Browsing: ಸಿನೆಮಾ

ಸಿನೆಮಾ

ಶಬಾನಾ ಅಜ್ಮಿಗೆ ಜೀವಮಾನ ಪ್ರಶಸ್ತಿ 10ಲಕ್ಷ ಚೆಕ್ ನೀಡಿ ಗೌರವ

ಶಬಾನಾ ಅಜ್ಮಿಗೆ ಜೀವಮಾನ ಪ್ರಶಸ್ತಿ 10ಲಕ್ಷ ಚೆಕ್ ನೀಡಿ ಗೌರವ by-ಕೆಂಧೂಳಿ ಬೆಂಗಳೂರು, ಮಾ,10-16ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಅಂಗವಾಗಿ ಕೊಡಮಾಡುವ ಜೀವಮಾನ ಸಾಧನೆ ಪ್ರಶಸ್ತಿಯನ್ನು ಭಾರತೀಯ ಚಿತ್ರರಂಗದ ಮೇರು ನಟಿ, ಬಹುಭಾಷಾ ಕಲಾವಿದೆ ಶ್ರೀಮತಿ ಶಬಾನಾ ಆಜ್ಮಿ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾವೇರಿ ನಿವಾಸದಲ್ಲಿ ನೀಡಿ ಗೌರವಿಸಿದರು. ಪ್ರಶಸ್ತಿ ಮತ್ತು 10 ಲಕ್ಷದ ಚೆಕ್ ನೀಡಲಾಯಿತು. ವಿಶ್ವ ವಿಖ್ಯಾತ ಕವಿ, ಗೀತಕಾರ ಜಾವೇದ್ ಅಖ್ತರ್ ಅವರು ಈ ಸಂದರ್ಭದಲ್ಲಿ ಜೊತೆಗಿದ್ದರು.”ಮಿಲೇಸುರ್ ಮೇರಾ ತುಮಾರಾ” ದೃಶ್ಯಕಾವ್ಯ ನಮಗೆ…

ಅರ್ಜುನ್‌ ಸರ್ಜಾ ನಿರ್ದೇಶನದ’ ಸೀತಾ ಪಯಣ’

ಅರ್ಜುನ್‌ ಸರ್ಜಾ ನಿರ್ದೇಶನದ ‘ಸೀತಾ ಪಯಣ’ by-ಕೆಂಧೂಳಿ ದಕ್ಷಿಣ ಭಾರತದ ಖ್ಯಾತ ನಟ, ನಿರ್ದೇಶಕ ಮತ್ತು ನಿರ್ಮಾಪಕ ಎನಿಸಿಕೊಂಡಿರುವ ಆಕ್ಷನ್‌ ಕಿಂಗ್‌ ಅರ್ಜುನ್‌ ಸರ್ಜಾ, ಇದೀಗ ಮತ್ತೆ ನಿರ್ದೇಶಕನ ಕ್ಯಾಪ್‌ ಧರಿಸುತ್ತಿದ್ದಾರೆ. ಸೀತಾ ಪಯಣ ಸಿನಿಮಾ ಮೂಲಕ ಆಕ್ಷನ್‌ ಕಟ್‌ ಹೇಳುತ್ತಿದ್ದಾರೆ. ಕಥೆ, ಚಿತ್ರಕಥೆ ಬರೆದು, ತಮ್ಮದೇ ಹೋಮ್‌ ಬ್ಯಾನರ್‌ ಶ್ರೀ ರಾಮ್ ಫಿಲ್ಮ್ಸ್ ಇಂಟರ್‌ನ್ಯಾಷನಲ್‌‌ ಬ್ಯಾನರ್‌ ಅಡಿಯಲ್ಲಿ ಈ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಸೀತಾ ಪಯಣದಲ್ಲಿ ಉಪೇಂದ್ರ ಅಣ್ಣನ ಮಗ ನಿರಂಜನ್‌ ನಾಯಕನಾಗಿ ನಟಿಸಿದರೆ, ಅರ್ಜುನ್‌…

ಜಸ್ಟ್ ಮ್ಯಾರೀಡ್” ಚಿತ್ರದ ಮಹಿಳಾ‌ ನಟಿಯರಿಂದ  ಮಹಿಳಾ ದಿನಾಚರಣೆ 

“ಜಸ್ಟ್ ಮ್ಯಾರೀಡ್” ಚಿತ್ರದ ಮಹಿಳಾ‌ ನಟಿಯರಿಂದ  ಮಹಿಳಾ ದಿನಾಚರಣೆ  by-ಕೆಂಧೂಳಿ ಮರ್ಚ್ 8, ಅಂತರರಾಷ್ಟ್ರೀಯ ಮಹಿಳೆಯರ ದಿನ. ಈ ವಿಶಿಷ್ಟ ದಿನವನ್ನು “ಜಸ್ಟ್ ಮ್ಯಾರೀಡ್” ಚಿತ್ರದಲ್ಲಿ ನಟಿಸಿರುವ ಮಹಿಳಾ ನಟಿಯರು ನಿರ್ದೇಶಕಿ ಸಿ.ಆರ್ ಬಾಬಿ ಅವರ ಸಾರಥ್ಯದಲ್ಲಿ ವಿಭಿನ್ನವಾಗಿ ಆಚರಿಸಿದ್ದಾರೆ. ಚಿತ್ರದ ನಾಯಕಿ ಅಂಕಿತ ಅಮರ್, ನಟಿಯರಾದ ಶೃತಿ ಕೃಷ್ಣ, ಮಾಳವಿಕ ಅವಿನಾಶ್, ಶೃತಿ ಹರಿಹರನ್, ವಾಣಿ ಹರಿಕೃಷ್ಣ ಹಾಗೂ ನಿರ್ದೇಶಕಿ ಬಾಬಿ ಕೇಕ್ ಕಟ್ ಮಾಡುವ ಮೂಲಕ ವಿಶ್ವ ಮಹಿಳೆಯರ ದಿನವನ್ನು ಆಚರಿಸಿ ಸಂಭ್ರಮಿಸಿದ್ದಾರೆ. ಈ…

ಯೋಗರಾಜ್ ಭಟ್ ಜೊತೆ  ರಮ್ಯಾ ಸಿನಿಮಾ

ಯೋಗರಾಜ್ ಭಟ್ ಜೊತೆ  ರಮ್ಯಾ ಸಿನಿಮಾ by-ಕೆಂಧೂಳಿ ಮೋಹಕ ತಾರೆ , ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ‌ ಮುಂದಿನ ಸಿನಿಮಾ ಯಾವುದು ಅನ್ನೋ ಕುತೂಹಲ ಕರುನಾಡ ಪ್ರೇಕ್ಷಕ ವಲಯದಲ್ಲಿದೆ. ಉತ್ತರಕಾಂಡ ಸಿನಿಮಾದಲ್ಲಿ ರಮ್ಯಾ ಕಂಗೋಳಿಸೋದು ಫೈನಲ್ ಆಗಿತ್ತು ; ಆದ್ರೆ ಸ್ಪಷ್ಟ ಉತ್ತರ ಸಿಗ್ಲಿಲ್ಲ. ಈಗ ವಿಚಾರವೆನೆಂದ್ರೆ ‘ಮನದ ಕಡಲು’ ಡೈರೆಕ್ಟರ್ ಯೋಗರಾಜ್ ಭಟ್ ನಿರ್ದೇಶನದ ಸಿನಿಮಾದಲ್ಲಿ ಮೋಹಕ ತಾರೆ ಮಿನುಗಿ ಮಿಂಚೋದು ಪಕ್ಕಾ ಆಗಿದೆ. ಹಿಂದೆ ‘ರಂಗ SSLC’ ಸಿನಿಮಾದಲ್ಲಿ ಭಟ್ಟರ ನಿರ್ದೇಶನದಲ್ಲಿ ಕಿಚ್ಚ ಸುದೀಪ್…

ಮೈಸೂರಿನಲ್ಲಿ ವಿಶ್ವದರ್ಜೆಯ ಫಿಲ್ಮ್ ಸಿಟಿ  ನಿರ್ಮಾಣ- ಸಿ.ಎಂ ಘೋಷಣೆ

ಮೈಸೂರಿನಲ್ಲಿ ವಿಶ್ವದರ್ಜೆಯ ಫಿಲ್ಮ್ ಸಿಟಿ  ನಿರ್ಮಾಣ- ಸಿ.ಎಂ ಘೋಷಣೆ by-ಕೆಂಧೂಳಿ ಬೆಂಗಳೂರು ಮಾ1-ವಿಶ್ವದರ್ಜೆಯ ಫಿಲ್ಮ್ ಸಿಟಿ ಮೈಸೂರಿನಲ್ಲಿ ನಿರ್ಮಿಸುತ್ತೇವೆ. ಇದಕ್ಕಾಗಿ ಈಗಾಗಲೇ 150 ಎಕರೆ ಜಾಗವನ್ನು ನೀಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಘೋಷಿಸಿದರು. ವಿಧಾನಸೌಧದ ಗ್ರಾಂಡ್ ಸ್ಟೆಪ್ಸ್ ನ ಸಂಭ್ರಮದ ಕಾರ್ಯಕ್ರಮದಲ್ಲಿ 16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು.ಅಂತಾರಾಷ್ಟ್ರೀಯ ಚಿತ್ರೋತ್ಸವ ವಿಶ್ವ ಸಮುದಾಯದ ಸಂಸ್ಕೃತಿಯ ಪ್ರತಿಬಿಂಬ. ಇದನ್ನು ಸದುಪಯೋಗಪಡಿಸಿಕೊಳ್ಳಿ ಎಂದು ಕರೆ ನೀಡಿದರು. ಕರ್ನಾಟಕವೇ ಒಂದು ಜಗತ್ತು. ಇಲ್ಲಿ ಎಲ್ಲ ಅವಕಾಶಗಳನ್ನು ಸೃಷ್ಟಿಸಬಹುದು.…

ಆಪಲ್ ಕಟ್’ ಚಿತ್ರದ ಟ್ರೇಲರ್ ಬಿಡುಗಡೆ

‘ಆಪಲ್ ಕಟ್’ ಚಿತ್ರದ ಟ್ರೇಲರ್ ಬಿಡುಗಡೆ by-ಕೆಂಧೂಳಿ ಸಾನ್ವಿ ಪ್ರೊಡಕ್ಷನ್ಸ್ ಲಾಂಛನದಲ್ಲಿ ಶಿಲ್ಪ ಪ್ರಸನ್ನ ಅವರು ನಿರ್ಮಿಸಿರುವ, ಖ್ಯಾತ ನಿರ್ದೇಶಕ ರಾಜಕಿಶೋರ್ ಅವರ ಪುತ್ರಿ ಸಿಂಧುಗೌಡ ನಿರ್ದೇಶನದ “ಆಪಲ್ ಕಟ್ ” ಚಿತ್ರದ ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಯಿತು. ಖ್ಯಾತ ನಟ ಗೋಲ್ಡನ್ ಸ್ಟಾರ್ ಗಣೇಶ್ ಟ್ರೇಲರ್ ಅನಾವರಣ ಮಾಡಿದರು. ಬೆಂಗಳೂರು ಮಹಾನಗರ ಪಾಲಿಕೆಯ ಮಾಜಿ ಸದಸ್ಯರಾದ ದಾಸೇಗೌಡ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಟ್ರೇಲರ್ ಅನಾವರಣ ಮಾಡಿ ಮಾತನಾಡಿದ ನಟ ಗಣೇಶ್, ಟ್ರೇಲರ್ ತುಂಬಾ ಚೆನ್ನಾಗಿದೆ. ನಾನು…

ಹೆತ್ತವರನ್ನು ಕಳೆದುಕೊಂಡ  ಹುಡುಗನ  ಕನಸಿನ ಕಥೆ “ಮಿಥ್ಯ”

ಹೆತ್ತವರನ್ನು ಕಳೆದುಕೊಂಡ  ಹುಡುಗನ ಕನಸಿನ ಕಥೆ “ಮಿಥ್ಯ” by-ಕೆಂಧೂಳಿ ತಮ್ಮ ಅಭಿನಯದ ಮೂಲಕ‌‌ ಅಭಿಮಾನಿಗಳ ಮನ ಗೆದ್ದಿರುವ ರಕ್ಷಿತ್ ಶೆಟ್ಟಿ ಪರಂವಃ ಸ್ಟುಡಿಯೋಸ್ ಮೂಲಕ ಅನೇಕ ಸದಭಿರುಚಿಯ ಚಿತ್ರಗಳನ್ನು ನಿರ್ಮಿಸಿದ್ದಾರೆ. ಆ ಸಾಲಿಗೆ ಮತ್ತೊಂದು ಸೇರ್ಪಡೆ ಮಿಥ್ಯ. ಪ್ರಸ್ತುತ ವಿಭಿನ್ನ ಕಥಾಹಂದರ ಹೊಂದಿರುವ “ಮಿಥ್ಯ” ಚಿತ್ರದ ಟ್ರೇಲರ್ ಎಲ್ಲರ ಮೆಚ್ಚುಗೆ ಪಡೆದುಕೊಂಡಿದೆ. ಚಿತ್ರ ಮಾರ್ಚ್ 7 ರಂದು ಬಿಡುಗಡೆಯಾಗುತ್ತಿದೆ.” ಏಕಂ” ಎಂಬ ವೆಬ್ ಸಿರೀಸ್ ಸೇರಿದಂತೆ ಅನೇಕ ಕಿರುಚಿತ್ರಗಳನ್ನು ನಿರ್ದೇಶಿಸಿರುವ ಸುಮಂತ್ ಭಟ್ ಅವರಿಗೆ “ಮಿಥ್ಯ”, ಬೆಳ್ಳಿತೆರೆಯಲ್ಲಿ ಮೊದಲ…

ಟ್ರೇಲರ್ ನಲ್ಲೇ ಕುತೂಹಲ ಮೂಡಿಸಿದೆ “ಕಪಟಿ”

ಟ್ರೇಲರ್ ನಲ್ಲೇ ಕುತೂಹಲ ಮೂಡಿಸಿದೆ “ಕಪಟಿ” by-ಕೆಂಧೂಳಿ “ಹಗ್ಗದ ಕೊನೆ”, “ಆ ಕಾರಾಳ ರಾತ್ರಿ” ಸೇರಿದಂತೆ ಅನೇಕ ಸದಭಿರುಚಿಯ ಚಿತ್ರಗಳನ್ನು ನಿರ್ಮಾಣ ಮಾಡಿರುವ ದಯಾಳ್ ಪದ್ಮನಾಭನ್ ಅವರು ಡಿ ಪಿಕ್ಚರ್ಸ್ ಲಾಂಛನದಲ್ಲಿ ನಿರ್ಮಿಸಿರುವ, ರವಿಕಿರಣ್ – ಚೇತನ್ ಎಸ್ ಪಿ ನಿರ್ದೇಶಿಸಿರುವ ಹಾಗೂ ಸುಕೃತ ವಾಗ್ಲೆ, ದೇವ್ ದೇವಯ್ಯ, ಸಾತ್ವಿಕ್ ಕೃಷ್ಣನ್ ಪ್ರಮುಖಪಾತ್ರದಲ್ಲಿ ನಟಿಸಿರುವ ಸೈಕಲಾಜಿಕಲ್ ಥ್ರಿಲ್ಲರ್ ಕಥಾಹಂದರ ಹೊಂದಿರುವ “ಕಪಟಿ” ಚಿತ್ರದ ಟ್ರೇಲರ್ ಇತ್ತೀಚಿಗೆ ಬಿಡುಗಡೆಯಾಯಿತು. ಹೆಸರಾಂತ ನಿರ್ಮಾಪಕರಾದ ಕೆ.ಮಂಜು, ರಮೇಶ್ ಯಾದವ್ ಹಾಗೂ ಅವಿನಾಶ್…

ಈ ವಾರ ತೆರೆಗೆ ಬರುತ್ತಿದೆ  “ಮಾಂಕ್ ದಿ ಯಂಗ್”

ಈ ವಾರ ತೆರೆಗೆ ಬರುತ್ತಿದೆ  “ಮಾಂಕ್ ದಿ ಯಂಗ್” by-ಕೆಂಧೂಳಿ ಹೊಸ ತಂಡ ಸೇರಿ ನಿರ್ಮಿಸಿರುವ, ವಿಭಿನ್ನ ಕಥಾಹಂದರ ಹೊಂದಿರುವ “ಮಾಂಕ್ ದಿ ಯಂಗ್” ಚಿತ್ರ ಈ ವಾರ ಫೆಬ್ರವರಿ 28 ರಂದು ರಾಜ್ಯಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗುತ್ತಿದೆ. ಕೆ.ಆರ್.ಜಿ ಸ್ಟುಡಿಯೋಸ್ ಅವರು ವಿತರಣೆ ಮಾಡುತ್ತಿದ್ದಾರೆ. ಈಗಾಗಲೇ ಆನಂದ್ ಆಡಿಯೋ ಮೂಲಕ ಬಿಡುಗಡೆಯಾಗಿರುವ ಚಿತ್ರದ ಹಾಡುಗಳು, ಟೀಸರ್ ಹಾಗೂ ಟ್ರೇಲರ್ ಜನರ ಮನ ತಲುಪಿದೆ. ಸ್ವಾಮಿನಾಥನ್ ರಾಮಕೃಷ್ಣ ಹಾಗೂ ಸುಪ್ರೀತ್ ಫಾಲ್ಗುಣ ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಈವರೆಗೂ…

ಈ ವಾರ ತೆರೆಗೆ ಬರಲಿದೆ ಇನ್ವೆಸ್ಟಿಗೇಷನ್ ಥ್ರಿಲ್ಲರ್ ಕತೆ ‘ ಪ್ರತ್ಯರ್ಥ’

ಈ ವಾರ ತೆರೆಗೆ ಬರಲಿದೆ ಇನ್ವೆಸ್ಟಿಗೇಶನ್ ಥ್ರಿಲ್ಲರ್ ಕತೆ “ಪ್ರತ್ಯರ್ಥ” by-ಕೆಂಧೂಳಿ ಉಡುಪಿ ಪ್ರಾಂತ್ಯದ ಅನೇ‌ಕ ಹೊಸಪ್ರತಿಭೆಗಳು ಸೇರಿ ನಿರ್ಮಿಸಿರುವ “ಪ್ರತ್ಯರ್ಥ” ಚಿತ್ರ ಈ ವಾರ(ಫೆಬ್ರವರಿ 28) ರಾಜ್ಯಾದ್ಯಂತ ಬಿಡುಯಾಗುತ್ತಿದೆ.‌ ಇತ್ತೀಚೆಗಷ್ಟೇ ಈ ಚಿತ್ರದ ಟ್ರೇಲರ್ ಅನ್ನು ರೋರಿಂಗ್ ಸ್ಟಾರ್ ಶ್ರೀಮುರಳಿ ಅನಾವರಣ ಮಾಡಿ ಚಿತ್ರ ಯಶಸ್ವಿಯಾಗಲೆಂದು ಹಾರೈಸಿದ್ದರು. ಟ್ರೇಲರ್ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಚಿತ್ರ ಬಿಡುಗಡೆಗೂ ಮುನ್ನ ಚಿತ್ರತಂಡದಿಂದ ಸಂತಸದ ಸುದ್ದಿ ಹೊರಬಂದಿದೆ. ಈ ಚಿತ್ರದ ಕಥೆಯನ್ನು ಮೆಚ್ಚಿಕೊಂಡಿರುವ ತಮಿಳುನಾಡಿನ ಖ್ಯಾತ ಟ್ಯೂಬ್ ಲೈಟ್ ಫಿಲಂಸ್…

ನಾಗವಲ್ಲಿ ಬಂಗಲೆ” ಈ ವಾರ ತೆರೆಗೆ

“ನಾಗವಲ್ಲಿ ಬಂಗಲೆ” ಈ ವಾರ ತೆರೆಗೆ by-ಕೆಂಧೂಳಿ ಕನ್ನಡದಲ್ಲಿ ಉತ್ತಮ ಕಂಟೆಂಟ್ ವುಳ್ಳ ಚಿತ್ರಗಳೇ ಹೆಚ್ಚಾಗಿ ಜನರನ್ನು ತಲುಪುತ್ತಿದೆ. ಅಂತಹ ಉತ್ತಮ ಹಾಗೂ ವಿಭಿನ್ನ ಕಂಟೆಂಟ್ ಹೊತ್ತು “ನಾಗವಲ್ಲಿ ಬಂಗಲೆ” ನಿರ್ಮಾಣವಾಗಿದೆ. ಅರಿಷಡ್ವರ್ಗಗಳಾದ ಕಾಮ, ಕ್ರೋಧ, ಲೋಭ,ಮೋಹ, ಮದ, ಮತ್ಸರ ಈ ಆರು ಗುಣಗಳನ್ನು ಪ್ರತಿನಿಧಿಸುವ ಆರು ಪಾತ್ರಗಳ ಜೊತೆಗೆ ಮತ್ತೊಂದು ವಿಶೇಷ ಪಾತ್ರವಿರುವ “ನಾಗವಲ್ಲಿ ಬಂಗಲೆ” ಚಿತ್ರ ಈ ವಾರ(ಫೆಬ್ರವರಿ 28) ಬಿಡುಗಡೆಯಾಗುತ್ತಿದೆ. ಈ ಚಿತ್ರವನ್ನು ಹಂಸ ವಿಷನ್ಸ್ ಲಾಂಛನದಲ್ಲಿ ನೆಲ ಮಹೇಶ್ ಮತ್ತು ನೇವಿ…

ಈ ವಾರ ಬಿಡುಗಡೆಯಾಗಲಿದೆ ಹೊಸತಂಡದ ಹೊಸಪ್ರಯತ್ನ “1990s”

ಈ ವಾರ ಬಿಡುಗಡೆಯಾಗಲಿದೆ ಹೊಸತಂಡದ ಹೊಸಪ್ರಯತ್ನ “1990s” by-ಕೆಂಧೂಳಿ ಮನಸ್ಸು ಮಲ್ಲಿಗೆ ಕಂಬೈನ್ಸ್ ಲಾಂಛನದಲ್ಲಿ ನಿರ್ಮಾಣವಾಗಿರುವ, ನಂದಕುಮಾರ್ C M ನಿರ್ದೇಶಿಸಿರುವ ಹಾಗೂ ಅರುಣ್ – ರಾಣಿ ವರದ್ ನಾಯಕ, ನಾಯಕಿಯಾಗಿ ನಟಿಸಿರುವ “1990s” ಚಿತ್ರ ಈ ವಾರ(ಫೆಬ್ರವರಿ 28) ಬಿಡುಗಡೆಯಗುತ್ತಿದೆ. ಈಗಾಗಲೇ ಮಹಾರಾಜ ಅವರ ಸಂಗೀತ ಸಂಯೋಜನೆಯಲ್ಲಿ ಮೂಡಿಬಂದಿರುವ ಚಿತ್ರದ ಹಾಡುಗಳಿಗೆ ಮೆಚ್ಚುಗೆ ದೊರಕಿದೆ. 90ರ ಕಾಲಘಟ್ಟದ ಕಥೆಯ ಟೀಸರ್ ಹಾಗೂ ಟ್ರೇಲರ್ ಸಹ ಎಲ್ಲರಿಗೂ ಪ್ರಿಯವಾಗಿದೆ ಎನ್ನುತ್ತಾರೆ ನಿರ್ಮಾಪಕರಲ್ಲೊಬ್ಬರಾದ ಅರುಣ್ ಹಾಲೇಶ್ ಛಾಯಾಗ್ರಹಣ, ಕೃಷ್ಣ…

ಹಾರರ್   ಕಥಾಹಂದರದ ‘ ಅಪಾಯವಿದೆ ಎಚ್ಚರಿಕೆ’

ಹಾರರ್  ಕಥಾಹಂದರದ ‘ ಅಪಾಯವಿದೆ ಎಚ್ಚರಿಕೆ’ by-ಕೆಂಧೂಳಿ ಕನ್ನಡದಲ್ಲಿ ಕಂಟೆಂಟ್ ಓರಿಯಂಟೆಡ್ ಚಿತ್ರಗಳನ್ನು ಅಭಿಮಾನಿಗಳು ಸದಾ ಪ್ರೋತ್ಸಾಹಿಸುತ್ತಾ ಬಂದಿದ್ದಾರೆ. ಒಂದೊಳ್ಳೆ ಕಂಟೆಂಟ್ ನೊಂದಿಗೆ ಹಾರಾರ್ ಜಾನರ್ ನ ಕಥಾಹಂದರವನ್ನೂ ಹೊಂದಿರುವ “ಅಪಾಯವಿದೆ ಎಚ್ಚರಿಕೆ” ಚಿತ್ರದ ಟ್ರೇಲರ್ ಇತ್ತೀಚಿಗೆ ಬಿಡುಗಡೆಯಾಯಿತು. “ಅಣ್ಣಯ್ಯ” ಧಾರಾವಾಹಿ ಮೂಲಕ ಜನಪ್ರಿಯರಾಗಿರುವ ವಿಕಾಶ್ ಉತ್ತಯ್ಯ ನಾಯಕರಾಗಿ ನಟಿಸಿರುವ ಈ ಚಿತ್ರವನ್ನು ಅಭಿಜಿತ್ ತೀರ್ಥಹಳ್ಳಿ ಬರೆದು ನಿರ್ದೇಶಿಸಿದ್ದಾರೆ. ಹಿರಿಯ ಚಲನಚಿತ್ರ ಪತ್ರಕರ್ತೆ ಸರಸ್ವತಿ ಜಾಗಿರದಾರ್, ಚಲನಚಿತ್ರ ಸ್ಥಿರ ಛಾಯಾಗ್ರಾಹಕರಾದ ಮನು,‌ ಮೋಕ್ಷೇಂದ್ರ ಈ ಚಿತ್ರದ ಟ್ರೇಲರ್…

ಬಯಲುಸೀಮೆಯ ಪ್ರೇಮಕಥೆ ‘ಅಮರ ಪ್ರೇಮಿ ಅರುಣ್’

ಬಯಲುಸೀಮೆಯ ಪ್ರೇಮಕಥೆ ‘ಅಮರ ಪ್ರೇಮಿ ಅರುಣ್’ by-ಕೆಂಧೂಳಿ ಕನ್ನಡದಲ್ಲೀಗ ಹೊಸತಂಡದಿಂದ ಹೊಸಪ್ರಯತ್ನಗಳು ಸಾಕಷ್ಟು ನಡೆಯುತ್ತಿದೆ. ಅಂತಹ ಹೊಸ ಹಾಗೂ ವಿಭಿನ್ನ ಪ್ರಯತ್ನಗಳಲ್ಲಿ “ಅಮರ‌ ಪ್ರೇಮಿ ಅರುಣ್” ಸಹ ಒಂದು. ಸಮಾನ ಮನಸ್ಕರೆಲ್ಲಾ ಸೇರಿ ಕಟ್ಟಿರುವ ಒಲವು ಸಿನಿಮಾ ಎಂಬ ನಿರ್ಮಾಣ ಸಂಸ್ಥೆ ಈ ಚಿತ್ರವನ್ನು ನಿರ್ಮಾಣ‌ ಮಾಡಿದೆ. ಗಿರೀಶ್ ಕಾಸರವಳ್ಳಿ,‌ ಯೋಗರಾಜ್ ಭಟ್ ಸೇರಿದಂತೆ ಕನ್ನಡದ ಅನೇಕ ಹಿರಿಯ ದಿಗ್ದರ್ಶಕರ ಬಳಿ ಸಹ ನಿರ್ದೇಶಕನಾಗಿ ಕಾರ್ಯ ನಿರ್ವಹಿಸಿದ್ದ ಪ್ರವೀಣ್ ಕುಮಾರ್ ಜಿ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಇತ್ತೀಚಿಗೆ…

ಫೈಟರ್ ನಿರ್ಮಾಪಕರ ಚಿತ್ರಕ್ಕೆ ಚಿಕ್ಕಣ್ಣ ಹೀರೋ

ಫೈಟರ್ ನಿರ್ಮಾಪಕರ ಚಿತ್ರಕ್ಕೆ ಚಿಕ್ಕಣ್ಣ ಹೀರೋ by-ಕೆಂಧೂಳಿ ಕಳೆದ ವರ್ಷದ ಸೂಪರ್ ಹಿಟ್ ಸಿನಿಮಾಗಳ ಪೈಕಿ ‘ಉಪಾಧ್ಯಕ್ಷ’ ಕೂಡ ಒಂದು. ಚಿಕ್ಕಣ್ಣ ನಾಯಕನಟರಾಗಿ ನಟಿಸಿದ್ದ ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಕಮಾಲ್ ಮಾಡಿತ್ತು. ಅದಾದ ಬಳಿಕ ಸಖತ್ ಚ್ಯೂಸಿಯಾಗಿರುವ ಚಿಕ್ಕಣ್ಣ, ಸಾಕಷ್ಟು ಸ್ಕ್ರಿಪ್ಟ್‌ಗಳನ್ನು ಕೇಳಿ ಕೆಲವೊಂದನ್ನು ಮಾತ್ರ ಫೈನಲ್ ಮಾಡಿದ್ದಾರೆ. ಸದ್ಯ ಲಕ್ಷ್ಮಿ ಪುತ್ರ ಸಿನಿಮಾದಲ್ಲಿ ತೊಡಗಿಸಿಕೊಂಡಿರುವ ಚಿಕ್ಕಣ್ಣ, ಅದಾದ ಬಳಿಕ ಮತ್ತೊಂದು ಸಿನಿಮಾವನ್ನು ಒಪ್ಪಿಕೊಂಡಿದ್ದಾರೆ. ಈವರೆಗೂ ಮಾಡಿರದ ಪಾತ್ರವೊಂದಕ್ಕೆ ಬಣ್ಣ ಹಚ್ಚುತ್ತಿರುವ ಅವರು, ವಿಭಿನ್ನ ಕಥಾಹಂದರದ ಚಿತ್ರದಲ್ಲಿ…

ಅದ್ಧೂರಿಯಾಗಿ ಜರುಗಿದೆ ನಟ ಡಾಲಿ ವಿವಾಹ

ಅದ್ಧೂರಿಯಾಗಿ ಜರುಗಿದೆ ನಟ ಡಾಲಿ ವಿವಾಹ  by-ಕೆಂಧೂಳಿ ಕನ್ನಡ ಚಿತ್ರರಂಗದ ಖ್ಯಾತ ನಟ ಡಾಲಿ ಧನಂಜಯ್ ಮತ್ತು ವೈದ್ಯೆ ಚಿತ್ರದುರ್ಗದ ಧನ್ಯತಾ ಅವರ ಜೊತೆ ಭಾನುವಾರ ಶುಭ ಮಹೋರ್ತದಲ್ಲಿ ವವಾಹಿಕ ಜೀವನಕ್ಕೆ ಕಾಲಿಟ್ಟರು. ಕನ್ನಡ ತಾರೆಯರು ಈ ಜೋಡಿಗೆ ಶುಭ ಹಾರೈಸಿದರು ಮೈಸೂರಿನ ವಸ್ತುಪ್ರದರ್ಶನ ಮೈದಾನದಲ್ಲಿ ನಟ ಧನಂಜಯ್ ಮತ್ತು ಡಾಕ್ಟರ್ ಧನ್ಯತಾ ಜೋಡಿಯ ವಿವಾಹ ಅದ್ದೂರಿಯಾಗಿ ನೆರವೇರಿತು. ಬೆಳಗ್ಗೆ ೮:೩೦ರಿಂದ ೧೦ ಗಂಟೆ ವರೆಗೆ ಸಲ್ಲುವ ಶುಭ ಮೀನ ಲಗ್ನದಲ್ಲಿ ಮಾಂಗಲ್ಯ ಧಾರಣೆ ನಡೆಯಿತು. ಗೋಲ್ಡ್…

ರಾಜು ಜೇಮ್ಸ್ ಬಾಂಡ್” ಚಿತ್ರದ ಪ್ರೀ ರಿಲೀಸ್ ಇವೆಂಟ್ ನಲ್ಲಿ ಗೃಹ ಸಚಿವ ಪರಮೇಶ್ವರ ಭಾಗಿ

“ರಾಜು ಜೇಮ್ಸ್ ಬಾಂಡ್” ಚಿತ್ರದ ಪ್ರೀ ರಿಲೀಸ್ ಇವೆಂಟ್ ನಲ್ಲಿ ಗೃಹ ಸಚಿವ ಪರಮೇಶ್ವರ ಭಾಗಿ  by-ಕೆಂಧೂಳಿ ಮಂಜುನಾಥ್ ವಿಶ್ವಕರ್ಮ ಹಾಗೂ ಕಿರಣ್ ಭರ್ತೂರ್ ನಿರ್ಮಾಣದ, ದೀಪಕ್ ಮಧುವನಹಳ್ಳಿ ನಿರ್ದೇಶನದ ಹಾಗೂ “ಫಸ್ಟ್ ರ‍್ಯಾಂಕ್ ರಾಜು” ಖ್ಯಾತಿಯ ಗುರುನಂದನ್ ನಾಯಕರಾಗಿ ನಟಿಸಿರುವ “ರಾಜು ಜೇಮ್ಸ್ ಬಾಂಡ್ ” ಚಿತ್ರದ ಪ್ರೀ ರಿಲೀಸ್ ಇವೆಂಟ್ ಇತ್ತೀಚೆಗೆ ಅದ್ದೂರಿಯಾಗಿ ನೆರವೇರಿತು. ಗೃಹ ಸಚಿವರಾದ ಜಿ.ಪರಮೇಶ್ವರ್ ಹಾಗೂ ಮೋಹಕ ತಾರೆ ರಮ್ಯ‌ ಮುಖ್ಯ ಅತಿಥಿಗಳಾಗಿ ಆಗಮಿಸಿ ಚಿತ್ರತಂಡಕ್ಕೆ ಶುಭ ಕೋರಿದರು. ಮುಖ್ಯಮಂತ್ರಿಗಳ…

1990s” ಚಿತ್ರದ ಟ್ರೇಲರ್ ಅನಾವರಣ

“1990s” ಚಿತ್ರದ ಟ್ರೇಲರ್ ಅನಾವರಣ by-ಕೆಂಧೂಳಿ ಕನ್ನಡದಲ್ಲಿ ಹೊಸತಂಡದ ಹೊಸಪ್ರಯತ್ನಗಳಿಗೆ ಕನ್ನಡ ಕಲಾಭಿಮಾನಿಗಳು ಪ್ರೋತ್ಸಾಹ ನೀಡುತ್ತಾ ಬಂದಿದ್ದಾರೆ. ಅಂತಹ ಹೊಸತಂಡವೊಂದರ ಹೊಸಪ್ರಯತ್ನ “1990s”. ಮನಸ್ಸು ಮಲ್ಲಿಗೆ ಕಂಬೈನ್ಸ್ ಲಾಂಛನದಲ್ಲಿ ನಿರ್ಮಾಣವಾಗಿರುವ, ನಂದಕುಮಾರ್ C M ನಿರ್ದೇಶಿಸಿರುವ ಹಾಗೂ ಅರುಣ್ – ರಾಣಿ ವರದ್ ನಾಯಕ, ನಾಯಕಿಯಾಗಿ ನಟಿಸಿರುವ “1990s” ಚಿತ್ರ 90ರ ಕಾಲಘಟ್ಟದಲ್ಲಿ ನಡೆಯುವ ಪ್ರೇಮಕಥೆ. ಈಗಾಗಲೇ ಹಾಡು ಹಾಗೂ ಟೀಸರ್ ಮೂಲಕ ಜನರ ಮನಸ್ಸಿಗೆ ಹತ್ತಿರವಾಗಿರುವ ಈ ಚಿತ್ರದ ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಯಿತು. “ತಟ್ ಅಂತ…

ಚರಣ್ ರಾಜ್ ನಿರ್ದೇಶನದ ‘ ಕರುನಾಡ ಕಣ್ಮಣಿ ‘ಮಾರ್ಚ್ ನಲ್ಲಿ ಆರಂಭ. 

ಚರಣ್ ರಾಜ್ ನಿರ್ದೇಶನದ ‘ ಕರುನಾಡ ಕಣ್ಮಣಿ ‘ಮಾರ್ಚ್ ನಲ್ಲಿ ಆರಂಭ.   by-ಕೆಂಧೂಳಿ ತಮ್ಮ ಅಮೋಘ ಅಭಿನಯದ ಮೂಲಕ ಕನ್ನಡ ಸೇರಿದಂತೆ ಅನೇಕ ಭಾಷೆಗಳಲ್ಲಿ ತಮ್ಮದೇ ಆದ ಚಾಪು ಮೂಡಿಸಿರುವ ಜನಪ್ರಿಯ ನಟ ಚರಣ್ ರಾಜ್ ಅವರು ನಿರ್ದೇಶಿಸಲಿರುವ ನೂತನ ಚಿತ್ರವೊಂದು ಮಾರ್ಚ್ ಅಂತ್ಯದಲ್ಲಿ ಆರಂಭವಾಗಲಿದೆ. ಕನ್ನಡ, ತಮಿಳು, ತೆಲುಗು ಮೂರು ಭಾಷೆಗಳಲ್ಲಿ ಈ ಚಿತ್ರ ಮೂಡಿಬರಲಿದ್ದು, ABCR ಫಿಲಂ ಫ್ಯಾಕ್ಟರಿ ಬ್ಯಾನರ್ ನಲ್ಲಿ ಅಶ್ವಥ್ ಬಳಗೆರೆ ಅವರು ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಬಹುಭಾಷಾ ನಟ…

ಝೈದ್ ಖಾನ್ – ರಚಿತಾ ರಾಮ್ ಜೋಡಿಯ  “ಕಲ್ಟ್” 11 ಕ್ಕೆ ಟೀಸರ್ ಬಿಡುಗಡೆ

ಝೈದ್ ಖಾನ್ – ರಚಿತಾ ರಾಮ್ ಜೋಡಿಯ  “ಕಲ್ಟ್” 11 ಕ್ಕೆ ಟೀಸರ್ ಬಿಡುಗಡೆ by -ಕೆಂಧೂಳಿ “ಬನಾರಸ್” ಚಿತ್ರದ ನಂತರ ಝೈದ್ ಖಾನ್ ನಾಯಕರಾಗಿ ಹಾಗೂ ಡಿಂಪಲ್ ಕ್ವೀನ್ ರಚಿತಾ ರಾಮ್ ನಾಯಕಿಯಾಗಿ ನಟಿಸುತ್ತಿರುವ ಹಾಗೂ “ಉಪಾಧ್ಯಕ್ಷ” ಚಿತ್ರದ ನಿರ್ದೇಶಕ ಅನಿಲ್ ಕುಮಾರ್ ನಿರ್ದೇಶನದ “ಕಲ್ಟ್” ಚಿತ್ರ ಆರಂಭದಿಂದಲೂ ಸಾಕಷ್ಟು ಸದ್ದು ಮಾಡುತ್ತಿದೆ. ಬಹು ನಿರೀಕ್ಷಿತ ಈ ಚಿತ್ರದ ಚಿತ್ರೀಕರಣ ಈಗಾಗಲೇ ಬಹುತೇಕ ಮುಕ್ತಾಯವಾಗಿದೆ. ಇದೇ ಸಂದರ್ಭದಲ್ಲಿ ಚಿತ್ರತಂಡದಿಂದ ಮತ್ತೊಂದು ಮಹತ್ವದ ಸುದ್ದಿ ಹೊರಬಂದಿದೆ. ಸದಭಿರುಚಿ…

1 2 3 8
error: Content is protected !!