ಕ್ರೀಡೆ
ರಣಜಿ ಟ್ರೋಪಿ; ಮುಂಬೈ ತಂಡದ ವಿರುದ್ಧ ಮದ್ಯಪ್ರದೇಶ ತಂಡ ಐತಿಹಾಸಿಕ ಗೆಲುವು
ಬೆಂಗಳೂರು, ಜೂ,26: ಮಧ್ಯ ಪ್ರದೇಶ ರಣಜಿ ತಂಡ ಭಾನುವಾರ ಇತಿಹಾಸ ಬರೆದಿದೆ. ಆದಿತ್ಯ ಶ್ರೀನಿವಾಸ್ ನೇತೃತ್ವ ತಂಡ 41 ಬಾರಿಯ ಚಾಂಪಿಯನ್ ಮುಂಬೈ ತಂಡವನ್ನು 6 ವಿಕೆಟ್ಗಳಿಂದ ಮಣಿಸುವ ಮೂಲಕ ಎಂ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ತಮ್ಮ ರಣಜಿ ಇತಿಹಾಸದ ಚೊಚ್ಚಲ ಟ್ರೋಪಿಯನ್ನು ಎತ್ತಿ ಹಿಡಿದಿದೆ. 1998-99ರ ನಂತರ ಮಧ್ಯ ಪ್ರದೇಶ ತಂಡ ಇದೇ ಮೊದಲ ಬಾರಿಗೆ ರಣಜಿ ಟ್ರೋಫಿ ಫೈನಲ್ ಪ್ರವೇಶಿಸಿತ್ತು. ಅಂದು ಕರ್ನಾಟಕ ವಿರುದ್ಧ 96 ರನ್ಗಳಿಂದ ಇದೇ ಸ್ಟೇಡಿಯಂನಲ್ಲಿ ಸೋಲು ಕಂಡು ನಿರಾಶೆ ಅನುಭವಿಸಿತ್ತು.…