ರಾಜಸ್ಥಾನ ತಂಡದ ವಿರುದ್ಧ ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ ರೋಚಕ ಜಯ
ರಾಜಸ್ಥಾನ,ಏ,೧೯- ಸವಾಯಿ ಮಾನ್ಸಿಂಗ್ ಮೈದಾನದಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ಸಾಧಾರಣ ಮೊತ್ತದ ರನ್‌ಗಳನ್ನು ಚೇಜ್ ಮಾಡಲು ಸಾಧ್ಯವಾಗದೆ ರಾಜಾಸ್ಥಾನ್ ರಾಯಲ್ಸ್ ತಂಡ ಕೇವಲ ಎರಡು ರನ್‌ಗಳಿಂದ ಸೋತಿತು. ಲಕ್ನೋ ಕ್ಯಾಪ್ಟನ್ ರಿಷಭ್ ಪಂತ್ ಟಾಸ್ ಗೆದ್ದು, ಬ್ಯಾಟಿಂಗ್ ಆಯ್ಕೆ ಮಾಡಿಕೊಂಡು ಆರಂಭದಲ್ಲೇ ಆಘಾತಕ್ಕೆ ಒಳಗಾದರು. ಏಕೆಂದರೆ ತಂಡದ ಪರ ಆರಂಭಿಕರಾದ ಮಿಚೆಲ್ ಮಾರ್ಷ್ ಕೇವಲ ೪ ರನ್‌ಗೆ ಕ್ಯಾಚ್ ನೀಡಿದರು. ಆದರೆ ಮಾರ್ಕ್ರಾಮ್ ಉತ್ತಮ ಬ್ಯಾಟಿಂಗ್‌ನಿಂದ ೪೫ ಎಸೆತದಲ್ಲಿ ೬೬ ರನ್…