Browsing: ಅಂಕಣ

ಅಂಕಣ

ವಾಸುದೇವರೆಡ್ಡಿಯಂತ ಸಾವಿರಾರು ಸ್ವಯಂಸೇವಕರು ಕಟ್ಟಿದ ಮನೆಗೆ ಈಗ ಗೆದ್ದಲು ಹುಳುಗಳ ಕಾಟ..!

ವಾಸುದೇವರೆಡ್ಡಿಯಂತ ಸಾವಿರಾರು ಸ್ವಯಂಸೇವಕರು ಕಟ್ಟಿದ ಮನೆಗೆ ಈಗ ಗೆದ್ದಲು ಹುಳುಗಳ ಕಾಟ..! ಹೈಸ್ಕೂಲು ಮೈದಾನದಲ್ಲಿ ಗೆಳೆಯರೊಂದಿಗೆ ಸೇರಿ ಕ್ರಿಕೆಟ್ ಆಟ ಆಡುತ್ತಿದ್ದವನು ಸಹಪಾಠಿ ಪುರುಷೋತ್ತಮರೆಡ್ಡಿ ಬೌಂಡರಿ ಗೆರೆ ದಾಟಿಸಿ ಹೊಡೆದ ಚೆಂಡನ್ನು ಬೆನ್ನತ್ತಿ, ಕರೆಂಟ್ ಆಫೀಸಿನ ಮುಳ್ಳಿನ ತಂತಿಬೇಲಿಯನ್ನು ದಾಟಿ, ಅಲ್ಲಿದ್ದ ಮೊಣಕಾಲು ಎತ್ತರದ, ಒಣಗಿ ನಿಂತ ಹುಲ್ಲಿನ ಮಧ್ಯೆ ಹೆಚ್ಚು ಕಡಿಮೆ ಅದೇ ಬಣ್ಣದ ಟೆನಿಸ್ ಬಾಲ್ ಹುಡುಕುತ್ತಾ ಸುಮಾರು ಹೊತ್ತು ನಿಂತೆ. ಹತ್ತು ನಿಮಿಷಗಳ ತೀವ್ರ ಹುಡುಕಾಟದ ನಂತರ ಕೈಗೆ ಸಿಕ್ಕ ಚೆಂಡನ್ನು ಪಿಚ್…

ಹಕ್ಕುಗಳು ನಮ್ಮವು- ಕರ್ತವ್ಯಗಳು ನಿಮ್ಮವು!

ಹಕ್ಕುಗಳು ನಮ್ಮವು- ಕರ್ತವ್ಯಗಳು ನಿಮ್ಮವು! ಭಾರತೀಯರು ತಮ್ಮ ಮೂಲಭೂತ ಕರ್ತವ್ಯಗಳನ್ನು ಮರೆತು ಕೇವಲ ಹಕ್ಕುಗಳಿಗಾಗಿ ಹೋರಾಡುತ್ತ ಬಂದ ಕಾರಣ ಸಮಯ ಪೋಲಾಯಿತಲ್ಲದೆ ದೇಶ ದುರ್ಬಲವಾಯಿತು ಎಂದಿದ್ದಾರೆ ಪ್ರಧಾನಮಂತ್ರಿ ಮೋದಿ. ಮೋದಿಯವರು ಮೂಲಭೂತ ಹಕ್ಕುಗಳಿಗೆ ಮೂಲಭೂತ ಕರ್ತವ್ಯಗಳನ್ನು ತಳುಕು ಹಾಕುತ್ತಿರುವುದು ಇದೇ ಮೊದಲೇನೂ ಅಲ್ಲ. ಪ್ರಾಯಶಃ ಕಡೆಯ ಬಾರಿಯೂ ಅಲ್ಲ. ಈ ಹಿಂದೆಯೂ ಇಂತಹ ಮಾತುಗಳನ್ನು ಆಡಿರುವುದು ಉಂಟು. ಮೂಲಭೂತ ಹಕ್ಕುಗಳಿಂದ ದೇಶ ದುರ್ಬಲವಾಗಿಲ್ಲ. ಮೇಲು ಕೀಳುಗಳ, ಏಣಿಶ್ರೇಣಿಯ, ಕರ್ಮಸಿದ್ಧಾಂತದ, ಜಾತಿ ವ್ಯವಸ್ಥೆಯ ಯಥಾಸ್ಥಿತಿವಾದಿ ಅಸ್ತ್ರಗಳ ಅಡಿಪಾಯ…

 ಕರ್ನಾಟಕದ ಏಕೈಕ ಪ್ರಾಚೀನ ದೇವಾಲಯ ಕುಕನೂರು ನವಲಿಂಗೇಶ್ವರ

 ಕರ್ನಾಟಕದ ಏಕೈಕ ಪ್ರಾಚೀನ ದೇವಾಲಯ ಕುಕನೂರು ನವಲಿಂಗೇಶ್ವರ ಕುಕನೂರು ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಪ್ರಾಚೀನ ಗ್ರಾಮಗಳಲ್ಲೊಂದು. ಈ ಗ್ರಾಮವು ರಾಷ್ಟ್ರಕೂಟ ಅರಸರ ಕಾಲದಿಂದಲೂ ಧಾರ್ಮಿಕ, ಕಲೆ ಮತ್ತು ವಾಸ್ತುಶಿಲ್ಪ ಹಾಗೂ ಸಾಂಸ್ಕೃತಿಕವಾಗಿ ಪ್ರಸಿದ್ಧಿಯನ್ನು ಪಡೆದ ಸ್ಥಳ. ದಾಖಲೆಗಳನ್ವಯ ಇದೊಂದು ಪ್ರಾಚೀನ ಪಟ್ಟಣವೇ ಆಗಿದ್ದಿತು. ಕ್ರಿ.ಶ. ೧೧-೧೨ನೆಯ ಶತಮಾನದ ಹೊತ್ತಿಗೇ ನಲವತ್ತೆಂಟು ಕೇರಿಗಳನ್ನು ಒಳಗೊಂಡ ಪಟ್ಟಣವಾಗಿದ್ದಿತು. ಅಲ್ಲದೆ ಕುಕನೂರು ಒಂದು ಸಾವಿರ ಮಹಾಜನರನ್ನು ಒಳಗೊಂಡಿದ್ದ ಮಹಾಗ್ರಹಾರವೂ, ಪ್ರಾಚೀನ ಕಾಲದ ವಿದ್ಯಾಕೇಂದ್ರವೂ ಆಗಿದ್ದುದು ಶಾಸನಗಳಿಂದ ತಿಳಿಯುವುದು. ಇಲ್ಲಿರುವ ದೇವಾಲಯಗಳೋ…

ಸಚಿವರ ಕೈತಪ್ಪಿದ ಜಹಗೀರು

ಜಿಲ್ಲೆಯವರಲ್ಲದ ಸಚಿವರನ್ನು ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ನೇಮಿಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕ್ರಮದ ಹಿಂದ ಬಹಳ ದೊಡ್ಡ ಧೈರ್ಯ ಕೆಲಸ ಮಾಡಿದೆ. ಇದು ಸಚಿವರಲ್ಲಿ ಏಕರೂಪದ ಅಸಮಾಧಾನಕ್ಕೆ ಕಾರಣವೂ ಆಗಿದೆ. ಮೂವರಿಗೆ ಎರಡೆರಡು ಜಿಲ್ಲಾ ಉಸ್ತುವಾರಿ ಕೊಟ್ಟಿರುವುದು ಇಕ್ಕಟ್ಟಿಗೆ ಕಾರಣವಾಗಬಹುದು. ಸ್ವಾತಂತ್ರ್ಯ ದಿನ, ರಾಜ್ಯೋತ್ಸವದ ದಿನ ರಾಷ್ಟ್ರಧ್ವಜ, ಕನ್ನಡ ಬಾವುಟವನ್ನು ಜಿಲ್ಲಾ ಸಚಿವರು ಜಿಲ್ಲಾ ಕೇಂದ್ರದಲ್ಲಿ ಹಾರಿಸುವ ಪರಿಪಾಠವಿದೆ. ಈ ಮೂವರು ಸಚಿವರು ಆ ಕೆಲಸವನ್ನು ಎರಡೆರಡು ಕಡೆ ಮಾಡುವುದಾದರೂ ಹೇಗೆ…? ಇತರರ ಅಸಮಾಧಾನದಲ್ಲೂ ಸಂತೋಷಕೂಟಕ್ಕೆ ಶ್ರೀರಾಮುಲು…

ಆತ್ಮ ಗೌರವ ಎಂಬ ಅನಿವಾರ್ಯತೆಗಾಗಿ..

ಆತ್ಮ ಗೌರವ ಎಂಬ ಅನಿವಾರ್ಯತೆಗಾಗಿ.. ಅಂಬೇಡ್ಕರ್ ಭಾರತೀಯ ಚರಿತ್ರೆಯ ಯುಗ ನಿರ್ಮಾಪಕ. ಅಪೂರ್ವ ಸಾಧಕ.ಅವರ ಕಾಡುವ ಕದಡುವ ಚಿಂತನೆಗಳು ಹೇಗೆ ನಮ್ಮೊಳಗೆ ಸುತ್ತುತ್ತವೆ?ಎಂಬುದನ್ನ ನಮಗೆ ನಾವೇ ವಿವರಿಸಿಕೊಳ್ಳುವ ಅಗತ್ಯವಿದೆ.ಈ ವಿವರವನ್ನ 1)ಬಯಲರೂಪ 2) ಪಠ್ಯ ರೂಪ 3) ಮನೋರೂಪ ಎಂದು ಬಿಡಿ ಬಿಡಿಯಾಗಿ ವಿವರಿಸಿಕೊಳ್ಳಬಹುದು. 1)ಬಯಲುರೂಪ: ಅಂಬೇಡ್ಕರರ ಬದುಕು ಮತ್ತು ಚಿಂತನೆಗಳು ಈ ಹೊತ್ತಿಗೆ ಎಚ್ಚರಿಕೆಯಂತೆಯೂ ಭವಿಷ್ಯಕ್ಕೆ ಮಾರ್ಗ ಸೂಚಿಯಂತೆಯೂ ಕಾಣಬಲ್ಲವು.ಅಂಬೇಡ್ಕರ ಎಂಬ ಬಯಲು ಪಠ್ಯದ ಶಿಲ್ಪ ಒಂದು ಕೈಯಲ್ಲಿ ಪುಸ್ತಕ ಹಿಡಿದು ಮತ್ತೊಂದು ಕೈಯ ತೋರು…

ವೀರಭದ್ರಪ್ಪ ವೃತ್ತಿ , ವೈಯಕ್ತಿಕ ಬದುಕಿನಲ್ಲಿ ಘಟಿಸಿದ ಘಟನೆಗಳು ಕಾಕತಾಳೀಯ

ವೀರಭದ್ರಪ್ಪ ವೃತ್ತಿ , ವೈಯಕ್ತಿಕ ಬದುಕಿನಲ್ಲಿ ಘಟಿಸಿದ ಘಟನೆಗಳು ಕಾಕತಾಳೀಯ “ಗುರುಮಲ್ಲಪ್ಪ ಸರ್, ನಮ್ಮನೆಗೆ ಡಾಕ್ಟರ್ ಬಂದಿದ್ದಾರೆ, ನಮ್ಮಣ್ಣ ಪ್ರಕಾಶನನ್ನು ಜಲ್ದಿ ಕಳಿಸಬೇಕಂತೆ” ಎಂದು ನನ್ನ ಏಳನೇ ಇಯತ್ತೆಯ, ನಾಯಕರ ಓಣಿಯಲ್ಲಿದ್ದ ಸಣ್ಣಸಿದ್ದಪ್ಪನವರ ಮಹಾಂತಪ್ಪ ಮೇಷ್ಟ್ರ ಮನೆಯಲ್ಲಿ ಜರುಗುತ್ತಿದ್ದ, ಪಾಠದಮನೆಯ ಮುಂಬಾಗಿಲಿನ ಬಲತೋಳಿಗೆ ಒರಗಿ ನಿಂತು, ಮೇಷ್ಟ್ರು ಪಾಠಮಾಡುತ್ತಿದ್ದ ಎಡಭಾಗದ ಕಟ್ಟೆಯ ಕಡೆ, ತನ್ನ ಗೋಣನ್ನು ಸ್ವಲ್ಪವೇ ಮುಂದೆ ಚಾಚಿ, ಇಣಕಿ ನೋಡುತ್ತಾ ನನ್ನ ತಮ್ಮ ಭೋಗೇಶ ಕೂಗಲು, ಗೋಡೆಗೆ ನೇತು ಹಾಕಿದ್ದ ಕಪ್ಪುಹಲಗೆಯ ಪಕ್ಕದಲ್ಲಿ ನಿಂತು…

ಕನಸು ನನಸಾಗಿಸಿ ಪ್ರಶಸ್ತಿ ಕೈಗಿತ್ತ ಸಂಶೋಧನೆ

ಕನಸು ನನಸಾಗಿಸಿ ಪ್ರಶಸ್ತಿ ಕೈಗಿತ್ತ ಸಂಶೋಧನೆ ಯುಜಿಸಿಯು ೨೦೧೦ರ ನಂತರ ಪಿಎಚ್.ಡಿ.ಗೆ ‘ಕೋರ್ಸ್‌ವರ್ಕ್ ಎಂಬ ಅಧ್ಯಯನ ಕ್ರಮವನ್ನು ಅಳವಡಿಸಿತು. ಆದರೆ ಕನ್ನಡ ವಿಶ್ವವಿದ್ಯಾಲಯವು ಈ ಬಗೆಯ ಕೋರ್ಸ್‌ವರ್ಕ್ ಹಾಗೂ ಈಗಿನ ಗುಣಾಂಕ ಪದ್ಧತಿಯನ್ನು ಆರಂಭದಿಂದಲೇ ಅಳವಡಿಸಿಕೊಂಡಿತ್ತೆಂದರೆ ಉತ್ಪ್ರೇಕ್ಷೆಯಲ್ಲ. ಸಂಶೋಧನೆಗೆಂದೇ ಮೀಸಲಾದ ಈ ವಿಶ್ವವಿದ್ಯಾಲಯದಲ್ಲಿ ಪಿಎಚ್.ಡಿ. ಪ್ರವೇಶ ಪಡೆದ ನಂತರ ಒಂದು ವಾರದ ಸಂಶೋಧನ ಕಮ್ಮಟ, ಅದರಲ್ಲಿ ವಿಷಯತಜ್ಞರ ಮೂಲಕ ಸಂಶೋಧನಾ ತರಬೇತಿ; ಆರು ತಿಂಗಳವರೆಗೆ ಸಂಶೋಧನೆಯ ವಿಧಿ-ವಿಧಾನ, ಅಧ್ಯಯನ ವಿಷಯ, ಅಂತರಶಿಸ್ತು ಮತ್ತು ಬಹುಶಿಸ್ತೀಯ ಅಧ್ಯಯನಗಳ…

ಮಾನವಂತ ಪತ್ರಕರ್ತ ಕಮಾಲ್ ಖಾನ್

ಮಾನವಂತ ಪತ್ರಕರ್ತ ಕಮಾಲ್ ಖಾನ್ ಪತ್ರಿಕಾವೃತ್ತಿಯು ಲಜ್ಜೆಗೆಟ್ಟು ಮಾನ ಕಳೆದುಕೊಂಡಿರುವ ಇಂದಿನ ದಿನಮಾನಗಳ ರೊಜ್ಜಿನ ನಡುವೆ ಕಮಲದಂತೆ ಹೊಳೆದ ಹೃದಯವಂತ ಕಮಾಲ್ ಖಾನ್. ಪತ್ರಿಕಾವೃತ್ತಿ ಜನಪರ ನೆಲೆಯದಾಗಿತ್ತೇ ವಿನಾ ಅಧಿಕಾರಕೇಂದ್ರಿತ ಆಗಿರಲಿಲ್ಲ. ಅವರ ಒಟ್ಟಂದದ ವರದಿಗಾರಿಕೆಯು ಭಾರತದ ಬಹುಮುಖೀ ಸಂಸ್ಖೃತಿ ಮತ್ತು ಗಂಗಾ-ಜಮುನಾ ಸಾಮಾಜಿಕ ಸದ್ಭಾವನೆಯ ಸಮರಸ ಪ್ರತೀಕ. ಗಂಗೆ ಯಮುನೆ ಹರಿಯುವ ಉತ್ತರ ಭಾರತದ ಕೆಲವು ಸೀಮೆಗಳಲ್ಲಿ ‘ಗಂಗಾ- ಜಮುನೀ ತೆಹಜೀಬ್’ ಎಂಬ ಅವಧೀ ನುಡಿಗಟ್ಟಿನ ಕಾವ್ಯಾತ್ಮಕ ರೂಪಕವೊಂದಿದೆ. ಹಿಂದೀಗಿಂತ ಪುರಾತನ ಹಿಂದೀ ನುಡಿಗಟ್ಟು…

ಲೋಕದತ್ತ ಮಿತಿಗಳನ್ನೂ ದಾಟಿ ಮುನ್ನಡೆದು ನಿತ್ಯಬೆರಗನ್ನು ಹುಟ್ಟಿಹಾಕಿದ ಪರಿ..

ಲೋಕದತ್ತ ಮಿತಿಗಳನ್ನೂ ದಾಟಿ ಮುನ್ನಡೆದು ನಿತ್ಯಬೆರಗನ್ನು ಹುಟ್ಟಿಹಾಕಿದ ಪರಿ.. ಅದೊಂದು ಭಾನುವಾರದ ದಿನ. ಭದ್ರಪ್ಪಶೆಟ್ಟಿ ಅಂಗಡಿಯಿಂದ ಖರೀದಿಸಿದ ಹತ್ತು ಸೇರುಗಳ ಮಂಡಕ್ಕಿ ಮೂಟೆಯನ್ನು ಹೆಗಲ ಮೇಲೆ ಹೇರಿಕೊಂಡು ಮನೆಯತ್ತ ಓಟಕಿತ್ತವನಿಗೆ ಒಂದು ಆತಂಕ ಬೆನ್ನುಬಿಡದೆ ಕಾಡುತ್ತಿತ್ತು. ಶೆಟ್ಟಿಯ ಅಂಗಡಿಯ ಗೋಡೆಯ ಮೇಲೆ ನೇತುಹಾಕಿದ್ದ ಗಡಿಯಾರ ಬೆಳಿಗ್ಗೆಯ ಒಂಬತ್ತನ್ನು ಮೀರಿದ ಸಮಯವನ್ನು ತೋರಿಸಿದ್ದು ನನ್ನ ಎದೆಬಡಿತವನ್ನು ಮತ್ತಷ್ಟು ಹೆಚ್ಚುಮಾಡಿತ್ತು. ಅವ್ವ ಮಾಡಲಿರುವ ಒಗ್ಗರಣೆಗೆ ಬೇಕಾದ ಮಂಡಕ್ಕಿ ತರಲು ಸುಮಾರು ಎಂಟೂವರೆಯ ವೇಳೆಗೇ ಆತುರಾತುರವಾಗಿ ಮನೆಯನ್ನು ತೊರೆದು ಮಂದಿನ…

ಸಂಶೋಧನೆಗೆ ಹೀಗೊಂದು ಅವಕಾಶ

ಸಂಶೋಧನೆಗೆ ಹೀಗೊಂದು ಅವಕಾಶ ರಾಷ್ಟ್ರೀಯ ಸೇವಾ ಯೋಜನೆ ಅಥವಾ ಎನ್.ಎಸ್.ಎಸ್. ಎಂಬುದು ಕಾಲೇಜು ವಿದ್ಯಾರ್ಥಿಗಳಿಗೆ ಸಾಮಾಜಿಕ ಸೇವೆಯಲ್ಲಿ ತೊಡಗಿಕೊಳ್ಳುವಿಕೆಯ ಅರಿವನ್ನು ಮೂಡಿಸುವ ಮಹತ್ವಾಕಾಂಕ್ಷೆಯ ಯೋಜನೆ. ಇದು ಕೊಠಡಿಗಳ ಮಧ್ಯೆ ಕಲಿಯುವ ವಿದ್ಯೆಯ ಜೊತೆಗೆ ಪರಿಸರ, ಆರೋಗ್ಯ, ಸೇವೆ ಮತ್ತು ಶ್ರಮಸಂಸ್ಕೃತಿಗಳ ಮೂಲಕ ಸಾಮಾಜಿಕ ಮೌಲ್ಯಗಳನ್ನು ಅರ್ಥಮಾಡಿಕೊಳ್ಳುವ ಪ್ರಯೋಗಶಾಲೆ. ಇಂತಹ ಶಿಬಿರವೊಂದರಲ್ಲಿ ಭಾಗವಹಿಸುವ ಅವಕಾಶವೂ ಪದವಿ ವಿದ್ಯಾಭ್ಯಾಸದ ಅವಧಿಯಲ್ಲಿ ನನ್ನದಾಗಿತ್ತು. ಅಲ್ಲಿ ಈ ಮೇಲಿನ ಚಟುವಟಿಕೆಗಳಲ್ಲಿ ತೊಡಗಿದ ಅನುಭವ ಅಪರಿಮಿತವಾದದ್ದು. ಅಂತೆಯೇ ಚಿತ್ರದುರ್ಗ ಬಾಲಕರ ಪದವಿಪೂರ್ವ ವಿದ್ಯಾಲಯವು ಎನ್.ಎಸ್.ಎಸ್.…

ಮಾರಣ ಹೋಮದ ಪೂರ್ವ ತಯಾರಿ!

ಅಲ್ಪಸಂಖ್ಯಾತರು, ಹೆಣ್ಣುಮಕ್ಕಳು, ದಲಿತ ದಮನಿತರು ಭಯದ ನೆರಳಿನಲ್ಲಿ ಬದುಕುವ ದ್ವೇಷ ರಾಜಕಾರಣದ ವಾತಾವರಣವನ್ನು ಕಳೆದ ಕೆಲವು ವರ್ಷಗಳಲ್ಲಿ ಕಟ್ಟಿ ಬೆಳೆಸಲಾಗಿದೆ. ಹೊಸ ದ್ವೇಷಗಳ ವಿಷದ ಕಳೆಗೆ ಯಥೇಚ್ಛ ನೀರು ಗೊಬ್ಬರ ನಿರ್ಭೀತಿ ನಿರ್ಲಜ್ಜೆಯನ್ನು ಎರೆಯತೊಡಗಿದೆ ಈ ವಾತಾವರಣ. ಮುಸಲ್ಮಾನರ ನರಮೇಧಕ್ಕೆ ಬಹಿರಂಗ ಕರೆ ನೀಡುವವರನ್ನು ಮುಟ್ಟಲೂ ಆಗದೆ ಅಸಹಾಯಕವಾಗಿ ಕೈ ಕಟ್ಟಿ ಕುಳಿತಿದೆ ಕಾನೂನು. ಮಾರಣ ಹೋಮದ ಪೂರ್ವ ತಯಾರಿ! ಸ್ತ್ರೀದ್ವೇಷ ಮತ್ತು ಧರ್ಮಾಂಧತೆ ಈ ನೆಲಕ್ಕೆ ಹೊಸ ಆವಿಷ್ಕಾರಗಳೇನೂ ಅಲ್ಲ. ಆದರೆ ’ಬೇಟೀ ಬಚಾವೊ, ಬೇಟಿ…

ಇಂಥವರು ಬದುಕು ಜೀವನಕ್ಕೊಂದು ಆದರ್ಶಪ್ರಾಯ

ಇಂಥವರು ಬದುಕು ಜೀವನಕ್ಕೊಂದು ಆದರ್ಶಪ್ರಾಯ ನನಗೆ ಬುದ್ಧಿ ಬಂದ ಲಾಗಾಯ್ತು ಸುಮಾರು ಹತ್ತುಹನ್ನೆರೆಡು ವರ್ಷ ವಯಸ್ಸಿನವನಾಗುವವರೆಗೂ ಒಂದು ದಿನಚರಿಯನ್ನು ತಪ್ಪದೇ ಪಾಲಿಸುತ್ತಿದ್ದೆ. ವರ್ಷದ ಯಾವುದೇ ಕಾಲವಾದರೂ ಸರಿ, ಬೆಳಗ್ಗಿನ ಆರು ಗಂಟೆ ಸುಮಾರಿಗೆ ಹಾಸಿಗೆ ಬಿಟ್ಟೇಳುತ್ತಿದ್ದವನು, ಪಿಸರುಗಟ್ಟಿದ ಕಣ್ಣುಗಳನ್ನು ಉಜ್ಜುತ್ತಲೇ, ದಂತ, ಮುಖಮಾರ್ಜನವನ್ನೂ ಮಾಡದೆ, ಬಹಿರ್ದೆಸೆಯ ಒತ್ತಡವನ್ನೂ ಮರೆತು, ಮನೆಯ ಮುಂಬಾಗಿಲಿಗೆ ಬಂದು ನನ್ನ ಮನೆಯ ಬಲಬದಿಯ ರಸ್ತೆಯನ್ನು ದಿಟ್ಟಿಸಿ ನೋಡುತ್ತಾ ನಿಲ್ಲುತ್ತಿದ್ದೆ. ಮುಂದಿನ ಹತ್ತು ಹದಿನೈದು ನಿಮಿಷಗಳಲ್ಲಿ, ನಮ್ಮ ಮನೆಯಿಂದ ಬಲಭಾಗಕ್ಕೆ ಇರುವ ಆರೆ ಸೀತಣ್ಣ,…

ರಾಮಮಂದಿರದ ಸುತ್ತ ರಿಯಲ್ ಎಸ್ಟೇಟ್ ದಂಧೆ

ರಾಮಮಂದಿರದ ಸುತ್ತ ರಿಯಲ್ ಎಸ್ಟೇಟ್ ದಂಧೆ ಅಯೋಧ್ಯೆಯ ಬಾಬರಿ ಮಸೀದಿ-ರಾಮಜನ್ಮಭೂಮಿಯ ೨.೭೭ ಎಕರೆಗಳಷ್ಟು ವಿವಾದಿತ ಜಮೀನನ್ನು ರಾಮಮಂದಿರ ಕಟ್ಟಿಕೊಳ್ಳಲು ಸುಪ್ರೀಮ್ ಕೋರ್ಟು ಹಿಂದೂಗಳಿಗೆ ಒಪ್ಪಿಸಿತ್ತು. ಸುಪ್ರೀಮ್ ತೀರ್ಪಿನ ಅನ್ವಯ ರಚಿಸಲಾದ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ೨.೭೭ ಎಕರೆಗಳ ಸುತ್ತಮುತ್ತ ಈವರೆಗೆ ೭೦ ಎಕರೆ ಜಮೀನನ್ನು ಸ್ವಾಧೀನಪಡಿಸಿಕೊಂಡಿದೆ .ಈ ಎರಡು ವರ್ಷಗಳಲ್ಲಿ ಅಯೋಧ್ಯೆಯ ರಿಯಲ್ ಎಸ್ಟೇಟ್ ದಂಧೆ ಅತಿಶಯವಾಗಿ ಗರಿಗೆದರಿದೆ. ಭವ್ಯ ರಾಮಮಂದಿರದ ಸುತ್ತಮುತ್ತಲ ಜಮೀನಿನ ಖರೀದಿ ದರ ಆಕಾಶಕ್ಕೇರುವ ನಿರೀಕ್ಷೆ ಹೊಂದಿರುವ ಖಾಸಗಿ ಖರೀದಿದಾರರೂ ಈ…

ವಿಜಯನಗರ ಕಾಲದ ಶೌಚಾಲಯಗಳು

ವಿಜಯನಗರ ಕಾಲದ ಶೌಚಾಲಯಗಳು ಆಧುನಿಕ ಯುಗದಲ್ಲಿ ನೈರ್ಮಲ್ಯ ಮತ್ತು ಶುಚಿತ್ವಕ್ಕೆ ವಿಶೇಷ ಆದ್ಯತೆಯನ್ನು ನೀಡುವ ಪ್ರಯತ್ನಗಳು ನಿರಂತರವಾಗಿ ನಡೆಯುತ್ತಿವೆ. ಅದರಲ್ಲೂ ಬಯಲು ಬಹಿರ್ದೆಸೆಯನ್ನು ನಿರ್ಮೂಲ ಮಾಡಲು ಸರ್ಕಾರಗಳು ಇನ್ನಿಲ್ಲದ ಪ್ರಯತ್ನ ಮಾಡುತ್ತಿವೆ. ಸ್ವಚ್ಚ ಭಾರತ ನಿರ್ಮಾಣಕ್ಕೆ ಸುಸ್ಥಿರ ಆರೋಗ್ಯ ಮುಖ್ಯ, ಇದಕ್ಕೆ ಸ್ವಚ್ಚ ಪರಿಸರ ಅತ್ಯಗತ್ಯವೆಂಬುದನ್ನು ನಿತ್ಯವೂ ಬಿತ್ತರಿಸುತ್ತಿದೆ. ಈ ಪರಿಪಾಠ ಇಂದು ನಿನ್ನೆಯದಲ್ಲ. ಶೌಚಾಲಯದ್ದೂ ಒಂದು ಇತಿಹಾಸವೇ. ಭಾರತದ ಮಟ್ಟಿಗೆ ನಗರೀಕರಣವೆಂಬುದು ಸಿಂಧೂ ನಾಗರೀಕತೆಯಷ್ಟೇ ಪ್ರಾಚೀನ. ಅಂದಿನ ಜನರು ನೈರ್ಮಲ್ಯಕ್ಕೆ ನೀಡಿದ ಮಹತ್ವ ಅನನ್ಯವಾದದ್ದು. ಅಂತೆಯೇ…

ಆಂಧ್ರ ಬಿಜೆಪಿಯಲ್ಲೀಗ ಹೆಂಡದ್ದೆ ಮಾತು

ಕುಡಿತದ ವಿರುದ್ಧ ಮಹಾತ್ಮ ಗಾಂಧೀಜಿ ಸಮರವನ್ನೇ ಸಾರಿದ್ದರು. ಸ್ವಾತಂತ್ರ್ಯಾನಂತರ ಭಾರತವನ್ನು ಆಳಿದ ಯಾವ ಪಕ್ಷವೂ ಗಾಂಧಿ ಶುರುಮಾಡಿದ್ದ ಸಮರವನ್ನು ಮುಂದುವರಿಸಲಿಲ್ಲ. ಈಗ ಆಡಳಿತದ ಭಾರ ಹೊತ್ತಿರುವ ಬಿಜೆಪಿಯೂ ಈ ವಿಚಾರದಲ್ಲಿ ಸಂಬಂಧವೇ ಇಲ್ಲ ಎಂಬಂತೆ ಕೂತಿದೆ. ಏತನ್ಮಧ್ಯೆ ಆಂಧ್ರ ಪ್ರದೇಶ ಬಿಜೆಪಿ ಅಧ್ಯಕ್ಷ ಸೋಮು ವೀರರಾಜು, ಪಕ್ಷ ಅಧಿಕಾರಕ್ಕೆ ಬಂದರೆ ಮದ್ಯದ ದರವನ್ನು ಗಣನೀಯವಾಗಿ ಇಳಿಸುವ ಮಾತಾಡಿದ್ದಾರೆ. ಖಾದ್ಯತೈಲ, ಪೆಟ್ರೋಲು ದರ ಅವರ ನಜರಿನಲ್ಲಿ ಇಲ್ಲ. ಆಂಧ್ರ ಬಿಜೆಪಿಯಲ್ಲೀಗ ಹೆಂಡದ್ದೆ ಮಾತು ಭಾರತೀಯ ಜನತಾ ಪಕ್ಷದ…

ಮದುವೆ ದಲ್ಲಾಳಿಯ ಚಾಕುಚಕ್ಯತೆ

ಮದುವೆ ದಲ್ಲಾಳಿಯ ಚಾಕುಚಕ್ಯತೆ “ಇಂದ್ರಮ್ಮಾ, ಇಂದ್ರಮ್ಮಾ” ಎನ್ನುವ ಪರಿಚಿತ ಕಂಠವೊಂದು ನನ್ನ ಅಮ್ಮನ ಹೆಸರಿಡಿದು ಕೂಗುತ್ತಾ, ದಾವಣಗೆರೆಯ ಆಂಜನೇಯ ಬಡಾವಣೆಯಲ್ಲಿದ್ದ ನಮ್ಮ ಬಾಡಿಗೆ ಮನೆಯ ಮುಂಬಾಗಿಲು ದಾಟಿ ಒಳಬರಲು, ಹೊರಕೋಣೆಯಲ್ಲಿ ಕುಳಿತು ಅಂದಿನ “ವಿಜಯಕರ್ನಾಟಕ” ದಿನಪತ್ರಿಕೆಯ ಹಾಳೆಗಳನ್ನು ಮುಗುಚಿ ಹಾಕುತ್ತಿದ್ದ ನಾನು, ಯಾರು ಬಂದಿರಬಹುದು ಎನ್ನುವ ಕುತೂಹಲವನ್ನು ಅದುಮಿಡಲಾಗದೆ, ಮುಂಭಾಗದ ಹಾಲನ್ನು ಪ್ರವೇಶಿಸಿದೆ. “ಏನಪ್ಪಾ, ಪ್ರಕಾಶ, ಬೆಂಗಳೂರಿನಿಂದ ಯಾವಾಗ ಬಂದಿದ್ದು?” ಎಂದು ನನ್ನ ಯೋಗಕ್ಷೇಮವನ್ನು ವಿಚಾರಿಸಲು ಮೊದಲಿಟ್ಟ ಅತಿಥಿಯ ಮುಖವನ್ನು ದಿಟ್ಟಿಸಿ ನೋಡತೊಡಗಿದೆ. “ಯಾಕೆ ಸಾಹೇಬರೇ? ನನ್ನ…

ವಿಜಯನಗರ ಸಾಮ್ರಾಜ್ಯದ ಪ್ರಥಮ ರಾಜಧಾನಿ ಆನೆಗೊಂದಿ

ವಿಜಯನಗರ ಸಾಮ್ರಾಜ್ಯದ ಪ್ರಥಮ ರಾಜಧಾನಿ ಆನೆಗೊಂದಿ ತುಂಗಭದ್ರಾ ನದಿಯ ಬಲದಂಡೆಯು ಹಂಪೆಗೆ ಆಶ್ರಯ ನೀಡಿದ್ದರೆ, ಎಡದಂಡೆಯು ಪ್ರಾಚೀನ ಆನೆಗೊಂದಿಗೆ ನೆಲೆಯಾಗಿದೆ. ಈ ಎರಡೂ ಚಾರಿತ್ರಿಕ ಸ್ಥಳಗಳು ಆದಿಮ ಕಾಲದಿಂದಲೂ ಮಾನವನ ಪ್ರಮುಖ ಪ್ರಸಿದ್ಧ ವಸತಿತಾಣಗಳು. ಭೌಗೋಳಿಕವಾಗಿಯೂ ಈ ಪ್ರದೇಶವು ಕಣಶಿಲೆಯ ಬೆಟ್ಟಗುಡ್ಡ, ಗುಹೆಗಹ್ವರ, ನದಿ, ಕಣಿವೆಗಳಿಂದ ಕೂಡಿದ ಅತ್ಯಂತ ಸುಂದರ ತಾಣ. ಆನೆಗೊಂದಿ ಪರಿಸರವು ಇತ್ತೀಚೆಗೆ ಪ್ರವಾಸಿಗರ ನೆಚ್ಚಿನ ತಾಣವಾಗಿದೆ. ಇದಕ್ಕೆ ಕಾರಣ ಇಲ್ಲಿನ ಹತ್ತಾರು ಪ್ರವಾಸಿ ಸ್ಥಳಗಳು. ಇಲ್ಲಿರುವ ಪ್ರಸಿದ್ಧ ಪ್ರಾಗೈತಿಹಾಸಿಕ, ಚಾರಿತ್ರಿಕ ಮತ್ತು ಪೌರಾಣಿಕ…

ಅಪರೂಪದ ಕೋಟಿಲಿಂಗಗಳ ಪ್ರಾಚೀನ ತಾಣ ಓಹಿಲಾಪುರ

 ಅಪರೂಪದ ಕೋಟಿಲಿಂಗಗಳ ಪ್ರಾಚೀನ ತಾಣ ಓಹಿಲಾಪುರ ೧೯೯೮ನೇ ಇಸವಿ, ಕನ್ನಡ ವಿಶ್ವವಿದ್ಯಾಲಯದ ವಸ್ತುಸಂಗ್ರಹಾಲಯಕ್ಕಾಗಿ ಶಿಲ್ಪ, ಶಾಸನ, ವೀರಗಲ್ಲು ಮೊದಲಾದ ಪ್ರಾಚೀನ ವಸ್ತುವಿಶೇಷಗಳನ್ನು ಸಂಗ್ರಹಿಸಿ ತರಲೆಂದೇ ನೇಮಕವಾದ ತಂಡ ನಮ್ಮದು. ತಂಡದಲ್ಲಿ ನನ್ನನ್ನು ಸೇರಿದಂತೆ ವಾಸುದೇವ ಬಡಿಗೇರ, ಎಂ. ಕೊಟ್ರೇಶ ಮತ್ತು ನೆರಗಲ್ಲಪ್ಪ ಸೇರಿದ್ದೆವು. ಬಳ್ಳಾರಿ ಮತ್ತು ಕೊಪ್ಪಳ ಜಿಲ್ಲೆಯ ಹಳ್ಳಿಗಳನ್ನು ಸುತ್ತುತ್ತಾ ಅಲ್ಲಿನ ದೇವಾಲಯ, ಮಠ-ಮಂದಿರ, ಕಚೇರಿಗಳನ್ನು ಕಂಡು ಅಲ್ಲಿನ ಮುಖಂಡರು, ಅಧಿಕಾರಿಗಳು ಮತ್ತು ಸ್ಥಳೀಯ ಜನರನ್ನು ಒಪ್ಪಿಸಿ, ಓಲೈಸಿ ವಸ್ತುಗಳನ್ನು ಸಂಗ್ರಹಿಸುವ ಕಾಯಕವದು. ಈ ಸಂದರ್ಭದಲ್ಲಿ…

ಸಂಗೀತದ ಅನನ್ಯ ಉಪಾಸಕನ ಅಸಂಗತ ಬದುಕು..!

ಸಂಗೀತದ ಅನನ್ಯ ಉಪಾಸಕನ ಅಸಂಗತ ಬದುಕು..! “ನೀರ ಮೇಲಣ ಗುಳ್ಳೆ ನಿಜವಲ್ಲೊ ಹರಿಯೇ” ಎನ್ನುವ ಸುಶ್ರಾವ್ಯ ಕಂಠವೊಂದು ಕಿವಿಗಳನ್ನು ಅಪ್ಪಳಿಸಲು, ಜಳಕಕ್ಕೆಂದು ಬಚ್ಚಲು ಮನೆಗೆ ನಡೆದಿದ್ದವನು ಹಿಂತಿರುಗಿ ಓಡುತ್ತಾ ಸೀದಾ ಮುಂಬಾಗಿಲಿಗೆ ಬಂದು ನಿಂತು, ಕತ್ತನ್ನು ನೀಳವಾಗಿ ಹೊರಚಾಚಿ, ರಸ್ತೆಯ ಎರಡೂ ಬದಿಗೆ ದೃಷ್ಟಿ ಹರಿಸುತ್ತಾ, ಬಾಗಿಲ ಎಡತೋಳಿಗೆ ದೇಹದ ಅಷ್ಟೂ ಭಾರವನ್ನು ಹಾಕಿ ಒರಗಿ ನಿಂತೆನು. ನಾನು ಊಹಿಸಿದಂತೆಯೇ ಸುಮಾರು ಐವತ್ತನ್ನು ಮೀರಿದ ವಯಸ್ಸಿನ ಕೃಶಕಾಯದ, ಗೌರವರ್ಣದ, ಬಣ್ಣದ ಪಟ್ಟೆಪಟ್ಟೆ ಲುಂಗಿ ಮತ್ತು ಬಿಳಿಯ ಬನಿಯನ್…

ಅಹಲ್ಯೆ: ರೂಪಾಂತರಗಳ ಬಹುರೂಪೀ ಪಾತ್ರ

ಅಹಲ್ಯೆ: ರೂಪಾಂತರಗಳ ಬಹುರೂಪೀ ಪಾತ್ರ ಪ್ರಭುನಿಷ್ಟ ಚರಿತ್ರೆ ಬರೆದವರು ಯಾರು? ಯಾಕೆ ಈ ಚರಿತ್ರೆಯೂ ಉತ್ಪಾದನಾ ಅಂಶವನ್ನ ಒಳಗೊಂಡರೂ ಉತ್ಪಾದನೆಯ ಹಂಚಿಕೆ ಮತ್ತು ಉತ್ಪಾದನೆಗಾಗಿ ನಿಗಧಿಯಾದ ಕೂಲಿಯ ವಿವರಗಳಲ್ಲಿ ಗಂಡು ಹೆಣ್ಣೆಂಬ ಲಿಂಗ ತಾರತಮ್ಯ ಮಾಡಲಾಯಿತು? ನಾವು ಚರಿತ್ರೆಯನ್ನ ಭೂಮಿ ಸಂಬಂಧದ ಉತ್ಪನ್ನಗಳ ನೆಲೆಗಳಿಂದ ನೋಡಿದರೂ ಭೂಮಿಯ ಮೂಲವಾಗಿಯೇ ಗ್ರಹಿಸುವ ಮಹಿಳೆಗೆ ಭೂಮಿಯ ಹಕ್ಕು ಆಗ ಯಾಕಿರಲಿಲ್ಲ ಎಂಬುದೇ ಗಮನಾರ್ಹ. ಪಾಲನೆ ಮತ್ತು ಪೋಷಣೆಯ ಸಮಯದಲ್ಲಿ ಅರೆ ಉದ್ಯೋಗಿಯಾಗಿರಬೇಕಾದ ಮಹಿಳೆ ಕೂಲಿ ವಿಚಾರದಲ್ಲೂ ತಾರತಮ್ಯ ಅನುಭವಿಸುತ್ತಿದ್ದಾಳೆ.ಬುಡಕಟ್ಟು ಕಾಲದ…

error: Content is protected !!