Browsing: ಕವನ

ಕವನ

ಬತ್ತಬಾರದು ಭಾವಗಳ ಒರತೆ

ವಿ.ಮಂಜುಳ ಪಟೇಲ್ ಅವರು ಕವನ ಲೇಖನಗಳನ್ನು ಬರೆದಿದ್ದಾರೆ,ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿದ್ದು ಶೀಘ್ರ ಕವನ ಸಂಕಲನ ಹಾಗೂ ಕಾದಂಬರಿ ಪ್ರಕಟಗೊಳ್ಳಲಿದೆ.ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿರುವ ಅವರು ಟಿಕ್ ಟಾಕ್ ನಲ್ಲಿ ಹೆಚ್ಚು ಕಾಣಸಿಕೊಳ್ಲಕುತ್ತಿದ್ದಾರೆ…ಇವರು ಸದ್ಯ ಬೆಂಗಳೂರಿನ ಕೆಂಗೇರಿಯಲ್ಲಿ ವಾಸವಿದ್ದಾರೆ. ವಿ. ಮಂಜುಳಾ ಪಟೇಲ್ ಬತ್ತಬಾರದು ಭಾವಗಳ ಒರತೆ ವಾಸ್ತವದ ಹಂಗನ್ನು ಮೀರಿ ಆ ನಿನ್ನ ನೆನಪುಗಳಲ್ಲಿ ಮೆದ್ದಾಗಲೆಲ್ಲ ಇಳಿದು ಬಿಡುವುದು ಮನಸ್ಸು ನಿನ್ನ ಪ್ರೀತಿಯ ಭಿಕ್ಷಾಟನೆಗೆ ಮಮಕಾರದಿ ಕರೆದು ಬಿಡು ನಿನ್ನ ಒಲವಿಗೆ ಒಮ್ಮೆಯಾದರೂ ಒಲವ ರಾಗ ಹೊಸತೇನಲ್ಲ…

ಗೆಳೆಯ ಬರುವುದು ತಡವಾಯಿತು..!

ಎನ್.ಸಿ. ಶಿವಪ್ರಕಾಶ್ಮಸ್ಕತ್, ಒಮಾನ್ ಗೆಳೆಯ ಬರುವುದು ತಡವಾಯಿತು..! ಎದೆ ಹಗುರಾಗಬಯಸಿದೆ, ನೀನೆಲ್ಲಿರುವೆ ಗೆಳೆಯ? ಮನಬಿಚ್ಚಿ ಹರಟಿ ವರುಷಗಳುರುಳಿವೆ, ತಿಳಿಯದೆ ನಿನ್ನ ನೆಲೆಯ ಸುಡುಬಿಸಿಲಿಗೆ ಮೋಡವಾಗಿ ನೆರಳಬಿಚ್ಚಿದೆ ದುಗುಡದ ಕಣ್ಣೀರನದಿಗೆ ಪಾತ್ರವಾಗಿ ನೀ ಮೆರೆದೆ ಹಸಿದಾಗ ಆಹಾರವಿತ್ತೆ; ಬೇಡದೆ ಆಶ್ರಯವ ಕೊಟ್ಟೆ ನಾ ನಕ್ಕಾಗ ಜೊತೆಗೊಡಲು ಹಲವರಿದ್ದರು; ಕಂಬನಿಗರೆಯಲು ನೀನೊಂದೇ ಹೆಗಲು ಬಾಲ್ಯದಲಿ ನೋಟುಪುಸ್ತಕಗಳ ಹಂಚಿಕೊಂಡೆ; ಯೌವನದಲಿ ನೋಟುಗಳನೇ ಹಂಚಿಕೊಂಡೆ ನನ್ನ ನೋಟಕೆ ನಿನ್ನ ಪ್ರೀತಿಯ ಬಲಿಕೊಟ್ಟೆ ಗೆಳೆಯಾ, ಈ ಬಾರಿ ನಿನ್ನ ಹುಡುಕಿ ಬಂದಿದ್ದೆ ನಿಜತಾವಿನಲಿ ನೀ…

ಕ್ಷಮಿಸು ಭುವನೇಶ್ವರಿ..

ಎನ್.ಸಿ. ಶಿವಪ್ರಕಾಶ್,ಮಸ್ಕತ್,ಒಮಾನ್ ಕ್ಷಮಿಸು ಭುವನೇಶ್ವರಿ.. ಊಳಿಡುತಿಹಳು ಭೂರಮೆ ಕಳಚಿ ಕೇಳು ನಿನ್ನ ಗರಿಮೆ ಹೆತ್ತ ತಾಯ ಕರುಳ ಸಂಕಟ ಅರಿಯದಾದೆ ನೀ ಮಾನವಮರ್ಕಟ ಜಗದದಾಹ ಹಿಂಗಿಸಲು ಭಗೀರಥಿಗೆ ಒಡಲಾದೆ ಹಸಿವಭರಿಸೆ ನೀ ಹೊತ್ತೆ ಬವಣೆಗಳ ಬೀಡೆ ಋತುಗಳ ರಂಗೋಲಿಗೆ ಜೀವರಂಗು ತುಂಬಿದೆ ಮೇಲೊಂದು ಮಳೆಯಬಿಲ್ಲನಿಡೆ ನಾಕವದು ಧರೆಯಲಿ ಅವತರಿಸಿದೆ ಸಾಗರ ಬ್ರಹ್ಮಾಂಡದಚ್ಚರಿ ಗೌರಿಶಂಕರ ಔನತ್ಯದ ಪರಧಿ ಕೆಳಗೆ ಹಸಿರು, ಮೇಲೆ ನೀಲಿ ಅನನ್ಯ ಸೊಬಗಿಗೆ ಕುಂದಣ ಹಕ್ಕಿಪಿಕ್ಕಿ ಚಿಲಿಪಿಲಿ ಉಸಿರನಿಟ್ಟೆ, ಜೀವವೈವಿಧ್ಯ ಸೃಜಿಸಿದೆ ಒಲವನಿಟ್ಟೆ, ಸರ್ವಸಾಂಗತ್ಯ ಬಯಸಿದೆ…

ಗಜ಼ಲ್

ವಿಶಾಲಾ ಆರಾಧ್ಯ ಗಜ಼ಲ್ ಏನು ಮಾಯೆಯೇ ಗೆಳತಿ ಯಾವ ಛಾಯೆಯೇ … ಏನು ಮಾಯೆ ಯಾವ ಛಾಯೆ ಸೆಳೆಯಿತೆನ್ನ ಭವದ ಮಾಯೇ ಕರೆದಲ್ಲಿಗೆ ಕೊಳಲ ಕರೆಗೆ ಕೊರಳು ಸಾಗಿದೇ..!! ಮನದ ವೀಣೆ ನುಡಿದಿದೆ ಭಾವ ತಂತಿ ಮೀಟಿ ಎದೆಯ ಮರುಗ ಘಮಿಸಿದೆ ಜೀವ ಸೀಮೆ ದಾಟಿ ಸಾಗಿ ಬಂದು ಪ್ರೇಮ ತೀರದಿ ಮನವು ಅಲೆದಿದೆ ಒಲವ ಅರಸಿದೆ..!! ಭಾವಗಳಿಗೆ ಚಿಗುರು ಮೂಡಿ ಕಾವ್ಯದಲ್ಲಿ ಇಣುಕಿವೆ ಜೀವವಿಂದು ಹಗುರವಾಗಿ ಬಾನಿನಲ್ಲಿ ತೇಲಿದೆ ಮನದ ಬಸಿರು ಬಲಿತು ರಾಗ ಮೋಹನನ…

ತಿಳಿದು ಬಾಳು ಮಾನವಾ..!

ಶ್ರೀಧರ್.ಡಿ ಬೆಂಗಳೂರು ದಕ್ಷಿಣ ತಿಳಿದು ಬಾಳು ಮಾನವಾ..! ಮಾನವ ನಿನ್ನ ಚಂಚಲವಾದ ನಾಲಿಗೆ ಸದಾಕಾಲವೂ ಒದ್ದೆಯಾದ ಸ್ಥಳದಲ್ಲೇ ಇರುವುದರಿಂದ ಸುಲಭವಾಗಿ ಮಾತುಗಳು ಜಾರುತ್ತದೆ ಎಚ್ಚರಿಕೆ ಯಿಂದ ನುಡಿ- ಮುತ್ತಿನಂತೆ ಮಾತನು ಮತ್ತೊಬ್ಬರನ್ನು ನೋಯಿಸದಂತೆ ಮಾನವಾ.. ಬೆಣ್ಣೆಯು ಮೃತುವೆಂದು ಹೇಳುವರು ಆದರೆ ಸಜ್ಜನನ ಹೃದಯವು ಅದಕ್ಕಿಂತಲೂ ಮೃದುವಾದದು ಅಗ್ನಿಯು ಮಾತಾಡದೆ ಅನ್ನಬೇಯಿಸುವಂತೆ ಸೂರ್ಯನು ಸದ್ದು ಮಾಡದೇ ಲೋಕವನೆ ಬೆಳಗುವಂತೆ ಸಜ್ಜನರ ಸಂಘ ನಿನ್ನ ದುರ್ಬುದ್ಧಿಯನು ಹೋಗಲಾಡಿಸುವುದು ಜ್ಞಾನ ಸಂಪತ್ತಿನ ಕಡೆ ನಡೆ ಮಾನವಾ.. ಸಕಲ ವೇದಗಳ…

ಜೀವನ ಸೋಪಾನ

ಶ್ರೇಯಸ್.ಎಸ್. ಗ್ರೇಡ್ 7 ,ಏಳನೇ ತರಗತಿ,ಲಿಬರ್ಟಿ ಪೈನಸ್ ಆಕಾಡೆಮಿ ಸ್ಕೂಲ್.ಜಾಕ್ಸೋನವಿಲೇ,ಪ್ಲೋರೈಡಾ.ಅಮೆರಿಕಾ ಮೂಲ ಇಂಗ್ಲಿಷ್ – ಶ್ರೇಯಸ್.ಎಸ್. ಅನುವಾದ- ತುರುವನೂರು ಮಂಜುನಾಥ ಬದುಕಿನ ಸೋಪಾನ ಬದುಕಿನ ಮೆಟ್ಟಿಲುಗಳನ್ನು ಹತ್ತುತ್ತಿದ್ದೇನೆ ಆದರೆ,ಗಾಜಿನ ಮೆಟ್ಟಿಲುಗಳೋ.. ಮರದ ಮೆಟ್ಟಿಲುಗಳೋಗೊತ್ತಿಲ್ಲ. ಆದರೂ ಹೆಜ್ಜೆ ಇಡುತ್ತಿದ್ದೇನೆ ಅಲ್ಲಿ ತಿರುವುಗಳು, ಸರಳುಗಳು ಇದ್ದಾವು ಎನ್ನುವ ನೋಟವೂ ನನ್ನದಲ್ಲ ಎದೆಗುಂದದೆ ಸಾಗುತ್ತಿದ್ದೇನೆ..! ಜೀವನವೇ ಹಾಗೆ ಪ್ರತಿಕ್ಷಣವೂ ಮೆಟ್ಟಿಲೇರಲಾಗುವುದಿಲ್ಲಿ ಹಿಂದಿನ ಜಾಣ್ಮೆ ಹೆಜ್ಜೆಯಂತೆ ಮುಂದಿನ ಹೆಜ್ಜೆಯೂ ಸುಲಭವಲ್ಲ ಕಷ್ಟವಾದರೂ ನಾಳಿನ ಹಾದಿಯ ನೋಡಲು ಇಷ್ಟಪಟ್ಟರು ಅದು- ಸಾಧ್ಯವಾಗುವುದು ಆ ಶಕ್ತಿಯಿಂದ|…

ವಿಷಾದ ಗಾಥೆ

ವಿಷಾದ ಗಾಥೆ 1 ಬೇಯುತಿದೆ ಕಾಲ ಜೀವಾತ್ಮಗಳಲಿ ಹರಿದಿದೆ ಹಾಲಾಹಲ ಬೇಗುದಿಯಲಿ ಭವದ ಬವಣೆ ನರಳುತ್ತಿದೆ ದಾರಿ ಸವೆಯುತ್ತಿಲ್ಲ ಬಹುದೂರ ಇದೆ ಪಯಣ ಕೈದೀವಿಗೆಗೆ ಹಾದಿಯ ಅರಿವಿಲ್ಲ ವಿಷಾದ ಗಾಥೆ 2 ಕಡಲ ದೇವಿಯೆ ನೀನೇಕೆ ಹೀಗೆ ಮೊರೆಯುತ್ತೀಯ ಇಷ್ಟೇಕೆ ನೀನು ಉಪ್ಪಾಗಿದ್ದೀಯಾ ಕೇಳು ಮಗು ನಿನ್ನಪ್ಪ ಕಿನಾರೆಯಲಿ ಮುಳುಗಿಹೋದ ನಿನ್ನಮ್ಮನ ಕಣ್ಣೀರು ನನ್ನೊಡಲಸೇರುತಲೇಯಿದೆ ಮಲ್ಲಿಕಾರ್ಜುನ ಸ್ವಾಮಿ ಮಹಾಮನೆ 9448970731

ಹುಣ್ಣಿಮೆ ಒಲವು ನನ್ನದು

ನಂದಿನಿ ಚುಕ್ಕೆಮನೆ ಹುಣ್ಣಿಮೆ ಒಲವು ನನ್ನದು ಮಳೆ -ಮಂಜು ಸುರಿದು ಗಟ್ಟಿಯಾದ ಇಳೆ ಮೃದುವಾಗಿ ಹೊಂಬೆಳಕಚಿಗುರು ಕಂಡ ಹೊನಪ ಕುಡಿ ನನ್ನದು ಹಾಲು ಮುಗಿಲ ತುಂಬಿ ಬಣ್ಣದ ಕನಸುಗಳಲಿ ಹೃದಯದ ಬಾಗಿಲ ಎದುರಿಗೆ ಬಂದು ಮಾತಾಡದೆ ಮಿಂಚಂತೆಹೋದ ದಿವ್ಯಹುಣ್ಣಿಮೆ ಒಲವು ನನ್ನದು ಹನಿ ನಿಂದಾಗ ಚಿನ್ನಕಾಂತಿಮುಗಿಲು ಕಡೆದು ಕಂಗಳ ಕನ್ನಡಿ ಬಿಂಬದಲಿ ಮೂಡಿದ ಸಪ್ತ ಸ್ವರಗಳ ಮಳೆ ಬಿಲ್ಲ ಚೆಲುವೆಲ್ಲ ನನ್ನದು ಹಸಿರು ಶಿಖೆಯ ತಾಗಿ ಕೂತ ಆಕಾಶ ನೀಲಿ ಚಿತ್ತಾರ ಕಳಿಸಿದ್ದ ಜಿಂಕೆ…

ಮಾನವತೆಯ ಹುಡುಕುತಲಿರುವೆ ……

ನಿಶ್ಯಬ್ದ, ನಿರ್ಜನ ರಸ್ತೆಗಳ ನೀರವತೆಯಲಿ ಮೌನ ಜನನಿಬಿಡ ಗಲ್ಲಿಗಳ ಪಿಸುಮಾತಲಿ ಪೊಲೀಸರ ಬೂಟಿನ ಶಬ್ದದ ಕರತಾಡನದಲಿ ಬಣ್ಣದ ಲಾಠಿಯ ಹೊಡೆತದ ರೌದ್ರಾವತೆಯಲಿ ಮಾನವತೆಯ ಹುಡುಕುತಲಿರುವೆ …… ಹೊಟ್ಟೆಗೆ ಹಿಟ್ಟಿಲ್ಲದ ಸಂತ್ರಸ್ತರ ಕಣ್ಣ ಕಪ್ಪಿನ ಅಂಚಿನಲಿ ವೇತನವಿಲದೆ ಮನೆ ಮಾಲೀಕನ ಕಾಲ ಹಿಡಿವ ನಡುಗುವ ಕೈಗಳ ಅಭದ್ರತೆಯಲಿ ಧ್ವಂಸವಾದ ಭರವಸೆಗಳ ಬೂದಿ ಮಣ್ಣಿನ ತುತ್ತತುದಿಯಲಿ ನಾಳೆಗಳು ಬಾರದಿರಲಿ ಎಂದು ಆಶಿಸುವ ಹೃದಯಗಳಾವರಣದಲಿ ಮಾನವತೆಯ ಹುಡುಕುತಲಿರುವೆ …… ಆಸ್ಪತ್ರೆಯ ಶಿಥಿಲ ಗೋಡೆಗಳ ಬಿರುಕುಗಳಲಿ ಅರಳಿದ ಗಿಡಬಳ್ಳಿಗಳಲಿ ದಾದಿಯರ ಶ್ವೇತವರ್ಣದುಡಿಗೆಯ…

error: Content is protected !!