ಅಮೆರಿಕಾದ ಅತ್ಯುನ್ನತ ಗೌರವಕ್ಕೆ ಪಾತ್ರರಾದ ಖ್ಯಾತ ಗಾಯಕ ರಾಜೇಶ್ ಕೃಷ್ಣನ್
ಇತ್ತೀಚೆಗೆ ಅಮೇರಿಕಾದಲ್ಲಿ ಖ್ಯಾತ ಗಾಯಕ ರಾಜೇಶ್ ಕೃಷ್ಣನ್. ಅವರು ಕನ್ನಡಿಗರಿಗಾಗಿ ಸಂಗೀತ ಕಾರ್ಯಕ್ರಮದಲ್ಲಿ ಪಾಲ್ಗೊಂಡು ತಮ್ಮ ಕಂಠಸಿರಿಯಿಂದ ಮನಸೂರೆಗೊಳಿಸಿದ್ದರು. ಈ ಹಿನ್ನೆಲೆ ಅಮೆರಿಕದ ವಿಸ್ಕಾನ್ಸಿನ್‌ನ ಬ್ರೂಕ್‌ಫೀಲ್ಡ್ ನಗರವು ಏಪ್ರಿಲ್ 25ರ ದಿನವನ್ನು “ರಾಜೇಶ್ ಕೃಷ್ಣನ್ ಸಂಗೀತ ದಿನ” ಎಂದು ಘೋಷಿಸಿದೆ. ಸ್ಯಾಂಡಲ್‌ವುಡ್‌ನ ಮೆಲೋಡಿ ಕಿಂಗ್ ಹಾಗೂ ಖ್ಯಾತ ಗಾಯಕ ರಾಜೇಶ್ ಕೃಷ್ಣನ್ ಅವರು ಜಾಗತಿಕ ಗೌರವಕ್ಕೆ ಪಾತ್ರರಾಗಿದ್ದಾರೆ. ತಮ್ಮ ಇಂಪು ಧ್ವನಿಯಿಂದ ಕನ್ನಡದ ಸಂಗೀತ ಪ್ರಿಯರನ್ನು ರಂಜಿಸಿರುವ ಅವರ ಪ್ರತಿಭೆಯನ್ನು ಅಮೆರಿಕದ ವಿಸ್ಕಾನ್ಸಿನ್‌ನ ಬ್ರೂಕ್‌ಫೀಲ್ಡ್ ನಗರ ಗುರುತಿಸಿದೆ…