ಕ್ರೈಮ್
ಅವಹೇಳನಕಾರಿ ಪೋಸ್ಟ್- ಮೈಸೂರಿನಲ್ಲಿ ಕಲ್ಲು ತೂರಾಟ, ಗಲಭೆ
ಅವಹೇಳನಕಾರಿ ಪೋಸ್ಟ್- ಮೈಸೂರಿನಲ್ಲಿ ಕಲ್ಲು ತೂರಾಟ ಗಲಭೆ by-ಕೆಂಧೂಳಿ ಮೈಸೂರು, ಫೆ,11-ದೆಹಲಿಯಲ್ಲಿ ಗೆಲುವು ಸಾಧಿಸಿದ ವಿಷಯಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ಹಾಕಿದ ಪೋಸ್ಟ್ ಮೈಸೂರಿನಲ್ಲಿ ಈಗ ಸಮಾಜಿಕ ಸ್ವಾಸ್ಥ್ಯವನ್ನೇ ಕೆಡಸಿದೆ. ಸಾಮಾಜಿಕ ಜಾಲತಾಣದಲ್ಲಿ ಮುಸ್ಲಿಂ ಸಮುದಾಯದ ಬಗ್ಗೆ ಅವಹೇಳನಕಾರಿ ಪೋಸ್ಟ್ ಹರಿಬಿಟ್ಟ ಆರೋಪದಲ್ಲಿ ಸುರೇಶ್ ಎಂಬಾತನನ್ನು (32) ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ಬಂಧಿಸಬೇಕು ಎಂದು ಒತ್ತಾಯಿಸಿ ಸೋಮವಾರ ರಾತ್ರಿ ಇಲ್ಲಿನ ಉದಯಗಿರಿ ಪೊಲೀಸ್ ಠಾಣೆ ಮುಂಭಾಗ ಮುಸ್ಲಿಂ ಸಮುದಾಯದ ಪ್ರಮುಖರು ಸಾವಿರಾರು ಸಂಖ್ಯೆಯಲ್ಲಿ ಸೇರಿ ಪ್ರತಿಭಟಿಸಿದ್ದರು.…