮೊಗ್ಗಕ್ಕೆ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ ಎನ್ನಲಾಗಿದೆ. ಲಾರಿ ಢಿಕ್ಕಿ ಹೊಡೆದ ರಭಸಕ್ಕೆ ಕಾರಿನ ಹಿಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ. ಇನ್ನು ಅಪಘಾತದಲ್ಲಿ ಅದೃಷ್ಟವಶಾತ್​ವಿಜಯೇಂದ್ರ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ವಿಜಯೇಂದ್ರ…

ರೇಣುಕಾ ಸ್ವಾಮಿ ಕೊಲೆ ಕೇಸು ಮಾರ್ಚ್ 8ಕ್ಕೆ ಮುಂದೂಡಿಕೆ

ರೇಣುಕಾ ಸ್ವಾಮಿ ಕೊಲೆ  ಕೇಸು ಮಾರ್ಚ್ 8ಕ್ಕೆ ಮುಂದೂಡಿಕೆ by-ಕೆಂಧೂಳಿ ಬೆಂಗಳೂರು, ಫೆ,25- ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸಿಗೆ ಸಂಬಂಧಿಸಿದಂತೆ ವಿಚಾರಣೆಯನ್ನು ನ್ಯಾಯಾಲಯ ಮಾರ್ಚ್ 8 ಕ್ಕೆ ಮುಂದೂಡಿದೆ. ಪ್ರಕರಣ ಸಂಬಂಧ ಆರೋಪಿಗಳಾದ ನಟ ದರ್ಶನ್ ಹಾಗೂ ಪವಿತ್ರಾಗೌಡ ಇಂದು ಬೆಂಗಳೂರಿನ 57ನೇ ಸಿಸಿಹೆಚ್ ನ್ಯಾಯಾಲಯಕ್ಕೆ ಹಾಜರಾಗಿದ್ದರು. ಈ ವೇಳೆ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರು ಏಪ್ರಿಲ್ 8ಕ್ಕೆ ವಿಚಾರಣೆ ಮುಂದೂಡಿ ಆದೇಶಿಸಿದರು. ನಟ ದರ್ಶನ್ ಹಾಗೂ ಪವಿತ್ರಗೌಡಗೆ ಹೈಕೋರ್ಟ್ ಷರತ್ತುಬದ್ಧ ಜಾಮೀನು ನೀಡಿದೆ. ಜಾಮೀನು ಪ್ರಶ್ನಿಸಿ…

ಮಾರಕಾಸ್ತ್ರಗಳಿಂದ ಕೊಚ್ಚಿ ಕಾಂಗ್ರೆಸ್ ಮುಖಂಡನ ಹತ್ಯೆ

ಮಾರಕಾಸ್ತ್ರಗಳಿಂದ ಕೊಚ್ಚಿ ಕಾಂಗ್ರೆಸ್ ಮುಖಂಡನ ಹತ್ಯೆ by-ಕೆಂಧೂಳಿ ಲೈವ್‌ಬ್ಯಾಂಡ್‌ನಿಂದ ಹೊರಬರುತ್ತಿದ್ದ ಕಾಂಗ್ರೆಸ್ ಮುಖಂಡನನ್ನು ಅಡ್ಡಗಟ್ಟಿ ಬೀಕರ ಹತ್ಯೆ ಮಾಡಿರುವ ಘಟನೆ ಬೆಂಗಳೂರಿನ ಅಶೋಕನಗರದ ಗರುಡಮಾಲ್ ಬಳಿ ಶನಿವಾರ ತಡರಾತ್ರಿ ನಡೆದಿದೆ ಶೇಖ್ ಹೈದರ್ ಅಲಿ ಕೊಲೆಯಾದ ಕಾಂಗ್ರೆಸ್ ಮುಖಂಡ. ತಡರಾತ್ರಿ ೧ ಗಂಟೆ ಸುಮಾರಿಗೆ ಘಟನೆ ನಡೆದಿದೆ. ಹೈದರ್ ಅಲಿ ಲೈವ್ ಬ್ಯಾಂಡ್‌ನಿಂದ ರಾತ್ರಿ ಸ್ನೇಹಿತನ ಜೊತೆಗೆ ಬೈಕ್‌ನಲ್ಲಿ ಬರುತ್ತಿದ್ದ ವೇಳೆ ಆರೋಪಿಗಳು ಬೈಕ್‌ನಲ್ಲಿ ಹಿಂಬಾಲಿಸಿಕೊಂಡು ಬಂದು ಅಡ್ಡಗಟ್ಟಿಕೊಲೆ ಮಾಡಿದ್ದಾರೆ. ಘಟನೆಯಲ್ಲಿ ಜೊತೆಯಲ್ಲಿದ್ದ ಸ್ನೇಹಿತನಿಗೆ ಗಾಯವಾಗಿದ್ದು, ಆಸ್ಪತ್ರೆಗೆ…

ಅವಹೇಳನಕಾರಿ ಪೋಸ್ಟ್- ಮೈಸೂರಿನಲ್ಲಿ ಕಲ್ಲು ತೂರಾಟ, ಗಲಭೆ

ಅವಹೇಳನಕಾರಿ ಪೋಸ್ಟ್- ಮೈಸೂರಿನಲ್ಲಿ ಕಲ್ಲು ತೂರಾಟ ಗಲಭೆ   by-ಕೆಂಧೂಳಿ ಮೈಸೂರು, ಫೆ,11-ದೆಹಲಿಯಲ್ಲಿ ಗೆಲುವು ಸಾಧಿಸಿದ ವಿಷಯಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ಹಾಕಿದ ಪೋಸ್ಟ್ ಮೈಸೂರಿನಲ್ಲಿ ಈಗ ಸಮಾಜಿಕ ಸ್ವಾಸ್ಥ್ಯವನ್ನೇ ಕೆಡಸಿದೆ. ಸಾಮಾಜಿಕ ಜಾಲತಾಣದಲ್ಲಿ ಮುಸ್ಲಿಂ ಸಮುದಾಯದ ಬಗ್ಗೆ ಅವಹೇಳನಕಾರಿ ಪೋಸ್ಟ್ ಹರಿಬಿಟ್ಟ ಆರೋಪದಲ್ಲಿ ಸುರೇಶ್‌ ಎಂಬಾತನನ್ನು (32) ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ಬಂಧಿಸಬೇಕು ಎಂದು ಒತ್ತಾಯಿಸಿ ಸೋಮವಾರ ರಾತ್ರಿ ಇಲ್ಲಿನ ಉದಯಗಿರಿ ಪೊಲೀಸ್‌ ಠಾಣೆ ಮುಂಭಾಗ ಮುಸ್ಲಿಂ ಸಮುದಾಯದ ಪ್ರಮುಖರು ಸಾವಿರಾರು ಸಂಖ್ಯೆಯಲ್ಲಿ ಸೇರಿ ಪ್ರತಿಭಟಿಸಿದ್ದರು.…

ನಕ್ಸಲ್ ತೊಂಬಟ್ಟು ಉಡುಪಿಯಲ್ಲಿ ಶರಣಾಗತಿ

ನಕ್ಸಲ್ ತೊಂಬಟ್ಟು ಉಡುಪಿಯಲ್ಲಿ ಶರಣಾಗತಿ   by-ಕೆಂಧೂಳಿ ಉಡುಪಿ,ಫೆ,೦೩-ಹಸಿರುವನಗಳಲ್ಲಿ ಕೆಂಪು ಹೆಜ್ಜೆಗುರುತುಗಳ ಜಾಡು ಈಗ ಸಂಪೂರ್ಣ ಅಳಸಿದಂತಾಗಿದೆ. ಕರ್ನಾಟಕ ಈಗ ನಕ್ಸಲ್ ಮುಕ್ತ ಎನ್ನುವುದು ಸಾಬೀತಾದಂತಿದೆ. ಹೌದು ಕಣ್ಮರೆಯಾಗಿದ್ದ ನಕ್ಸಲ್ ಲಕ್ಷ್ಮಿ ತೊಂಬಟ್ಟು ಉಡುಪಿ ಜಿಲ್ಲಾಧಿಕಾರಿ ಕೆ.ವಿದ್ಯಾಕುಮಾರಿ ಸಮ್ಮುಖದಲ್ಲಿ ಶರಣಾದರು. ಅಲ್ಲಿಗೆ ಬಹುಶಃ ಕರ್ನಾಟಕದ ಮಲೆನಾಡು ಕರಾವಳಿ ಸುತ್ತಮುತ್ತ ಇದ್ದ ಕೆಂಪು ಜಾಡಿನ ಹೆಜ್ಜೆ ಗುರುತುಗಳು ಈಗ ಕೇವಲ ನೆನಪು ಮಾತ್ರವಷ್ಟೆ. ಉಡುಪಿ ಜಿಲ್ಲೆಯ ತೊಂಬಟ್ಟುವಿನ ಲಕ್ಷ್ಮಿ ತೊಂಬಟ್ಟು ಹಲವಾರು ದಿನಗಳಿಂದ ಕಣ್ಮರೆಯಾಗಿದ್ದರು ಮೂರು ಕೇಸುಗಳು ಅವರ…

ನಕ್ಸಲೇಟ್ ಕೋಟೆ ಹೊಂಡ ರವಿ ಶರಣಾಗತಿ

ನಕ್ಸಲೇಟ್  ಕೋಟೆ ಹೊಂಡ ರವಿ ಶರಣಾಗತಿ by-ಕೆಂಧೂಳಿ ‌ಬೆಂಗಳೂರು,ಫೆ,011-ಕೊನೆಗೂ ಭೂಗತ ನಕ್ಸಲ್ ಕೋಟೆ ಹೊಂಡ ರವಿ ಪೊಲೀಸರಿಗೆ ಶರಣಾಗಿದ್ದಾನೆ. ಚಿಕ್ಕಮಗಳೂರು ಸಮೀಪ ನೆಮ್ಮೂರು ಪಾರೆಸ್ಟ್ ಐಬಿಯಲ್ಲಿ ಶರಣಾಗಿದ್ದಾನೆ ಎಂದಿರುವ ಪೊಲೀರು ಶರಣಾಗಿರುವ ರವಿಯನ್ನು ಚಿಕ್ಕಮಗಳೂರಿಗೆ ಕರೆತಂದುಎಸ್ ಪಿ ಮುಂದೆ ನಾಳೆ ಮಧ್ಯಾಹ್ನ 12 ಗಂಟೆಗೆ ಶರಣಾಗತಿ ಪ್ರಕ್ರಿಯೆ ಮಾಡುವುದಾಗಿ ತಿಳಿಸಿದ್ದಾರೆ. ಕಳೆದ ತಿಂಗಳು ಆರು ಮಂದಿ ನಕ್ಸಲೀಯರು ಶರಣಾಗಿದ್ದರು ,ಆದರೆ ರವೀ ನಾಪತ್ತೆಯಾಗಿದ್ದರು,ಕೊನೆಘಳಿಗೆಯಲ್ಲಿ ಶರಣಾಗತಿ ತಂಡದಿಂದ ನಾಪತ್ತೆಯಾಗಿದ್ದರು.ಅಂದಿನಿಂದ ಪೊಲೀಸರು ಈತನ ಪತ್ತೆಗಾಗಿ ಶೋಧಿಸುತ್ತಿದ್ದರು,ನಿನ್ನೆ ರವೀ ಪೊಲೀಸರಗೆ ಶರಣಾಗಿದ್ದಾನೆ.…

ಕರ್ನಾಟಕದಲ್ಲಿ ನಕ್ಸಲ್ ಇನ್ನೂ ಜೀವಂತವಾಗಿದೆಯೇ?

ಕರ್ನಾಟಕದಲ್ಲಿ ನಕ್ಸಲ್ ಇನ್ನೂ ಜೀವಂತವಾಗಿದೆಯೇ? -ಶರತ್ ನಾಗನೂರು ಚಿಕ್ಕಮಗಳೂರು,ಜ.೨೯- ಕರ್ನಾಟಕದಲ್ಲಿ ನಕ್ಸಲ್ ಚಳವಳಿಗೆ ಮುಕ್ತಿ ದೊರಕಿತು ಎನ್ನುವಾಗಲೇ ಮತ್ತೊಂದು ಶಾಕ್ ನ್ಯೂಸ್ ಇಲ್ಲಿದೆ. ಸರ್ಕಾರ ಇತ್ತೀಚೆಗೆ ನಕ್ಸ್‌ಲ್‌ರನ್ನು ಶರಣಾಗತಿ ಮಾಡಿಸಿಕೊಂಡು ಅವರಿಗೆ ಪರಿಹಾರ ಪ್ಯಾಕೇಜ್ ಕೊಟ್ಟಿತು. ಇದರಿಂದ ಕರ್ನಾಟಕದಲ್ಲಿ ನಕ್ಸಲ್ ಕೊನೆಗೊಂಡಿತು ಎಂದು ಸರ್ಕಾರ ಎದೆ ತಟ್ಟಿಕೊಂಡಿತು. ನಿಜ ಹೇಳಬೇಕೆಂದರೆ ನಕ್ಸಲ್‌ರು ಇನ್ನೂ ಚಿಕ್ಕಮಗಳೂರು ಸುತ್ತಮುತ್ತಲಿನ ಗುಡ್ಡಗಾಡಿನ ಪ್ರದೇಶದಲ್ಲಿ ನುಸುಳಿದ್ದಾರೆ ಎನ್ನುವ ಅಚ್ಚರಿ ಸಂಗತಿಯೊಂದು ಹೊರಬಿದ್ದಿದೆ. ಇತ್ತೀಚೆಗೆ ಆರು ಮಂದಿ ನಕ್ಸಲರನ್ನೇನೋ ಶರಣಾಗತಿ ಮಾಡಿಕೊಂಡುಅವರನ್ನು ಜೈಲಿನಲ್ಲಿಟ್ಟಿದೆ ಅಲ್ಲಿಗೆ…

ಬೀದರ್ ದರೋಡೆ – ಗನ್ ಮ್ಯಾನ್  ಸುತ್ತಾ ಪೊಲೀಸರ ಅನುಮಾನ

ಬೀದರ್ ದರೋಡೆ – ಗನ್ ಮ್ಯಾನ್  ಸುತ್ತಾ ಪೊಲೀಸರ ಅನುಮಾನ ಬೀದರ್,ಜ,16-ಗನ್ ಮ್ಯಾನ್ ಇಲ್ಲದೆ ಎಟಿಎಂ ಗೆ ಹಣ ತುಂಬಲು ಬಂದಿದ್ದ ಎಟಿಎಂಗೆ ಹಣ ಹಾಕಲು ಬಂದಿದ್ದ ಸಿಬ್ಬಂದಿಯ ಚಲನವಲನಗಳೆ ಅನುಮಾನಕ್ಕೆ ಕಾರಣವಾಗಿದೆ. ಯಾವುದೇ ಎಟಿಎಂ ಗೆ ಹಣ ತುಂಬುವಾಗ ಗನ್ ಮ್ಯಾನ್ ಇಲ್ಲದೆ ಹೇಗೆ ಬಂದರು ಎನ್ನುವುದೆ ಪ್ರಶ್ನೆಯಾಗಿದ್ದು ,ಇದೇ ಅನುಮಾನದ ಮೇಲೆ ಪೊಲೀಸರು ತನಿಖೆ ನಡಿಸುತ್ತಿದ್ದಾರೆ. ಬೀದರ್‌ನ ಎಸ್‌ಬಿಐ ಮುಖ್ಯ ಕಚೇರಿ ಮುಂದೆ ಗುರುವಾರ ಬೆಳಿಗ್ಗೆ ನಡೆದ ಈ ಕೃತ್ಯ ಎಲ್ಲರನ್ನೂ ಬೆಚ್ಚಿಬೀಳಿಸಿದೆ ಬೈಕ್‌ನಲ್ಲಿ…

ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ಕಾರು ಅಪಘಾತ;ಅಪಾಯದಿಂದ ಪಾರು

ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ಕಾರು ಅಪಘಾತ; ಅಪಾಯದಿಂದ ಪಾರು Publish by nagaraju.k ಬೆಳಗಾವಿ, ಜ,14-ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್ ಪ್ರಯಾಣಿಸುತ್ತಿದ್ದ ಕಾರು ಇಂದು ಬೆಳಗಿನ ಜಾವ  ಅಪಘಾತವಾಗಿದ್ದು ಅಪಾಯದಿಂದ ಪಾರಾಗಿದ್ದಾರೆ. ಬೆಳಗಾವಿ ಜಿಲ್ಲೆ ಕಿತ್ತೂರು ತಾಲ್ಲೂಕಿನ ಅಂಬರಗಟ್ಟಿ ಬಳಿ ನಡೆದ ಈ ಅಪಘಾತದಲ್ಲಿ ಸಚಿವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಬೆಳಗಾವಿಯಿಂದ ಹೋಗುತ್ತಿದ್ದ ವೇಳೆ ರಸ್ತೆಯಲ್ಲಿ ನಾಯಿ ಅಡ್ಡ ಬಂದ ಹಿನ್ನೆಲೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕಾರು…

ಭಾರತೀಯರ ಪ್ರಾಣ ಹಿಂಡುತ್ತಿರುವ ಲೈಂಗಿಕ ಸುಲಿಗೆಯೆಂಬ ಬ್ಲಾಕ್ ಮೇಲ್ ಬಿಸಿನೆಸ್!

ಭಾರತೀಯರ ಪ್ರಾಣ ಹಿಂಡುತ್ತಿರುವ ಲೈಂಗಿಕ ಸುಲಿಗೆಯೆಂಬ ಬ್ಲಾಕ್ ಮೇಲ್ ಬಿಸಿನೆಸ್! writing-ಪರಶಿವ ಧನಗೂರು ಭಾರತದಲ್ಲಿ ಈಗ ಸದ್ದಿಲ್ಲದೆ ದುಡ್ಡುಮಾಡುತ್ತಿರುವ ಸೆಕ್ಸ್ ಟಾರ್ಶನ್ ಮಾಫಿಯಾ ಹಲವಾರು ಅಮಾಯಕರ ಪ್ರಾಣ ಬಲಿಪಡೆದುಕೊಂಡು ತನಿಖಾ ಸಂಸ್ಥೆಗಳಿಗೆ ತಲೆನೋವಾಗಿ ಪರಿಣಮಿಸಿದೆ! ಲೈಂಗಿಕತೆಯ ಕೆಟ್ಟ ಕುತೂಹಲಕ್ಕೆ ಬಾಯಿ ತೆರೆದಿರುವ ವ್ಯಕ್ತಿಗಳು, ಒಂಟಿ ಬದುಕಿಗೆ ಬೇಸತ್ತು ಲೈಂಗಿಕ ಏಕತಾನತೆ ನೀಗಿಸಿಕೊಳ್ಳಲು ಅಡ್ಡದಾರಿ ಹಿಡಿಯುವ ಯುವಕರು-ಮಧ್ಯವಯಸ್ಕರು ಲೈಂಗಿಕ ಸುಲಿಗೆಯೆಂಬ ಸೆಕ್ಸ್ ಟಾರ್ಶನ್ ಮಾಫಿಯಾಕ್ಕೆ ಬಲಿಯಾಗಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ! ಮೊಬೈಲ್ ಬಳಸುತ್ತಿರುವ, ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವ ಪುರುಷರು, ಮಹಿಳೆಯರು…

ಭಾರತೀಯ ಕ್ರೀಡೆಯಲ್ಲಿ ಅಂಡರ್ ವರ್ಲ್ಡ್ ಅರಾಜಕತೆ!ಕಬಡ್ಡಿ ಪಟು ಬಲಿಯಾಗುದ್ದು ಹೇಗೆ?

ಭಾರತೀಯ ಕ್ರೀಡೆಯಲ್ಲಿ ಅಂಡರ್ ವರ್ಲ್ಡ್ ಅರಾಜಕತೆ!ಕಬಡ್ಡಿ ಪಟು ಬಲಿಯಾಗುದ್ದು ಹೇಗೆ? Writing; ಪರಶಿವ ಧನಗೂರು ಮಾರ್ಚ್ ಹದಿನಾಲ್ಕು ಇಸವಿ ಎರಡು ಸಾವಿರದ ಇಪ್ಪತ್ತೆರಡು ಭಾರತದಲ್ಲಿ ಕಬಡ್ಡಿ ಸತ್ತ ದಿನ! ಅಂತಾರಾಷ್ಟ್ರೀಯ ಖ್ಯಾತಿಯ ಕಬಡ್ಡಿ ಪಟು, ಅಭಿಮಾನಿಗಳಿಂದ ಗ್ಲಾಡಿಯೇಟರ್ ಎಂದೇ ಕರೆಸಿಕೊಳ್ಳುತ್ತಿದ್ದ ಸಂದೀಪ್ ನಂಗಲ್ ದುಷ್ಕರ್ಮಿಗಳ ಗುಂಡಿಗೆ, ಹಾಡುಹಗಲೇ ಆಟದ ಮೈದಾನದಲ್ಲೇ ಬಲಿಯಾಗಿದ್ದಾರೆ! ರಾಷ್ಟ್ರೀಯ ಪಕ್ಷದ ಸ್ಥಾನಮಾನಕ್ಕೆರಿರುವ ಆಮ್ ಆದ್ಮಿ ಪಕ್ಷ ಮೊದಲಬಾರಿಗೆ ಪಂಜಾಬ್ ನಲ್ಲಿ ಅಧಿಕಾರ ವಹಿಸಿಕೊಳ್ಳುತ್ತಿರುವ ಹೊತ್ತಿನಲ್ಲೇ ಪಂಜಾಬ್ ನಲ್ಲಿ ಜಂಗಲ್ ಜಾರಿಯಾದಂತೇ ಕಾಣುತ್ತಿದೆ!…

ಕೆಟ್ಟ ರಾಜಕಾರಣಕ್ಕೆ ಇನ್ನೆಷ್ಟು ಮುಗ್ದರ ಬಲಿ ಬೇಕು?

ಕೆಟ್ಟ ರಾಜಕಾರಣಕ್ಕೆ ಇನ್ನೆಷ್ಟು ಮುಗ್ದರ ಬಲಿ ಬೇಕು? Writing-ಪರಶಿವ  ಈಗ ಸದ್ಯಕ್ಕೆ ಭಾರತದಲ್ಲಿ ಯಾವ ಧರ್ಮಗಳೂ ಅಪಾಯದಲ್ಲಿ ಇಲ್ಲ! ಮನುಷ್ಯತ್ವ ಅಪಾಯದಲ್ಲಿದೆ! ಮನುಷ್ಯರು ಕೊಲೆಯಾಗುತ್ತಿದ್ದಾರೆ! ಧರ್ಮದ ಅಫೀಮು ಕುಡಿದವರ ಕೈಯಲ್ಲಿ ನಡುಬೀದಿಯಲ್ಲಿ ಮನುಷ್ಯತ್ವ ಕೊಲೆಯಾಗುತ್ತಿದೆ! ಅಮಾಯಕರ ಸಮಾದಿಗಳ ಮೇಲೆ ಸರ್ಕಾರ ರೂಪಿಸುವ ಸಂಚು ನಡೆಸುತ್ತಿರುವ ಎಲ್ಲಾ ರಾಜಕೀಯ ಪಕ್ಷಗಳು, ಮುಗ್ಧ ಜನರ ಸಾವಿನಲ್ಲಿ ಲಾಭ ಪಡೆಯಲು ಶವಯಾತ್ರೆಯ ಮೆರವಣಿಗೆಗಳಲ್ಲಿ, ಹಿಂದೂ-ಮುಸ್ಲಿಂ ಹೆಸರಿನಲ್ಲಿ ಧರ್ಮರಾಜಕಾರಣ ಮಾಡುತ್ತಿದ್ದಾರೆ. ಭ್ರಷ್ಟ ರಾಜಕೀಯ ಪಕ್ಷಗಳ ಪುಡಾರಿಗಳ, ನಕಲಿ ದೇಶಪ್ರೇಮಿ ಸಂಘಟನೆಗಳ ಮುಖಂಡರ ಮಾತು…

1 2 3 5
error: Content is protected !!