ಅಂಕಣ
ಅನ್ವೇಷಣೆಗಳ ಕರಾಳ ಹಾಗೂ ಬೆಳಕಿನ ಸಂಕೀರ್ಣ ಲೋಕ
ಅನ್ವೇಷಣೆಗಳ ಕರಾಳ ಹಾಗೂ ಬೆಳಕಿನ ಸಂಕೀರ್ಣ ಲೋಕ ಸಂಪ್ರದಾಯಿಕ ಚರಿತ್ರೆಯೆಂದರೆ ಏಕಮುಖಿಯಾದುದು. ಆಡಳಿತ ಮೂಲವಾದದು.ಪ್ರಭು ಪ್ರಧಾನವಾದುದು.ರಾಜಕೀಯವೇ ಮುಖ್ಯವಾದ ಇದರ ಆವರಣದೊಳಗೆ ಉತ್ಪಾದನಾ ಪ್ರಧಾನರ ಕಥನಗಳು ನಿರ್ಲಕ್ಷಕ್ಕೆ ಒಳಗಾಗಿವೆ.ತೆಳುವಾದ ಸರಳವಾದ ಚರಿತ್ರೆಯ ಈ ರೂಪಗಳ ಮಿತಿಯನ್ನ ಗ್ರಹಿಸಿಯೇ ಹೊಸ ಬಗೆಯ ಚರಿತ್ರೆಗಳನ್ನ ಕಟ್ಟುವ ರೂಪಿಸುವ ಪರಂಪರೆಗಳು ಈಗೀಗ ಗಟ್ಟಿಗೊಳ್ಳುತ್ತಿವೆ.ಜನ ಚರಿತ್ರೆ,ಮಹಿಳಾ ಚರಿತ್ರೆ,ಪ್ರಾದೇಶಿಕ ಚರಿತ್ರೆ,ಸಬಾಲ್ಟ್ರನ್ ಚರಿತ್ರೆ..ಹೀಗೆ ಹೊಸ ಹೊಸ ಅನ್ವೇಷಣಾ ಬರಹಗಳ ಕ್ರಮಗಳನ್ನ ಕಾಣಬಹುದಾಗಿದೆ. ಈ ನೆಲೆಯಲ್ಲಿ ಪರಂಪರೆಯ ಸಂಪ್ರದಾಯಿಕ ಚರಿತ್ರೆಯು ಗುರ್ತಿಸಲಾರದ ಚರಿತ್ರೆಯ ಬುನಾದಿಯಂತೆಯೇ ಆಗಿರುವ ಕಥನವೇ ರೈತರ…