ಹುಬ್ಬಳ್ಳಿ ಇನ್ಫೋಸಿಸ್ ಇನ್ನೂ ಹತ್ತು ಪಟ್ಟು ಬೆಳೆಯಲಿ: ಎಂ ಬಿ ಪಾಟೀಲ ಆಶಯ
ಹುಬ್ಬಳ್ಳಿ,ಆ,06-ಕರ್ನಾಟಕ ಮೂಲದ ಇನ್ಫೋಸಿಸ್ ಸಂಸ್ಥೆಯ ಸ್ಥಳೀಯ ಘಟಕವು ಈಗಿನ ಪ್ರಮಾಣಕ್ಕಿಂತ ಇನ್ನೂ ಹತ್ತು ಪಟ್ಟು ಬೆಳೆಯಬೇಕು. ಈ ಮೂಲಕ ಕಂಪನಿಯ ಹುಬ್ಬಳ್ಳಿ ಕೇಂದ್ರವೇ ಜಾಗತಿಕ ಮಟ್ಟದಲ್ಲಿ ಗಮನ ಸೆಳೆಯುವಂತಹ ಪ್ರಧಾನ ತಾಣವಾಗಿ ಅಭಿವೃದ್ಧಿ ಹೊಂದಬೇಕು. ಜತೆಗೆ ಕಂಪನಿಯು ಉತ್ತರ ಕರ್ನಾಟಕ ಭಾಗದ ಇತರ ಜಿಲ್ಲೆಗಳಲ್ಲೂ ನೆಲೆಯೂರಬೇಕು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಆಶಿಸಿದ್ದಾರೆ. ಅವರು ಬುಧವಾರ ಇಲ್ಲಿನ ಇನ್ಫೋಸಿಸ್ ಹುಬ್ಬಳ್ಳಿ ಡೆವಲಪ್‌ಮೆಂಟ್ ಸೆಂಟರ್‌ನಲ್ಲಿ ಸಂಸ್ಥೆಯ ಸಿಬ್ಬಂದಿ ವರ್ಗವನ್ನು ಉದ್ದೇಶಿಸಿ ಮಾತನಾಡಿದರು.…